ವೈಯಕ್ತಿಕ ಸಾಲ (personal loan) ಜನಪ್ರಿಯತೆಗೆ ಕಾರಣಗಳೇನು ಗೊತ್ತಾ?

ಕಳೆದ ಕೆಲವಾರು ವರ್ಷಗಳಿಂದೀಚೆಗೆ ಭಾರತದ ಆರ್ಥಿಕ ವ್ಯವಸ್ಥೆ ಅಗಾಧ ಪ್ರಮಾಣದಲ್ಲಿ ಬೆಳವಣಿಗೆ ಹೊಂದುತ್ತಿದೆ. ಆರ್ಥಿಕ ವ್ಯವಸ್ಥೆಯ ಬೆಳವಣಿಗೆಯಿಂದ ವೈಯಕ್ತಿಕ ಹಣಕಾಸು ಕ್ಷೇತ್ರಕ್ಕೂ ಸಾಕಷ್ಟು ಹಣ ಹರಿದು ಬರುತ್ತಿದೆ.

ಕಳೆದ ಕೆಲವಾರು ವರ್ಷಗಳಿಂದೀಚೆಗೆ ಭಾರತದ ಆರ್ಥಿಕ ವ್ಯವಸ್ಥೆ ಅಗಾಧ ಪ್ರಮಾಣದಲ್ಲಿ ಬೆಳವಣಿಗೆ ಹೊಂದುತ್ತಿದೆ. ಆರ್ಥಿಕ ವ್ಯವಸ್ಥೆಯ ಬೆಳವಣಿಗೆಯಿಂದ ವೈಯಕ್ತಿಕ ಹಣಕಾಸು ಕ್ಷೇತ್ರಕ್ಕೂ ಸಾಕಷ್ಟು ಹಣ ಹರಿದು ಬರುತ್ತಿದೆ. ಹೀಗಾಗಿ ಪರ್ಸನಲ್ ಲೋನ್ ಅಥವಾ ವೈಯಕ್ತಿಕ ಸಾಲ ಪಡೆಯುವುದು ಈಗ ಎಂದಿಗಿಂತಲೂ ಸುಲಭವಾಗಿದೆ.

ಪರ್ಸನಲ್ ಲೋನ್ ಇತ್ತೀಚಿನ ವರ್ಷಗಳಲ್ಲಿ ಅತ್ಯಂತ ಜನಪ್ರಿಯವಾಗುತ್ತಿದ್ದು, ಹೆಚ್ಚೆಚ್ಚು ಗ್ರಾಹಕರು ಪರ್ಸನಲ್ ಲೋನ್ ಪಡೆಯಲು ಮುಗಿ ಬೀಳುತ್ತಿದ್ದಾರೆ. ತನ್ನ ಕೆಲ ವಿಶಿಷ್ಟ ಅಂಶಗಳಿಂದ ಪರ್ಸನಲ್ ಲೋನ್ ಜನಪ್ರಿಯವಾಗುತ್ತಿದೆ.
ವೈಯಕ್ತಿಕ ಸಾಲ (personal loan) ಜನಪ್ರಿಯತೆಗೆ 7 ಪ್ರಮುಖ ಕಾರಣಗಳು ಇಲ್ಲಿವೆ ನೋಡಿ: 2019 ರಲ್ಲಿ ಅತಿಹೆಚ್ಚು ಬೇಡಿಕೆಯಲ್ಲಿರುವ ಟಾಪ್ 10 ಉದ್ಯೋಗಗಳು

