For Quick Alerts
ALLOW NOTIFICATIONS  
For Daily Alerts

ಸುಪ್ರೀಂ ತೀರ್ಪು: ಖಾಸಗಿ ವಲಯದ ಉದ್ಯೋಗಿಗಳಿಗೆ ಬಂಪರ್ ಸುದ್ದಿ! ಸಿಗಲಿದೆ ಭಾರೀ ಮೊತ್ತದ ಪಿಂಚಣಿ

ಖಾಸಗಿ ವಲಯದಲ್ಲಿ ಕೆಲಸ ಮಾಡುವ ಉದ್ಯೋಗಿಗಳ ಇಲ್ಲೊಂದು ಗುಡ್ ನ್ಯೂಸ್ ಇದೆ. ಖಾಸಗಿ ರಂಗದ ಉದ್ಯೋಗಿಗಳಿಗೆ ಪಿಂಚಣಿ ಹೆಚ್ಚಿಸುವ ನಿಟ್ಟಿನಲ್ಲಿ ಸುಪ್ರೀಂಕೋರ್ಟ್ ಮಹತ್ವದ ತೀರ್ಪು ನೀಡಿದೆ.

|

ಖಾಸಗಿ ವಲಯದಲ್ಲಿ ಕೆಲಸ ಮಾಡುವ ಉದ್ಯೋಗಿಗಳ ಇಲ್ಲೊಂದು ಗುಡ್ ನ್ಯೂಸ್ ಇದೆ. ಖಾಸಗಿ ರಂಗದ ಉದ್ಯೋಗಿಗಳಿಗೆ ಪಿಂಚಣಿ ಹೆಚ್ಚಿಸುವ ನಿಟ್ಟಿನಲ್ಲಿ ಸುಪ್ರೀಂಕೋರ್ಟ್ ಮಹತ್ವದ ತೀರ್ಪು ನೀಡಿದೆ.
ಸುಪ್ರೀಂ ಕೋರ್ಟ್ ಈ ಮಹತ್ವದ ನಿರ್ಧಾರದಿಂದ ಪಿಂಚಣಿ ಶೇ. 100 ಷ್ಟು ಹೆಚ್ಚಾಗುವ ಸಾಧ್ಯತೆಯಿದೆ ಎನ್ನಲಾಗಿದೆ. ಸುಪ್ರೀಂಕೋರ್ಟ್ ಸೋಮವಾರ ಅರ್ಜಿ ವಿಚಾರಣೆ ನಡೆಸಿದ್ದು, ಕೇರಳ ಹೈಕೋರ್ಟ್ ತೀರ್ಪನ್ನು ಎತ್ತಿ ಹಿಡಿದಿದೆ.

ಇಪಿಎಫ್​ಒ ಮೇಲ್ಮನವಿ ವಜಾ

ಇಪಿಎಫ್​ಒ ಮೇಲ್ಮನವಿ ವಜಾ

ಖಾಸಗಿ ವಲಯದ ಉದ್ಯೋಗಿಗಳಿಗೆ ಹೆಚ್ಚಿನ ಮೊತ್ತದ ಪಿಂಚಣಿ ನೀಡುವಂತೆ ಸೂಚಿಸಿ ಕೇರಳ ಹೈಕೋರ್ಟ್​ ನೀಡಿದ್ದ ತೀರ್ಪನ್ನು ಪ್ರಶ್ನಿಸಿ, ಇಪಿಎಫ್​ಒ ಸಂಸ್ಥೆ ಸಲ್ಲಿಸಿದ್ದ ಮೇಲ್ಮನವಿಯನ್ನು ಸುಪ್ರೀಂಕೋರ್ಟ್​ ವಜಾ ಮಾಡಿದೆ. ಕೇರಳ ಹೈಕೋರ್ಟ್ ತೀರ್ಪನ್ನು ಪ್ರಶ್ನಿಸಿ ಇಪಿಎಫ್ಒ ಮೇಲ್ಮನವಿ ಸಲ್ಲಿಸಿತ್ತು. ನಿವೃತ್ತ ಎಲ್ಲ ನೌಕರರಿಗೆ ಅವರ ಸಂಪೂರ್ಣ ವೇತನದ ಆಧಾರದ ಮೇಲೆ ಪಿಂಚಣಿ ನೀಡುವಂತೆ ಕೇರಳ ಕೋರ್ಟ್ ಉಲ್ಲೇಖಿಸಿತ್ತು. ಸೋಮವಾರ ಅರ್ಜಿ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್, ಕೇರಳ ಕೋರ್ಟ್ ತೀರ್ಪನ್ನು ಎತ್ತಿ ಹಿಡಿದಿದೆ.

