ಕೇವಲ 5 ವರ್ಷಗಳಲ್ಲಿ ನಿಮ್ಮ ಆದಾಯ ಡಬಲ್ ಮಾಡಬಲ್ಲ ಟಾಪ್ 10 ಮ್ಯೂಚುವಲ್ ಫಂಡ್

ನಿಧಾನವಾಗಿ ಆದರೆ ಸ್ಥಿರವಾಗಿ, ಮಾರುಕಟ್ಟೆ ಸಂಬಂಧಿತ ಅನಿಶ್ಚಿತತೆಗಳು ಮತ್ತು ಪರಿಣಾಮಕಾರಿ ಏರುಪೇರುಗಳು ವಿವಿಧ ಉಳಿತಾಯ ಹೂಡಿಕೆಗಳ ಮೇಲೆ ವ್ಯತಿರಿಕ್ತವಾದ ಪ್ರಭಾವವನ್ನು ಬೀರುತ್ತವೆ.

ನಿಧಾನವಾಗಿ ಆದರೆ ಸ್ಥಿರವಾಗಿ, ಮಾರುಕಟ್ಟೆ ಸಂಬಂಧಿತ ಅನಿಶ್ಚಿತತೆಗಳು ಮತ್ತು ಪರಿಣಾಮಕಾರಿ ಏರುಪೇರುಗಳು ವಿವಿಧ ಉಳಿತಾಯ ಹೂಡಿಕೆಗಳ ಮೇಲೆ ವ್ಯತಿರಿಕ್ತವಾದ ಪ್ರಭಾವವನ್ನು ಬೀರುತ್ತವೆ. ಅಂತಹ ಸಮಯದಲ್ಲಿ ಬಂಡವಾಳ ಹೂಡಿಕೆದಾರರು ದೀರ್ಘಾವಧಿಯ, ಸುರಕ್ಷಿತ ಮತ್ತು ಸಮರ್ಥನೀಯ ಹೂಡಿಕೆ ವಿಧಾನಗಳನ್ನು ಆಯ್ಕೆ ಮಾಡುವುದು ಮುಖ್ಯವಾಗಿರುತ್ತದೆ. ಆದ್ದರಿಂದ ಹೆಚ್ಚಿನ ಹೂಡಿಕೆದಾರರು ಈಗ ಸುರಕ್ಷಿತ ಮತ್ತು ವಿಶ್ವಾಸಾರ್ಹ ಹೂಡಿಕೆಗಳಾದ ಮ್ಯೂಚುವಲ್ ಫಂಡ್ (ಎಂಎಫ್ಎಸ್) ಕಡೆಗೆ ಆಕರ್ಷಿತರಾಗುತ್ತಿರುವುದು ಅಚ್ಚರಿಯೆನಲ್ಲ.

ಆದಾಗ್ಯೂ, ನಿಮ್ಮ ಎಲ್ಲ ಅಗತ್ಯಗಳಿಗೆ ಪೂರಕವಾದ ನಿರ್ದಿಷ್ಟ ಮ್ಯೂಚುವಲ್ ಫಂಡ್ ಅನ್ನು ಆಯ್ಕೆ ಮಾಡಿಕೊಳ್ಳುವುದು ಮುಖ್ಯ. ಅದರಲ್ಲೂ ವಿಶೇಷವಾಗಿ ನೀವು ದೀರ್ಘಾವಧಿಗೆ ಹೂಡಿಕೆ ಮಾಡಲು ಬಯಸಿದರೆ ತೀವ್ರವಾದ ಶ್ರದ್ಧೆ ಮತ್ತು ಎಚ್ಚರಿಕೆಯ ಅಗತ್ಯವಿದೆ. ಆನ್ಲೈನ್ ಮೂಲಕ ಮ್ಯೂಚುವಲ್ ಫಂಡ್(SIP) ಪ್ರಾರಂಭಿಸುವುದು ಹೇಗೆ?