1. ಕಡಿಮೆ ಹಾಗೂ ಆಕರ್ಷಕ ಬಡ್ಡಿ ದರ

1. ಕಡಿಮೆ ಹಾಗೂ ಆಕರ್ಷಕ ಬಡ್ಡಿ ದರ

ಸಾಲ ಪಡೆಯುವಾಗ ಗ್ರಾಹಕರು ಮೊದಲು ನೋಡುವುದೇ ಬಡ್ಡಿ ದರವನ್ನು. ಪ್ರಸ್ತುತ ಬ್ಯಾಂಕಿಂಗ್ ಹಾಗೂ ಬ್ಯಾಂಕಿಂಗೇತರ ಹಣಕಾಸು ಸಂಸ್ಥೆಗಳು ಕಡಿಮೆ ಬಡ್ಡಿ ದರದಲ್ಲಿ ಪರ್ಸನಲ್ ಲೋನ್ ವಿತರಿಸುತ್ತಿವೆ.
ಅಲ್ಲದೆ ಪಿ2ಪಿ ಸಾಲದಾತರು ಸರಕಾರಿ ಹಾಗೂ ಖಾಸಗಿ ಬ್ಯಾಂಕುಗಳಿಗಿಂತ ಕಡಿಮೆ ಬಡ್ಡಿದರದಲ್ಲಿ ಪರ್ಸನಲ್ ಲೋನ್ ನೀಡುತ್ತಿರುವುದು ಗ್ರಾಹಕರಿಗೆ ವರದಾನವಾಗಿ ಪರಿಣಮಿಸಿದೆ.
ಈಗ ಆನ್ಲೈನ್ ಮೂಲಕವೇ ವಿವಿಧ ಹಣಕಾಸು ಸಂಸ್ಥೆಗಳ ಪರ್ಸನಲ್ ಲೋನ್ ಬಡ್ಡಿದರಗಳನ್ನು ಪರಿಶೀಲಿಸಿ ಉತ್ತಮವಾದ ಲೋನ್ ಆಯ್ಕೆ ಮಾಡಿಕೊಳ್ಳಬಹುದು. ಸಾಮಾನ್ಯವಾಗಿ ಪರ್ಸನಲ್ ಲೋನ್ ಬಡ್ಡಿದರಗಳು ವಾರ್ಷಿಕ ಶೇ.10.85 ರಿಂದ ಆರಂಭವಾಗುತ್ತವೆ.

2. ವಿಭಿನ್ನ ವಲಯದ ಗ್ರಾಹಕರಿಗೆ ಅನುಕೂಲ

2. ವಿಭಿನ್ನ ವಲಯದ ಗ್ರಾಹಕರಿಗೆ ಅನುಕೂಲ

ಗ್ರಾಹಕನ ವೃತ್ತಿ ಹಾಗೂ ಆದಾಯದ ಮಟ್ಟವನ್ನು ಆಧರಿಸಿ ಹಣಕಾಸು ಸಂಸ್ಥೆಗಳು ವಿಭಿನ್ನ ರೀತಿಯ ಪರ್ಸನಲ್ ಲೋನ್ ಆಯ್ಕೆಗಳನ್ನು ನೀಡುತ್ತಿವೆ. ಪಿಂಚಣಿದಾರರಿಗೆ ಸಹ ಬ್ಯಾಂಕುಗಳು ಪರ್ಸನಲ್ ಲೋನ್ ನೀಡಲು ಮುಂದಾಗುತ್ತಿರುವುದು ಉತ್ತಮ ಬೆಳವಣಿಗೆಯಾಗಿದೆ.

3. ಸುಲಭ ಅನುಮೋದನೆ, ಕಡಿಮೆ ದಾಖಲಾತಿ

3. ಸುಲಭ ಅನುಮೋದನೆ, ಕಡಿಮೆ ದಾಖಲಾತಿ

ಪರ್ಸನಲ್ ಲೋನ್ ಹಾಗೂ ಗೃಹ ಬಳಕೆ ವಸ್ತುಗಳಿಗಾಗಿ ಪಡೆಯುವ ಸಾಲಕ್ಕೆ ನೀಡಬೇಕಾದ ದಾಖಲಾತಿಗಳ ಸಂಖ್ಯೆಯೂ ಇತ್ತೀಚೆಗೆ ಕಡಿಮೆಯಾಗುತ್ತಿದೆ. ಸಾಲ ನೀಡುವ ಸಂಪೂರ್ಣ ಪ್ರಕ್ರಿಯೆ ಡಿಜಿಟಲ್ ರೂಪಕ್ಕೆ ಮಾರ್ಪಾಟಾಗುತ್ತಿದ್ದು, ಪೇಪರ್ ರೂಪದ ಯಾವುದೇ ದಾಖಲಾತಿ ಇಲ್ಲದೆಯೇ ಇ-ಕೆವೈಸಿ ಮೂಲಕ ಶೀಘ್ರವಾಗಿ ಸಾಲಗಳನ್ನು ಮಂಜೂರು ಮಾಡಲಾಗುತ್ತಿದೆ.
ಇನ್ನು ಕೆಲ ಬ್ಯಾಂಕುಗಳು ಆಯ್ದ ಗ್ರಾಹಕರಿಗೆ ಎಟಿಎಂಗಳ ಮೂಲಕ ಸಾಲ ನೀಡಲು ಮುಂದಾಗುತ್ತಿರುವುದು ವಿಶಿಷ್ಟವಾಗಿದೆ.
ಹೀಗೆ ಡಿಜಿಟಲ್ ಸಾಲ ಮಂಜೂರಾತಿ ವಿಧಾನದಿಂದ ಸಂಪೂರ್ಣ ಪ್ರಕ್ರಿಯೆ ಅತ್ಯಂತ ಸರಳವಾಗುತ್ತಿದ್ದು, ಅತಿ ಶೀಘ್ರದಲ್ಲೇ ಸಾಲದ ಮೊತ್ತ ಕೈಗೆ ಸಿಗುವಂತಾಗಿದೆ. ಇದು ಪರ್ಸನಲ್ ಲೋನ್‌ನ ಜನಪ್ರಿಯತೆ ಮತ್ತೂ ಹೆಚ್ಚಾಗಲು ಕಾರಣವಾಗಿದೆ.

