For Quick Alerts
ALLOW NOTIFICATIONS  
For Daily Alerts

2019 ರಲ್ಲಿ ಅತಿಹೆಚ್ಚು ಬೇಡಿಕೆಯಲ್ಲಿರುವ ಟಾಪ್ 10 ಉದ್ಯೋಗಗಳು

ತಾಂತ್ರಿಕ ಕೌಶಲ್ಯದ ಉದ್ಯೋಗ ವಲಯವು 2018 ಕ್ಕಿಂತ 2019 ರಲ್ಲಿ ತೀರಾ ಭಿನ್ನವಾಗಿಯೇನೂ ಇರಲಾರದು. ಸಾಫ್ಟವೇರ್ ಡೆವಲಪಮೆಂಟ್, ಸೈಬರ್ ಸೆಕ್ಯುರಿಟಿ ಮತ್ತು ಡೇಟಾ ಸೈನ್ಸ್ ಪ್ರಮುಖವಾಗಿ ಟೆಕ್ನಿಕಲ್ ಉದ್ಯೋಗ ವಲಯವನ್ನು 2019 ರಲ್ಲಿ ಆವರಿಸಿಕೊಂಡಿವೆ

|

ತಾಂತ್ರಿಕ ಕೌಶಲ್ಯದ ಉದ್ಯೋಗ ವಲಯವು 2018 ಕ್ಕಿಂತ 2019 ರಲ್ಲಿ ತೀರಾ ಭಿನ್ನವಾಗಿಯೇನೂ ಇರಲಾರದು. ಎಂದಿನಂತೆ ಸಾಫ್ಟವೇರ್ ಡೆವಲಪಮೆಂಟ್, ಸೈಬರ್ ಸೆಕ್ಯುರಿಟಿ ಮತ್ತು ಡೇಟಾ ಸೈನ್ಸ್ ವಿಷಯಗಳೇ ಪ್ರಮುಖವಾಗಿ ಟೆಕ್ನಿಕಲ್ ಉದ್ಯೋಗ ವಲಯವನ್ನು 2019 ರಲ್ಲಿಯೂ ಆವರಿಸಿಕೊಂಡಿರಲಿವೆ.

ವಿನೂತನ ಆವಿಷ್ಕಾರದ ತಾಂತ್ರಿಕತೆಯ ಉದ್ಯೋಗಗಳಿಗೆ 2019 ರಲ್ಲಿ ಬಹಳಷ್ಟು ಬೇಡಿಕೆ ಉಂಟಾಗುವ ಸಾಧ್ಯತೆಗಳಿವೆ ಎನ್ನುತ್ತಾರೆ ಖ್ಯಾತ ಜಾಬ್ ಸರ್ಚ್ ಪೋರ್ಟಲ್ 'ಗ್ಲಾಸ್ ಡೋರ್'ನ ಸಮುದಾಯ ತಜ್ಞೆ ಸಾರಾ ಸ್ಟೊಡಾರ್ಡ್. ಕೃತಕ ಬುದ್ಧಿಮತ್ತೆ, ಅಟೊಮೇಶನ್, ವರ್ಚುವಲ್ ರಿಯಾಲಿಟಿ, ಕ್ರಿಪ್ಟೊಕರೆನ್ಸಿ ಕ್ಷೇತ್ರಗಳು ಮತ್ತು ಎಂಜಿನೀಯರಿಂಗ್, ಉತ್ಪಾದನೆ, ಡೇಟಾ ಸೈನ್ಸ್, ಮಾರ್ಕೆಟಿಂಗ್ ಹಾಗೂ ಸೇಲ್ಸ್ ವಿಭಾಗದಲ್ಲಿ ಸಾಕಷ್ಟು ಉದ್ಯೋಗವಕಾಶಗಳು ಸೃಷ್ಟಿಯಾಗಲಿವೆ ಎಂಬುದು ಸ್ಟೊಡಾರ್ಡ್ ಅವರ ಅಭಿಪ್ರಾಯವಾಗಿದೆ.