ಪಿಎಫ್ ಕಡಿತ, ಪಿಂಚಣಿ ಏರಿಕೆ

ಪಿಎಫ್ ಕಡಿತ, ಪಿಂಚಣಿ ಏರಿಕೆ

ಸುಪ್ರೀಂಕೋರ್ಟ್ ನೀಡಿರು ಈ ತೀರ್ಪಿನಿಂದ ಪಿಎಫ್ ಕಡಿತಗೊಳ್ಳಲಿದ್ದು, ಹೆಚ್ಚಿನ ಹಣ ಇಪಿಎಫ್ಒಗೆ ಹೋಗುವುದರಿಂದ ಪಿಎಫ್ ಹಣ ಕಡಿಮೆಯಾಗಲಿದೆ. ಆದರೆ ಪಿಂಚಣಿ ಮೊತ್ತದಲ್ಲಿ ಏರಿಕೆಯಾಗಲಿದ್ದು, ನಿವೃತ್ತಿ ಸಮಯದಲ್ಲಿ ನೌಕರರಿಗೆ ಆರ್ಥಿಕ ನೆರವು ಸಿಗಲಿದೆ.

ಇಪಿಎಫ್​ಒ, ಕೇರಳ ಹೈಕೋರ್ಟ್ ಹೇಳಿದ್ದೇನು?
 

ಇಪಿಎಫ್​ಒ, ಕೇರಳ ಹೈಕೋರ್ಟ್ ಹೇಳಿದ್ದೇನು?

ಪ್ರಸ್ತುತ ನಿಯಮದಂತೆ ಉದ್ಯೋಗಿಗಳ ವೇತನದಿಂದ ಕಡಿತಗೊಳಿಸುವ ಮೊತ್ತವನ್ನಾಆಧರಿಸಿ, ನಿವೃತ್ತಿ ಹೊಂದಿದ ಬಳಿಕ ಗರಿಷ್ಠ ರೂ. 15 ಸಾವಿರ ಪಿಂಚಣಿ ನೀಡಲಾಗುತ್ತಿದೆ. ಕೇರಳ ಹೈಕೋರ್ಟ್, ಇದರ ಬದಲು ನಿವೃತ್ತಿ ಹೊಂದುವಾಗ ಉದ್ಯೋಗಿಗಳು ಪಡೆಯುತ್ತಿರುವ ಸಂಬಳದ ಪೂರ್ಣ ಮೊತ್ತವನ್ನಾಧರಿಸಿ ಪಿಂಚಣಿ ನೀಡುವಂತೆ ಇಪಿಎಫ್​ಒಗೆ ಹೇಳಿತ್ತು. ಆದರೆ ಕೇರಳ ಹೈಕೋರ್ಟ್ ಮನವಿ ಪ್ರಶ್ನಿಸಿ ಇಪಿಎಫ್​ಒ ಸುಪ್ರೀಂಕೋರ್ಟ್​ನಲ್ಲಿ ವಿಶೇಷ ಮೇಲ್ಮನವಿ ಸಲ್ಲಿಸಿತ್ತು. ಆದರೆ, ಇಪಿಎಫ್​ಒನ ವಿಶೇಷ ಮೇಲ್ಮನವಿಯನ್ನು ಸುಪ್ರೀಂಕೋರ್ಟ್ ತಿರಸ್ಕರಿಸಿದೆ.

ಸುಪ್ರೀಂಕೋರ್ಟ್ ನಂತೆ  ಪಿಂಚಣಿ ಪ್ರಮಾಣ

ಸುಪ್ರೀಂಕೋರ್ಟ್ ನಂತೆ ಪಿಂಚಣಿ ಪ್ರಮಾಣ

ಸುಪ್ರೀಂಕೋರ್ಟ್​ನ ಈ ನಿರ್ದೇಶನದ ಅನ್ವಯ, 33 ವರ್ಷ ಕೆಲಸ ಮಾಡಿ, ನಿವೃತ್ತಿ ಹೊಂದುವಾಗ ರೂ. 50 ಸಾವಿರ ವೇತನ ಪಡೆಯುತ್ತಿರುವ ಉದ್ಯೋಗಿಗೆ ಹಾಲಿ ಸಿಗುತ್ತಿದ್ದ ರೂ. 5,180 ಪಿಂಚಣಿ ಬದಲು ಮಾಸಿಕ ರೂ. 25 ಸಾವಿರ ಪಿಂಚಣಿ ದೊರೆಯಲಿದೆ.
30 ವರ್ಷ ಕೆಲಸ ಮಾಡಿದ ಉದ್ಯೋಗಿಗಳಿಗೆ ರೂ. 4,525 ಬದಲು ರೂ. 22,857, 25 ವರ್ಷ ಕೆಲಸ ಮಾಡಿದವರಿಗೆ ರೂ. 3,425 ಬದಲು ರೂ. 19,225, 20 ವರ್ಷ ಕೆಲಸ ಮಾಡಿದ ಉದ್ಯೋಗಿಗಳಿಗೆ ರೂ. 2,100 ಬದಲು ರೂ. 14,285 ಪಿಂಚಣಿ ಸಿಗಲಿದೆ.
ಜೊತೆಗೆ ತಿಂಗಳಿಗೆ ರೂ. 1 ಲಕ್ಷ ವೇತನ ಪಡೆಯುವವರು 33 ವರ್ಷ ಸೇವೆ ಸಲ್ಲಿಸಿ ನಿವೃತ್ತರಾದ ಬಳಿಕ ರೂ. 5,180 ಬದಲು ರೂ. 50 ಸಾವಿರ, 30 ವರ್ಷ ಸೇವೆ ಸಲ್ಲಿಸಿ ನಿವೃತ್ತರಾದರೆ ರು. 4,525 ಬದಲಾಗಿ ರೂ. 45,714, 25 ವರ್ಷ ಸೇವೆ ಸಲ್ಲಿಸಿ ನಿವೃತ್ತರಾದರೆ ರೂ. 3,425 ಬದಲು ರೂ. 38,571 ಹಾಗೂ 20 ವರ್ಷ ಸೇವೆ ಸಲ್ಲಿಸಿದವರಿಗೆ ರೂ. 2,100 ಬದಲು ರೂ. 28,571 ಪಿಂಚನೆ ಸಿಗಲಿದೆ.

