ಕಾರ್ಮಿಕರಿಗೆ, ಉದ್ಯೋಗಿಗಳಿಗೆ ಸಿಹಿಸುದ್ದಿ! ಈ ಯೋಜನೆಯಡಿ ಮಾಸಿಕ 45 ಸಾವಿರ ಪಿಂಚಣಿ ಪಡೆಯಿರಿ

ತೀರಾ ಇತ್ತೀಚಿನವರೆಗೂ ಕಾರ್ಮಿಕ ಪಿಂಚಣಿ ಯೋಜನೆ (Employees’ Pension Scheme) ಯಡಿ ಪಡೆಯಬಹುದಾದ ಮಾಸಿಕ ಪಿಂಚಣಿಯನ್ನು ರೂ. 7000ಕ್ಕೆ ಸೀಮಿತಗೊಳಿಸಲಾಗಿತ್ತು. ಆದರೆ ಕಳೆದ ಕೆಲ ದಿನಗಳ ಹಿಂದೆ ಈ ಸೀಮಿತ ಮಿತಿಯನ್ನು ಸುಪ್ರೀಂ ಕೋರ್ಟ್ ತೆಗೆದು

ತೀರಾ ಇತ್ತೀಚಿನವರೆಗೂ ಕಾರ್ಮಿಕ ಪಿಂಚಣಿ ಯೋಜನೆ (Employees' Pension Scheme) ಯಡಿ ಪಡೆಯಬಹುದಾದ ಮಾಸಿಕ ಪಿಂಚಣಿಯನ್ನು ರೂ. 7000ಕ್ಕೆ ಸೀಮಿತಗೊಳಿಸಲಾಗಿತ್ತು. ಆದರೆ ಕಳೆದ ಕೆಲ ದಿನಗಳ ಹಿಂದೆ ಈ ಸೀಮಿತ ಮಿತಿಯನ್ನು ಸುಪ್ರೀಂ ಕೋರ್ಟ್ ತೆಗೆದು ಹಾಕಿದ್ದು ಸ್ವಾಗತಾರ್ಹ ಬೆಳವಣಿಗೆಯಾಗಿದೆ. ಹೀಗಾಗಿ ಇನ್ನು ಮುಂದೆ ನೀವು ಕೊನೆಯದಾಗಿ ಪಡೆಯುವ ಸಂಬಳದ (ಮೂಲ ಸಂಬಳ ಹಾಗೂ ತುಟ್ಟಿ ಭತ್ಯೆ) ಮೇಲೆ ಪಿಂಚಣಿಯ ಮೊತ್ತ ನಿರ್ಧಾರವಾಗಲಿದೆ.

ಸುಪ್ರೀಂ ಕೋರ್ಟ್‌ನ ಈ ಆದೇಶದಿಂದ ಸಹಜವಾಗಿಯೇ ಕಾರ್ಮಿಕ ವಲಯದಲ್ಲಿ ಖುಷಿ ಮೂಡಿದೆ. ಕಾರ್ಮಿಕರ ಪಿಂಚಣಿಯ ಕುರಿತಾದ ಎಲ್ಲ ಗೊಂದಲಗಳನ್ನು ಸುಪ್ರೀಂ ಕೋರ್ಟ್ ನಿವಾರಿಸಿದೆ. ಇನ್ನು ಎಲ್ಲರೂ ತಮ್ಮ ಕೊನೆಯ ಸಂಬಳದ ಆಧಾರದ ಮೇಲೆ ಪಿಂಚಣಿ ಪಡೆಯಬಲ್ಲರು. ಹೀಗಾಗಿ ಎಲ್ಲರೂ ಪೂರ್ತಿ ಪಿಂಚಣಿ ಪಡೆಯಲು ಮುಂದಾಗಬೇಕು ಎಂದು ಭಾರತೀಯ ಮಜ್ದೂರ ಸಂಘದ ಅಖಿಲ ಭಾರತ ಪ್ರಧಾನ ಕಾರ್ಯದರ್ಶಿ ವಿರ್ಜೇಶ ಉಪಾಧ್ಯಾಯ ಪ್ರತಿಕ್ರಿಯೆ ನೀಡಿದ್ದಾರೆ. ಆದರೆ ಪಿಂಚಣಿ ಹೆಚ್ಚಾಗುತ್ತದೆ ಎಂದು ಸಂತಸ ಪಡುವ ಮುನ್ನ ಈ ಪಿಂಚಣಿ ಮೊತ್ತವು ನಮ್ಮದೇ ಜೇಬಿನಿಂದ ಬರಲಿದೆ ಎಂಬ ವಾಸ್ತವವನ್ನು ಸಹ ಅರಿತುಕೊಳ್ಳಬೇಕು.

