For Quick Alerts
ALLOW NOTIFICATIONS  
For Daily Alerts

ಕೋಟ್ಯಾಧಿಪತಿಯಾಗಲು ಈ ಐದು ಹೆಜ್ಜೆಗಳು ನಿಮ್ಮದಾಗಲಿ..

ಶ್ರೀಮಂತರಾಗಬೇಕು, ಹೆಚ್ಚೆಚ್ಚು ಹಣ ಗಳಿಸಬೇಕು ಎನ್ನುವುದು ಪ್ರತಿಯೊಬ್ಬರ ಕನಸಾಗಿರುತ್ತದೆ. ಮನಸಿದ್ದರೆ ಮಾರ್ಗ ಎಂಬಂತೆ ಯಾವುದು ಕಷ್ಟವಲ್ಲ. ಕೆಲವೇ ವರ್ಷಗಳ ಅವಧಿಯಲ್ಲಿ ನೀವು ಕೋಟ್ಯಾಧಿಪತಿಯಾಗಬಹುದು.

|

ಶ್ರೀಮಂತರಾಗಬೇಕು, ಹೆಚ್ಚೆಚ್ಚು ಹಣ ಗಳಿಸಬೇಕು ಎನ್ನುವುದು ಪ್ರತಿಯೊಬ್ಬರ ಕನಸಾಗಿರುತ್ತದೆ. ಮನಸಿದ್ದರೆ ಮಾರ್ಗ ಎಂಬಂತೆ ಯಾವುದು ಕಷ್ಟವಲ್ಲ. ಕೆಲವೇ ವರ್ಷಗಳ ಅವಧಿಯಲ್ಲಿ ನೀವು ಕೋಟ್ಯಾಧಿಪತಿಯಾಗಬಹುದು.

 

ಇದಕ್ಕಾಗಿ ನೀವು ಪ್ರತಿ ತಿಂಗಳು ಮ್ಯೂಚುವಲ್ ಫಂಡ್ ನಲ್ಲಿ ಶಿಸ್ತುಬದ್ದವಾಗಿ ಸ್ಥಿರ ಮೊತ್ತವನ್ನು ಹೂಡಬೇಕಾಗುತ್ತದೆ. ಜೊತೆಗೆ ಪ್ರತಿ ವರ್ಷ ನಿಮ್ಮ ಹೂಡಿಕೆಯನ್ನು ಹೆಚ್ಚಳ ಮಾಡುತ್ತಾ ಹೋಗಬೇಕು. ಈ ಮೂಲಕ 17.5 ವರ್ಷಗಳಲ್ಲಿ ನೀವು 1 ಕೋಟ್ಯಾಧಿಪತಿಯಾಗಬಹುದು. ಕೋಟ್ಯಾಧಿಪತಿಯಾಗಲು ಈ ಕೆಳಗಿನ ಐದು ನಿಯಮಗಳನ್ನು ಪಾಲಿಸಿ ಮುನ್ನಡೆಯಿರಿ.. ಕೋಟ್ಯಾಧಿಪತಿ ಆಗುವುದು ಹೇಗೆ ಗೊತ್ತೆ?

ಸಿಪ್ ನಲ್ಲಿ ಹೂಡಿಕೆ

ಸಿಪ್ ನಲ್ಲಿ ಹೂಡಿಕೆ

ಮೊದಲನೆಯದಾಗಿ ಮ್ಯೂಚುಯಲ್ ಫಂಡ್ ಸಿಪ್ ನಲ್ಲಿ ಪ್ರತಿ ತಿಂಗಳು ರೂ. 5,000 ಹೂಡಿಕೆ ಮಾಡುತ್ತಾ ಬರಬೇಕು. ಕೋಟ್ಯಾಧಿಪತಿಯಾಗಲು ಇದು ನಿಮ್ಮ ಮೊದಲ ಹೆಜ್ಜೆಯಾಗಲಿದೆ.

ಪ್ರತಿ ವರ್ಷ ಶೇ. 15 ಹೂಡಿಕೆ ಹೆಚ್ಚಿಸಿ

ಪ್ರತಿ ವರ್ಷ ಶೇ. 15 ಹೂಡಿಕೆ ಹೆಚ್ಚಿಸಿ

ಹೂಡಿಕೆಯ ಪ್ರಮಾಣವನ್ನು ಪ್ರತಿ ವರ್ಷ ಶೇ. 15ರಷ್ಟು ಹೆಚ್ಚಳ ಮಾಡಬೇಕು. ಮೊದಲ ವರ್ಷದಲ್ಲಿ ಪ್ರತಿ ತಿಂಗಳು ರೂ. 5 ಸಾವಿರ ಹೂಡಿಕೆ ಮಾಡಿದ ನಂತರ ಎರಡನೇ ವರ್ಷ ಹೂಡಿಕೆಯನ್ನು ಶೇ. 15 ರಷ್ಟು ಹೆಚ್ಚಳ ಮಾಡಬೇಕು. ಅಂದರೆ ಪ್ರತಿ ತಿಂಗಳು ರೂ. 5750 ಹೂಡಿಕೆ ಮಾಡಬೇಕು. ಮೂರನೇ ವರ್ಷ ಮತ್ತೆ ಶೇ.15 ರಷ್ಟು ಹೂಡಿಕೆ ಹೆಚ್ಚು ಮಾಡಬೇಕು. 17 ವರ್ಷಗಳ ಕಾಲ ಹೂಡಿಕೆ ಹೆಚ್ಚಳ ಮಾಡುತ್ತಾ ಸಾಗಬೇಕು.

