For Quick Alerts
ALLOW NOTIFICATIONS  
For Daily Alerts

ಕೇವಲ 10 ವರ್ಷಗಳಲ್ಲಿ ಕೋಟ್ಯಾಧಿಪತಿಯಾಗುವುದು ಹೇಗೆ?

ಜೀವನದಲ್ಲಿ ಶ್ರೀಮಂತಿಕೆ ಹೊಂದುವುದು, ಕೋಟ್ಯಾಧಿಪತಿಯಾಗುವುದು ಎಂದರೆ ಸುಲಭದ ಮಾತಲ್ಲ. ಕೋಟ್ಯಧಿಪತಿಯಾಗಲು ಕಠಿಣ ಪರಿಶ್ರಮ ಹಾಗೂ ನಿರಂತರ ಪ್ರಯತ್ನ ಬೇಕಾಗುತ್ತದೆ.

|

ಹಣಕಾಸು ಹೂಡಿಕೆ ಯೋಜನೆಗಳಲ್ಲಿ ಹಣ ತೊಡಗಿಸುವುದು ಹಾಗೂ ಅದರಿಂದ ಉತ್ತಮ ಆದಾಯ ಪಡೆಯುವುದು ಉದಾತ್ತ ವಿಚಾರವೇ ಆಗಿದೆ. ಆದಾಗ್ಯೂ ಕಾಲಾವಧಿಯಲ್ಲಿ ಹೂಡಿಕೆಯಿಂದ ಹೆಚ್ಚಿನ ಸಂಪತ್ತು ಸೃಷ್ಟಿಸಲು ಯಾವೆಲ್ಲ ಅಂಶಗಳು ಪೂರಕವಾಗಿರುತ್ತವೆ ಎಂಬುದನ್ನು ತಿಳಿದುಕೊಳ್ಳಬೇಕು. ಸೂಕ್ತವಾದ ಯೋಜನೆಗಳಲ್ಲಿ ಸರಿಯಾದ ರೀತಿಯಲ್ಲಿ ಹೂಡಿಕೆ ಮಾಡಿದಲ್ಲಿ ಕಷ್ಟ ಪಟ್ಟು ದುಡಿದ ಹಣದಿಂದ ಸಾಕಷ್ಟು ಸಂಪತ್ತು ವೃದ್ಧಿಸಿಕೊಳ್ಳಬಹುದು.

ಜೀವನದಲ್ಲಿ ಶ್ರೀಮಂತಿಕೆ ಹೊಂದುವುದು, ಕೋಟ್ಯಾಧಿಪತಿಯಾಗುವುದು ಎಂದರೆ ಸುಲಭದ ಮಾತಲ್ಲ. ಕೋಟ್ಯಧಿಪತಿಯಾಗಲು ಕಠಿಣ ಪರಿಶ್ರಮ ಹಾಗೂ ನಿರಂತರ ಪ್ರಯತ್ನ ಬೇಕಾಗುತ್ತದೆ. ಆದಾಗ್ಯೂ ಕೆಲ ವಿಶಿಷ್ಟ ಹೂಡಿಕೆ ವಿಧಾನಗಳ ಮೂಲಕ ಸಹ ಕೋಟ್ಯಧಿಪತಿಯಾಗಬಹುದು. ಹಾಗಾದರೆ ಯಾವ ರೀತಿ ಹೂಡಿಕೆ ಮಾಡಿದಲ್ಲಿ 10 ವರ್ಷಗಳಲ್ಲಿ ಕೋಟ್ಯಧಿಪತಿಯಾಗಬಹುದು ಎಂಬುದನ್ನು ಈ ಅಂಕಣದಲ್ಲಿ ತಿಳಿಸಿದ್ದೇವೆ, ನೀವೂ ತಿಳಿದುಕೊಳ್ಳಿ. ಕೋಟ್ಯಾಧಿಪತಿಯಾಗಲು ಈ ಐದು ಹೆಜ್ಜೆಗಳು..

10 ವರ್ಷಗಳಲ್ಲಿ ಕೋಟ್ಯಾಧಿಪತಿಯಾಗುವುದು ಸಾಧ್ಯವೆ?

10 ವರ್ಷಗಳಲ್ಲಿ ಕೋಟ್ಯಾಧಿಪತಿಯಾಗುವುದು ಸಾಧ್ಯವೆ?

 ಸ್ವಂತ ಉದ್ಯಮ(ಕಂಪನಿ) ಪ್ರಾರಂಭಿಸುವುದು ಹೇಗೆ? ಸ್ವಂತ ಉದ್ಯಮ(ಕಂಪನಿ) ಪ್ರಾರಂಭಿಸುವುದು ಹೇಗೆ?

