For Quick Alerts
ALLOW NOTIFICATIONS  
For Daily Alerts

ಬೆಸ್ಟ್ ಮ್ಯೂಚುವಲ್ ಫಂಡ್‌ಗಳ ಆಯ್ಕೆ ಮಾಡೋದು ಹೇಗೆ?

ಹಲವಾರು ಹೂಡಿಕೆದಾರರ ಬಂಡವಾಳವನ್ನು ಒಟ್ಟಾಗಿ ಸೇರಿಸಿ ಶೇರು, ಬಾಂಡ್‌ಗಳು, ಭದ್ರತಾ ಪತ್ರಗಳು ಹಾಗೂ ಇನ್ನಿತರ ಆಸ್ತಿಗಳ ಮೇಲೆ ಹೂಡಿಕೆ ಮಾಡುವ ವಿಶಿಷ್ಟ ಯೋಜನೆಯೇ ಮ್ಯೂಚುವಲ್ ಫಂಡ್ ಆಗಿದೆ.

|

ಹಲವಾರು ಹೂಡಿಕೆದಾರರ ಬಂಡವಾಳವನ್ನು ಒಟ್ಟಾಗಿ ಸೇರಿಸಿ ಶೇರು, ಬಾಂಡ್‌ಗಳು, ಭದ್ರತಾ ಪತ್ರಗಳು ಹಾಗೂ ಇನ್ನಿತರ ಆಸ್ತಿಗಳ ಮೇಲೆ ಹೂಡಿಕೆ ಮಾಡುವ ವಿಶಿಷ್ಟ ಯೋಜನೆಯೇ ಮ್ಯೂಚುವಲ್ ಫಂಡ್ ಆಗಿದೆ. ಹೂಡಿಕೆದಾರರರಿಂದ ಸಂಗ್ರಹಿಸಲಾದ ಮೊತ್ತವನ್ನು ಫಂಡ್‌ಗಳಲ್ಲಿ ಹೂಡಿಕೆ ಮಾಡಿ, ಅವರು ಲಾಭ ಗಳಿಸುವಂತೆ ಫಂಡ್ ಮ್ಯಾನೇಜರ್‌ಗಳು ಕಾರ್ಯನಿರ್ವಹಿಸುತ್ತಾರೆ.

ಆದರೆ ಹೂಡಿಕೆ ಮಾಡುವಾಗ ಯಾವ ಮ್ಯೂಚುವಲ್ ಫಂಡ್‌ಗಳಲ್ಲಿ ಹಣ ತೊಡಗಿಸಬೇಕು ಎಂಬುದು ಆರಂಭದಲ್ಲಿ ಅನೇಕರಿಗೆ ಗೊಂದಲ ಉಂಟು ಮಾಡುತ್ತದೆ. ಮ್ಯೂಚುವಲ್ ಫಂಡ್‌ಗಳನ್ನು ಆಯ್ಕೆ ಮಾಡುವಾಗ ಯಾವೆಲ್ಲ ಅಂಶಗಳನ್ನು ಪರಿಶೀಲಿಸಬೇಕು ಎಂಬ ಜ್ಞಾನ ಹೂಡಿಕೆದಾರರಿಗೆ ಇರಬೇಕಾಗುತ್ತದೆ. ಮ್ಯೂಚುವಲ್ ಫಂಡ್‌ಗಳಲ್ಲಿ ಹಣ ತೊಡಗಿಸಬೇಕೆನ್ನುವವರು ಯಾವ ಅಂಶಗಳನ್ನು ಗಮನಿಸಬೇಕು, ಉತ್ತಮ ಫಂಡ್‌ಗಳ ಆಯ್ಕೆ ಹೇಗೆ ಎಂಬ ಬಗ್ಗೆ ಈ ಅಂಕಣದಲ್ಲಿ ತಿಳಿಸಲಾಗಿದೆ. ಮ್ಯೂಚುವಲ್ ಫಂಡ್ ಎಂದರೇನು? ಹೂಡಿಕೆಯ ಲಾಭ ಹಾಗು ನಷ್ಟಗಳೇನು?

