ಹೆಚ್ಚು ಸಂಬಳ ಪಡೆಯಲು ಇಚ್ಛಿಸುವವರಿಗೆ 6 ಪಾರ್ಟ್ ಟೈಮ್ ಕೆಲಸಗಳು

ಪೂರ್ಣಾವಧಿ ಉದ್ಯೋಗ ಮಾಡಲು ಹಲವು ಕಟ್ಟುಪಾಡುಗಳಿರುತ್ತವೆ. ಪುಲ್ ಟೈಮ್ ಕೆಲಸದೊಂದಿಗೆ ಪಾರ್ಟ್ ಟೈಮ್ ಕೆಲಸ ಮಾಡಿ ಹೆಚ್ಚು ಆದಾಯ ಗಳಿಸಲು ತುಂಬಾ ಜನರು ಇಷ್ಟಪಡುತ್ತಿರುತ್ತಾರೆ. ಆದರೆ ಪಾರ್ಟ್ ಟೈಮ್ ಕೆಲಸದ ಮಾರ್ಗಗಳ ಬಗ್ಗೆ ಗೊಂದಲವಿರುತ್ತದೆ.

ಪೂರ್ಣಾವಧಿ ಉದ್ಯೋಗ ಮಾಡಲು ಹಲವು ಕಟ್ಟುಪಾಡುಗಳಿರುತ್ತವೆ. ಪುಲ್ ಟೈಮ್ ಕೆಲಸದೊಂದಿಗೆ ಪಾರ್ಟ್ ಟೈಮ್ ಕೆಲಸ ಮಾಡಿ ಹೆಚ್ಚು ಆದಾಯ ಗಳಿಸಲು ತುಂಬಾ ಜನರು ಇಷ್ಟಪಡುತ್ತಿರುತ್ತಾರೆ. ಆದರೆ ಪಾರ್ಟ್ ಟೈಮ್ ಕೆಲಸದ ಮಾರ್ಗಗಳ ಬಗ್ಗೆ ಗೊಂದಲವಿರುತ್ತದೆ.

ಅರೆಕಾಲಿಕ ಕೆಲಸ ಅಥವಾ ಪಾರ್ಟ್ ಟೈಂ ಕೆಲಸ ಮಾಡುವವರು ಈಗಿನ ಸ್ಪರ್ಧಾತ್ಮಕ ಉದ್ಯೋಗದ ವಾತಾವರಣದಲ್ಲಿ ಹೆಚ್ಚು ಆದಾಯವನ್ನು ಪಡೆಯಬಹುದು. ಸಂಬಂಧಪಟ್ಟ ಕ್ಷೇತ್ರಗಳಲ್ಲಿ ಪರಿಣತಿಯನ್ನು ಹೊಂದಿರುವ ವ್ಯಕ್ತಿಗಳು ತಮ್ಮ ಅನುಕೂಲಕ್ಕಾಗಿ ಜೊತೆಗೆ ಹೆಚ್ಚಿನ ವೇತನಕ್ಕಾಗಿ ಕೆಲಸ ಮಾಡಲು 6 ಪಾರ್ಟ್ ಟೈಮ್ ಉದ್ಯೋಗಗಳನ್ನು ಆಯ್ಕೆ ಮಾಡಿಕೊಳ್ಳಬಹುದು. ಮನೆಯಿಂದ ನಡೆಸಬಹುದಾದ 18 ಲಾಭದಾಯಕ ಉದ್ಯಮಗಳು

