ಮೇಧಾವಿಗಳಿಗೆ ಲಕ್ಷ ಲಕ್ಷ ಸಂಬಳ ನೀಡಲು ಕೆಲವು ಸಂಸ್ಥೆಗಳು ಯೋಚಿಸುವುದಿಲ್ಲ. ಅದರಲ್ಲೂ ಕೆಲವು ವಿಷಯದಲ್ಲಿ ಪರಿಣಿತಿ ಪಡೆದ ವ್ಯಕ್ತಿಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತದೆ.
ಒಂದು ಲಕ್ಷದವರೆಗೆ ಸಂಬಳ ಪಡೆಯಬೇಕು ಎಂಬುದು ಹೆಚ್ಚಿನವರ ಕನಸಾಗಿರುತ್ತದೆ. ಆರಂಕಿಯ ಸಂಬಳ ಪಡೆಯುವುದು ನಿಮ್ಮ ಆದ್ಯತೆಯಾಗಿದ್ದರೆ ಅಥವಾ ಈ ವೇತನವನ್ನು ನೀಡುವ ಉದ್ಯೋಗಗಳನ್ನು ಹುಡುಕುತ್ತಿರುವಿರಾದರೆ ಇದಕ್ಕಾಗಿ ನಿಮ್ಮ ಕೆಲವು ಅರ್ಹತೆಗಳನ್ನು ಹಾಗೂ ಉದ್ಯೋಗದ ಕ್ಷಮತೆ ಹೆಚ್ಚಿಸುವ ಕೌಶಲ್ಯವನ್ನು ಪಡೆಯುವ ಮೂಲಕ ನಿಮ್ಮ ಬಯಕೆಯನ್ನು ಈಡೇರಿಸಬಹುದು. ಮೇಧಾವಿಗಳಿಗೆ ಲಕ್ಷ ಲಕ್ಷ ಸಂಬಳ ನೀಡಲು ಕೆಲವು ಸಂಸ್ಥೆಗಳು ಯೋಚಿಸುವುದಿಲ್ಲ. ಅದರಲ್ಲೂ ಕೆಲವು ವಿಷಯದಲ್ಲಿ ಪರಿಣಿತಿ ಪಡೆದ ವ್ಯಕ್ತಿಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತದೆ. ಒಂದು ವೇಳೆ ಈ ಉದ್ಯೋಗಕ್ಕೆ ಅಗತ್ಯವಿರುವ ಕೌಶಲ್ಯವನ್ನು ನೀವು ಪದವಿ ಪಡೆಯುವಾಗಲೇ ಪಡೆದಿದ್ದರೆ ಪದವಿ ಪಡೆದ ಬಳಿಕ ಈ ಉದ್ಯೋಗ ನಿಮಗೆ ದೊರಕುವ ಸಾಧ್ಯತೆ ಹೆಚ್ಚುತ್ತದೆ ಹಾಗೂ ನಿಮ್ಮ ವೃತ್ತಿಜೀವನ ಸುಖಕರವಾಗಿ ಮುನ್ನಡೆಯಲು ಸಾಧ್ಯವಾಗುತ್ತದೆ ಹಾಗೂ ಜೀವನದುದ್ದಕ್ಕೂ ಏಳ್ಗೆ ಪಡೆಯುತ್ತಾ ಸಾಗಲು ನೆರವಾಗುತ್ತದೆ. ಬನ್ನಿ, ಆರಂಕಿಯ ವೇತನವನ್ನು ಪಡೆಯಲು ಯಾವ ವೃತ್ತಿಕೌಶಲಗಳು ನೆರವಾಗುತ್ತವೆ ಎಂದು ನೋಡೋಣ ಬನ್ನಿ.. ಮಾರುಕಟ್ಟೆಯಲ್ಲಿ ಬಹುಬೇಡಿಕೆಯಿರುವ ಈ ಬಿಸಿನೆಸ್ ಆರಂಭಿಸಿ ವರ್ಷಕ್ಕೆ 97 ಲಕ್ಷ ಗಳಿಸಿ
ಸಾಫ್ಟ್ವೇರ್ ಡೆವಲಪ್ಮೆಂಟ್