ಇಪಿಎಸ್‌ - ಇಪಿಎಫ್ ಮೊತ್ತ

ಇಪಿಎಸ್‌ - ಇಪಿಎಫ್ ಮೊತ್ತ

ಪ್ರಸ್ತುತ ಪಿಂಚಣಿಗೆ ಅರ್ಹವಿರುವ ನಿಮ್ಮ ಸಂಬಳದ ಶೇ. 12 ರಷ್ಟು ಮೊತ್ತ ಇಪಿಎಫ್‌ಗೆ ಜಮೆಯಾಗುತ್ತದೆ. ಇಷ್ಟೇ ಮೊತ್ತವನ್ನು ಕಂಪನಿ ಅಥವಾ ಮಾಲೀಕ ಸೇರಿಸುತ್ತಾರೆ. ಸುಪ್ರೀಂ ಕೋರ್ಟಿನ ಆದೇಶಕ್ಕೂ ಮುನ್ನ ಕಂಪನಿಯ ಶೇ. 8.33 ರಷ್ಟು ವಂತಿಗೆ ಅಥವಾ 1250 ರೂ. ಇವುಗಳಲ್ಲಿ ಯಾವುದು ಹೆಚ್ಚೋ ಅದು ಕಾರ್ಮಿಕ ಪಿಂಚಣಿ ನಿಧಿಗೆ ಸೇರುತ್ತಿತ್ತು. ಉಳಿದ ಹಣ ಇಪಿಎಫ್‌ಗೆ ಹೋಗುತ್ತಿತ್ತು. ಆದರೆ ಈಗ ನೀವು ಸಂಪೂರ್ಣ ಪಿಂಚಣಿಯನ್ನು ಆಯ್ದುಕೊಂಡಲ್ಲಿ ಪಿಂಚಣಿಗೆ ಅರ್ಹವಾದ ನಿಮ್ಮ ಸಂಬಳದ ಸಂಪೂರ್ಣ ಮೊತ್ತ ಇಪಿಎಸ್‌ಗೆ ಹೋಗುತ್ತದೆ. ಅಂದರೆ ಇಪಿಎಸ್ ನಿಮ್ಮ ವಂತಿಗೆ ಹೆಚ್ಚಾದಷ್ಟೂ ಇಪಿಎಫ್‌ಗೆ ನಿಮ್ಮ ವಂತಿಗೆ ಕಡಿಮೆಯಾಗುತ್ತದೆ.

ಮಾಸಿಕ ರೂ. 45 ಸಾವಿರ ಪಿಂಚಣಿ ಹೇಗೆ ಸಾಧ್ಯ?

ಮಾಸಿಕ ರೂ. 45 ಸಾವಿರ ಪಿಂಚಣಿ ಹೇಗೆ ಸಾಧ್ಯ?