10 ವರ್ಷಗಳಲ್ಲಿ ಕೋಟ್ಯಾಧಿಪತಿಯಾಗುವುದು ಹೇಗೆ?

10 ವರ್ಷಗಳಲ್ಲಿ ಕೋಟ್ಯಾಧಿಪತಿಯಾಗುವುದು ಹೇಗೆ?

ದೀರ್ಘಾವಧಿಯಲ್ಲಿ ಅತ್ಯುತ್ತಮ ಆದಾಯ ನೀಡುವ ಮ್ಯೂಚುವಲ್ ಫಂಡ್‌ಗಳು ಹೂಡಿಕಾದಾರರ ಮೆಚ್ಚಿನ ಆಯ್ಕೆಯಾಗಿವೆ. ಪ್ರತಿ ತಿಂಗಳು ನಿಯಮಿತವಾಗಿ ಹೂಡಿಕೆ ಮಾಡುತ್ತ ದೊಡ್ಡ ಮೊತ್ತದ ಹೂಡಿಕೆ ಸಂಗ್ರಹಿಸಲು ಮ್ಯೂಚುವಲ್ ಫಂಡ್‌ಗಳ ಸಿಪ್ (ಸಿಸ್ಟಮ್ಯಾಟಿಕ್ ಇನ್ವೆಸ್ಟಮೆಂಟ್ ಪ್ಲ್ಯಾನ್) ಯೋಜನೆಗಳು ಸೂಕ್ತವಾಗಿವೆ. ಆದರೆ ಇಂಥ ಯಾವುದೇ ಹೂಡಿಕೆ ಯೋಜನೆಯನ್ನು ಆಯ್ದುಕೊಳ್ಳುವ ಮೊದಲು ತನ್ನ ಹೂಡಿಕೆಯ ಸಾಮರ್ಥ್ಯ ಹಾಗೂ ರಿಸ್ಕ್ ತಡೆಯುವ ಸಾಮರ್ಥ್ಯಗಳನ್ನು ಹೂಡಿಕೆದಾರ ಮೊದಲು ಅಂದಾಜಸಬೇಕು.

ಸಂಪತ್ತು ಸೃಷ್ಟಿಸಲು ಈ ಅಂಶಗಳನ್ನು ತಪ್ಪದೆ ಪಾಲಿಸಿ..

 

1. ನಿಮ್ಮ ಹೂಡಿಕೆಯ ಮೊತ್ತ ನಿರ್ಧರಿಸಿ

1. ನಿಮ್ಮ ಹೂಡಿಕೆಯ ಮೊತ್ತ ನಿರ್ಧರಿಸಿ

ಉದಾಹರಣೆಗೆ ನಿಮ್ಮ ತಿಂಗಳ ಆದಾಯ 60 ಸಾವಿರ ರೂ.ಗಳಾಗಿದೆ ಎಂದಿಟ್ಟುಕೊಳ್ಳೋಣ. ಈಗ ಪ್ರತಿ ತಿಂಗಳು ನಿಮ್ಮ ಖರ್ಚಿನ ಆಧಾರದಲ್ಲಿ ವಾರ್ಷಿಕ ಖರ್ಚು ವೆಚ್ಚದ ಅಂದಾಜು ಪತ್ರಿಕೆ ತಯಾರಿಸಬೇಕು. ಪ್ರತಿ ತಿಂಗಳು ಗರಿಷ್ಠ ಎಷ್ಟು ಹಣವನ್ನು ಹೂಡಿಕೆ ಮಾಡಲು ಸಾಧ್ಯ ಎಂಬುದು ಇದರಿಂದ ತಿಳಿದು ಬರುತ್ತದೆ. ಒಂದು ವೇಳೆ ತಿಂಗಳಿಗೆ 25 ರಿಂದ 28 ಸಾವಿರ ರೂ. ಖರ್ಚಾಗುತ್ತಿದ್ದರೆ 32 ರಿಂದ 35 ಸಾವಿರ ರೂ. ಉಳಿತಾಯ ಮಾಡಬಹುದು. ಇಷ್ಟಾದರೆ ಉತ್ತಮ ಹೂಡಿಕೆ ಯೋಜನೆಗಳನ್ನು ಆರಿಸಿ ಹೂಡಿಕೆಯನ್ನು ಆರಂಭಿಸಬಹುದು.

