For Quick Alerts
ALLOW NOTIFICATIONS  
For Daily Alerts

ವಿಮೆ (Insurance) ಮಾಡಿಸುವ ಮುನ್ನ ಇಲ್ಲೊಮ್ಮೆ ನೋಡಿ

ಯಾವ ಪಾಲಿಸಿ ಮಾಡಿಸಬೇಕು? ಅದರ ಮೂಲ ತತ್ವಗಳು ಏನು? ಯಾವ ಸಂದರ್ಭದಲ್ಲಿ ಇವು ಲಾಭ ತಂದುಕೊಡಬಲ್ಲದು? ಹಣದ ರಿಟರ್ನ್ಸ್ ಪ್ರಮಾಣ ಎಷ್ಟು? ಎಷ್ಟು ವರ್ಷದವರೆಗೆ ಕಾಯಬೇಕು? ಇತ್ಯಾದಿ ಹಲವು ಮಾಹಿತಿ ವಿಮೆ ಮಾಡಿಸುವ ಮುನ್ನ ವಿಮಾದಾರರು ತಿಳಿದುಕೊಳ್ಳಬೇಕು

|

ನಮ್ಮಲ್ಲಿ ಹೆಚ್ಚಿನ ಜನರು ವಿಮೆ ಮಾಡಿಸಿಯೇ ಇರುತ್ತಾರೆ. ಆಡು ಮುಟ್ಟದ ಸೊಪ್ಪಿಲ್ಲ, ವಿಮೆ ಮಾಡಿಸದವರು ಯಾರಿಲ್ಲ! ನಮ್ಮ ದೇಶದಲ್ಲಿ ವಿಮಾ ಕಂಪನಿಗಳಿಗೆ, ವಿಮಾ ಏಜೆಂಟ್ ಗಳಿಗೇನು ಕೊರತೆಯಿಲ್ಲ. ಇವರೆಲ್ಲ ಆ ವಿಮೆ, ಈ ವಿಮೆ, ಆರೋಗ್ಯ ವಿಮೆ, ಟರ್ಮ್ ಪಾಲಿಸಿ, ತೆರಿಗೆ ವಿನಾಯಿತಿ ಇರುವ ಪಾಲಿಸಿ ಅಂತಾ ವಿಮಾ ಕಂಪನಿಗಳು ಜಾಹೀರಾತು ನೀಡುವುದನ್ನು ನೋಡಿದ್ದೇವೆ. ಅಲ್ಲದೇ ಏಜೆಂಟರು ಮನೆ ಬಾಗಿಲಿಗೆ ಬರುವುದನ್ನು ಸಾಮಾನ್ಯ. ಇವರೆಲ್ಲರೂ ತಮ್ಮ ಪಾಲಿಸಿ ಒಳಗೊಂಡಿರುವ ಸಕಾರಾತ್ಮಕ ಅಂಶಗಳನ್ನು ಮಾತ್ರ ಹೇಳುತ್ತಾರೆ. ಆದರೆ ಹೆಚ್ಚಿನ ಸಂದರ್ಭಗಳಲ್ಲಿ ವಿಮೆ ಮಾಡಿಸುವವರಿಗೆ ಗೊಂದಲ ಬಗೆಹರಿದಿರುವುದಿಲ್ಲ. ಯಾರೋ ಒಬ್ಬರು ಈ ಪಾಲಿಸಿ ಚೆನ್ನಾಗಿರತ್ತೆ ಮಾಡಿ ಎಂದಾಕ್ಷಣ ಮಾಡುವ ಜನರು ಕೂಡ ಇದ್ದಾರೆ. ನಂಬಲು ಸಾಧ್ಯವಿಲ್ಲ! ಈ ವಿಮೆಗಳೂ ಭಾರತದಲ್ಲಿ ಲಭ್ಯ

ಆದರೆ ಯಾವ ಪಾಲಿಸಿ ಮಾಡಿಸಬೇಕು? ಅದರ ಮೂಲ ತತ್ವಗಳು ಏನು? ಯಾವ ಸಂದರ್ಭದಲ್ಲಿ ಇವು ಲಾಭ ತಂದುಕೊಡಬಲ್ಲದು? ಹಣದ ರಿಟರ್ನ್ಸ್ ಪ್ರಮಾಣ ಎಷ್ಟು? ಎಷ್ಟು ವರ್ಷದವರೆಗೆ ಕಾಯಬೇಕು? ವಿಮೆ ಮೇಲೆ ಸಾಲ ಸಿಗುವುದೆ? ಅರ್ಧಕ್ಕೆ ಮೊತ್ತ ಹಿಂಪಡೆಯಬಹುದು? ಇತ್ಯಾದಿ ಹಲವು ಮಾಹಿತಿ ವಿಮೆ ಮಾಡಿಸುವ ಮುನ್ನ ವಿಮಾದಾರರು ತಿಳಿದುಕೊಳ್ಳಬೇಕಾಗುತ್ತದೆ.