ಈಗ ಕಾರ್ಮಿಕರ ಪಿಂಚಣಿಯು ಕೊನೆಯ ಸಂಬಳವನ್ನು ಆಧರಿಸಿರುತ್ತದೆ. ಇದನ್ನು ಹೀಗೆ ವಿಶ್ಲೇಷಿಸಬಹುದು: ನೀವು ಈಗ 58 ವರ್ಷದವರಾಗಿದ್ದು 35 ವರ್ಷಗಳ ಕಾಲ ನೌಕರಿ ಮಾಡಿ ನಿವೃತ್ತರಾಗಲಿದ್ದೀರಿ ಎಂದುಕೊಳ್ಳೋಣ. ಈ ಸಂದರ್ಭದಲ್ಲಿ ನೀವು ಫುಲ್ ಪೆನ್ಷನ್ ಪಡೆಯಲು ಬಯಸುವಿರಾದರೆ ನಿಮ್ಮ ಕಂಪನಿಯ ಶೇ. 8.33 ರ ಸಂಪೂರ್ಣ ವಂತಿಗೆಯನ್ನು ನೀವು ಕೆಲಸ ಮಾಡಲು ಆರಂಭಿಸಿದ ದಿನದಿಂದ ಇಪಿಎಸ್‌ನಿಂದ ಇಪಿಎಫ್‌ಗೆ ವರ್ಗಾಯಿಸಬೇಕು. ವಾರ್ಷಿಕವಾಗಿ ಶೇ. 7 ರ ದರದಲ್ಲಿ ನಿಮ್ಮ ಸಂಬಳ ಹೆಚ್ಚಾಗುತ್ತ ಈಗ 90 ಸಾವಿರ ರೂ. ಸಂಬಳ ಎಂದಿಟ್ಟುಕೊಳ್ಳೋಣ. ಈಗ 35 ವರ್ಷಗಳಲ್ಲಿ ಹೆಚ್ಚುವರಿ 10.35 ಲಕ್ಷ ರೂ. ಹಾಗೂ ಅದರ ಬಡ್ಡಿ ಜಮೆಯಾಗಿರುತ್ತದೆ.
ಹೀಗೆ ಜಮೆಯಾಗುವ ಬಡ್ಡಿಯೇ ಪಿಂಚಣಿ ಮೊತ್ತದಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಬಡ್ಡಿಯನ್ನು ಸೇರಿಸಿದಾಗ ಹೆಚ್ಚುವರಿ ವಂತಿಗೆಯು 45.15 ಲಕ್ಷ ರೂ. ಗಳಾಗುತ್ತದೆ. ಅಲ್ಲಿಗೆ ಪ್ರತಿ ತಿಂಗಳು ನೀವು 45 ಸಾವಿರ ರೂ. ಪಿಂಚಣಿ ಪಡೆಯಲು ಬಯಸುವಿರಾದರೆ ಈ 45.15 ಲಕ್ಷ ರೂ. ಮೊತ್ತವನ್ನು ಇಪಿಎಫ್‌ನಿಂದ ಇಪಿಎಸ್‌ಗೆ ವರ್ಗಾವಣೆ ಮಾಡಬೇಕಾಗುತ್ತದೆ.

ಹೆಚ್ಚಾಗಲಿದೆ ಮಾಸಿಕ ಇಪಿಎಸ್ ವಂತಿಗೆ

ಹೆಚ್ಚಾಗಲಿದೆ ಮಾಸಿಕ ಇಪಿಎಸ್ ವಂತಿಗೆ

ಇನ್ನು ಮುಂದೆ ಪಿಂಚಣಿಗೆ ಅರ್ಹವಾದ ನಿಮ್ಮ ಸಂಬಳದ ಶೇ. 8.33 ರಷ್ಟು ಮೊತ್ತವು ಕಾರ್ಮಿಕ ಪಿಂಚಣಿ ಯೋಜನೆಗೆ (ಇಪಿಎಸ್‌) ಹೋಗುತ್ತದೆ. ಇದಕ್ಕೂ ಮುನ್ನ ಪಿಂಚಣಿಗೆ ಅರ್ಹ ಸಂಬಳದ ಮೊತ್ತವನ್ನು 15000 ರೂ. ಗಳಿಗೆ ಸೀಮಿತಗೊಳಿಸಲಾಗಿತ್ತು.

ಸುಪ್ರಿಂ ಕೋರ್ಟ್ ಆದೇಶದಲ್ಲಿ ಏನಿದೆ?

ಸುಪ್ರಿಂ ಕೋರ್ಟ್ ಆದೇಶದಲ್ಲಿ ಏನಿದೆ?