ಅದಕ್ಕಾಗಿಯೇ ನೀವು ಆಯ್ಕೆ ಮಾಡಿಕೊಳ್ಳಬಹುದಾದ ಮತ್ತು ಹಲವು ವರ್ಷಗಳಿಂದಲೂ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿರುವ, ಉತ್ತಮ ಆದಾಯವನ್ನು ನೀಡುವ ಸಾಮರ್ಥ್ಯವನ್ನು ಹೊಂದಿರುವ ಅಗ್ರ 10 ಮ್ಯೂಚುವಲ್ ಫಂಡ್ ಗಳ ಪಟ್ಟಿಯನ್ನು ನೀಡಲಾಗಿದೆ. ಐದು ವರ್ಷಗಳ ಅವಧಿಗೆ ಹೂಡಿಕೆ ಮಾಡಲು ಬಯಸಿದ್ದಲ್ಲಿ ಈ ಮ್ಯೂಚುವಲ್ ಫಂಡ್ ಗಳು ನಿಮ್ಮ ಅಪಾಯದ ಪ್ರಮಾಣವನ್ನು ಕಡಿಮೆ ಮಾಡಲು ಮತ್ತು ಗರಿಷ್ಠ ಆದಾಯ ಹೆಚ್ಚಿಸಲು ನಿಮಗೆ ನೆರವಾಗಬಹುದು. (Read More: Mutual Funds)

ಕೇವಲ 5 ವರ್ಷಗಳಲ್ಲಿ ನಿಮ್ಮ ಆದಾಯ ಡಬಲ್ ಮಾಡಬಲ್ಲ ಟಾಪ್ 10 ಮ್ಯೂಚುವಲ್ ಫಂಡ್ ಗಳ ವಿವರ ಇಲ್ಲಿದೆ ಓದಿ..

1. ಆದಿತ್ಯ ಬಿರ್ಲಾ ಸನ್ ಲೈಫ್ ಫ್ರಂಟ್ಲೈನ್ ​​ಇಕ್ವಿಟಿ ಫಂಡ್ (ಜಿ)

1. ಆದಿತ್ಯ ಬಿರ್ಲಾ ಸನ್ ಲೈಫ್ ಫ್ರಂಟ್ಲೈನ್ ​​ಇಕ್ವಿಟಿ ಫಂಡ್ (ಜಿ)

ಪ್ರಮುಖ ಬೃಹತ್ ಬಂಡವಾಳದ ಫಂಡ್ ಆಗಿ ಪರಿಗಣಿಸಲ್ಪಟ್ಟ ಆದಿತ್ಯ ಬಿರ್ಲಾ ಸನ್ ಲೈಫ್ ಫ್ರಂಟ್ಲೈನ್ ​​ಇಕ್ವಿಟಿ ಫಂಡ್ ಮೂಲಭೂತವಾಗಿ ಅತ್ಯುತ್ತಮ ಸಾಧನವಾಗಿದ್ದು, ಇದು 7-10 ವರ್ಷಗಳ ಅವಧಿಗೆ ಶೇ. 14 ರಿಂದ ಶೇ. 20ರವರೆಗೆ ಸತತವಾಗಿ ರಿಟರ್ನ್ ಒದಗಿಸಿದೆ. ದೀರ್ಘಾವಧಿಯ ಬಂಡವಾಳ ಬೆಳವಣಿಗೆ ಮತ್ತು ಹೆಚ್ಚು ಆದಾಯ ಪಡೆಯಲು ಬಯಸುವ ಹೂಡಿಕೆದಾರರಿಗೆ ಈ ನಿಧಿ ಪ್ರಾಥಮಿಕವಾಗಿ ಉತ್ತಮವಾಗಿದೆ. ಇದಕ್ಕೆ ಕನಿಷ್ಠ ರೂ. 1,000 ಹೂಡಿಕೆಯ ಅಗತ್ಯವಿರುತ್ತದೆ. ಆದರೆ ಗರಿಷ್ಠ ಬಂಡವಾಳವು ಯಾವುದೇ ಮೊತ್ತದವರೆಗೆ ಇರಬಹುದು. ಬೆಸ್ಟ್ ಮ್ಯೂಚುವಲ್ ಫಂಡ್‌ಗಳ ಆಯ್ಕೆ ಮಾಡೋದು ಹೇಗೆ?