ಮ್ಯೂಚುವಲ್ ಫಂಡ್‌ಗಳಲ್ಲಿ ಹಣ ತೊಡಗಿಸುವ ಮುನ್ನ ಈ ಅಂಶಗಳು ನಿಮಗೆ ಗೊತ್ತಿರಲಿ:

ಪ್ರತಿಫಲ ಹಾಗೂ ರಿಸ್ಕ್‌ಗಳನ್ನು ಗುರುತಿಸುವುದು

ಪ್ರತಿಫಲ ಹಾಗೂ ರಿಸ್ಕ್‌ಗಳನ್ನು ಗುರುತಿಸುವುದು

ಯಾವುದೇ ಮ್ಯೂಚುವಲ್ ಫಂಡ್‌ಗಳಲ್ಲಿ ಹೂಡಿಕೆ ಮಾಡುವ ಮುನ್ನ ತಾವು ಬಯಸುವ ಪ್ರತಿಫಲ ಹಾಗೂ ಹೂಡಿಕೆಯಿಂದ ಉಂಟಾಗಬಹುದಾದ ರಿಸ್ಕ್‌ಗಳ ಬಗ್ಗೆ ಮೊದಲು ತಿಳಿದುಕೊಳ್ಳಬೇಕಾಗುತ್ತದೆ. ದೀರ್ಘಾವಧಿಯ ಹೂಡಿಕೆ ಮಾಡಿ ಆದಾಯ ಪಡೆಯುವುದಾ ಅಥವಾ ಶೀಘ್ರದಲ್ಲಿ ಪ್ರತಿಫಲ ಬೇಕಾ ಎಂಬ ಬಗ್ಗೆ ನಿರ್ಧರಿಸಬೇಕು.
ಹೂಡಿಕೆಯಿಂದ ಸಿಗುವ ಆದಾಯದಿಂದ ಮಕ್ಕಳ ಉನ್ನತ ವಿದ್ಯಾಭ್ಯಾಸಕ್ಕೆ ಹಣ ಹೊಂದಿಸಬೇಕಾ ಅಥವಾ ಅದು ತನ್ನ ನಿವೃತ್ತ ಜೀವನಕ್ಕೆ ಆಧಾರವಾಗಬೇಕಾ ಎಂಬೆಲ್ಲ ಅಂಶಗಳ ಬಗ್ಗೆ ಸ್ಪಷ್ಟ ಕಲ್ಪನೆ ಇರಬೇಕು. ಹೂಡಿಕೆಯ ಉದ್ದೇಶವನ್ನು ಸರಿಯಾಗಿ ನಿರ್ಧರಿಸಿದಲ್ಲಿ ಫಂಡ್ ಆಯ್ಕೆ ಮಾಡುವುದು ಸುಲಭವಾಗುತ್ತದೆ. ಮಾರುಕಟ್ಟೆಯಲ್ಲಿ ಹಲವಾರು ರೀತಿಯ ಸುಮಾರು ೮ ಸಾವಿರಕ್ಕೂ ಅಧಿಕ ಮ್ಯೂಚುವಲ್ ಫಂಡ್‌ಗಳಿವೆ. ಆದರೆ ಹೂಡಿಕೆಯ ಗುರಿ ಸ್ಪಷ್ಟವಾದಲ್ಲಿ ಅದರ ಆಧಾರದಲ್ಲಿ ಫಂಡ್ ಆಯ್ಕೆ ಮಾಡಬಹುದು.
ಕೇವಲ ಪ್ರತಿಫಲವನ್ನು ಮಾತ್ರ ಗಮನದಲ್ಲಿಟ್ಟುಕೊಂಡರೆ ಸಾಕಾಗದು. ಮಾರುಕಟ್ಟೆಯ ಏರಿಳಿತದಿಂದ ಹೂಡಿಕೆಯ ಮೇಲಾಗುವ ರಿಸ್ಕ್ ಅನ್ನು ಎಷ್ಟರ ಮಟ್ಟಿಗೆ ತಡೆದುಕೊಳ್ಳಬಹುದು ಎಂಬುದನ್ನು ಸಹ ಅತಿ ಮುಖ್ಯವಾಗಿ ಗಣನೆಗೆ ತೆಗೆದುಕೊಳ್ಳಬೇಕಾಗುತ್ತದೆ. ಶೇರು ಮಾರುಕಟ್ಟೆಯಲ್ಲಿ ಸಂಭವಿಸುವ ವಿಪರೀತ ಏರಿಳಿಕೆಗಳ ಸಂದರ್ಭದಲ್ಲಿ ಹೂಡಿಕೆಯ ಮೇಲಾಗುವ ಪರಿಣಾಮಗಳನ್ನು ತಡೆದುಕೊಳ್ಳಲು ಮಾನಸಿಕವಾಗಿ ಸಿದ್ಧರಾಗಿರುವುದು ಅವಶ್ಯ. ಅಂಥ ಸಂದರ್ಭಗಳನ್ನು ನಿಭಾಯಿಸಲು ಸಮಾನಾಂತರವಾಗಿ ಮತ್ತೊಂದು ಸುರಕ್ಷಿತ ಹೂಡಿಕೆ ಮಾಡಬೇಕಾ ಎಂಬುದನ್ನು ಸಹ ಮೊದಲೇ ನಿರ್ಧರಿಸಬೇಕು. ಅಂದರೆ ಹೂಡಿಕೆಗೆ ಸಿಗಬಹುದಾದ ಪ್ರತಿಫಲದ ಜೊತೆಗೆ ಅದರಲ್ಲಿ ಅಡಕವಾಗಿರುವ ರಿಸ್ಕ್‌ಗಳ ಬಗ್ಗೆಯೂ ತಿಳಿದುಕೊಂಡಿರುವುದು ಜಾಣ ಹೂಡಿಕೆದಾರರ ಲಕ್ಷಣವಾಗಿದೆ.