ಗ್ರಾಫಿಕ್ ಡಿಸೈನರ್

ಗ್ರಾಫಿಕ್ ಡಿಸೈನರ್

ಹಲವು ಸಂಸ್ಥೆಗಳು ಗ್ರಾಫಿಕ್ ವಿನ್ಯಾಸಕಾರರನ್ನು (ಡಿಸೈನರ್ಸ್) ಸ್ವತಂತ್ರ ಆಧಾರದ ನೀತಿಯ ಮೇಲೆ ನೇಮಿಸಿಕೊಳ್ಳುತ್ತಾರೆ. ತಮ್ಮ ಬ್ರಾಂಡ್ ಗಳ ನಿರ್ವಹಣೆಯನ್ನು, ಪ್ಯಾಕೇಜ್ ವಿನ್ಯಾಸವನ್ನು ಅಥವಾ ವೆಬ್ಸೈಟ್ ವಿನ್ಯಾಸದಂತಹ ನಿರ್ವಹಣೆಗೆ ಬಳಸಿಕೊಳ್ಳಲು ಇವರನ್ನು ನೇಮಿಸುತ್ತಾರೆ. ಆ ಮೂಲಕ, ತಮ್ಮ ಪ್ರೊಡಕ್ಟುಗಳನ್ನು ಸುಧಾರಿಸಲು ಹೊಸ ಹೊಸ ಕಂಪನಿಗಳಿಂದ ಇಂತರ ಆಫರ್ ಗಳು ಗ್ರಾಫಿಕ್ ಡಿಸೈನರ್ ಗಳಿಗೆ ಬರುತ್ತಲೇ ಇರುತ್ತವೆ. ಸಾಮಾಜಿಕ ಮಾಧ್ಯಮಗಳಲ್ಲಿ ಉತ್ತಮ ಉಪಸ್ಥಿತಿಯನ್ನು ಹೊಂದಿರುವವರು ಜೊತೆಗೆ ಡಿಜಿಟಲ್ ಕೌಶಲ್ಯಗಳನ್ನು ಹೊಂದಿರುವ ಚಿತ್ರಕಾರರು ಮತ್ತು ಕಲಾವಿದರು ಒಂದೇ ಸಮಯದಲ್ಲಿ ಹಲವಾರು ಪ್ರಾಜೆಕ್ಟ್ಗಳನ್ನು ಪಡೆಯುತ್ತಾರೆ. ಇಂತಹ ಪ್ರಾಜೆಕ್ಟ್ಗಳು ನಿರ್ದಿಷ್ಟ ಸಮಯದಲ್ಲಿ ಮುಗಿಸಲೇಬೇಕಾದ ಗಡುವನ್ನು ಹೊಂದಿರುತ್ತವೆ.

ವ್ಯವಹಾರ/ಹಣಕಾಸು ಸಲಹೆಗಾರ

ವ್ಯವಹಾರ/ಹಣಕಾಸು ಸಲಹೆಗಾರ

ವಿವಿಧ ಉದ್ಯಮಗಳನ್ನು ನಡೆಸುವವರು ತಮ್ಮ ಉದ್ಯಮಕ್ಕೆ ಸಂಬಂಧಪಟ್ಟ ಕೆಲಸ ಮತ್ತು ಪ್ರಕ್ರಿಯೆಗಳನ್ನು ನೋಡಿಕೊಳ್ಳಲು, ಪರಿಶೀಲಿಸಲು ಜೊತೆಗೆ ತಮ್ಮ ಸಲಹೆಗಳ ಮೂಲಕ ಸಂಸ್ಥೆಯನ್ನು ಬೆಳೆಸಲು ವೃತ್ತಿಪರ ಸಲಹೆಗಾರರನ್ನು ನಿಗದಿತ ಅವಧಿಗೆ ನೇಮಿಸಿಕೊಳ್ಳುತ್ತಾರೆ. ಈ ಕೆಲಸಕ್ಕಾಗಿ ನೇಮಕಗೊಳ್ಳುವ ತಜ್ಞರಿಗೆ, ಉತ್ತಮ ಅನುಭವ ಮತ್ತು ನಿರ್ವಹಣೆಯ ಶಕ್ತಿಯ ಅಗತ್ಯವಿರುತ್ತದೆ. ಇವರು ತಮ್ಮ ಅನುಬವ, ನೈಪುಣ್ಯತೆಯ ಆಧಾರವಾಗಿ ಉತ್ತಮ ಆದಾಯ ಗಳಿಸಬಹುದು.