1. ವಿಮಾದಾರ

1. ವಿಮಾದಾರ

ಅಂಚೆ ಇಲಾಖೆಯ ಇನ್ಸೂರೆನ್ಸ್ ಯೋಜನೆಗಳ ಬಗ್ಗೆ ನಿಮಗೆ ಗೊತ್ತಿರಬೇಕಾದ ಸಂಗತಿ ಅಂಚೆ ಇಲಾಖೆಯ ಇನ್ಸೂರೆನ್ಸ್ ಯೋಜನೆಗಳ ಬಗ್ಗೆ ನಿಮಗೆ ಗೊತ್ತಿರಬೇಕಾದ ಸಂಗತಿ

2. ಇನ್ಶೂರರ್ ಅಥವಾ ಪಾಲಿಸಿ ಜವಾಬ್ದಾರ

2. ಇನ್ಶೂರರ್ ಅಥವಾ ಪಾಲಿಸಿ ಜವಾಬ್ದಾರ

ಯಾವ ಕಂಪನಿ ಅಥವಾ ಸಂಸ್ಥೆ ವಿಮೆಯನ್ನು ನೀಡಿರುತ್ತದೆಯೋ ಅದನ್ನು ಇನ್ಶೂರರ್ ಅಥವಾ ಪಾಲಿಸಿ ಜವಾಬ್ದಾರ ಎಂದು ಕರೆಯಬಹುದು. ಉದಾಹರಣೆಗೆ ಎಲ್ಐಸಿ, ಬಿರ್ಲಾ ಸನ್ ಲೈಫ್, ಐಸಿಐಸಿಐ ಪ್ರೋಡೆನ್ಶಿಯಲ್, ಎಚ್ ಡಿಎಫ್ ಸಿ ಸ್ಟ್ಯಾಂಡರ್ಡ್ ಲೈಫ್ ಮೂಲಕ ಪಾಲಿಸಿ ಖರೀದಿಸಿದ್ದರೆ ಇವರು ಇನ್ಶೂರರ್ ಆಗಿರುತ್ತಾರೆ.

3. ನಾಮಿನಿ
 

3. ನಾಮಿನಿ

ಪಾಲಿಸಿದಾರನಿಗೆ ಏನಾದರೂ ಅವಘಡ ಸಂಭವಿಸಿದಲ್ಲಿ, ಮೃತ ಪಟ್ಟಲ್ಲಿ ಅಥವಾ ಹಣ ಪಡೆಯಲು ಸಾಧ್ಯವಾಗದ ಪಕ್ಷದಲ್ಲಿ ನಾಮಿನಿ ವಿಮಾ ಹಣ ಪಡೆದುಕೊಳ್ಳಬಹುದು. ವಿಮೆಯನ್ನು ಮಾಡುವ ಸಂದರ್ಭದಲ್ಲಿ ನಾಮಿನಿಯಾಗಿ ಒಬ್ಬರನ್ನು ಹೆಸರಿಸಬೇಕಾಗುತ್ತದೆ. ಪಾಲಿಸಿ ಮುಂದುವರಿಯುತ್ತಿದ್ದ ಸಮಯದಲ್ಲಿ ಅಗತ್ಯಬಿದ್ದರೆ ನಾಮಿನಿಯನ್ನು ಬದಲಾವಣೆ ಮಾಡಲು ಅವಕಾಶವಿರುತ್ತದೆ. ಭಾರತದಲ್ಲಿ ಲಭ್ಯವಿರುವ ವಿವಿಧ ವಿಮಾ ಯೋಜನೆಗಳು ಯಾವುವು?

4. ಪಾಲಿಸಿದಾರ

4. ಪಾಲಿಸಿದಾರ

ಪಾಲಿಸಿದಾರ ಮತ್ತು ವಿಮೆಗೆ ಒಳಪಟ್ಟವನ ನಡುವೆ ಕೊಂಚ ವ್ಯತ್ಯಾಸವಿದೆ. ಪಾಲಿಸಿದಾರ ಅಂದರೆ ವಿಮೆಯನ್ನು ಖರೀದಿ ಮಾಡಿದವ ಎಂದು ಅರ್ಥೈಸಿಕೊಳ್ಳಬಹುದು. ಕುಟುಂಬದ ಯಜಮಾನ ಕುಟುಂದ ಎಲ್ಲರನ್ನೂ ಸೇರಿಸಿ ವಿಮೆ ಮಾಡಲೂಬಹುದು.