- ಪಿಂಚಣಿಗೆ ಅರ್ಹ ಸಂಬಳವನ್ನು 15 ಸಾವಿರ ರೂ.ಗಳಿಗೆ ಮಿತಿಗೊಳಿಸಿದ್ದನ್ನು ಸುಪ್ರೀಂ ಕೋರ್ಟ್ ರದ್ದುಪಡಿಸಿದೆ. ಈಗ ನಿಮ್ಮ ಪಿಂಚಣಿಗೆ ಅರ್ಹ ಸಂಬಳ 15 ಸಾವಿರ ರೂ. ಮೀರಿದ್ದರೆ ನೀವು ಹೆಚ್ಚು ಪಿಂಚಣಿ ಆಯ್ದುಕೊಳ್ಳಬಹುದು.
- ಈ ಮುನ್ನ ಪಿಂಚಣಿಗೆ ಅರ್ಹವಾದ ಸರಾಸರಿ ಸಂಬಳವನ್ನು 60 ತಿಂಗಳ ಸಂಬಳದ ಆಧಾರದಲ್ಲಿ ನಿರ್ಧರಿಸಲಾಗುತ್ತಿತ್ತು. ಆದರೆ ಈಗ ಇದನ್ನು 12 ತಿಂಗಳ ಸಂಬಳದ ಆಧಾರದಲ್ಲಿ ಅಳೆಯಲಾಗುತ್ತದೆ.
- ಪಿಎಫ್ ಟ್ರಸ್ಟಿನ ಸಂಸ್ಥೆಗಳಲ್ಲಿ ಕೆಲಸ ಮಾಡುವ ಕಾರ್ಮಿಕರು ಹೆಚ್ಚಿನ ಪಿಂಚಣಿ ಪಡೆಯಲು ಹೆಚ್ಚುವರಿ ಇಪಿಎಸ್ ವಂತಿಗೆಯನ್ನು ಆಯ್ದುಕೊಳ್ಳಬಹುದು.
- ತೀರಾ ಇತ್ತೀಚೆಗೆ ನಿವೃತ್ತರಾದವರು ಸಹ ಹೆಚ್ಚುವರಿ ಪಿಂಚಣಿ ಆಯ್ದುಕೊಳ್ಳಬಹುದಾಗಿದೆ. ಆದರೆ ಇದಕ್ಕಾಗಿ ಅವರು ತಮ್ಮ ಮೊತ್ತವನ್ನು ಇಪಿಎಫ್‌ಗೆ ಮರಳಿಸಬೇಕಾಗುತ್ತದೆ.   ಉದ್ಯೋಗಿಗಳಿಗೆ ಬಂಪರ್ ಸುದ್ದಿ! ಸಿಗಲಿದೆ ಭಾರೀ ಮೊತ್ತದ ಪಿಂಚಣಿ

ಹಣಕಾಸು ವಿಷಯದಲ್ಲಿ ಜಾಣತನವಿರಲಿ

ಹಣಕಾಸು ವಿಷಯದಲ್ಲಿ ಜಾಣತನವಿರಲಿ

ಭವಿಷ್ಯದ ಜೀವನಕ್ಕಾಗಿ ದೊಡ್ಡ ಮೊತ್ತವನ್ನು ಕೂಡಿಸುವ ಬದಲು ಮಾಸಿಕ ಹೆಚ್ಚು ಪಿಂಚಣಿ ಪಡೆಯಲು ಬಯಸಿದಲ್ಲಿ ನೀವು ಫುಲ್ ಪೆನ್ಷನ್ ಸ್ಕೀಂ ಆಯ್ದುಕೊಳ್ಳಬಹುದು. ಭವಿಷ್ಯದ ಜೀವನದ ಸುರಕ್ಷತೆಗೆ ನಿಮ್ಮ ಸಂಪೂರ್ಣ ಪಿಎಫ್ ಹಣವನ್ನು ಇಪಿಎಸ್‌ಗೆ ವರ್ಗಾವಣೆ ಮಾಡಲೇಬೇಕೆಂದೇನೂ ಇಲ್ಲ ಎನ್ನುತ್ತಾರೆ ಕೆಲ ಹಣಕಾಸು ತಜ್ಞರು.
ಇಪಿಎಫ್‌ನಲ್ಲಿ ಹಣ ಬೆಳೆಯಲು ಬಿಟ್ಟು ನಂತರ ನಿವೃತ್ತರಾದ ಮೇಲೆ ಅದನ್ನು ಸೂಕ್ತವಾಗಿ ಹೂಡಿಕೆ ಮಾಡಿದಲ್ಲಿ ಉತ್ತಮ ಪ್ರತಿಫಲ ನಿರೀಕ್ಷಿಸಬಹುದು ಎನ್ನುತ್ತಾರೆ ಫಿನ್ ಸೇಫ್ ಇಂಡಿಯಾ ಕಂಪನಿಯ ಸಂಸ್ಥಾಪಕ ನಿರ್ದೇಶಕಿ ಮ್ರಿನ್ ಅಗರವಾಲ್.
ವಯಸ್ಸಾಗುತ್ತ ಬಂದಂತೆ ತುಂಬಾ ಹಣಕಾಸು ಶಿಸ್ತಿನ ಜನರಿಗೆ ಸಹ ಕೆಲವೊಮ್ಮೆ ಮಾಸಿಕ ಪಿಂಚಣಿಗಾಗಿ ಮೊತ್ತ ಜಮೆ ಮಾಡುವುದು ಕಷ್ಟಕರವಾಗಬಹುದು.
ನೆಮ್ಮದಿಯ ನಿವೃತ್ತ ಜೀವನಕ್ಕಾಗಿ ನಮಗೆ ನಿಗದಿತ ಮಾಸಿಕ ಪಿಂಚಣಿ ಬೇಕಾಗುತ್ತದೆ. ಹೀಗಾಗಿ ಹೆಚ್ಚುವರಿ ಇಪಿಎಸ್ ವಂತಿಗೆ ಆಯ್ದುಕೊಳ್ಳುವುದರಲ್ಲಿ ತಪ್ಪೇನೂ ಇಲ್ಲ ಎನ್ನುತ್ತಾರೆ ಪ್ಲಾನ್ ರುಪೀ ಇನ್ವೆಸ್ಟಮೆಂಟ್ ಸರ್ವಿಸ್‌ನ ಅಮೋಲ ಜೋಶಿ.