2. ಒಳ್ಳೆಯ ಹಣಕಾಸು ಸಲಹೆಗಾರರಿರಲಿ

2. ಒಳ್ಳೆಯ ಹಣಕಾಸು ಸಲಹೆಗಾರರಿರಲಿ

ಹಣಕಾಸು ಪರಿಣಿತರ ಸಲಹೆಯನ್ನು ಪಡೆದೇ ಹೂಡಿಕೆ ಮಾಡುವುದು ಅತಿ ಅಗತ್ಯ. ಇದಕ್ಕಾಗಿ ನಂಬಿಕಸ್ಥ ಹಣಕಾಸು ಸಲಹೆಗಾರರನ್ನು ನೇಮಿಸಿಕೊಳ್ಳಬೇಕು. ಕಾಲಕಾಲಕ್ಕೆ ಇವರ ಮಾರ್ಗದರ್ಶನದಂತೆ ಹೂಡಿಕೆ ಮಾಡುತ್ತ ಹೋಗಬೇಕು.

3. ಖರ್ಚು ಕಡಿಮೆ ಮಾಡಿ ಉಳಿತಾಯ ಹೆಚ್ಚಿಸಿ

3. ಖರ್ಚು ಕಡಿಮೆ ಮಾಡಿ ಉಳಿತಾಯ ಹೆಚ್ಚಿಸಿ

'ಉಳಿತಾಯ ಮಾಡಿದಷ್ಟೂ ಆದಾಯ ಹೆಚ್ಚು' ಎಂಬ ಮಾತು ಸಾರ್ವಕಾಲಿಕ ಸತ್ಯವಾಗಿದೆ. ಅಂದರೆ ಹಣ ಉಳಿಸುವುದು ಹಣ ಗಳಿಸುವಿಕೆಗೆ ಸಮನಾಗಿದೆ. ಅನವಶ್ಯಕವಾದ ಖರ್ಚುಗಳಿಗೆ ಹಣ ವ್ಯಯಿಸುವುದು ಜಾಣತನವಲ್ಲ. ಇದರಿಂದ ಹೂಡಿಕೆಯ ಯೋಜನೆಗಳೆಲ್ಲ ಹಾಳಾಗುವ ಸಾಧ್ಯತೆ ಇರುತ್ತದೆ. ಹೀಗಾಗಿ ಖರ್ಚುಗಳ ಬಗ್ಗೆ ನಿಗಾ ಇಟ್ಟು ಯೋಜನಾಬದ್ಧವಾಗಿ ಮುನ್ನಡೆಯಬೇಕು.

4. ಮಾಹಿತಿ ಇರಲಿ, ಗುರಿ ಸ್ಪಷ್ಟವಿರಲಿ, ಶಿಸ್ತು ಇರಲಿ

4. ಮಾಹಿತಿ ಇರಲಿ, ಗುರಿ ಸ್ಪಷ್ಟವಿರಲಿ, ಶಿಸ್ತು ಇರಲಿ

ವಿವಿಧ ಕಾರಣಗಳಿಂದ ಹಣಕಾಸು ಮಾರುಕಟ್ಟೆಯಲ್ಲಿ ಆಗಾಗ ಭಾರಿ ಏರಿಳಿತಗಳಾಗುತ್ತಿರುತ್ತವೆ. ಹೀಗಾಗಿ ಮಾರುಕಟ್ಟೆಯ ಸ್ಥಿತಿಗತಿಗಳ ಬಗ್ಗೆ ಸಂಪೂರ್ಣ ಜ್ಞಾನ ಇರಬೇಕಾಗಿರುವುದು ಅಗತ್ಯ. ಅಲ್ಪಾವಧಿ ಹಾಗೂ ದೀರ್ಘಾವಧಿ ಹಣಕಾಸು ಗುರಿಗಳ ಬಗ್ಗೆ ಸ್ಪಷ್ಟವಾದ ಕಲ್ಪನೆ ಇರಲಿ. ಮಾಸಿಕ ಹಾಗೂ ವಾರ್ಷಿಕ ವೆಚ್ಚಗಳನ್ನು ಸೂಕ್ತವಾಗಿ ನಿಭಾಯಿಸುವುದರೊಂದಿಗೆ ತೆರಿಗೆ ಹಾಗೂ ಬಡ್ಡಿಗಳನ್ನು ನಿಯಮಿತವಾಗಿ ಪಾವತಿಸಲು ಮರೆಯಬೇಡಿ. ದೀರ್ಘಾವಧಿ ಹೂಡಿಕೆಗಳ ಮೂಲಕ ಸಂಪತ್ತು ಗಳಿಸಬೇಕಾದರೆ ತಾಳ್ಮೆ ಇರುವುದು ಅತಿ ಅಗತ್ಯ. ತಾಳ್ಮೆ ಎಂಬುದು ಒಳ್ಳೆಯ ಹೂಡಿಕೆದಾರನ ಪ್ರಥಮ ಲಕ್ಷಣವಾಗಿದೆ. ಇನ್ನು ಮಾರುಕಟ್ಟೆಯ ಪರಿಸ್ಥಿತಿಗಳ ಬಗ್ಗೆ ಮೈಯೆಲ್ಲ ಕಣ್ಣಾಗಿರುವುದು ಸಹ ಅಷ್ಟೇ ಅಗತ್ಯ.