ಆರೋಗ್ಯ ವಲಯದಿಂದ ಹಣಕಾಸು ವಲಯ ಅಥವಾ ಅಟೊಮೊಬೈಲ್ ಕ್ಷೇತ್ರ ಹೀಗೆ ವಿಭಿನ್ನ ಉದ್ಯಮ ವಲಯಗಳಲ್ಲಿನ ಉದ್ಯೋಗಿಗಳು ಕೆಲಸವನ್ನು ಮತ್ತಷ್ಟು ಸುಲಭಗೊಳಿಸಿ ಉತ್ಪಾದನೆಯನ್ನು ಹೆಚ್ಚಿಸುವಂತಹ ನೂತನ ತಾಂತ್ರಿಕತೆಗೆಳನ್ನು ಹೆಚ್ಚಚ್ಚು ಅಳವಡಿಸಿಕೊಳ್ಳಲು ಮುಂದಾಗುತ್ತಿದ್ದಾರೆ. ಹೀಗಾಗಿ ಶ್ರೇಷ್ಠ ಗುಣಮಟ್ಟದ ಟೆಕ್ನಿಕಲ್ ಹಾಗೂ ಸಾಫ್ಟ್ ಸ್ಕಿಲ್‌ಗಳನ್ನು ಹೊಂದಿರುವ ಉದ್ಯೋಗಿಗಳಿಗೆ ಬೇಡಿಕೆ ಹೆಚ್ಚಾಗುತ್ತಲೇ ಸಾಗುತ್ತಿದೆ ಎನ್ನುತ್ತಾರೆ ಸ್ಟೊಡಾರ್ಡ್. ಬೆಂಗಳೂರಿನಲ್ಲಿ ಅತಿಹೆಚ್ಚು ಸಂಬಳ ಪಾವತಿಸುವ ಕಂಪನಿಗಳು

ಒಟ್ಟಾರೆಯಾಗಿ ಯಾವೆಲ್ಲ ಕ್ಷೇತ್ರಗಳಲ್ಲಿ ಅತಿ ಹೆಚ್ಚು ಉದ್ಯೋಗಗಳು ಸೃಷ್ಟಿಯಾಗಲಿವೆ ಎಂಬ ಬಗ್ಗೆ ಜಾಬ್ ಸೈಟ್‌ಗಳು ಹಾಗೂ ಜಾಬ್ ಎಕ್ಸಪರ್ಟ್‌ಗಳು ಏನೆನ್ನುತ್ತಾರೆ ಎಂಬುದನ್ನು ಈ ಅಂಕಣದಲ್ಲಿ ತಿಳಿಸಲಾಗಿದೆ.

ಅತಿಹೆಚ್ಚು ಬೇಡಿಕೆಯಲ್ಲಿರುವ 2019 ರ ಟಾಪ್ 10 ತಾಂತ್ರಿಕ ಉದ್ಯೋಗಗಳ ಮಾಹಿತಿ ಇಲ್ಲಿದೆ ನೋಡಿ..