ಒಂದು ವೇಳೆ ನೀವು ಹಣವನ್ನು ಇಪಿಎಫ್‌ನಲ್ಲಿಯೇ ಬೆಳೆಯಲು ಬಿಟ್ಟಲ್ಲಿ ನಂತರ ಅದೇ ಹಣದಿಂದ ವರ್ಷಾಸನ ಯೋಜನೆ (ಅನ್ಯುಯಿಟಿ) ಖರೀದಿಸಬಹುದು. ಆದರೆ ವಿಮಾ ಕಂಪನಿಯ ಮಾಸಾಶನ ಯೋಜನೆಗಳು ನಿಮಗೆ ತುಸು ಕಡಿಮೆ ಮಾಸಿಕ ಆದಾಯ ನೀಡುತ್ತವೆ. ಉದಾಹರಣೆಗೆ ನೋಡಿದರೆ, ನೀವು 45.15 ಲಕ್ಷ ರೂ. ಮೊತ್ತದ ಜೀವನ ಅಕ್ಷಯ ಎಲ್‌ಐಸಿ ಪಾಲಿಸಿ ಕೊಂಡರೆ ಅದರಿಂದ ಮಾಸಿಕ 32,054 ರೂ. ಆದಾಯ ಸಿಗುತ್ತದೆ. ಆದರೆ ಅಷ್ಟೇ ಮೊತ್ತವನ್ನು ಇಪಿಎಸ್‌ನಲ್ಲಿ ಹಾಕಿದರೆ ಮಾಸಿಕ 37,500 ರೂ. ಪಿಂಚಣಿ ಪಡೆಯಬಹುದು.

ವರ್ಷಾಸನಕ್ಕಿಂತ ಇಪಿಎಸ್ ಬೆಸ್ಟ್ ಆಯ್ಕೆ

ವರ್ಷಾಸನಕ್ಕಿಂತ ಇಪಿಎಸ್ ಬೆಸ್ಟ್ ಆಯ್ಕೆ

ಇಪಿಎಸ್‌ನಲ್ಲಿ ನಿಮ್ಮ ಸಂಬಳವನ್ನು ಆಧರಿಸಿ ಶೇ. 16 ರಿಂದ 40 ರಷ್ಟು ಹೆಚ್ಚು ಆದಾಯ ಪಡೆಯಬಹುದು. 58 ವರ್ಷ ವಯಸ್ಸಾಗಿರುವವರಿಗೆ ಮಾಸಿಕ ಪಿಂಚಣಿಯನ್ನು ಪೂರ್ಣ ಕೆಲಸದ ಅವಧಿಯ ವರ್ಷಾಸನ (ಅನ್ಯುಯಿಟಿ) ಆಧರಿಸಿ ಲೆಕ್ಕ ಮಾಡಲಾಗುತ್ತದೆ. 58 ವರ್ಷ ವಯಸ್ಸಾಗಿರುವವರು ಪೂರ್ಣ ಪಿಂಚಣಿಗೆ ಅರ್ಹರಾಗಿರುತ್ತಾರೆ. ಕಡಿಮೆ ವರ್ಷ ಕೆಲಸ ಮಾಡಿರುವವರಿಗೆ ಈ ಅಂಕಿಸಂಖ್ಯೆಗಳು ಕಡಿಮೆಯಾಗಬಹುದು.