ಹೂಡಿದ ಹಣ ತೆಗೆಯಬೇಡಿ
 

ಹೂಡಿದ ಹಣ ತೆಗೆಯಬೇಡಿ

ನೀವು ಹೂಡುವ ಹಣದ ಮೇಲೆ ಗಮನವಿರಲಿ. ಯಾವುದೇ ಕಾರಣಕ್ಕೂ ಹೂಡಿದ ಹಣವನ್ನು ಹಿಂತೆಗೆಯಬೇಡಿ. ಹೂಡಿಕೆ ಅನುಪಾತ ಏರುತ್ತಾ ಹೋಗಬೇಕೆ ಹೊರತು ಇಳಿಕೆ ಸ್ಥಿತಿಯನ್ನು ನೋಡಬಾರದು. ಮಧ್ಯ ಹಣ ತೆಗೆದರೆ ಗುರಿ ತಲುಪುವುದು ಕಷ್ಟವಾಗುತ್ತದೆ. ನಿಮ್ಮ ಹೂಡಿಕೆ ಮೇಲೆ ಪ್ರತಿಶತ 14 ರಷ್ಟು ರಿಟರ್ನ್ ಸಿಗುತ್ತದೆ ಎಂದಾದರೆ 17.5 ವರ್ಷದಲ್ಲಿ ನೀವು ಕೋಟ್ಯಾಧಿಪತಿ ಆಗುವುದರಲ್ಲಿ ಯಾವುದೇ ಸಂಶಯವಿಲ್ಲ.

ಆದಾಯದ ಮೂಲ ಹೆಚ್ಚಿಸಿ

ಆದಾಯದ ಮೂಲ ಹೆಚ್ಚಿಸಿ

'Never depend on single income.' ಎಂದು ವಾರೆನ್ ಬಫೆಟ್ ಹೇಳಿದ್ದಾರೆ. ಕೋಟ್ಯಾಧಿಪತಿ ಆಗಬೇಕೆಂದು ಬಯಸುವ ಆಶಾವಾದಿಗಳು ಮೂಲಭೂತವಾಗಿ ಆದಾಯದ ಮೂಲಗಳನ್ನು ಹೆಚ್ಚಿಸಲೇಬೇಕು. ಒಂದೇ ಆದಾಯದ ಮೂಲಕ್ಕೆ ಅವಲಂಬನೆ ಆಗುವುದು ಬೇಡ. ಹೂಡಿಕೆ ಮಾಡಬಹುದಾದ ಮಾರ್ಗ ಮತ್ತು ಮೂಲಗಳನ್ನು ಹುಡುಕಿ. ರಿಯಲ್ ಎಸ್ಟೇಟ್, ಇನ್ಫ್ರಾಸ್ಟ್ರಕ್ಚರ್, ಷೇರುಗಳಲ್ಲಿ ಹೂಡಿಕೆ ಮಾಡಿ. ಶ್ರೀಮಂತ ಜನರು ಯಾವುದೇ ಒಂದು ಆದಾಯದ ಮೇಲೆ ಅವಲಂಬಿತರಾಗಿರುವುದಿಲ್ಲ.

ಯೋಜನೆ ರೂಪಿಸಿ

ಯೋಜನೆ ರೂಪಿಸಿ

ಅಲನ್ ಲಾಕೆನ್ ಯೋಜನೆ ಕುರಿತು 'Failing to plan is planning to fail.' ಎಂದಿದ್ದಾರೆ. ಹೀಗಾಗಿ ಯಾವುದೇ ಕೆಲಸ ಕಾರ್ಯಗಳಲ್ಲಿ ಯೋಜನೆಯೇ ಯಶಸ್ಸಿನ ಮೂಲಮಂತ್ರ. ಗುರಿ ಇಲ್ಲದ ಸ್ಟೀವ್ ಜಾಬ್ಸ್ ರನ್ನು ಊಹಿಸಲು ಯಾರಿಂದಲಾದರೂ ಸಾಧ್ಯವಿದೆಯೆ? ನಿಮ್ಮ ಗುರಿಗಳನ್ನು ಬರೆದು ನೀವು ಬಯಸಿದಂತ ಭವಿಷ್ಯವನ್ನು ಊಹಿಸಿಕೊಳ್ಳಿ. ಅಂದರೆ ಮನಸ್ಸಿನಲ್ಲಿರುವ ಗುರಿಗಳನ್ನು ಬರೆದಿಟ್ಟು ಅದಕ್ಕನುಗುಣವಾಗಿ ಯೋಜನೆಗಳನ್ನು ರೂಪಿಸಿ, ಅದರ ಸಾಧನೆಗಾಗಿ ನಮ್ಮನ್ನು ನಾವು ತೊಡಗಿಸಿಕೊಳ್ಳಬೇಕು. ಕಾಗದದ ಮೇಲೆ ಬರೆದಿಡುವುದರಿಂದ ಅದು ಸಂಭವಿಸುವಂತೆ ಮಾಡಬಹುದು! ಶ್ರೀಮಂತರಾಗುವವರಲ್ಲಿ ಈ ಲಕ್ಷಣಗಳು ಇರುತ್ತವೆ, ನಿಮ್ಮಲ್ಲಿ ಇವೆಯೆ ನೋಡಿ..

English summary

How to Become Crorepati, Fallow these 5 steps

How to Become Crorepati, Fallow these 5 steps.
Story first published: Tuesday, January 8, 2019, 15:33 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X