1. ಸೈಬರ್ ಸೆಕ್ಯುರಿಟಿ ಇಂಜಿನೀಯರ್

1. ಸೈಬರ್ ಸೆಕ್ಯುರಿಟಿ ಇಂಜಿನೀಯರ್

ಇಂಟರ್‌ನೆಟ್ ಮೇಲೆಯೇ ಅವಲಂಬಿತವಾಗಿರುವ ಈ ಜಗತ್ತಿನಲ್ಲಿ ಸುರಕ್ಷತೆ ಎಂಬುದು ಗ್ರಾಹಕರು ಹಾಗೂ ಕಂಪನಿಗಳು ಇಬ್ಬರಿಗೂ ಅತಿ ಮಹತ್ವದ ಅಂಶವಾಗಿದೆ ಎನ್ನುತ್ತಾರೆ ಜಾಬ್ ಸರ್ಚ್ ಪೋರ್ಟಲ್ 'ಲ್ಯಾಡರ್ಸ' ನ ಸಂಸ್ಥಾಪಕ ಹಾಗೂ ಸಿಇಓ ಮಾರ್ಕ್ ಸೆನೆಡೆಲ್ಲಾ.
ಕಂಪನಿಗಳ ಆನ್‌ಲೈನ್ ಸುರಕ್ಷತೆಗೆ ಈಗ ಎಲ್ಲಿಲ್ಲದ ಮಹತ್ವ ಬಂದಿದ್ದು, ತನ್ನ ಆನ್‌ಲೈನ್ ಉತ್ಪನ್ನಗಳು ಹಾಗೂ ಸೇವೆಗಳ ಸುರಕ್ಷತೆಗೆ ಕಂಪನಿಗಳು ತೀರಾ ಕಾಳಜಿ ವಹಿಸುತ್ತಿವೆ. ಹೀಗಾಗಿ ಈ ವಲಯಕ್ಕೆ ಅಗತ್ಯವಾಗಿರುವ ಸೈಬರ್ ಸೆಕ್ಯುರಿಟಿ ಎಂಜಿನಿಯರುಗಳಿಗೆ ಬೇಡಿಕೆ ಹೆಚ್ಚಾಗಲಿದೆ ಎನ್ನುತ್ತಾರೆ ಸೆನೆಡೆಲ್ಲಾ.
ಒಂದಕ್ಕೊಂದು ಸಂಪರ್ಕ ಹೊಂದಿದ ಡಿವೈಸ್‌ಗಳ ಬಳಕೆ ದಿನನಿತ್ಯದ ಜೀವನದಲ್ಲಿ ಹಾಸು ಹೊಕ್ಕಾಗುತ್ತಿದೆ. ಹೀಗಾಗಿ ಇಂಟರನೆಟ್ ಆಫ್ ಥಿಂಗ್ಸ್‌ನ ಸುರಕ್ಷತೆಯ ಬಗ್ಗೆ ಎಲ್ಲರೂ ಚಿಂತಿಸುತ್ತಿದ್ದಾರೆ. ದಿನನಿತ್ಯ ಬಳಸುವ ಒಂದಕ್ಕೊಂದು ಸಂಪರ್ಕ ಹೊಂದಿದ ಡಿವೈಸ್‌ಗಳನ್ನು ಹ್ಯಾಕರ್‌ಗಳು ಹ್ಯಾಕ್ ಮಾಡುವ ಸಾಧ್ಯತೆಗಳಿರುವುದರಿಂದ ಈ ಕ್ಷೇತ್ರದಲ್ಲಿನ ಸುರಕ್ಷತೆ ಅತ್ಯಂತ ಮಹತ್ವ ಪಡೆದುಕೊಳ್ಳುತ್ತಿದೆ. ನೂತನವಾಗಿ ಆವಿಷ್ಕರಿಸಲಾಗುತ್ತಿರುವ ಆನ್‌ಲೈನ್ ಡಿವೈಸ್‌ಗಳ ಸುರಕ್ಷತೆಯನ್ನು ಖಾತರಿಪಡಿಸುವ ಬಗ್ಗೆ ಕಂಪನಿಗಳು ಜಾಗರೂಕವಾಗಿ ಪರಿಶೀಲನೆ ನಡೆಸುತ್ತಿವೆ ಎನ್ನುತ್ತಾರೆ 'ಮೊಂಡೊ' ರಿಕ್ರೂಟಿಂಗ್ ಏಜೆನ್ಸಿಯ ವೈಸ್ ಪ್ರೆಸಿಡೆಂಟ್ ಸ್ಟೀಫನ್ ಜಫಾರಿನೊ. ಬೆಂಗಳೂರಿನಲ್ಲಿ ಕೆಲಸ ಮಾಡಲು ಅತ್ಯುತ್ತಮವಾಗಿರುವ 10 ಕಂಪನಿಗಳು