ಪಿಂಚಣಿಗೆ ತೆರಿಗೆ ಅನ್ವಯಿಸುತ್ತದೆ

ಪಿಂಚಣಿಗೆ ತೆರಿಗೆ ಅನ್ವಯಿಸುತ್ತದೆ

ವರ್ಷಾಸನದ ರೀತಿಯಲ್ಲಿಯೇ ಇಪಿಎಸ್ ಪಿಂಚಣಿಯು ಆದಾಯ ತೆರಿಗೆಗೆ ಒಳಪಟ್ಟಿದೆ. ಹೀಗಾಗಿ ನಿವೃತ್ತಿಯ ನಂತರ ನಿಮ್ಮ ತೆರಿಗೆ ಹೊಣೆಗಾರಿಕೆಗಳನ್ನು ಸಹ ಲೆಕ್ಕ ಹಾಕಬೇಕಾಗುತ್ತದೆ. ಇಪಿಎಸ್ ಪಿಂಚಣಿಯು ತೆರಿಗೆಗೆ ಒಳಪಟ್ಟಿರುವುದರಿಂದ ಹೆಚ್ಚು ತೆರಿಗೆ ಪಾವತಿಸುವ ವಲಯದವರಿಗೆ ಹೆಚ್ಚು ಪೆನ್ಷನ್ ಪಡೆಯುವುದು ಅಷ್ಟೊಂದು ಲಾಭದಾಯಕವಾಗದೇ ಇರಬಹುದು ಎನ್ನುತ್ತಾರೆ ಅಗರ್ವಾಲ್.
ಹೆಚ್ಚು ತೆರಿಗೆ ಪಾವತಿಸುವ ವಲಯಕ್ಕೆ ಸೇರಿದ ನಿವೃತ್ತಿದಾರರು ಡೆಬ್ಟ್ ಫಂಡ್‌ಗಳಲ್ಲಿ ಹೂಡಿಕೆ ಮಾಡಿ ಸಿಸ್ಟೆಮ್ಯಾಟಿಕ್ ವಿತ್‌ಡ್ರಾವಲ್ ಆಯ್ಕೆ ಮಾಡಿಕೊಳ್ಳುವುದು ಸೂಕ್ತ. ಕಡಿಮೆ ತೆರಿಗೆ ಪಾವತಿದಾರರಾಗಿದ್ದರೂ ಮೊದಲಿಗೆ ಹಿರಿಯ ನಾಗರಿಕರ ಪಿಂಚಣಿ ಯೋಜನೆಯಲ್ಲಿ ಹೂಡಿಕೆ ಮಾಡಿ ನಂತರ ಹಣ ಉಳಿದರೆ ಮಾತ್ರ ಇಪಿಎಸ್‌ಗೆ ಹಾಕಬಹುದು.

ಸಂಬಳ ಹೆಚ್ಚಳದ ಲೆಕ್ಕಾಚಾರ

ಸಂಬಳ ಹೆಚ್ಚಳದ ಲೆಕ್ಕಾಚಾರ

ಸರಳ ಲೆಕ್ಕಾಚಾರಕ್ಕಾಗಿ ಇಲ್ಲಿ ನಾವು ವಾರ್ಷಿಕ ಶೇ. 7 ರ ದರದಲ್ಲಿ ಸಂಬಳ ಹೆಚ್ಚಳವನ್ನು ಗಮನಕ್ಕೆ ತೆಗೆದುಕೊಂಡಿದ್ದೇವೆ. ಆದಾಗ್ಯೂ ನಿಮ್ಮ ಕಂಪನಿ, ಕೆಲಸ ಆಧರಿಸಿ ಇದು ಬದಲಾಗಬಹುದು ಹಾಗೂ ಇಪಿಎಫ್. ಇಪಿಎಸ್ ವಂತಿಗೆ ಪ್ರಮಾಣಗಳು ಸಹ ಬದಲಾಗಬಹುದು. ಆರಂಭದಲ್ಲಿ ಕಡಿಮೆ ಸಂಬಳ ಪಡೆದು ಇತ್ತೀಚಿನ ವರ್ಷಗಳಲ್ಲಿ ಸಂಬಳದಲ್ಲಿ ಗಮನಾರ್ಹ ಏರಿಕೆ ಕಂಡಿರುವ ಉದ್ಯೋಗಿಗಳಿಗೆ ಸುಪ್ರಿಂ ಕೋರ್ಟ್ ಆದೇಶ ವರದಾನವಾಗಿದೆ.

