10-20 ಸಾವಿರ ಬಂಡವಾಳದಲ್ಲಿ ಬಿಸಿನೆಸ್ ಆರಂಭಿಸಿ ಸಾಕಷ್ಟು ಹಣ ಗಳಿಸಿ..

ಸ್ವಂತ ಉದ್ಯೋಗ ಆರಂಭಿಸಲು ಸಾಕಷ್ಟು ಅವಕಾಶಗಳಿದ್ದು, ಇದಕ್ಕಾಗಿ ಡಿಗ್ರಿಗಳ ಅಗತ್ಯವಿಲ್ಲ. ಸ್ವಂತ ಬಿಸಿನೆಸ್ ಆರಂಭಿಸುವ ಆಲೋಚನೆ ನಿಮ್ಮದಾಗಿದ್ದರೆ ಅತೀ ಕಡಿಮೆ ಬಂಡವಾಳದಲ್ಲಿ ಅಂದರೆ ಸುಮಾರು 10-20 ಸಾವಿರದಲ್ಲಿ ವ್ಯಾಪಾರ ಆರಂಭಿಸಬಹುದು.

ಸ್ವಂತ ಉದ್ಯೋಗ ಆರಂಭಿಸಲು ಸಾಕಷ್ಟು ಅವಕಾಶಗಳಿದ್ದು, ಇದಕ್ಕಾಗಿ ಡಿಗ್ರಿಗಳ ಅಗತ್ಯವಿಲ್ಲ. ಸ್ವಂತ ಬಿಸಿನೆಸ್ ಆರಂಭಿಸುವ ಆಲೋಚನೆ ನಿಮ್ಮದಾಗಿದ್ದರೆ ಅತೀ ಕಡಿಮೆ ಬಂಡವಾಳದಲ್ಲಿ ಅಂದರೆ ಸುಮಾರು 10-20 ಸಾವಿರದಲ್ಲಿ ವ್ಯಾಪಾರ ಆರಂಭಿಸಬಹುದು. ಬಿಸಿನೆಸ್ ಆರಂಭಿಸಲು ಹಣವಿಲ್ಲ ಎಂದು ಕೊರಗುತ್ತಾ ಕೂರಬೇಕಾಗಿಲ್ಲ. ಅದಕ್ಕಾಗಿ 10-20 ಸಾವಿರ ಬಂಡವಾಳ ಹೂಡಿಕೆ ಮಾಡಿದರೆ ಸಾಕಾಗುತ್ತದೆ.

10-20 ಸಾವಿರ ಬಂಡವಾಳದಲ್ಲಿ ಬಿಸಿನೆಸ್ ಆರಂಭಿಸಿ ಸಾಕಷ್ಟು ಹಣ ಗಳಿಸಿ..

ಫಾಸ್ಟ್ ಫುಡ್, ಬೆಳಗಿನ ಉಪಹಾರ
ಆಹಾರ ಪದಾರ್ಥಗಳ ಬೇಡಿಕೆ ಎಂದಿಗೂ ಕಡಿಮೆಯಾಗುವುದಿಲ್ಲ. ನಗರ ಪ್ರದೇಶಗಳಲ್ಲಿ ಬೆಳಗಿನ ಸಮಯದಲ್ಲಿ ಜನ ಬ್ಯುಸಿ ಇರುವುದರಿಂದ ಬೆಳಗಿನ ಉಪಹಾರ ತಯಾರಿಸಲು ಸಮಯ ಇರಲ್ಲ. ಹೀಗಾಗಿ
ಬೆಳಗಿನ ಉಪಹಾರದ ವ್ಯಾಪಾರ ಆರಂಭ ಸುಲಭ. ಇದಕ್ಕೆ ಹೆಚ್ಚು ಹೂಡಿಕೆ ಬೇಕಾಗುವುದಿಲ್ಲ. ಫುಲ್ ಟೈಂ ಅಥವಾ ಪಾರ್ಟ್ ಟೈಂ ಆಗಿ ನೀವು ಈ ಉದ್ಯೋಗ ಆಯ್ಕೆ ಮಾಡಿಕೊಳ್ಳಬಹುದು. ಜೊತೆಗೆ ಫಾಸ್ಟ್ ಫುಡ್ ಗೆ ಬೇಡಿಕೆ ಇದ್ದೇ ಇದೆ. ಸರಿಯಾದ ಜಾಗದಲ್ಲಿ ನೀವು ಫಾಸ್ಟ್ ಫುಡ್ ವ್ಯಾಪಾರ ಆರಂಭಿಸಿದರೆ ಯಶಸ್ವಿಯಾಗೋದು ಖಚಿತ. ಇದಕ್ಕೆ ಸಲ್ಪ ಬಂಡವಾಳ ಹೆಚ್ಚು ಬೆಕಾಗಬಹುದು.