5. ಸರಿಯಾದ ಯೋಜನೆಗಳಲ್ಲಿ ಯೋಜನಾಬದ್ಧವಾಗಿ ಹೂಡಿಕೆ ಮಾಡಿ

5. ಸರಿಯಾದ ಯೋಜನೆಗಳಲ್ಲಿ ಯೋಜನಾಬದ್ಧವಾಗಿ ಹೂಡಿಕೆ ಮಾಡಿ

ದೀರ್ಘಾವಧಿಯಲ್ಲಿ ಉತ್ತಮ ಆದಾಯ ಪಡೆಯಬೇಕಾದರೆ ಕೇವಲ ಹೂಡಿಕೆ ಮಾಡಿದರೆ ಸಾಲದು. ಸೂಕ್ತ ಹೂಡಿಕೆ ಯೋಜನೆಗಳನ್ನು ಆಯ್ದುಕೊಳ್ಳುವುದು ಸಹ ತೀರಾ ಅಗತ್ಯ. ಪರಿಣಿತ ಹಣಕಾಸು ಸಲಹೆಗಾರರ ಸಲಹೆಯಂತೆ ನಿಮ್ಮ ಹೂಡಿಕೆ ಹಾಗೂ ಹಣಕಾಸು ಯೋಜನೆಗಳನ್ನು ನಿರ್ವಹಿಸಬೇಕು. ಮಾರುಕಟ್ಟೆಯ ರಿಸ್ಕ್ ಕಡಿಮೆ ಮಾಡಿಕೊಳ್ಳುವ ದೃಷ್ಟಿಯಿಂದ ವಿಭಿನ್ನ ರೀತಿಯ ಹೂಡಿಕೆ ಯೋಜನೆಗಳಲ್ಲಿ ಹಣ ತೊಡಗಿಸಬೇಕಾಗುತ್ತದೆ ಹಾಗೂ ಆದಾಯ ಸ್ಥಿರವಾಗಿರುವಂತೆ ಎಚ್ಚರಿಕೆ ವಹಿಸಬೇಕಾಗುತ್ತದೆ.

A. ಇಂಡೆಕ್ಸ್ ಮ್ಯೂಚುವಲ್ ಫಂಡ್‌ನಲ್ಲಿ ಸಿಪ್

A. ಇಂಡೆಕ್ಸ್ ಮ್ಯೂಚುವಲ್ ಫಂಡ್‌ನಲ್ಲಿ ಸಿಪ್

ಸಿಪ್ ಯೋಜನೆಯ ಮೂಲಕ ಇಂಡೆಕ್ಸ್ ಮ್ಯೂಚುವಲ್ ಫಂಡ್‌ಗಳಲ್ಲಿ ಹೂಡಿಕೆ ಮಾಡಿ. ಮಾಸಿಕ ಒಟ್ಟು ಹೂಡಿಕೆಯ ಶೇ. 20 ರಷ್ಟು ಈ ರೀತಿ ಹೂಡಿಕೆ ಮಾಡಬಹುದು. ಮಧ್ಯಮದಿಂದ ಕಡಿಮೆ ರಿಸ್ಕ್‌ನ ಈ ಹೂಡಿಕೆ ಯೋಜನೆ ಕಾಲಾವಧಿಯಲ್ಲಿ ಶೇ. 10 ರಿಂದ 12 ರಷ್ಟು ಆದಾಯ ತರಬಲ್ಲದು.