ಹೆಚ್ಚು ಪಿಂಚಣಿ ಬೇಕಾದರೆ ಹೆಚ್ಚು ಪಾವತಿಸಲು ಸಿದ್ಧರಾಗಿ
ಹೆಚ್ಚಿನ ಪಿಂಚಣಿಗಾಗಿ ಇಪಿಎಫ್‌ನ ಕೆಲ ಭಾಗವನ್ನು ಇಪಿಎಸ್‌ಗೆ ವರ್ಗಾಯಿಸಬೇಕಾಗುತ್ತದೆ. ಇತ್ತೀಚಿನ ದಿನಗಳಲ್ಲಿ ಸಂಬಳ ಏರಿಕೆಯಾದವರು ಹೆಚ್ಚುವರಿ ಪಿಂಚಣಿ ಯೋಜನೆ ಆಯ್ದುಕೊಳ್ಳುವುದು ಸೂಕ್ತ ಎನ್ನುತ್ತಾರೆ ಜೋಶಿ. ಕಳೆದ ವರ್ಷಗಳಲ್ಲಿ ನಿಮ್ಮ ಸಂಬಳ ಎಷ್ಟು ಹೆಚ್ಚಳವಾಗಿದೆ ಎಂಬ ಬಗ್ಗೆ ಗೊಂದಲಗಳಿದ್ದಲ್ಲಿ ಇಪಿಎಫ್ ಕಚೇರಿ ಸಂಪರ್ಕಿಸಬಹುದು. ನಿಮ್ಮ ಸಂಬಳದ ಏರಿಕೆಯ ಪ್ರಮಾಣವನ್ನು ಆಧರಿಸಿ ಇಪಿಎಫ್‌ನಿಂದ ಎಷ್ಟು ಮೊತ್ತವನ್ನು ಇಪಿಎಸ್‌ಗೆ ವರ್ಗಾಯಿಸಬಹುದು ಎಂದು ಅವರು ಸೂಕ್ತ ಮಾರ್ಗದರ್ಶನ ನೀಡಬಲ್ಲರು.

 

ಹೆಚ್ಚು ಪಿಂಚಣಿ ಯೋಜನೆಗಳು ದೀರ್ಘಕಾಲ ಇರಲಿವೆಯೆ?

ಹೆಚ್ಚು ಪಿಂಚಣಿ ಯೋಜನೆಗಳು ದೀರ್ಘಕಾಲ ಇರಲಿವೆಯೆ?

ಇಪಿಎಸ್ ಎಂಬುದು ಬಹುದೊಡ್ಡ ಮೊತ್ತವಾಗಿದ್ದು ಕಾರ್ಮಿಕ ಇಲಾಖೆಯೇ ಇದನ್ನು ನಿಭಾಯಿಸುವುದರಿಂದ ಸುರಕ್ಷಿತವಾಗಿದೆ ಎಂಬ ಭಾವನೆ ಎಲ್ಲರಲ್ಲಿ ಇದೆ. ಹಾಗೆಯೇ ಇಪಿಎಸ್ ಒಳಗಡೆ ಬರುವ ಹಣದ ಮೊತ್ತ ಹೊರಗಡೆ ಹರಿಯುವ ಮೊತ್ತಕ್ಕಿಂತ ಎಷ್ಟೋ ಪಟ್ಟು ಹೆಚ್ಚಾಗಿದೆ.
2015-16ನೇ ಸಾಲಿನಲ್ಲಿ ಪಿಂಚಣಿ ನಿಧಿಗೆ ಒಟ್ಟಾರೆ 32,307 ಕೋಟಿ ರೂ. ಜಮೆಯಾಗಿತ್ತು ಹಾಗೂ 13,545 ಕೋಟಿ ರೂ. ಪಾವತಿ ಮಾಡಲಾಗಿತ್ತು. ಅಂದರೆ 17,762 ಕೋಟಿ ರೂ. ಸಂಗ್ರಹ ಉಳಿದಿತ್ತು. ಪಿಂಚಣಿ ನಿಧಿಯು 21,662 ಕೋಟಿ ರೂ. ಬಡ್ಡಿ ಆದಾಯ ಗಳಿಸಿದ್ದು ಇದು ಸತತವಾಗಿ ಏರಿಕೆಯಾಗುತ್ತಲೇ ಇದೆ.