ಶುಲ್ಕ, ಪ್ರತಿಫಲ, ನಷ್ಟ

ಶುಲ್ಕ, ಪ್ರತಿಫಲ, ನಷ್ಟ

ಮೇಲಿನ ಎರಡು ಅಂಶಗಳ ಜೊತೆಗೆ ಹೂಡಿಕೆಯ ಅವಧಿಯನ್ನು ಸಹ ಮೊದಲೇ ನಿರ್ಧರಿಸಿಕೊಂಡಿರಬೇಕು. ದೀರ್ಘಾವಧಿಯವರೆಗೆ ಹೂಡಿಕೆಯನ್ನು ಮುಂದುವರಿಸಬಹುದಾ ಅಥವಾ ಬೇಗನೆ ನಗದು ಹಣದ ಅವಶ್ಯಕತೆ ಬರಬಹುದಾ ಎಂಬ ಅಂಶಗಳನ್ನು ತಿಳಿದುಕೊಂಡಿರಬೇಕು. ಮ್ಯೂಚುವಲ್ ಫಂಡ್‌ಗಳು ಹೂಡಿಕೆಯ ಕೆಲ ಭಾಗವನ್ನು ಶುಲ್ಕವಾಗಿ ಪಡೆದುಕೊಳ್ಳುತ್ತವೆ. ಹೀಗಾಗಿ ಕಡಿಮೆ ಅವಧಿಗೆ ಹೂಡಿಕೆ ಮಾಡಿದಲ್ಲಿ ಇಂಥ ಶುಲ್ಕಗಳಿಂದ ಪ್ರತಿಫಲಕ್ಕಿಂತ ಹೆಚ್ಚು ನಷ್ಟವನ್ನು ಎದುರಿಸಬೇಕಾಗುತ್ತದೆ. ಫಂಡ್ ಮ್ಯಾನೇಜರ್‌ಗಳು ಸಾಮಾನ್ಯವಾಗಿ ೫ ವರ್ಷಗಳ ಕಾರ್ಯಯೋಜನೆ ಇಟ್ಟುಕೊಂಡು ನಿಮ್ಮ ಮೊತ್ತವನ್ನು ಹೂಡಿಕೆ ಮಾಡುತ್ತಾರೆ ಎಂಬುದು ಗೊತ್ತಿರಲಿ.