5. ಪ್ರೀಮಿಯಂ ಕಂತು

5. ಪ್ರೀಮಿಯಂ ಕಂತು

ನಿರ್ದಿಷ್ಟ ಅವಧಿಗೆ (ವಾರ್ಷಿಕ, ಅರ್ಧವಾರ್ಷಿಕ) ಸಂಬಂಧಿಸಿ ಪಾಲಿಸಿದಾರ ಹಣ ಪಾವತಿ ಮಾಡಬೇಕಾಗುತ್ತದೆ. ಈ ಪಾವತಿ ಮಾಡುವ ಕಂತನ್ನು ಅಥವಾ ಹಣದ ಮೊತ್ತವನ್ನು ಪ್ರೀಮಿಯಂ ಕಂತು ಎಂದು ಕರೆಯಬಹುದು.

6. ವಿಮಾ ಮೊತ್ತ ಹಿಂಪಡೆಯುವುದು

6. ವಿಮಾ ಮೊತ್ತ ಹಿಂಪಡೆಯುವುದು

ವಿಮೆಗೆ ಒಳಪಟ್ಟ ವ್ಯಕ್ತಿ ಸಾವನ್ನಪ್ಪಿದರೆ ಅಥವಾ ಗಾಯಗೊಂಡರೆ ವಿಮೆ ಪಾವತಿಯಾದ ಕಂತನ್ನು ಆಧರಿಸಿ ನಿರ್ದಿಷ್ಟ ಮೊತ್ತದ ಹಣವನ್ನು ಪಡೆದುಕೊಳ್ಳಬಹುದು. ಆರಂಭಿಕ ಹಂತ ಅಂದರೆ ಅಪಘಾತ ಅಥವಾ ಸಾವು ಸಂಭವಿಸಿದ 15 ದಿನದ ಒಳಗಾಗಿ ಸಂಬಂಧಿಸಿದ ಎಲ್ಲ ದಾಖಲೆಗಳನ್ನು ವಿಮಾ ಕಂಪನಿಗೆ ಒದಗಿಸಬೇಕಾಗುತ್ತದೆ.

ಅಧಿಕಾರ

ಅಧಿಕಾರ

ಪ್ರತಿಯೊಂದು ಪಾಲಿಸಿಯೂ ನಿರ್ದಿಷ್ಟ ಅವಧಿ ಅಂದರೆ ಕಂತುಗಳ ನಂತರ ಅಧಿಕಾರ ಪಡೆದುಕೊಳ್ಳುತ್ತದೆ. ಸಾಮಾನ್ಯವಾಗಿ ಮೂರು ವರ್ಷಗಳ ಕಾಲವನ್ನು ನಿಗದಿಪಡಿಸಲಾಗಿರುವುದನ್ನು ಕಾಣುತ್ತೇವೆ. ಮೂರು ವರ್ಷಗಳ ಕಂತುಗಳನ್ನು ತುಂಬಿದ ನಂತರ ಅಧಿಕಾರ ಪಡೆದುಕೊಳ್ಳುತ್ತದೆ.

ಲ್ಯಾಪ್ಸ್ ಅಥವಾ ಅರ್ಧಕ್ಕೆ ನಿಂತ ವಿಮೆ

ಲ್ಯಾಪ್ಸ್ ಅಥವಾ ಅರ್ಧಕ್ಕೆ ನಿಂತ ವಿಮೆ

ಕೆಲವೊಮ್ಮೆ ಅನಿವಾರ್ಯ ಕಾರಣಗಳಿಂದ ಪಾಲಿಸಿ ಪ್ರೀಮಿಯಂ ಕಟ್ಟಲು ಅಸಾಧ್ಯವಾದರೆ ಅದು ಲ್ಯಾಪ್ಸ್ ಎಂದು ಕರೆಸಿಕೊಳ್ಳುತ್ತದೆ. ವಿಮ ಕಂಪನಿಯ ನಿಯದನ್ವಯ ನಿರ್ಧಿಷ್ಟ ದಂಡ ಪಾವತಿಸಿದ ನಂತರ ವಿಮೆಗೆ ಮತ್ತೆ ಚಾಲನೆ ನೀಡಬಹುದು.