ಉದ್ಯೋಗದಾತನಿಂದ ಶೇ. 8.33ರಷ್ಟು ಕೊಡುಗೆ

ಉದ್ಯೋಗದಾತನಿಂದ ಶೇ. 8.33ರಷ್ಟು ಕೊಡುಗೆ

1995 ರಲ್ಲಿ ಉದ್ಯೋಗಿಗಳ ಪಿಂಚಣಿ ಯೋಜನೆ (ಇಪಿಎಸ್) ಯನ್ನು ಕೇಂದ್ರ ಸರ್ಕಾರ ಪರಿಚಯಿಸಿತು. ಇದರಡಿಯಲ್ಲಿ ನೌಕರರ ವೇತನದಲ್ಲಿ ಪಿಂಚಣಿ ಯೋಜನೆಯೊಂದರಲ್ಲಿ ಉದ್ಯೋಗದಾತನು ಶೇ. 8.33ರಷ್ಟು ಕೊಡುಗೆ ನೀಡಬೇಕಾಗಿತ್ತು. ಈ ಕೊಡುಗೆಗೆ ರೂ. 6,500 (ಅಥವಾ ರೂ. 541 ತಿಂಗಳಿಗೆ) ಶೇ. 8.33ನಷ್ಟು ಹಣವನ್ನು ನೀಡಲಾಯಿತು. ಸರ್ಕಾರವು ಈ ಕಾಯಿದೆಯನ್ನು ಮಾರ್ಚ್ 1996 ರಲ್ಲಿ ತಿದ್ದುಪಡಿ ಮಾಡಿತು ಮತ್ತು ನಿಜವಾದ ವೇತನದ ಶೇಕಡಾವಾರು ಕೊಡುಗೆಗೆ ಅವಕಾಶ ಮಾಡಿಕೊಟ್ಟಿತು. ಉದ್ಯೋಗಿ ಮತ್ತು ಉದ್ಯೋಗದಾತನು ಯಾವುದೇ ಆಕ್ಷೇಪಣೆಯನ್ನು ಹೊಂದಿರಲಿಲ್ಲ.

ಪೂರ್ಣ ವೇತನಕ್ಕೆ ಪಿಂಚಣಿ ಇರಲಿಲ್ಲ

ಪೂರ್ಣ ವೇತನಕ್ಕೆ ಪಿಂಚಣಿ ಇರಲಿಲ್ಲ

ಇಪಿಎಫ್ಒ ಸಂಸ್ಥೆಯನ್ನು 1995ರಲ್ಲಿ ಆರಂಭಿಸಲಾಗಿ, 1996ರಲ್ಲಿ ನಿಯಮವನ್ನು ಬದಲಿಸಲಾಗಿತ್ತು. 2014ರಲ್ಲಿ ಮತ್ತೆ ನಿಯಮದಲ್ಲಿ ಬದಲಾವಣೆ ಮಾಡಲಾಗಿತ್ತು. ಹೊಸ ನಿಯಮದನ್ವಯ ಖಾಸಗಿ ಉದ್ಯೋಗಿಗಳ ಪೂರ್ಣ ವೇತನಕ್ಕೆ ಪಿಂಚಣಿ ಸಿಗುತ್ತಿರಲಿಲ್ಲ. ರೂ. 15 ಸಾವಿರಕ್ಕೆ ಪಿಂಚಣಿ ನಿಗದಿ ಮಾಡಲಾಗಿತ್ತು. ನಿವೃತ್ತಿಯ ಕೊನೆಯ ವರ್ಷದ ಸರಾಸರಿ ಮಾಸಿಕ ಸಂಬಳ ಮಾತ್ರ ಲೆಕ್ಕ ಹಾಕುತ್ತಿದ್ದುದ್ದರಿಂದಾಗಿ ಪಿಂಚಣಿ ಕಡಿಮೆ ಸಿಗುತ್ತಿತ್ತು.

Read more about: epfo pension salary money
English summary

Supreme Court clears path for pension to rise manifold for employees in all firms

The Supreme Court on Monday paved the way for higher pension to all private sector employees by dismissing a special leave petition filed by EPFO against a Kerala high court judgment.
Story first published: Tuesday, April 2, 2019, 15:47 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X