ನರ್ಸರಿ ಬಿಸಿನೆಸ್
ಸಾವಿರಾರು ರೂಪಾಯಿ ಖರ್ಚು ಮಾಡಿ ಕನಸಿನ ಮನೆ ಕಟ್ಟಿದ ನಂತರ ಅದರ ಅಂದ ಚಂದ ಹೆಚ್ಚಿಸಲು ಹಾಗೂ ಆರೋಗ್ಯದ ದೃಷ್ಟಿಯಿಂದ ಮನೆ ಮುಂದೆ, ಮನೆಯೊಳಗೆ ಸಣ್ಣ ಸಣ್ಣ ಅಲಂಕಾರಿಕ ಹೂ, ಗಿಡಗಳನ್ನು ಇಟ್ಟುಕೊಳ್ಳುತ್ತಾರೆ. ಹೀಗಾಗಿ ನರ್ಸರಿ ಫ್ಲಾಂಟ್ ಸಾಕಷ್ಟು ಬೇಡಿಕೆ ಇದೆ. ಕಡಿಮೆ ಬಂಡವಾಳದಲ್ಲಿ ಫ್ಲಾಂಟ್ ನರ್ಸರಿ ಬಿಸಿನೆಸ್ ಶುರು ಮಾಡಬಹುದು. ಸಗಣಿಯಿಂದ ಪೇಪರ್ ತಯಾರಿಸಿ ತಿಂಗಳಿಗೆ 1-2 ಲಕ್ಷ ಆದಾಯ ಗಳಿಸಿ

ಶೂ ವಾಶ್ ಲಾಂಡ್ರಿ
ಇತ್ತೀಚಿನ ದಿನಗಳಲ್ಲಿ ಶೂ ವಾಶ್ ಲಾಂಡ್ರಿ ಜನಪ್ರಿಯತೆ ಪಡೆದುಕೊಳ್ಳುತ್ತಿದೆ. 5-8 ಸಾವಿರ ಖರ್ಚು ಮಾಡಿ ಶೂ ವಾಶ್ ಲಾಂಡ್ರಿ ಬಿಸಿನೆಸ್ ಶುರು ಮಾಡಬಹುದು. ಶೂ ವಾಶ್ ಮಾಡಿ ಕ್ಲೀನ್ ಮಾಡಲು ಮಶಿನ್ ಮಾರುಕಟ್ಟೆಗೆ ಬಂದಿದೆ . ಇದರೊಟ್ಟಿಗೆ ಫರ್ನಿಚರ್ ಡ್ರೈ ಕ್ಲೀನಿಂಗ್ ದಂಧೆ ಆರಂಭಿಸಬಹುದು.

ತಂಪು ಪಾನೀಯ
ಸೀಸನಲ್ ವ್ಯವಹಾರಗಳಲ್ಲಿ ತಂಪು ಪಾನೀಯ ದಂಧೆ ಮುಖ್ಯವಾಗಿದೆ. ಬೇಸಿಗೆ ಕಾಲದಲ್ಲಿ ತಂಪು ಪಾನೀಯಕ್ಕೆ ಹಾಗು ಮಿನರಲ್ ವಾಟರ್ ಗೆ ಬೇಡಿಕೆ ಹೆಚ್ಚಿರುವುದು ನಿಮಗೆ ಗೊತ್ತಿದೆ. ತಂಪು ಪಾನೀಯ ಅಥವಾ ಮಿನರಲ್ ವಾಟರ್ ವ್ಯಾಪಾರವನ್ನು 8 -10 ಸಾವಿರ ಬಂಡವಾಳದೊಂದಿಗೆ ಆರಂಭಿಸಬಹುದು.

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+