ಪಠ್ಯಕ್ರಮ ಬರಹಗಾರ

ಪಠ್ಯಕ್ರಮ ಬರಹಗಾರ

ಪಠ್ಯಕ್ರಮದ (ಸಿಲೆಬಸ್) ತಯಾರಿಸುವಲ್ಲಿ ವಿಶೇಷ ಅನುಭವ ಹೊಂದಿರುವ ಪ್ರಾಧ್ಯಾಪಕರುಗಳಿಗೆ ಶೈಕ್ಷಣಿಕ ವೆಬ್ಸೈಟ್ ಗಳಲ್ಲಿ ಅರೆಕಾಲಿಕ ಉದ್ಯೋಗಗಳು ಹುಡುಕಿಕೊಂಡು ಬರುತ್ತವೆ. ಜೊತೆಗೆ, ಪುಸ್ತಕಗಳ ತಾಂತ್ರಿಕ ವಿಷಯಗಳ ಬರವಣಿಗೆಯಲ್ಲಿ ಕೌಶಲ್ಯತೆ ಇದ್ದವರು, ವಿವಿಧ ರೀತಿಯ ಉದ್ಯೋಗವನ್ನು ಹೊಂದುವ ಅವಕಾಶವನ್ನು ಹೊಂದಿರುತ್ತಾರೆ. ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಬೇಕಾಗುವ ತರಬೇತಿ ಕ್ಲಾಸ್ಗಳಿಗೂ ಸಹ ಸಂಶೋಧಕರು ಮತ್ತು ವಿಷಯಗಳ ಅಭಿವೃದ್ಧಿಯ ನೈಪುಣ್ಯತೆಯನ್ನು ಹೊಂದಿರುವ ಬರಹಗಾರರ ಅವಶ್ಯಕತೆ ಇರುತ್ತದೆ. ಅಂತವರನ್ನು ಅರೆಕಾಲಿಕ ಸೇವೆಗೆ ತೆಗೆದುಕೊಳ್ಳುತ್ತಿರುತ್ತಾರೆ.

ಲೀಡ್ ಜನರೇಶನ್ ಸ್ಪೆಷಲಿಸ್ಟ್

ಲೀಡ್ ಜನರೇಶನ್ ಸ್ಪೆಷಲಿಸ್ಟ್

ಸ್ಟಾರ್ಟ್ಅಪ್ ಕಂಪನಿಗಳು ಬೇರೆ ಬೇರೆ ಸ್ಥಳಗಳಲ್ಲಿ ಕಂಪನಿಗಳನ್ನು ವಿಸ್ತರಿಸಲು ಅನುಭವ ಹೊಂದಿರುವವರನ್ನು ನೇಮಿಸಿಕೊಳ್ಳುತ್ತಾರೆ. ಇವರ ಕೆಲಸವೇನಂದರೆ ಹೊಸ ಗ್ರಾಹಕರನ್ನು ಸಂಸ್ಥೆಯತ್ತ ಸೆಳೆಯುವುದು. ಇದಕ್ಕಾಗಿ ಇಂತಹ ಸಂಸ್ಥೆಗಳು ಶಾಶ್ವತ ಉದ್ಯೋಗದ (ಪರ್ಮನೆಂಟ್) ಆಧಾರದ ಮೇಲೆ ಅಥವಾ ಉತ್ಸಾಹಿ ಯುವಕ/ಯುವತಿಯರಿಗೆ ಮತ್ತು ಸ್ವಯಂ ಪ್ರೇರಿತವಾಗಿ ಕೆಲಸ ಮಾಡಲು ಇಚ್ಚಿಸುವ ವ್ಯಕ್ತಿಗಳನ್ನು ಆಯ್ಕೆ ಮಾಡುತ್ತಾರೆ. ಇಂತಹ ಅಭ್ಯರ್ಥಿಗಳಿಗೆ ತಿಂಗಳಿಗೆ ರೂ. 30-50 ಸಾವಿರದವರೆಗೆ ವೇತನವನ್ನು ಕೊಟ್ಟು ನೇಮಕ ಮಾಡುತ್ತಾರೆ. ಈ ತಜ್ಞರು ಕಂಪನಿಯ ಭವಿಷ್ಯದ ಯೋಜನೆಯನ್ನು ಆಧರಿಸಿ ನೇಮಕಾತಿಗಳನ್ನು ಆಯೋಜಿಸುತ್ತಾರೆ. ಇದಲ್ಲದೇ, ಯಾವುದೇ ವ್ಯಕ್ತಿ ವೈಯಕ್ತಿಕವಾಗಿ ಕಮಿಷನ್ ಆಧಾರಿತವಾಗಿಯೂ ಅರೆಕಾಲಿಕ ಕೆಲಸ ಮಾಡಬಹುದಾಗಿದೆ. ಇದು ಇಂತಹ ಅಭ್ಯರ್ಥಿಗಳಿಗೆ ಹೆಚ್ಚಿನ ಆದಾಯ ಗಳಿಸುವಲ್ಲಿ ಸಹಾಯ ಮಾಡುತ್ತದೆ.