2. ಫ್ರಾಂಕ್ಲಿನ್ ಇಂಡಿಯಾ ಪ್ರಿಮಾ ಫಂಡ್

2. ಫ್ರಾಂಕ್ಲಿನ್ ಇಂಡಿಯಾ ಪ್ರಿಮಾ ಫಂಡ್

ಫ್ರಾಂಕ್ಲಿನ್ ಇಂಡಿಯಾ ಪ್ರಿಮಾ ಫಂಡ್ ಮಿಡ್ ಕ್ಯಾಪ್, ಇಕ್ವಿಟಿ ಫಂಡ್ ಆಗಿದೆ. ಇದು ಕಳೆದ 10 ವರ್ಷಗಳಲ್ಲಿ ಶೇ. 21ರಷ್ಟು ಆದಾಯವನ್ನು ಒದಗಿಸಿದೆ. ಇದು ಮೂಲಭೂತವಾಗಿ ಒಂದುಓಪನ್ ಎಂಡೆಡ್ ಬೆಳವಣಿಗೆಯ ಯೋಜನೆಯಾಗಿದ್ದು, ಅದು ಬಂಡವಾಳದ ಸಂಗ್ರಹಣೆ ಮತ್ತು ಮೆಚ್ಚುಗೆಯ ಏಕೈಕ ಉದ್ದೇಶವನ್ನು ಕೇಂದ್ರೀಕರಿಸುತ್ತದೆ. ಆರಂಭವಾದಂದಿನಿಂದ 26 ವರ್ಷಗಳಲ್ಲಿ, ಈ ಫಂಡ್ ಹೆಚ್ಚಿನ ಲಾಭಾಂಶ ಹಂಚಿಕೆ ಅನುಪಾತವನ್ನು ಒದಗಿಸಿದೆ. ಈ ನಫಂಡ್ ನಲ್ಲಿ ಹೂಡಿಕೆ ಮಾಡಲು ಇಚ್ಚಿಸುವವರು ಕನಿಷ್ಟ ರೂ. 5,000 ಹೂಡಬೇಕಾಗುತ್ತದೆ.

3. ಫ್ರಾಂಕ್ಲಿನ್ ಇಂಡಿಯಾ ಸ್ಮಾಲರ್ ಕಂಪನೀಸ್ ಫಂಡ್

3. ಫ್ರಾಂಕ್ಲಿನ್ ಇಂಡಿಯಾ ಸ್ಮಾಲರ್ ಕಂಪನೀಸ್ ಫಂಡ್

ಈ ಯೋಜನೆಯನ್ನು 2005 ಪರಿಚಯಿಸಲಾಗಿದ್ದು, ಸ್ಮಾಲ್ ಕ್ಯಾಪ್ ಫಂಡ್ ಆಗಿ ಪ್ರಾರಂಭವಾದ ಫ್ರಾಂಕ್ಲಿನ್ ಇಂಡಿಯಾ ಸ್ಮಾಲರ್ ಕಂಪನೀಸ್ ಫಂಡ್ ಹೆಚ್ಚು ವೈವಿಧ್ಯಮಯ ಇಕ್ವಿಟಿ ಯೋಜನೆಯಾಗಿದೆ. ಇದು ಭವಿಷ್ಯದಲ್ಲಿ ಹೆಚ್ಚಿನ ಬೆಳವಣಿಗೆಯ ಪಥವನ್ನು ಅನುಸರಿಸುವ ಸಾಧ್ಯತೆಯಿರುವ ಸ್ಮಾಲ್ ಮತ್ತು ಮಿಡ್ ಕ್ಯಾಪ್ ಕಂಪನಿಗಳಲ್ಲಿ ಬಹುಸಂಖ್ಯೆಯ ವಲಯಗಳಿಗೆ ತನ್ನ ಸ್ವತ್ತುಗಳನ್ನು ಹೂಡಿಕೆ ಮಾಡುತ್ತದೆ. ದೀರ್ಘಕಾಲದ ಬಂಡವಾಳದ ಬೆಳವಣಿಗೆ ಫಂಡ್ ನ ಮೂಲ ಉದ್ದೇಶವೆಂದು ಗುರುತಿಸಲಾಗಿದೆ. ಕಳೆದ 10 ವರ್ಷಗಳಲ್ಲಿ ಶೇ. 11 ರಿಂದ ಶೇ. 22ವರೆಗೆ ಬದಲಾಗಿದ್ದು, ಇದರಿಂದ ವೆಚ್ಚ-ಪರಿಣಾಮಕಾರಿ ಮತ್ತು ತೆರಿಗೆ-ಪರಿಣಾಮಕಾರಿ ಮ್ಯೂಚುಯಲ್ ಫಂಡ್ ಆಗಿ ಪರಿವರ್ತನೆಯಾಗಿದೆ.