2. ಆರ್ಟಿಫಿಶಿಯಲ್ ಇಂಟೆಲಿಜೆನ್ಸ್/ ಮಶೀನ್ ಲರ್ನಿಂಗ್

2. ಆರ್ಟಿಫಿಶಿಯಲ್ ಇಂಟೆಲಿಜೆನ್ಸ್/ ಮಶೀನ್ ಲರ್ನಿಂಗ್

ತಾಂತ್ರಿಕತೆಯ ಎಲ್ಲ ವಲಯಗಳಲ್ಲಿ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಹಾಗೂ ಮಶೀನ್ ಲರ್ನಿಂಗ್ ವೃತ್ತಿಪರರಿಗೆ ಬೇಡಿಕೆ ಹೆಚ್ಚಾಗುತ್ತಿದೆ. ಸದ್ಯ ನಡೆಯುತ್ತಿರುವ ಕೆಲಸದ ವೈಖರಿಯನ್ನು ಇನ್ನಷ್ಟು ಸರಳಗೊಳಿಸುವುದು ಹಾಗೂ ಆದಷ್ಟೂ ಕೆಲಸಗಳು ಸ್ವಯಂಚಾಲಿತವಾಗುವಂತೆ ಮಾಡಿ ದಿನನಿತ್ಯದ ಕೆಲಸದ ಅವಧಿಯನ್ನು ಸಹನೀಯಗೊಳಿಸುವತ್ತ ಹಾಗೂ ಉತ್ಪಾದನೆ ಹೆಚ್ಚಿಸುವತ್ತ ಎಲ್ಲರೂ ಪ್ರಯತ್ನಗಳನ್ನು ಮುಂದುವರಿಸಿದ್ದಾರೆ ಎಂಬುದು ಜಫಾರಿನೊ ಅವರ ಅಭಿಮತವಾಗಿದೆ.

3. ಫುಲ್ ಸ್ಟ್ಯಾಕ್ ಡೆವಲಪರ್

3. ಫುಲ್ ಸ್ಟ್ಯಾಕ್ ಡೆವಲಪರ್

ಜಾಬ್ ಪೋರ್ಟಲ್ 'ಇಂಡೀಡ್' ಪ್ರಕಾರ ಇತ್ತೀಚಿನ ದಿನಮಾನಗಳಲ್ಲಿ ಫುಲ್ ಸ್ಟ್ಯಾಕ್ ಡೆವಲಪರ್ ಉದ್ಯೋಗಿಗಳಿಗೆ ಎಲ್ಲರಿಗಿಂತ ಹೆಚ್ಚು ಬೇಡಿಕೆ ಇದೆಯಂತೆ. ಹಲವಾರು ಕಂಪನಿಗಳು ಬ್ಯಾಕ್ ಎಂಡ್ ಹಾಗೂ ಫ್ರಂಟ್ ಎಂಡ್ ಕೆಲಸದ ವಿಧಾನವನ್ನು ತೆಗೆದುಹಾಕುತ್ತಿದ್ದು, ಎಲ್ಲ ರೀತಿಯ ತಾಂತ್ರಿಕತೆಯನ್ನು ಅಭಿವೃದ್ಧಿಪಡಿಸಬಲ್ಲ ಫುಲ್ ಸ್ಟ್ಯಾಕ್ ಡೆವಲಪರ್‌ಗಳಿಗೆ ಹುಡುಕಾಡುತ್ತಿವೆ ಎನ್ನುತ್ತಾರೆ ಉದ್ಯೋಗ ಮಾರ್ಗದರ್ಶಿ ಸಂಸ್ಥೆ ಲಾಸಾಲ್ಲೆ ನೆಟವರ್ಕನ ನೇಮಕಾತಿ ಮುಖ್ಯಸ್ಥ ಪಾಲ್ ವಾಲೆನಬರ್ಗ್.