B. ಇಕ್ವಿಟಿ ಮ್ಯೂಚುವಲ್ ಫಂಡ್‌ನಲ್ಲಿ ಸಿಪ್

B. ಇಕ್ವಿಟಿ ಮ್ಯೂಚುವಲ್ ಫಂಡ್‌ನಲ್ಲಿ ಸಿಪ್

ಮಾಸಿಕ ಒಟ್ಟು ಹೂಡಿಕೆಯ ಶೇ.30 ರಷ್ಟು ಮೊತ್ತವನ್ನು ಈ ಯೋಜನೆಯಲ್ಲಿ ತೊಡಗಿಸಬಹುದು. ಶೇ.14 ರಿಂದ 18 ರವರೆಗೆ ಆದಾಯ ಪಡೆಯುವ ಸಾಧ್ಯತೆಗಳಿವೆ. ಲಾರ್ಜ್ ಕ್ಯಾಪ್, ಮಿಡ್ ಕ್ಯಾಪ್ ಹಾಗೂ ಬ್ಲ್ಯೂ ಚಿಪ್ ಇಕ್ವಿಟಿ ಫಂಡಗಳನ್ನು ಆಯ್ದುಕೊಳ್ಳಬೇಕು. ಇದು ಮಧ್ಯಮದಿಂದ ಹೆಚ್ಚು ರಿಸ್ಕ್ ಇರುವ ಹೂಡಿಕೆ ಯೋಜನೆಯಾಗಿದೆ.

C. ಬ್ಯಾಲೆನ್ಸಡ್ ಮ್ಯೂಚುವಲ್ ಫಂಡ್ ಸಿಪ್

C. ಬ್ಯಾಲೆನ್ಸಡ್ ಮ್ಯೂಚುವಲ್ ಫಂಡ್ ಸಿಪ್

ಮಾಸಿಕ ಒಟ್ಟು ಹೂಡಿಕೆಯ ಶೇ.30 ರಷ್ಟು ಹಣವನ್ನು ಈ ಯೋಜನೆಯಲ್ಲಿ ಹೂಡಬಹುದು. ಇದು ಶೇ.12 ರಿಂದ 14 ರಷ್ಟು ಆದಾಯ ತರಬಲ್ಲದು.
ಬ್ಯಾಂಕ್ ಆರ್‌ಡಿಗಳಲ್ಲಿ ಹೂಡಿಕೆ; ಯಾವುದೇ ರಿಸ್ಕ್ ಇಲ್ಲದ ರೆಕರಿಂಗ ಡಿಪಾಸಿಟ್‌ನಲ್ಲಿ ಶೇ.30 ರಷ್ಟು ಹಣ ತೊಡಗಿಸಬಹುದು. ಇದು ಶೇ.7 ರಷ್ಟು ಆದಾಯ ನೀಡುತ್ತದೆ.

ಕೊನೆ ಮಾತು

ಕೊನೆ ಮಾತು

ಈ ಮುಂಚೆ ನೀಡಲಾದ ಉದಾಹರಣೆಯನ್ನೇ ನೋಡಿದಲ್ಲಿ ಮಾಸಿಕ 60 ಸಾವಿರ ರೂ. ಸಂಬಳ ಪಡೆಯುವ ವ್ಯಕ್ತಿ ಸುಮಾರು 32 ಸಾವಿರ ರೂಪಾಯಿಗಳನ್ನು ಹೂಡಿಕೆ ಮಾಡಬಹುದು. ವಾರ್ಷಿಕ ಶೇ.10 ರ ದರದಲ್ಲಿ ಸಂಬಳ ಏರಿಕೆಯಾಗುತ್ತದೆ ಎಂದಿಟ್ಟುಕೊಂಡಲ್ಲಿ ಮಾಸಿಕ ಉಳಿತಾಯದ ಪ್ರಮಾಣವೂ ಹೆಚ್ಚಾಗುತ್ತ ಹೋಗುತ್ತದೆ. ನಿಯಮಿತವಾಗಿ ಪ್ರತಿವರ್ಷ ಶೇ.10 ರಷ್ಟು ಆದಾಯ ಹೆಚ್ಚಾಗಿದ್ದು ಹಾಗೂ ಅದೇ ಪ್ರಮಾಣದಲ್ಲಿ ಉಳಿತಾಯವನ್ನು ಹೆಚ್ಚಿಸುತ್ತ ಬಂದಲ್ಲಿ 10 ವರ್ಷಗಳಲ್ಲಿ ಕೋಟ್ಯಧಿಪತಿಯಾಗುವ ಕನಸನ್ನು ನನಸಾಗಿಸಿಕೊಳ್ಳಬಹುದು.

English summary

How to become Crorepati in only 10 years?

The first question that the investor might ask: Is it possible to become a crorepati in 10 years through investing in various investment plans.
Story first published: Wednesday, January 9, 2019, 10:10 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X