4. ಫ್ರಾಂಕ್ಲಿನ್ ಇಂಡಿಯಾ ಪೋಕಸ್ಡ್ ಇಕ್ವಿಟಿ ಫಂಡ್

4. ಫ್ರಾಂಕ್ಲಿನ್ ಇಂಡಿಯಾ ಪೋಕಸ್ಡ್ ಇಕ್ವಿಟಿ ಫಂಡ್

ಹಿಂದೆ ಫ್ರಾಂಕ್ಲಿನ್ ಇಂಡಿಯಾ ಹೈ ಗ್ರೋತ್ ಕಂಪನೀಸ್ ಫಂಡ್ ಎಂದು ಹೆಸರಿಸಲ್ಪಟ್ಟ ಫ್ರಾಂಕ್ಲಿನ್ ಇಂಡಿಯಾ ಪೋಕಸ್ಡ್ ಈಕ್ವಿಟಿ ಫಂಡ್ ಅನ್ನು 9-10 ವರ್ಷದ ಅವಧಿಯಲ್ಲಿ ಸರಾಸರಿ ಶೇ. 19 ರಷ್ಟು ಆದಾಯವನ್ನು ಒದಗಿಸುತ್ತದೆ.
ಇದು ಮೂಲಭೂತವಾಗಿ ವೈವಿಧ್ಯಮಯ ಫಂಡ್ ಆಗಿದ್ದು, ಈ ಯೋಜನೆಯ ಕನಿಷ್ಠ ಹೂಡಿಕೆ ಮೊತ್ತ ರೂ. 5,000 ಆಗಿದೆ. ಇದು ಬ್ಯಾಂಕಿಂಗ್, ಹಣಕಾಸು, ದೂರಸಂಪರ್ಕ ಮತ್ತು ಔಷಧೀಯ ಕಂಪನಿಗಳಲ್ಲಿ ಹೆಚ್ಚಿನ ಹೋಲ್ಡಿಂಗ್ ಹೊಂದಿದೆ.

5. ಡಿಎಸ್ಪಿ ಬಿಆರ್ ಟ್ಯಾಕ್ಸ್ ಸೇವರ್ ಫಂಡ್ (ಜಿ)

5. ಡಿಎಸ್ಪಿ ಬಿಆರ್ ಟ್ಯಾಕ್ಸ್ ಸೇವರ್ ಫಂಡ್ (ಜಿ)

ಹೆಸರೇ ಸೂಚಿಸುವಂತೆ, ಡಿಎಸ್ಪಿ ಬಿಆರ್ ಟ್ಯಾಕ್ಸ್ ಸೇವರ್ ಫಂಡ್ ಮುಖ್ಯವಾಗಿ ತೆರಿಗೆ ಉಳಿಸುವ ಯೋಜನೆಯಾಗಿದೆ. ಇದು ಕನಿಷ್ಠ ಹೂಡಿಕೆ ಮೊತ್ತ ರೂ. 500. ಇದು ಮುಖ್ಯವಾಗಿ ಇಕ್ವಿಟಿ ಮತ್ತು ಇತರ ಸಾಂಸ್ಥಿಕ ಸೆಕ್ಯುರಿಟಿಗಳನ್ನು ಹೊಂದಿದೆ. ಆದಾಯ ತೆರಿಗೆ ಕಾಯಿದೆ 1961 ರ ಸೆಕ್ಷನ್ 80 (ಸಿ) ಅಡಿಯಲ್ಲಿ ಹೂಡಿಕೆದಾರರಿಗೆ ತೆರಿಗೆ ವಿನಾಯಿತಿ ಲಭ್ಯವಿದೆ. ಈ ಫಂಡ್ ದೀರ್ಘಾವಧಿಯಲ್ಲಿ ಶೇ. 15 ರಿಂದ ಶೇ. 17 ವರೆಗೆ ಆದಾಯ ಒದಗಿಸುತ್ತದೆ.

6. ಕೆನರಾ ರೋಬೆಕೋ ಬ್ಲೂ-ಚಿಪ್ ಇಕ್ವಿಟಿ ಫಂಡ್ (ಜಿ)

6. ಕೆನರಾ ರೋಬೆಕೋ ಬ್ಲೂ-ಚಿಪ್ ಇಕ್ವಿಟಿ ಫಂಡ್ (ಜಿ)

ಈ ಫಂಡ್ ಲಾರ್ಜ್ ಕ್ಯಾಪ್ ವಿಭಾಗದಲ್ಲಿ ಮೊದಲ ಸ್ಥಾನದಲ್ಲಿದೆ. ಕೆನರಾ ರೋಬೆಕೋ ಬ್ಲೂ-ಚಿಪ್ ಇಕ್ವಿಟಿ ಫಂಡ್ 10 ವರ್ಷಗಳ ಅವಧಿಗೆ ಸುಮಾರು ಶೇ. 12% ರಿಂದ ಶೇ. 13ರಷ್ಟು ಸ್ಥಿರ ಆದಾಯವನ್ನು ಒದಗಿಸುವಲ್ಲಿ ಹೆಸರುವಾಸಿಯಾಗಿದೆ. ಪ್ರಧಾನವಾಗಿ, ಈ ಸಂಸ್ಥೆಯು ಮಾರುಕಟ್ಟೆಯ ದೊಡ್ಡ ಬಂಡವಾಳವನ್ನು ಹೊಂದಿರುವ ಕಂಪನಿಗಳಲ್ಲಿ ಹೂಡಿಕೆ ಮಾಡುತ್ತದೆ. ಇಂಜಿನಿಯರಿಂಗ್, ತಂತ್ರಜ್ಞಾನ ಮತ್ತು ಬ್ಯಾಂಕಿಂಗ್ ವಲಯಗಳನ್ನು ಒಳಗೊಂಡಿದೆ. ಫಂಡ್ ಆಸ್ತಿಯ ಶೇ. 95ರಷ್ಟು ಮೊತ್ತವನ್ನು ಇಕ್ವಿಟಿಗಳಿಗೆ ಹಂಚಲ್ಪಟ್ಟಿದೆ. ಕನಿಷ್ಟ ಹೂಡಿಕೆ ಮೊತ್ತ ರೂ. 5,000.

7. ಆಕ್ಸಿಸ್ ಮಿಡ್-ಕ್ಯಾಪ್ ಫಂಡ್ (ಜಿ)

7. ಆಕ್ಸಿಸ್ ಮಿಡ್-ಕ್ಯಾಪ್ ಫಂಡ್ (ಜಿ)

ಮಿಡ್ ಕ್ಯಾಪ್ ವಿಭಾಗದ ಅಗ್ರ ಮೂರು ಫಂಡ್ ಗಳಲ್ಲಿ ಒಂದಾಗಿದೆ ಎಂದು ಪರಿಗಣಿಸಲಾಗಿದೆ. ಕಳೆದ 9-10 ವರ್ಷಗಳಲ್ಲಿ ಆಕ್ಸಿಸ್ ಮಿಡ್-ಕ್ಯಾಪ್ ಫಂಡ್ ಶೇ. 15 ರಿಂದ 20ರಷ್ಟು ರಿಟರ್ನ್ ಒದಗಿಸಿದೆ. ಇದು ಹಣಕಾಸು, ಉತ್ಪಾದನೆ, ಮತ್ತು ಆಟೋಮೋಟಿವ್ ಕ್ಷೇತ್ರಗಳಲ್ಲಿನ ಇಕ್ವಿಟಿಗಳಲ್ಲಿ ಹೂಡಿಕೆ ಮಾಡುತ್ತದೆ. 2011 ರಲ್ಲಿ ಪರಿಚಯಿಸಲ್ಪಟ್ಟ ಈ ಫಂಡ್ ನಲ್ಲಿ ಕನಿಷ್ಠ ರೂ. 5,000 ಹೂಡಿಕೆ ಅಗತ್ಯವಿದೆ.

8. ರಿಲಯನ್ಸ್ ಸ್ಮಾಲ್ ಕ್ಯಾಪ್ ಫಂಡ್-ಡೈರೆಕ್ಟ್ (ಜಿ)

8. ರಿಲಯನ್ಸ್ ಸ್ಮಾಲ್ ಕ್ಯಾಪ್ ಫಂಡ್-ಡೈರೆಕ್ಟ್ (ಜಿ)

ಇದು ಹತ್ತು ವರ್ಷಗಳಲ್ಲಿ ಶೇ. 27ರಷ್ಟು ಆದಾಯವನ್ನು ಹಿಂದಿರುಗಿಸುತ್ತದೆ. ರಿಲಯನ್ಸ್ ಸ್ಮಾಲ್ ಕ್ಯಾಪ್ ಡೈರೆಕ್ಟ್ ಫಂಡ್ ಗೆ ಹೆಚ್ಚು ಬೇಡಿಕೆಯಿದೆ. ಉತ್ಪಾದನೆ, ದೂರಸಂಪರ್ಕ, ತಂತ್ರಜ್ಞಾನ ಮತ್ತು ಕೆಮಿಕಲ್ಸ್ ಕ್ಷೇತ್ರಗಳಲ್ಲಿನ ಉತ್ತಮವಾದ ಕಂಪೆನಿಗಳಲ್ಲಿ ಹೋಲ್ಡಿಂಗ್ ಹೊಂದಿದೆ. ಕನಿಷ್ಠ ಹೂಡಿಕೆ ಮೊತ್ತ ರೂ. 5,000.