4. ಡೇಟಾ ಸೈಂಟಿಸ್ಟ್

4. ಡೇಟಾ ಸೈಂಟಿಸ್ಟ್

ಕಳೆದ ಸತತ ಮೂರು ವರ್ಷಗಳಿಂದ ಡೇಟಾ ಸೈಂಟಿಸ್ಟ್ ಉದ್ಯೋಗವು ಅಮೆರಿಕದ ನಂ.1 ಬೇಡಿಕೆಯ ಉದ್ಯೋಗವಾಗಿದೆ ಎಂದು ಗ್ಲಾಸ್ ಡೋರ್ ಸಂಸ್ಥೆ ಮಾಹಿತಿ ನೀಡಿದೆ. ಈ ವರ್ಷ 2019 ರಲ್ಲಿಯೂ ಡೇಟಾ ಸೈಂಟಿಸ್ಟ್‌ಗಳಿಗೆ ಬಹಳಷ್ಟು ಬೇಡಿಕೆ ಇರಲಿದೆ ಎಂದು ಅದು ತಿಳಿಸಿದೆ. ಬಹುತೇಕ ಎಲ್ಲ ಕಂಪನಿಗಳೂ ತಮ್ಮದೇ ಆದ ಮಾಹಿತಿಯ ಸಂಗ್ರಹಣೆಗೆ ಮುಂದಾಗಿರುವುದರಿಂದ ಅದರ ನಿರ್ವಹಣೆ ಹಾಗೂ ಅದನ್ನು ಸೂಕ್ತವಾಗಿ ಅಭ್ಯಸಿಸಿ ಉಪಯೋಗಕ್ಕೆ ಬರುವಂತೆ ಮಾಡಲು ಡೇಟಾ ಸೈಂಟಿಸ್ಟ್‌ಗಳ ಅವಶ್ಯಕತೆ ಇದ್ದೇ ಇದೆ.
ಅನೇಕ ಕಂಪನಿಗಳು ತಾವೇ ಮಾಹಿತಿಯನ್ನು ಸಂಗ್ರಹಿಸುತ್ತಿವೆ. ಆದರೆ ಇನ್ನು ಕೆಲ ಬಾರಿ ತಾವೆಲ್ಲಿ ತಪ್ಪುತ್ತಿದ್ದೇವೆ ಎಂಬುದನ್ನು ಪರಿಶೀಲಿಸಲು ಥರ್ಡ್ ಪಾರ್ಟಿ ಡೇಟಾವನ್ನು ಸಹ ಅವು ಬಳಸಿಕೊಳ್ಳುತ್ತಿವೆ. ಇದನ್ನೆಲ್ಲ ನಿಭಾಯಿಸಲು ಡೇಟಾ ಸೈಂಟಿಸ್ಟ್‌ಗಳು ಬೇಕಾಗುತ್ತಾರೆ.

5. ಪೈಥಾನ್ ಡೆವಲಪರ್

5. ಪೈಥಾನ್ ಡೆವಲಪರ್

ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಮತ್ತು ಮಶೀನ್ ಲರ್ನಿಂಗ್ ತಾಂತ್ರಿಕತೆಯ ಬೆಳವಣಿಗೆಯಿಂದ ಪೈಥಾನ್ ಡೆವಲಪರ್‌ಗಳಿಗೂ ಬೇಡಿಕೆ ಹೆಚ್ಚಾಗುತ್ತಿದೆ. ಅತ್ಯಂತ ವೇಗವಾಗಿ ಅಭಿವೃದ್ಧಿ ಹೊಂದುತ್ತಿರುವ ಪ್ರೊಗ್ರಾಮಿಂಗ್ ಲ್ಯಾಂಗ್ವೇಜ್ ಆಗಿರುವ ಪೈಥಾನ್ ಕಲಿಯಲು ಸುಲಭವಾಗಿದ್ದು ಬಹುದೊಡ್ಡ ಡೆವಲಪರ್ ಸಮೂಹವನ್ನು ಹೊಂದಿದೆ.