ಎಚ್ಚರಿಕೆ ಇರಲಿ

ಎಚ್ಚರಿಕೆ ಇರಲಿ

ಹೇಗಾದರೂ ಮಾಡಿ ಒಂದು ಪಾಲಿಸಿ ಮಾಡಿಸಿದರೆ ಸಾಕು ಎನ್ನುವ ಏಜೆಂಟರ ಬಗ್ಗೆ ಎಚ್ಚರಿಕೆ ಇರಬೇಕು. ಇಂತವರು ತಮಗೆ ಪಾಲಿಸಿ ಮೇಲೆ ಸಿಗುವ ಮೊತ್ತದ ಮೇಲೆ ಆಸೆ ಇಟ್ಟಿರುತ್ತಾರೆಯೇ ಹೊರತು ಉತ್ತಮ ಸೇವೆ ಒದಗಿಸುವುದಿಲ್ಲ. ಒಮ್ಮೆ ಪಾಲಿಸಿ ಮಾಡಿಸಿದ ನಂತರ ಇವರು ನಿಮ್ಮತ್ತ ತಿರುಗೆ ಕೂಡ ನೋಡುವುದಿಲ್ಲ. ಆದರೆ ಉತ್ತಮ ಏಜೆಂಟ್ ನಾದವನು ತಮ್ಮ ಪಾಲಿಸಿದಾರರೊಂದಿಗೆ ಸತತ ಸಂಪರ್ಕದಲ್ಲಿರಬೆಕಾಗುತ್ತದೆ. ಕಾಲಕಾಲಕ್ಕೆ ಕಂತುಗಳನ್ನು, ಕಂತಿನ ದಿನಾಂಕಗಳನ್ನು ತಿಳಿಸುತ್ತಿರಬೇಕಾಗುತ್ತದೆ.

ಉದಾಹರಣೆ ಮೂಲಕ ವಿವರಣೆ

ಉದಾಹರಣೆ ಮೂಲಕ ವಿವರಣೆ

ಒಂದು ಉದಾಹರಣೆ ಮೂಲಕ ಇನ್ನಷ್ಟು ವಿವರವಾಗಿ ಚರ್ಚಿಸೋಣ. ಕುಟುಂಬದ ಯಜಮಾನ ಅಶೋಕ್ ತನ್ನ ಪತ್ನಿ ಮತ್ತು ಇಬ್ಬರು ಮಕ್ಕಳ ಹಿತದೃಷ್ಟಿಯಿಂದ ಎಲ್ಐಸಿ ಪಾಲಿಸಿಯೊಂದನ್ನು ಖರೀದಿಸುತ್ತಾನೆ ಎಂದಿಟ್ಟುಕೊಳ್ಳೋಣ. ರೂ.10 ಲಕ್ಷ ಮೊತ್ತದ ಪಾಲಿಸಿಯ ಪ್ರೀಮಿಯಂ ಕಂತು ವರ್ಷಕ್ಕೆ ರೂ. 3 ಸಾವಿರ 10 ವರ್ಷದ ಅವಧಿಗೆ ಮಾಡಿಸಿದ್ದು, ಪಾಲಿಸಿಗೆ ಆತನ ಹೆಂಡತಿ ಅನುಷಾ ನಾಮಿನಿಯಾಗಿರುತ್ತಾಳೆ. ಪಾಲಿಸಿಗೆ ಸಂಬಂಧಿತ ದಾಖಲೆಗಳು 26 ಜನೆವರಿ 2015ಕ್ಕೆ ಆತನ ಕೈ ಸೇರುತ್ತವೆ.
ವಿಮೆಗೆ ಒಳಪಟ್ಟವ: ಅಶೋಕ್
ಪಾಲಿಸಿದಾರ: ಅಶೋಕ್
ನಾಮಿನಿ: ಅನುಷಾ
ಪಾಲಿಸಿ ಮೊತ್ತ: ರೂ. 10 ಲಕ್ಷ
ಪ್ರೀಮಿಯಂ ಕಂತು: ರೂ. 3 ಸಾವಿರ
ಅಧಿಕಾರ: 26 ಜನೆವರಿ 2015

ಒಟ್ಟಿನಲ್ಲಿ ವಿಮೆಯೂ ಜೀವ ಮತ್ತು ಜೀವನಕ್ಕೆ ಭದ್ರತೆ ಒದಗಿಸುತ್ತದೆ ಎಂದೇ ನಂಬಲಾಗಿದ್ದು, ಭಾರತದಲ್ಲಿ ಅನೇಕ ಬಗೆಯ ಪಾಲಿಸಿಗಳು ಚಾಲ್ತಿಯಲ್ಲಿದ್ದು ಸರ್ಕಾರಿ ಸ್ವಾಮ್ಯದ ಕಂಪನಿಗಳು ಕಡಿಮೆ ಬಡ್ಡಿ ನೀಡಿದರೆ, ಖಾಸಗಿಯವರು ಹೆಚ್ಚಿನ ಬಡ್ಡಿ ದರ ನೀಡುತ್ತಿವೆ.  (Read More: Life Insurance Health Insurance)

English summary

Insurance Terms You should Know

Here are few terms which you should be aware if you are planning for a policy or planning to opt one.
Story first published: Thursday, February 14, 2019, 10:28 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X