For Quick Alerts
ALLOW NOTIFICATIONS  
For Daily Alerts

ಅಂಚೆ ಇಲಾಖೆಯಲ್ಲಿ ನಿಮ್ಮ ಖಾತೆ ಇದೆಯೇ?

ಭಾರತೀಯ ಅಂಚೆ ಇಲಾಖೆ ಹಲವಾರು ಸೇವೆಗಳನ್ನು ಒದಗಿಸುತ್ತದೆ. ಲಕ್ಷಾಂತರ ಅಂಚೆ ಕಚೇರಿಗಳನ್ನು ಹೊಂದಿರುವ ಪೋಸ್ಟ್ ಆಫೀಸ್ ದೇಶದ ಮೂಲೆ ಮೂಲೆಗೂ ಶಾಖೆಗಳನ್ನು ಹೊಂದಿದೆ.

|

ಭಾರತೀಯ ಅಂಚೆ ಇಲಾಖೆ ಹಲವಾರು ಸೇವೆಗಳನ್ನು ಒದಗಿಸುತ್ತದೆ. ಲಕ್ಷಾಂತರ ಅಂಚೆ ಕಚೇರಿಗಳನ್ನು ಹೊಂದಿರುವ ಪೋಸ್ಟ್ ಆಫೀಸ್ ದೇಶದ ಮೂಲೆ ಮೂಲೆಗೂ ಶಾಖೆಗಳನ್ನು ಹೊಂದಿದೆ. ಭಾರತ ಸರ್ಕಾರ ಅಂಚೆ ಇಲಾಖೆಯನ್ನು ನಿರ್ವಹಿಸುತ್ತಿದ್ದು, ಭಾರತೀಯ ಅಂಚೆ ಸುರಕ್ಷತೆ ಮತ್ತು ಭದ್ರತೆಯ ದೃಷ್ಟಿಯಿಂದ ಮಾನ್ಯತೆ ಪಡೆದ ಸಂಸ್ಥೆಯಾಗಿದೆ. ಹಿರಿಯ ನಾಗರಿಕರಿಗೂ ವಿವಿಧ ಯೋಜನೆಗಳನ್ನು ನೀಡುತ್ತಿದೆ. ಅಂಚೆ ಕಚೇರಿ ಯೋಜನೆಗಳು ತೆರಿಗೆ ವಿನಾಯಿತಿಯನ್ನು ಸಹ ಕಲ್ಪಿಸಿಕೊಡುತ್ತಿವೆ. ಯಾವುದೇ ಗಂಡಾಂತರ ಇಲ್ಲದೇ ನಿಗದಿತ ಆದಾಯ ಪಡೆದುಕೊಳ್ಳಲು ಅಂಚೆ ಕಚೇರಿ ಯೋಜನೆಗಳು ನೆರವಾಗುತ್ತಿವೆ. ಪೋಸ್ಟ್ ಆಫೀಸ್ ಬೆಸ್ಟ್ ಉಳಿತಾಯ ಯೋಜನೆಗಳು ಅಂಚೆ ಕಚೇರಿ ಯೋಜನೆಗಳ ಬಗ್ಗೆ ಈ ಕೆಳಗಿನ ಅಂಶಗಳನ್ನು ಸದಾ ನೆನಪಿನಲ್ಲಿ ಇಟ್ಟುಕೊಳ್ಳಬೇಕಾಗುತ್ತದೆ.

 

1. ಖಾತೆಯ ಬದಲಾವಣೆ ಮತ್ತು ಪ್ರಮಾಣ ಪತ್ರ

1. ಖಾತೆಯ ಬದಲಾವಣೆ ಮತ್ತು ಪ್ರಮಾಣ ಪತ್ರ

ಖಾತೆಯನ್ನು ಬೇರೆ ಕಡೆಗೆ ವರ್ಗಾವಣೆ ಮಾಡಿಕೊಳ್ಳಬೇಕು ಎಂದು ಬಯಸುವ ವ್ಯಕ್ತಿ [SB10(b)] ಅಡಿ ಅಥವಾ ಮ್ಯಾನುವಲ್ ಆಗಿ ಅರ್ಜಿಯೊಂದನ್ನು ಸಲ್ಲಿಸಬೇಕಾಗುತ್ತದೆ. ಈ ಅರ್ಜಿಗಳು ಸಂಬಂಧಿಸಿದ ಕಚೇರಿಯಲ್ಲಿ ದೊರೆಯುತ್ತವೆ. ಟ್ರಾನ್ಸ ಫರ್ ಸರ್ಟಿಫಿಕೇಟ್ ಗೆ ಅರ್ಜಿಯನ್ನು ಫಾರ್ಮ್(NC32) ನಲ್ಲಿ ಸಲ್ಲಿಕೆ ಮಾಡಬೇಕಾಗುತ್ತದೆ. ಪೋಸ್ಟ್ ಆಫೀಸ್ ಮತ್ತು ವಿವಿಧ ಬ್ಯಾಂಕುಗಳ ಬಡ್ಡಿದರ ಎಷ್ಟಿದೆ? ಇಲ್ಲಿದೆ ಪಟ್ಟಿ