9. ಕೋಟಾಕ್ ಸ್ಟಾಂಡರ್ಡ್ ಮಲ್ಟಿ ಕ್ಯಾಪ್ ಫಂಡ್

9. ಕೋಟಾಕ್ ಸ್ಟಾಂಡರ್ಡ್ ಮಲ್ಟಿ ಕ್ಯಾಪ್ ಫಂಡ್

ಕೋಟಕ್ ಸ್ಟಾಂಡರ್ಡ್ ಮಲ್ಟಿ ಕ್ಯಾಪ್ ಫಂಡ್ 9-10 ವರ್ಷಗಳ ಅವಧಿಯಲ್ಲಿ ಶೇ. 15 ರಿಂದ ಶೇ. 18 ಇಳುವರಿಯನ್ನು ಒದಗಿಸುತ್ತದೆ. ಇದರ ಶೇ. 91ರಷ್ಟು ಷೇರುಗಳನ್ನು ಇಕ್ವಿಟಿಗಳಲ್ಲಿ ಹಂಚಲಾಗುತ್ತದೆ. ಉಳಿದವುಗಳನ್ನು ಸಾಲ ಭದ್ರತೆಗಳಲ್ಲಿ ಲಾಕ್ ಮಾಡಲಾಗಿದೆ. ಈ ಯೋಜನೆಯು ತೈಲ ಮತ್ತು ಅನಿಲ, ಬ್ಯಾಂಕಿಂಗ್, ಹಣಕಾಸು ಮತ್ತು ಇಂಜಿನಿಯರಿಂಗ್ ನಂತಹ ವಿಶಾಲವಾದ ಕ್ಷೇತ್ರಗಳನ್ನು ಒಳಗೊಂಡಿರುವ ವೈವಿಧ್ಯಮಯ ಬಂಡವಾಳ ಹೊಂದಿದೆ. ಫಂಡ್ ನ ಕನಿಷ್ಠ ಹೂಡಿಕೆ ಮೊತ್ತವು ರೂ. 5,000.

10. ಐಡಿಎಫ್ಸಿ ಟ್ಯಾಕ್ಸ್ ಅಡ್ವಾಂಟೇಜ್ (ELSS) ಫಂಡ್ (ಜಿ)

10. ಐಡಿಎಫ್ಸಿ ಟ್ಯಾಕ್ಸ್ ಅಡ್ವಾಂಟೇಜ್ (ELSS) ಫಂಡ್ (ಜಿ)

2008 ರಲ್ಲಿ ತೆರೆದಿರುವ ಈ ಐಡಿಎಫ್ಸಿ ತೆರಿಗೆ ಅಡ್ವಾಂಟೇಜ್(ELSS) ಫಂಡ್ ನ್ನು ಒಪನ್ ಎಂಡೆಡ್ ಗ್ರೋಥ್ ಎಂದು ಪರಿಗಣಿಸಲಾಗಿದೆ. ದೀರ್ಘಾವಧಿಯಲ್ಲಿ ಶೇ. 16ರಷ್ಟು ಸ್ಥಿರ ಆದಾಯ ಒದಗಿಸುತ್ತದೆ. ಈಕ್ವಿಟಿ ಲಿಂಕ್ ಸೆವಿಂಗ್ ಸ್ಕೀಮ್ ಆಗಿರುವ ಯೋಜನೆ ಕನಿಷ್ಠ ರೂ. 500 ಹೂಡಿಕೆ ಮಾಡಬಹುದು. ಸೆಕ್ಷನ್ 80 ಸಿ ಅಡಿಯಲ್ಲಿ ತೆರಿಗೆ ಪ್ರಯೋಜನಗಳನ್ನು ಪಡೆಯಲು ಹೂಡಿಕೆದಾರನಿಗೆ ಅವಕಾಶವಿರುತ್ತದೆ. ಹಣಕಾಸು, ರಿಯಲ್ ಎಸ್ಟೇಟ್, ರಿಟೇಲ್, ಆಹಾರ ಮತ್ತು ಪಾನೀಯಗಳಂತ ಕ್ಷೇತ್ರಗಳಲ್ಲಿ ಈ ಫಂಡ್ ಸ್ವತ್ತುಗಳನ್ನು ಹಂಚಲ್ಪಟ್ಟಿದೆ. ಮ್ಯೂಚುವಲ್ ಫಂಡ್ಸ್ ವಿಧಗಳು ಯಾವುವು?

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+