ಸಾಫ್ಟವೇರ್ ಡೆವಲಪರ್

ಸಾಫ್ಟವೇರ್ ಡೆವಲಪರ್

ಒಂದು ಸಾಫ್ಟ್ವೇರ್ ಡೆವಲಪರ್ ಅಂತರಾಷ್ಟ್ರೀಯ ಮತ್ತು ಸ್ಥಳೀಯ ಗ್ರಾಹಕರೊಂದಿಗೆ ಕೆಲಸ ಮಾಡಬಹುದು. ಪ್ರಸ್ತುತ ವೆಬ್ಸೈಟ್ ಗಳನ್ನು ನವೀಕರಿಸುವುದು ಮತ್ತು ಹೊಸ ಟೆಂಪ್ಲೆಟ್ ಗಳನ್ನು ರಚಿಸುವುದು ಅಥವಾ ಹೊಸ ಅಪ್ಲಿಕೇಶನ್ ಅಥವಾ ವೆಬ್ಸೈಟ್ ಅಭಿವೃದ್ಧಿಪಡಿಸುವಂತಹ ಕೆಲಸಗಳಿಗೆ ಅರೆಕಾಲಿಕ ಕೆಲಸಗಳನ್ನು ಮಾಡಬಹುದಾಗಿದೆ. ಇಂತಹ ಕೆಲಸಗಳಿಗೆ ಬೇಡಿಕೆ ಹೆಚ್ಚಾಗಿದ್ದು, ಅವರವರ ಅನುಕೂಲಕ್ಕೆ ತಕ್ಕಂತೆ ಯಾವುದೇ ಕೆಲಸ ಮಾಡುವ ಸ್ವಾತಂತ್ರ್ಯವನ್ನೂ ನೀಡುತ್ತದೆ.

ದ್ವಿಭಾಷಾ ಕಾನೂನು ಸಹಾಯಕ

ದ್ವಿಭಾಷಾ ಕಾನೂನು ಸಹಾಯಕ

ವಿವಿಧ ದೇಶಗಳಲ್ಲಿ ಕೆಲಸ ಮಾಡಿ ಅನುಭವ ಹೊಂದಿರುವ, ಜೊತೆಗೆ ಎರಡು ಅಥವಾ ಅದಕ್ಕಿಂತ ಹೆಚ್ಚು ಭಾಷೆಗಳಲ್ಲಿ ಪರಿಣತಿ ಹೊಂದಿರುವ ಮತ್ತು ಕೆಲವು ನಿರ್ದಿಷ್ಟ ದೇಶ/ಪ್ರದೇಶಗಳಲ್ಲಿ ಕೆಲಸ ಮಾಡಿ ಅನುಭವ ಹೊಂದಿರುವ ಅಭ್ಯರ್ಥಿಗಳ ಅವಶ್ಯಕತೆ ಹೆಚ್ಚಿನ ಸಂಸ್ಥೆಗಳಿಗಿರುತ್ತದೆ. ಉದಾಹರಣೆಗೆ: ಒಂದು ಬ್ರಿಟಿಷ್ ಮೂಲದ ಕಂಪನಿ ಜರ್ಮನಿಯಲ್ಲಿನ ತನ್ನ ಗ್ರಾಹಕರೊಂದಿಗೆ ಮಾತುಕತೆ ನಡೆಸುವ ಅವಶ್ಯಕತೆ ಬಿದ್ದಲ್ಲಿ ಅಥವಾ ಕಾನೂನು ಪ್ರಕಾರ ಅಲ್ಲಿನ ದಾಖಲೆಗಳನ್ನು ಸಿದ್ಧಪಡಿಸಲು ಜರ್ಮನ್ ಭಾಷೆಯಲ್ಲಿನ ತಾಂತ್ರಿಕ ಶಬ್ದಕೋಶವನ್ನು ಅನುವಾದಿಸುವ ಹಾಗೂ ಅದನ್ನು ಇಂಗ್ಲಿಷ್ ಗೆ ತರ್ಜುಮೆ ಮಾಡಲು ಜರ್ಮನ್ ಮತ್ತು ಇಂಗ್ಲಿಷ್ ಭಾಷೆಗಳನ್ನು ಕಲಿತಿರುವ ಅಭ್ಯರ್ಥಿಗಳ ಅವಶ್ಯಕತೆಯಲ್ಲಿ ಇರುತ್ತದೆ.

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+