6. ಜಾವಾ ಡೆವಲಪರ್

6. ಜಾವಾ ಡೆವಲಪರ್

ಇಂಡೀಡ್ ಹಾಗೂ ಗ್ಲಾಸ್ ಡೋರ್ ಸಂಸ್ಥೆಗಳ ಮಾಹಿತಿಯ ಪ್ರಕಾರ 2019 ರಲ್ಲಿಯೂ ಜಾವಾ ಡೆವಲಪರ್‌ಗಳಿಗೆ ಹೆಚ್ಚಿನ ಬೇಡಿಕೆ ಮುಂದುವರಿಯಲಿದೆ. ಪೈಥಾನ್ ಹಾಗೂ ಆರ್ ಪ್ರೊಗ್ರಾಮಿಂಗ್ ಲ್ಯಾಂಗ್ವೇಜ್‌ಗಳು ವೇಗವಾಗಿ ಅಭಿವೃದ್ಧಿ ಹೊಂದುತ್ತಿದ್ದರೂ ಕ್ಲೌಡ್ ಕಂಪ್ಯೂಟಿಂಗ್ ಕಾರಣದಿಂದ ಜಾವಾಗೆ ಬೇಡಿಕೆ ಮುಂದುವರಿಯಲಿದೆ.

7. ಜಾವಾ ಸ್ಕ್ರಿಪ್ಟ್ ಡೆವಲಪರ್

7. ಜಾವಾ ಸ್ಕ್ರಿಪ್ಟ್ ಡೆವಲಪರ್

ಜಾವಾ ಸ್ಕ್ರಿಪ್ಟ್ ಡೆವಲಪರ್‌ಗಳಿಗೆ ಸಹ 2019 ರಲ್ಲಿ ಬೇಡಿಕೆ ಮುಂದುವರಿಯಲಿದೆ. ಫ್ರಂಟ್ ಎಂಡ್ ಹಾಗೂ ಬ್ಯಾಕ್ ಎಂಡ್ ಮಧ್ಯದಲ್ಲಿ ಡೆವಲಪಮೆಂಟ್ ತಂಡಗಳನ್ನು ಹೊಂದಿದ ಕಂಪನಿಗಳಲ್ಲಿ ಜಾವಾ ಸ್ಕ್ರಿಪ್ಟ್ ಡೆವಲಪರ್‌ಗಳಿಗೆ ಬಹಳಷ್ಟು ಬೇಡಿಕೆ ಇದೆ.

8. ಕ್ಲೌಡ್ ಎಂಜಿನಿಯರ್

8. ಕ್ಲೌಡ್ ಎಂಜಿನಿಯರ್

2015 ರಿಂದೀಚೆಗೆ ಕ್ಲೌಡ್ ಕಂಪ್ಯೂಟಿಂಗ್ ಅಥವಾ ಕ್ಲೌಡ್ ಎಂಜಿನಿಯರಿಂಗ್ ವಲಯದಲ್ಲಿನ ಉದ್ಯೋಗಗಳಲ್ಲಿ ಶೇ.27 ರಷ್ಟು ಹೆಚ್ಚಳ ಕಂಡು ಬಂದಿದೆ ಎಂದು ಇಂಡೀಡ್ ಸಂಸ್ಥೆ ಅಂಕಿ ಅಂಶಗಳನ್ನು ನೀಡಿದೆ. ಕಂಪನಿಗಳು ತಮ್ಮ ವ್ಯವಸ್ಥೆಯನ್ನು ಬದಲಾಯಿಸುವಾಗ ಮತ್ತು ಹೊಸದಾಗಿ ಸ್ಥಾಪಿಸುವಾಗ ತಮ್ಮ ಸಂಸ್ಥೆಯ ಒಳಾಡಳಿತ ಸೌಲಭ್ಯದ ಬದಲಾಗಿ ಕ್ಲೌಡ್ ಕಂಪ್ಯೂಟಿಂಗ್ ಮೊರೆ ಹೋಗುತ್ತಿವೆ. ಹೀಗಾಗಿ ಕ್ಲೌಡ್ ಎಂಜಿನಿಯರುಳಿಗೆ ಬೇಡಿಕೆ ಹೆಚ್ಚಾಗುತ್ತಿದೆ.