ಫಂಡ್‌ಗಳ ರೀತಿ ಹಾಗೂ ಕಾರ್ಯಶೈಲಿ

ಫಂಡ್‌ಗಳ ರೀತಿ ಹಾಗೂ ಕಾರ್ಯಶೈಲಿ

ಹೂಡಿಕೆದಾರ ದೀರ್ಘಕಾಲದವರೆಗೆ ಹಣ ತೊಡಗಿಸಿ, ರಿಸ್ಕ್ ಹಾಗೂ ಏರಿಳಿತಗಳನ್ನು ತಡೆದುಕೊಳ್ಳುವಂತಿದ್ದರೆ, ದೀರ್ಘ ಕಾಲಾವಧಿಯಲ್ಲಿ ಉತ್ತಮ ಪ್ರತಿಫಲ ನೀಡಬಲ್ಲ ಬಂಡವಾಳ ಹೆಚ್ಚಿಸುವ ಫಂಡ್‌ಗಳಲ್ಲಿ ಹೂಡಿಕೆ ಮಾಡಬಹುದು. ಇಂಥ ಫಂಡ್ ಯೋಜನೆಗಳು ಸಾಮಾನ್ಯ ಶೇರುಗಳಲ್ಲಿ ಹೆಚ್ಚು ಪ್ರಮಾಣದ ಹಣ ತೊಡಗಿಸುವುದರಿಂದ ಏರಿಳಿತಗಳು ಸಹ ಹೆಚ್ಚಾಗಿರುತ್ತವೆ. ಆದರೆ ಕಾಲಾವಧಿಯಲ್ಲಿ ಇವು ಉತ್ತಮ ಆದಾಯವನ್ನೂ ನೀಡುತ್ತವೆ.
ಒಂದು ವೇಳೆ ಹೂಡಿಕೆದಾರ ತ್ವರಿತವಾಗಿ ಆದಾಯ ಬಯಸಿದಲ್ಲಿ ಇನಕಮ್ ಫಂಡ್‌ಗಳಲ್ಲಿ ಹಣ ತೊಡಗಿಸುವುದು ಸೂಕ್ತ. ಇನಕಮ್ ಫಂಡ್‌ಗಳು ಸರಕಾರಿ ಹಾಗೂ ಕಂಪನಿ ಡೆಬ್ಟ್ ಹೂಡಿಕೆಗಳನ್ನು ಹೆಚ್ಚುವರಿಯಾಗಿ ಒಳಗೊಂಡಿರುತ್ತವೆ.
ಇನ್ನು ಕೆಲ ಬಾರಿ ದೀರ್ಘಾವಧಿಗೆ ಹೂಡಿಕೆ ಮಾಡಿ ಕಡಿಮೆ ರಿಸ್ಕ್ ಬಯಸುತ್ತಿದ್ದರೆ ಹೂಡಿಕೆದಾರ ಬ್ಯಾಲೆನ್ಸ್ ಫಂಡ್ ಆಯ್ಕೆ ಮಾಡಬಹುದು. ಸ್ಟಾಕ್ ಹಾಗೂ ಬಾಂಡ್‌ಗಳಲ್ಲಿ ಬ್ಯಾಲೆನ್ಸ್ ಫಂಡ್‌ಗಳು ಹೂಡಿಕೆ ಮಾಡುತ್ತವೆ.

ಶುಲ್ಕ ಮತ್ತು ವೆಚ್ಚಗಳು

ಶುಲ್ಕ ಮತ್ತು ವೆಚ್ಚಗಳು

ಮ್ಯೂಚುವಲ್ ಫಂಡ್‌ಗಳು ಹೂಡಿಕೆಯ ನಿರ್ವಹಣೆ ಮಾಡಲು ಹೂಡಿಕೆದಾರರಿಂದ ಶುಲ್ಕ ಆಕರಿಸುತ್ತವೆ. ಹೀಗಾಗಿ ಯಾವುದೇ ಫಂಡ್ ಕೊಳ್ಳುವ ಮೊದಲು ಅದಕ್ಕೆ ನೀಡಬೇಕಾದ ಶುಲ್ಕಗಳ ಬಗ್ಗೆ ಮಾಹಿತಿ ಇರಬೇಕು.
ಮಾರಾಟ ಶುಲ್ಕಗಳಿಂದ ಪಾರಾಗಬೇಕಿದ್ದರೆ ನೋ ಲೋಡ್ ಫಂಡ್‌ಗಳನ್ನು ಪರಿಗಣಿಸಬಹುದು. ಆದಾಗ್ಯೂ ಇವುಗಳಲ್ಲಿ ಆಡಳಿತಾತ್ಮಕ ವೆಚ್ಚ ಅನುಪಾತ ಹಾಗೂ ವಿವಿಧ ಆಡಳಿತ ಶುಲ್ಕಗಳು ತೀರಾ ಹೆಚ್ಚಾಗಿರುತ್ತವೆ ಎಂಬುದು ತಿಳಿದಿರಲಿ.
ಮ್ಯೂಚುವಲ್ ಫಂಡ್‌ಗಳ ಮಾರಾಟ ಪ್ರಕ್ರಿಯೆಯನ್ನು ಅವುಗಳ ಆಡಳಿತಾತ್ಮಕ ವೆಚ್ಚದ ಅನುಪಾತದ ಅಧ್ಯಯನ ನಡೆಸುವುದರ ಮೂಲಕ ತಿಳಿಯಬಹುದು. ಇದು ಆ ಕಂಪನಿಯ ಮಾರಾಟ ಹಾಗೂ ಶುಲ್ಕಗಳ ಬಗ್ಗೆ ಸಮಗ್ರ ವಿವರಣೆಯನ್ನು ನೀಡುತ್ತದೆ. ಫಂಡ್ ನಿರ್ವಹಣೆಯ ಖರ್ಚನ್ನು ಮರೆಮಾಚುವ ಸಂಪೂರ್ಣ ಫಂಡ್ ಆಸ್ತಿಯ ಪ್ರಮಾಣವೇ ಆಡಳಿತಾತ್ಮಕ ವೆಚ್ಚದ ಅನುಪಾತವಾಗಿದೆ. ಈ ಅನುಪಾತ ಹೆಚ್ಚಾಗಿದ್ದಷ್ಟೂ ಹೂಡಿಕೆದಾರರಿಗೆ ಸಿಗುವ ಪ್ರತಿಫಲ ಕಡಿಮೆಯಾಗುತ್ತದೆ.