ಬದಲಾವಣೆಗಳು ಆದರೂ ಆಶ್ಚರ್ಯವಿಲ್ಲ

ಬದಲಾವಣೆಗಳು ಆದರೂ ಆಶ್ಚರ್ಯವಿಲ್ಲ

ಬರುವ ದಿನಗಳಲ್ಲಿ ಪರಿಸ್ಥಿತಿಗಳು ಬದಲಾದಂತೆ ಇಪಿಎಸ್‌ಗೆ ಹಣದ ಕೊರತೆ ಉಂಟಾಗಬಹುದು. ಈಗ ಯುವಕರಾಗಿರುವ ಪೀಳಿಗೆಯು ನಿವೃತ್ತರಾದ ನಂತರ ಪಿಂಚಣಿದಾರರ ಸಂಖ್ಯೆ ವಿಪರೀತ ಹೆಚ್ಚಳವಾಗಿ ಸಮಸ್ಯೆ ಉಂಟಾಗಬಹುದು. ಭವಿಷ್ಯದ ದಿನಗಳಲ್ಲಿ ಇಪಿಎಸ್‌ಗೆ ವಿತ್ತೀಯ ಕೊರತೆ ಎದುರಾಗಬಹುದೆಂಬ ಭಯ ಕಾಡಿತ್ತು. ಆದರೂ ಇತ್ತೀಚೆಗೆ ಇಪಿಎಸ್ ಕೊರತೆ 61,608 ಕೋಟಿಗಳಿಂದ ತೀರಾ ಕಡಿಮೆಯಾಗಿದೆ.

ಸುಪ್ರೀಂ ಆದೇಶಕ್ಕೆ ಆತಂಕ!

ಸುಪ್ರೀಂ ಆದೇಶಕ್ಕೆ ಆತಂಕ!

ಮಾರ್ಚ್ 2015 ರಲ್ಲಿದ್ದಂತೆ 5027 ಕೋಟಿ ರೂ. ವಿತ್ತೀಯ ಕೊರತೆ ಇದೆ. ಸುಪ್ರೀಂ ಕೋರ್ಟ್ ಆದೇಶದಿಂದ ಇಪಿಎಸ್ ವಿತ್ತೀಯ ಕೊರತೆ ಪ್ರಮಾಣ ಹೆಚ್ಚಳವಾಗುತ್ತ ಹೋಗಬಹುದು ಎಂದು ಕೆಲ ಹಣಕಾಸು ಪರಿಣಿತರು ಆತಂಕ ವ್ಯಕ್ತಪಡಿಸಿದ್ದಾರೆ.
ಪ್ರಸ್ತುತ ಇಪಿಎಸ್‌ನಲ್ಲಿರುವ ಮೊತ್ತವು ಮುಂದಿನ ವರ್ಷಗಳಲ್ಲಿನ ಪಾವತಿಗಳಿಗೆ ಸಾಕಾಗುವಷ್ಟಿಲ್ಲ. ಹೀಗಾಗಿ ಹೆಚ್ಚು ಮಟ್ಟದ ಪಿಂಚಣಿಗಳು ಬಹುಕಾಲ ಇರುತ್ತವೆ ಎಂದು ಹೇಳಲಾಗದು ಎನ್ನುತ್ತಾರೆ ಮಾಜಿ ಇಪಿಎಫ್‌ಓ ಸದಸ್ಯ ಬಿ.ಪಿ. ಪಂತ್. ಕೆಲವು ಕಂಪನಿಗಳು ತಮ್ಮ ಉದ್ಯೋಗಿಗಳ ವಿಶೇಷ ಸಂಬಳವನ್ನು ಅವರ ಮೂಲ ಸಂಬಳಕ್ಕೆ ಸೇರಿಸಿ ಅವರ ಪಿಂಚಣಿ ಮಿತಿ ಹೆಚ್ಚಾಗಿವಂತೆ ಮಾಡಬಹುದು. ಹೀಗಾದಲ್ಲಿ ಇಪಿಎಸ್ ಮೇಲೆ ಮತ್ತಷ್ಟು ಒತ್ತಡ ಬೀಳಲಿದೆ.

ಹೆಚ್ಚಿನ ಪಿಂಚಣಿ ಪಾವತಿಯನ್ನು ಇಪಿಎಸ್ ನಿಭಾಯಿಸಬಲ್ಲದೆ ಎಂಬ ಬಗ್ಗೆ ವಿವಿಧ ಅಭಿಪ್ರಾಯಗಳು ವ್ಯಕ್ತವಾಗುತ್ತಿವೆ.
ಇಪಿಎಸ್ ಬುಟ್ಟಿಯಲ್ಲಿ ಏನಿದೆ ಎಂಬುದರ ಬಗ್ಗೆ ಉದ್ಯೋಗಿಗಳು ಯಾಕೆ ತಲೆ ಕೆಡಿಸಿಕೊಳ್ಳಬೇಕು? ಅದೇನಿದ್ದರೂ ಸರಕಾರದ ಜವಾಬ್ದಾರಿ ಎನ್ನುತ್ತಾರೆ ಹಣಕಾಸು ಪರಿಣಿತ ಉಪಾಧ್ಯಾಯ.

 

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+