4. ಸರಳ ಅರ್ಜಿ ಸಲ್ಲಿಕೆ ಪ್ರಕ್ರಿಯೆ

4. ಸರಳ ಅರ್ಜಿ ಸಲ್ಲಿಕೆ ಪ್ರಕ್ರಿಯೆ

ಈ ಹಿಂದೆ ಬ್ಯಾಂಕುಗಳು ಹಾಗೂ ಹಣಕಾಸು ಸಂಸ್ಥೆಗಳು ಸಾಲ ನೀಡುವ ಮುನ್ನ ಗ್ರಾಹಕರ ಎಲ್ಲ ದಾಖಲಾತಿಗಳನ್ನು ಸೂಕ್ಷ್ಮವಾಗಿ ಪರಿಶೀಲನೆ ಮಾಡುತ್ತಿದ್ದವು. ಈ ಪ್ರಕ್ರಿಯೆಯಲ್ಲಿ ಹಲವಾರು ಅರ್ಜಿಗಳು ರಿಜೆಕ್ಟ್ ಆಗುತ್ತಿದ್ದವು ಅಥವಾ ಇನ್ನಷ್ಟು ಪೂರಕ ದಾಖಲೆಗಳು ಬೇಕೆಂದು ಗ್ರಾಹಕರಿಗೆ ಕೇಳಲಾಗುತ್ತಿತ್ತು.
ಆದರೆ ಈಗ ಕಾಲ ಬದಲಾಗಿದ್ದು, ಬ್ಯಾಂಕುಗಳು ಲೋನ್ ಅರ್ಜಿ ಸಲ್ಲಿಕೆ ಪ್ರಕ್ರಿಯೆಯನ್ನು ಸರಳಗೊಳಿಸುತ್ತಿವೆ. ಗ್ರಾಹಕನೊಬ್ಬ ಸಾಲ ಪಡೆಯುವ ಅರ್ಹತೆಯನ್ನು ಹೊಂದುವಂತೆ ಬ್ಯಾಂಕುಗಳು ತಾವೇ ಖುದ್ದಾಗಿ ಪ್ರಯತ್ನಿಸಿ ಆದಷ್ಟೂ ಸುಲಭವಾಗಿ ಸಾಲವನ್ನು ಮಂಜೂರು ಮಾಡುತ್ತಿವೆ.

5. ವ್ಯಾಪಾರೋದ್ಯಮಕ್ಕೆ ಹೆಚ್ಚಿದ ಹಣಕಾಸು ಹರಿವು

5. ವ್ಯಾಪಾರೋದ್ಯಮಕ್ಕೆ ಹೆಚ್ಚಿದ ಹಣಕಾಸು ಹರಿವು

ಇತ್ತೀಚಿನ ವರ್ಷಗಳಲ್ಲಿ ಹೆಚ್ಚೆಚ್ಚು ಜನತೆ ಸ್ವಂತ ವ್ಯಾಪಾರ ಆರಂಭಿಸಲು ಒಲವು ತೋರುತ್ತಿದ್ದಾರೆ. ಹೀಗೆ ವ್ಯಾಪಾರ, ವಹಿವಾಟು ಆರಂಭಿಸಲು ಹೊರಗಿನಿಂದ ಹಣಕಾಸು ಬಂಡವಾಳ ತರಬೇಕಾಗುತ್ತದೆ. ಆದರೆ ವ್ಯಾಪಾರಕ್ಕಾಗಿ ಹಣಕಾಸು ಹೊಂದಿಸುವುದು ಸುಲಭದ ಮಾತಲ್ಲ. ಇಂಥ ಸಂದರ್ಭಗಳಲ್ಲಿ ಪರ್ಸನಲ್ ಲೋನ್ ಉತ್ತಮ ಆಯ್ಕೆಯಾಗಿದೆ. ವ್ಯಾಪಾರಕ್ಕಾಗಿ ಸಾಲ ಪಡೆದು ವ್ಯವಹಾರವನ್ನು ವಿಸ್ತರಿಸಿಕೊಳ್ಳುವ ಅವಕಾಶಗಳು ಈಗ ಹೆಚ್ಚಾಗಿವೆ.
ಪರ್ಸನಲ್ ಲೋನ್‌ನ ಮಾರುಕಟ್ಟೆ ಸಹ ಅಗಾಧವಾಗಿ ವಿಸ್ತಾರಗೊಳ್ಳುತ್ತಿದೆ. ಅತ್ಯುತ್ತಮ ಹಣಕಾಸು ಅಡಿಪಾಯ ಹೊಂದಿದವರಿಗೆ ಮಾತ್ರ ಈ ಮುನ್ನ ಸುಲಭವಾಗಿ ಸಾಲ ನೀಡಲಾಗುತ್ತಿತ್ತು. ಆದರೆ ಇತ್ತೀಚಿನ ದಿನಗಳಲ್ಲಿ ಪರ್ಸನಲ್ ಲೋನ್ ಮಾರುಕಟ್ಟೆಗೆ ಬಹಳಷ್ಟು ಹೊಸ ಹಣಕಾಸು ಸಂಸ್ಥೆಗಳು ಪ್ರವೇಶ ಪಡೆದಿದ್ದು, ಎಲ್ಲರಿಗೂ ಸುಲಭವಾಗಿ ಸಾಲ ಸಿಗುವಂತಾಗಿದೆ.