ಫಂಡ್ ಮ್ಯಾನೇಜರ್ ಹಾಗೂ ಹಿಂದಿನ ಫಲಿತಾಂಶಗಳ ತುಲನೆ

ಫಂಡ್ ಮ್ಯಾನೇಜರ್ ಹಾಗೂ ಹಿಂದಿನ ಫಲಿತಾಂಶಗಳ ತುಲನೆ

ಯಾವುದೇ ಫಂಡ್‌ನಲ್ಲಿ ಹೂಡಿಕೆ ಮಾಡುವ ಮುನ್ನ ಈ ಹಿಂದಿನ ವರ್ಷಗಳಲ್ಲಿ ಆ ಫಂಡ್ ಎಷ್ಟು ಪ್ರಮಾಣದ ಆದಾಯ ನೀಡಿದೆ ಎಂಬುದನ್ನು ಅಭ್ಯಸಿಸಬೇಕು. ಹಿಂದಿನ ದಾಖಲೆಗಳನ್ನು ಪರಿಶೀಲಿಸಿದರೆ ಸಾಕಷ್ಟು ವಿಷಯಗಳನ್ನು ತಿಳಿದುಕೊಳ್ಳಬಹುದು.
ಹಾಗಂತ ಫಂಡ್ ಹಿಂದಿನಂತೆಯೇ ಈಗಲೂ ಪ್ರತಿಫಲ ನೀಡುತ್ತದೆ ಎಂಬ ಖಾತರಿ ಇರುವುದಿಲ್ಲ. ಹೀಗಾಗಿ ಹೂಡಿಕೆ ಮಾಡಲಿರುವ ಕಂಪನಿ ಬರುವ ವರ್ಷಗಳಲ್ಲಿ ಮಾರ್ಕೆಟ್ ಟ್ರೆಂಡ್ ಅನುಸಾರ ಹೇಗೆ ಕಾರ್ಯನಿರ್ವಹಿಸಬಹುದು ಎಂಬುದನ್ನು ತಿಳಿದುಕೊಳ್ಳಬೇಕು. ಬಹುತೇಕ ಫಂಡ್ ಮ್ಯಾನೇಜರ್‌ಗಳು ಈ ಬಗ್ಗೆ ಮುಚ್ಚುಮರೆ ಇಲ್ಲದೆ ಮಾಹಿತಿ ನೀಡುತ್ತಾರೆ.

ಕೊನೆ ಮಾತು

ಕೊನೆ ಮಾತು

ಸೂಕ್ತವಾದ ಮ್ಯೂಚುವಲ್ ಫಂಡ್ ಆಯ್ಕೆ ಮಾಡುವುದು ತುಸು ಕಷ್ಟದ ಕೆಲಸವಾದರೂ, ನಿಮ್ಮ ಹೂಡಿಕೆಯ ಗುರಿ ಹಾಗೂ ಅದರಲ್ಲಿನ ರಿಸ್ಕ್‌ಗಳ ಬಗ್ಗೆ ಅರಿತುಕೊಂಡರೆ ಅರ್ಧ ಕೆಲಸ ಮುಗಿದಂತೆ. ಇಲ್ಲಿ ತಿಳಿಸಲಾದ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಹೂಡಿಕೆ ಮಾಡಿದಲ್ಲಿ ನೀವು ಯಶಸ್ಸು ಪಡೆಯುವುದು ಸುಲಭವಾಗುತ್ತದೆ.

English summary

How to select good mutual funds?

A mutual fund is an investment vehicle created a pool of funds collected from several investors for the aim of investing in securities like stocks, bonds, securities industry and similar assets.
Story first published: Tuesday, September 25, 2018, 10:10 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X