9. ಸ್ಕ್ರಂ ಮಾಸ್ಟರ್

9. ಸ್ಕ್ರಂ ಮಾಸ್ಟರ್

ಸಾಫ್ಟವೇರ್ ಡೆವಲಪಮೆಂಟ್ ಪ್ರಕ್ರಿಯೆಯನ್ನು ವ್ಯವಸ್ಥಿತಗೊಳಿಸುವ ಸ್ಕ್ರಂ ಮಾಸ್ಟರ್‌ಗಳನ್ನು ಇತ್ತೀಚಿನ ದಿನಗಳಲ್ಲಿ ಬಹಳಷ್ಟು ಕಂಪನಿಗಳು ನೇಮಕ ಮಾಡಿಕೊಳ್ಳುತ್ತಿವೆ. ಈ ಬೆಳವಣಿಗೆ 2019 ರಲ್ಲಿಯೂ ಮುಂದುವರಿಯಲಿದೆ. ಸ್ವತಃ ತಾವೇ ಎಲ್ಲವನ್ನೂ ಸೂಕ್ತವಾಗಿ ನಿಭಾಯಿಸಬಲ್ಲ ವಾತಾವರಣ ಸೃಷ್ಟಿಸುವ ಸ್ಕ್ರಂ ಮಾಸ್ಟರ್‌ಗಳಿಗೆ ಕಂಪನಿಗಳಲ್ಲಿ ಬೇಡಿಕೆ ಹೆಚ್ಚಾಗುತ್ತಿದೆ.

10. ಡೆವ್ ಆಪ್ಸ್ ಎಂಜಿನಿಯರ್ (DevOps engineer)

10. ಡೆವ್ ಆಪ್ಸ್ ಎಂಜಿನಿಯರ್ (DevOps engineer)

ಡೆವ್ ಆಪ್ಸ್ ಎಂಜಿನಿಯರುಗಳು ಹೆಚ್ಚು ಸಾಫ್ಟವೇರ್ ಜ್ಞಾನ ಹೊಂದಿದ ಎಂಜಿನಿಯರುಗಳಾಗಿದ್ದಾರೆ. ಬಹುತೇಕ ಕಂಪನಿಗಳು ತಮ್ಮ ಕಾರ್ಯ ವಿಧಾನವನ್ನು ಸುಲಭ ಹಾಗೂ ಸರಳೀಕರಣಗೊಳಿಸಲು ಡೆವ್ ಆಪ್ಸ್ ಎಂಜಿನಿಯರುಗಳನ್ನು ನೇಮಕ ಮಾಡಿಕೊಳ್ಳುತ್ತಿವೆ. 2012 ರಲ್ಲಿ ಶೇ.1 ಕ್ಕೂ ಕಡಿಮೆ ಇದ್ದ ಡೆವ್ ಆಪ್ಸ್ ಎಂಜಿನಿಯರುಗಳ ಬೇಡಿಕೆ 2017 ರ ಹೊತ್ತಿಗೆ ಶೇ.24 ಕ್ಕೆ ಬೆಳೆದಿದೆ ಎಂದು ಇಂಡೀಡ್ ಮಾಹಿತಿ ನೀಡಿದೆ.

Read more about: jobs employment money finance news
English summary

The 10 most in-demand Jobs for 2019

The tech jobs landscape of 2019 will likely look largely the same as it did in 2018, with roles in software development, cybersecurity, and data science dominating across industries.
Story first published: Thursday, January 3, 2019, 10:02 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X