2. ತಟಸ್ಥ ಖಾತೆ

2. ತಟಸ್ಥ ಖಾತೆ

ಸತತ ಮೂರು ಹಣಕಾಸು ವರ್ಷ ಅಂಚೆ ಕಚೇರಿಯ ಉಳಿತಾಯ ಖಾತೆಯಲ್ಲಿ ಯಾವುದೇ ಹಣದ ಚಲಾವಣೆ ಅಥವಾ ವ್ಯವಹಾರ ಮಾಡದಿದ್ದರೆ ಖಾತೆಯನ್ನು ತಟಸ್ಥ ಖಾತೆ ಎಂದು ಪರಿಗಣನೆ ಮಾಡಲಾಗುತ್ತದೆ. ಒಂದು ವೇಳೆ ಈ ಖಾತೆಯನ್ನು ಪುನಃ ಚಾಲ್ತಿಗೆ ತರಬೇಕು ಎಂದಾದಲ್ಲಿ ಮೇಲೆ ಹೇಳಿದ ರೀತಿಯಲ್ಲೇ ಅರ್ಜಿ ಸಲ್ಲಿಕೆ ಮಾಡಬೇಕಾಗುತ್ತದೆ. ಖಾತೆಯಲ್ಲಿ ರೂ. 20 ಗಿಂತ ಕಡಿಮೆ ಹಣವಿದ್ದರೆ ಸೇವಾ ಶುಲ್ಕವನ್ನು ಸಲ್ಲಿಕೆ ಮಾಡಬೇಕಾಗುತ್ತದೆ.

3. ದೂರು ದಾಖಲು
 

3. ದೂರು ದಾಖಲು

ಮಾಡುವ ಬಗೆ ಖಾತೆದಾರ ಸಾವಿಗೀಡಾದರೆ ಅಥವಾ ಇನ್ನಿತರ ಸಂದರ್ಭದಲ್ಲಿ ಹಣ ಹಿಂದಕ್ಕೆ ಪಡೆಯಬೇಕಾದರೆ ನಾಮಿನಿ ಹಣಕ್ಕೆ ಅರ್ಜಿ ಸಲ್ಲಿಕೆ ಮಾಡಬೇಕಾಗುತ್ತದೆ. ಒಂದು ವೇಳೆ ಯಾವುದೇ ನಾಮಿನಿ ಇಲ್ಲ ಎಂದಾದರೆ ಕಾನೂನು ಪ್ರಕಾರ ಯಾರೂ ಹಕ್ಕಿಕೆ ಭಾಜ್ಯರಾಗುತ್ತಾರೋ ಅವರು ಅರ್ಜಿ ಸಲ್ಲಿಕೆ ಮಾಡಬೇಕಾಗುತ್ತದೆ. 1 ಲಕ್ಷದವರೆಗಿನ ಮೊತ್ತಕ್ಕೆ ವಿಶೇಷ ದಾಖಲೆಗಳನ್ನು ಸಲ್ಲಿಕೆ ಮಾಡುವ ಅಗತ್ಯವಿರುವುದಿಲ್ಲ.

4. ಡುಪ್ಲಿಕೇಟ್ ಸರ್ಟಿಫಿಕೇಟ್

4. ಡುಪ್ಲಿಕೇಟ್ ಸರ್ಟಿಫಿಕೇಟ್

ಡುಪ್ಲಿಕೇಟ್ ಸರ್ಟಿಫಿಕೇಟ್ ಬೇಕಾದಲ್ಲಿ ಅಸಲಿಯದನ್ನು ಕಳೆದುಕೊಂಡ ಬಗ್ಗೆ ಅಥವಾ ಹಾನಿಯಾಗಿರುವ ಬಗ್ಗೆ ಸಮಗ್ರ ದಾಖಲೆಯನ್ನು ಸಲ್ಲಿಕೆ ಮಾಡಬೇಕಾಗುತ್ತದೆ(NC 29). ನಾಶವಾದ ಮಾಹಿತಿ, ಕಾರಣ, ಎಷ್ಟು ವರ್ಷದ ಬಾಂಡ್ ಹೀಗೆ ಎಲ್ಲ ವಿವರಗಳನ್ನು ನೀಡಬೇಕಾಗುತ್ತದೆ.

5. ಮೈನರ್ ಖಾತೆ

5. ಮೈನರ್ ಖಾತೆ

ನಿಮ್ಮ ಮಕ್ಕಳ ಹೆಸರಿನಲ್ಲಿ (ಮೈನರ್ ಖಾತೆಗಳನ್ನು) ತೆರೆಯಬಹುದು. 10 ವರ್ಷ ತುಂಬಿದ ವ್ಯಕ್ತಿಯ ಹೆಸರಿನಲ್ಲಿ ಅಂಚೆ ಕಚೇರಿಯಲ್ಲಿ ಸುಲಭವಾಗಿ ಖಾತೆ ತೆರೆಯಲು ಅವಕಾಶ ಕಲ್ಪಿಸಲಾಗಿದೆ. (Read More: Post Office Schemes)

Read more about: banking money post office schemes
English summary

Post Office Savings Account: Must know these things

Post Office Savings Account is similar in many ways to a regular savings account.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X