6. ಡಿಜಿಟಲ್ ಅರ್ಜಿ

6. ಡಿಜಿಟಲ್ ಅರ್ಜಿ

ಈಗ ಎಲ್ಲವೂ ಆನ್ಲೈನ್ ಮೂಲಕ ನಡೆಯುತ್ತಿದೆ ಎಂಬುದು ಗೊತ್ತೇ ಇದೆ. ಇದಕ್ಕೆ ಪರ್ಸನಲ್ ಲೋನ್ ಸಹ ಹೊರತಾಗಿಲ್ಲ. ಈಗ ಸಾಲ ಪಡೆಯಲು ಬ್ಯಾಂಕುಗಳಿಗೆ ಎಡತಾಕುತ್ತ ಸಮಯ ಹಾಳು ಮಾಡಿಕೊಳ್ಳುವ ಅವಶ್ಯಕತೆ ಇಲ್ಲ. ಸಂಪೂರ್ಣ ಅರ್ಜಿ ಸಲ್ಲಿಕೆ ಹಾಗೂ ಮಂಜೂರಾತಿ ಪ್ರಕ್ರಿಯೆಯನ್ನು ಆನ್ಲೈನ್ ಮೂಲಕವೇ ಪೂರ್ಣಗೊಳಿಸಬಹುದಾಗಿದೆ. ಪರ್ಸನಲ್ ಲೋನ್ ಆಗಿರಲಿ ಅಥವಾ ಬಿಸಿನೆಸ್ ಲೋನ್ ಆಗಿರಲಿ ಮನೆಯಲ್ಲೇ ಕುಳಿತು ಅರ್ಜಿ ಸಲ್ಲಿಸುವ ಸೌಕರ್ಯ ಈಗ ಗ್ರಾಹಕರಿಗೆ ಸಿಕ್ಕಿದೆ.

7. ಸುಲಭ ಮರುಪಾವತಿ ಆಯ್ಕೆಗಳು

7. ಸುಲಭ ಮರುಪಾವತಿ ಆಯ್ಕೆಗಳು

ಸಾಲ ಪಡೆದವರು ಈಗ ಸಾಲದ ಕಂತು ಕಟ್ಟಲು ಬ್ಯಾಂಕಿಗೆ ಹೋಗಬೇಕೆಂದೇನಿಲ್ಲ. ಎಲೆಕ್ಟ್ರಾನಿಕ್ ಕ್ಲಿಯರಿಂಗ್ ಸಿಸ್ಟಂ (ಇಸಿಎಸ್), ಸ್ಟ್ಯಾಂಡಿಂಗ್ ಇನ್ಸಟ್ರಕ್ಷನ್ (ಎಸ್ ಐ) ಮತ್ತು ನೆಟ್ ಬ್ಯಾಂಕಿಂಗ್ ಸೇರಿದಂತೆ ಇನ್ನೂ ಹಲವಾರು ಡಿಜಿಟಲ್ ಮಾರ್ಗಗಳ ಮೂಲಕ ಸಾಲ ಮರುಪಾವತಿಸುವ ಅವಕಾಶವಿದೆ. ಉದ್ದವಾದ ಕ್ಯೂನಲ್ಲಿ ತಾಸುಗಟ್ಟಲೆ ನಿಂತು ಹಣ ಪಾವತಿಸುವ ಗೋಳು ಈಗಿಲ್ಲ.

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+