ನೀವು ಈಗಾಗಲೇ ಐಟಿ ಅಥವಾ ಅಂತರ್ಜಾಲ ತಾಣ ಅಭಿವೃದ್ದಿ ಕ್ಷೇತ್ರದಲ್ಲಿ ಪ್ರೋಗ್ರಾಮರ್, ಕೋಡರ್ ಅಥವಾ ಡಿಸೈನರ್ ಮೊದಲಾದ ಹುದ್ದೆಗಳಲ್ಲಿ ಕಾರ್ಯ ನಿರ್ವಹಿಸುತ್ತಿದ್ದರೆ ನಿಮ್ಮ ಈಗಿರುವ ಕೌಶಲ್ಯವನ್ನು ಒಂದು ಹಂತ ಮೇಲಕ್ಕೇರಿಸಲು ಸಾಫ್ಟ್ವೇರ್ ಅಭಿವೃದ್ಧಿಯ ಪ್ರೋಗ್ರಾಂ ಹಾಗೂ ಅಪ್ಲಿಕೇಶನ್ ಗಳನ್ನು ಕಲಿಯುವುದು ಉತ್ತಮ. ಈ ಕೌಶಲ್ಯ ಪಡೆದ ವೃತ್ತಿನಿರತರು ಹೊಸ ಸಾಫ್ಟ್ವೇರ್ ಗಳನ್ನು ನಿರ್ಮಿಸುವುದು, ಈಗಿರುವ ಸಾಫ್ಟ್ವೇರ್ ಗಳನ್ನು ಇನ್ನೂ ಉತ್ತಮಗೊಳಿಸುವುದು ಹಾಗೂ ಅಂಕಿ-ಅಂಶಗಳನ್ನು ಕಲೆ ಹಾಕುವ ತಂತ್ರಜ್ಞಾನವನ್ನು ಅಭಿವೃದ್ದಿಪಡಿಸುವುದು ಮೊದಲಾದ ಕಾರ್ಯಗಳನ್ನು ಕೈಗೊಳ್ಳಬೇಕಾಗುತ್ತದೆ. ಕಾರ್ಮಿಕ ಅಂಕಿ-ಅಂಶಗಳ ಕಛೇರಿ ನೀಡಿರುವ ಮಾಹಿತಿಯ ಮೇ 2016ಕ್ಕೆ ಅನ್ವಯವಾಗುವಂತೆ ರೂ. 6406901.42 ವಾರ್ಷಿಕ ವೇತನ ದೊರಕುತ್ತದೆ. ಈ ವೃತ್ತಿನಿರತರನ್ನು ಹೆಚ್ಚಾಗಿ ಸಾಫ್ಟ್ವೇರ್ ಪ್ರಕಾಶಕರು ಹಾಗೂ ಇತರ ಮಾಹಿತಿ ತಂತ್ರಜ್ಞಾನದ ಸೇವೆಯನ್ನು ಒದಗಿಸುವ ಸಂಸ್ಥೆಗಳು ಉದ್ಯೋಗ ಒದಗಿಸುತ್ತವೆ.
ಪ್ರಾಜೆಕ್ಟ್ ಮ್ಯಾನೇಜ್ಮೆಂಟ್
ನಿರ್ವಹಣಾ ಹಾಗೂ ತಂತ್ರಜ್ಞಾನದ ಕೌಶಲ್ಯಗಳನ್ನು ಹೊಂದಿದ್ದು, ಯೋಜನೆಯೊಂದನ್ನು ಕಾರ್ಯಗತಗೊಳಿಸುವ ಬಗ್ಗೆ ಅನುಭವವಿದ್ದರೆ ಹೆಚ್ಚಿನ ಉತ್ತಮ ವೇತನ ಪಡೆಯಬಹುದು. ತಂತ್ರಜ್ಞಾನವನ್ನು ಬಳಸಿ ಯೋಜನಾ ನಿರ್ವಹಣೆಯ ಕಾರ್ಯವನ್ನು ಸುಲಭವಾಗಿ ನಿರ್ವಹಿಸಬಲ್ಲ ನಿರ್ವಾಹಕರಿಗೆ ಹೆಚ್ಚಿನ ಬೇಡಿಕೆ ಇದೆ. ಆಪ್ ಗಳನ್ನು ಬಳಸಿ ತಂಡವನ್ನು ಸೂಕ್ತ ದಾರಿಯಲ್ಲಿ ಮುನ್ನಡೆಸುವ, ಅಂಕಿ ಅಂಶಗಳು ಹಾಗೂ ಕಾರ್ಯಗಳ ಗತಿಯನ್ನು ಕಾಲಕಾಲಕ್ಕೆ ಪರಿಶೀಲಿಸಿ ಸರಿದಾರಿಯಲ್ಲಿ ಮುನ್ನಡೆಸಬಲ್ಲ ನಿರ್ವಾಹಕರು ಹೆಚ್ಚಿನ ಬೇಡಿಕೆ ಪಡೆಯುತ್ತಾರೆ. ಇವರಿಗೆ ತಂತ್ರಜ್ಞಾನದ ಆಳದ ಪರಿಚಯವಿಲ್ಲದಿದ್ದರೂ ಯೋಜನೆಯನ್ನು ಮುನ್ನಡೆಸುವ ಸಾಮರ್ಥ್ಯ ಹೆಚ್ಚಿನ ವೇತನ ಪಡೆಯಲು ನೆರವಾಗುತ್ತದೆ. ಇವರು ಈ ಯೋಜನೆಯಲ್ಲಿ ಕೆಲಸ ಮಾಡುವ ಕಾರ್ಮಿಕರು, ಸಹೋದ್ಯೋಗಿಗಳೊಂದಿಗೆ ಸತತವಾಗಿ ಸಂಪರ್ಕದಲ್ಲಿದ್ದು ಪ್ರತಿ ಕಾರ್ಯವನ್ನೂ ಅವಧಿ ಮೀರುವ ಮುನ್ನವೇ ಮುಗಿಸಿ ಮುಂದಿನ ಕಾರ್ಯವನ್ನು ಕಾರ್ಯಗತಗೊಳಿಸಿ ಪ್ರಾಜೆಕ್ಟ್ ನ್ನು ಪೂರ್ಣಗೊಳಿಸುವ ಜವಾಬ್ದಾರಿಯನ್ನು ಹೊಂದಿರುತ್ತಾರೆ. ಇದಕ್ಕಾಗಿ ಇವರು ಪ್ರಾಜೆಕ್ಟ್ ಮ್ಯಾನೇಜ್ಮೆಂಟ್ ಟೂಲ್ಸ್ ಎಂಬ ತಂತ್ರಜ್ಞಾನಗಳ ನೆರವು ಪಡೆಯಬೇಕಾಗುತ್ತದೆ. ಈ ತಂತ್ರಜ್ಞಾನದ ಆಧುನಿಕ ಆವೃತ್ತಿಗಳನ್ನು, ಉದಾಹರಣೆಗೆ Enterprise Resource Planning (ERP) ಎಂಬ ತಂತ್ರಜ್ಞಾನವನ್ನು ಕಲಿತು ತಮ್ಮ ಕೌಶಲವನ್ನು ಉತ್ತಮಗೊಳಿಸುವ ಮೂಲಕ ಸುಲಭವಾಗಿ ಆರಂಕಿಯ ವೇತನ ಪಡೆಯಬಹುದು. ಸ್ಯಾಲರಿ.ಕಾಂ ವರದಿಗಳ ಪ್ರಕಾರ ಯೋಜನಾ ನಿರ್ವಾಹಕರು ರೂ. 8296939.79 ರಷ್ಟು ವಾರ್ಷಿಕ ವೇತನ ಪಡೆಯುತ್ತಾರೆ.
ಇಂಟರ್ನೆಟ್ ಮಾರ್ಕೆಟಿಂಗ್/ಇ-ವ್ಯಾಪಾರ
ತುಂಬಾ ಜನರಿಗೆ ವ್ಯಾಪರ ಕಲೆ ರಕ್ತಗತವಾಗಿ ಸಿದ್ದಿಸಿರುತ್ತದೆ. ನಿಮ್ಮ ವ್ಯಾಪಾರವನ್ನು ಜಾಗತಿಕವಾಗಿ ಗ್ರಾಹಕರನ್ನು ಪಡೆಯಲು ಬಯಸಿದ್ದು, ಡಿಜಿಟಲ್ ವ್ಯಾಪಾರ ಕ್ಷೇತ್ರದಲ್ಲಿ ಕಾರ್ಯನಿರತರಾಗಿದ್ದರೆ ಈ ನಿಟ್ಟಿನಲ್ಲಿ ಹೊಸ ಕೌಶಲ್ಯಗಳನ್ನು ಕಲಿಯುವ ಮೂಲಕ ಲಕ್ಷದವರೆಗೆ ವೇತನ ಪಡೆಯಬಹುದು. ಈ ಕ್ಷೇತ್ರದಲ್ಲಿ ರೂ. 15687080.50 ರಷ್ಟು ವೇತನವನ್ನು ಪಡೆಯಬಹುದು. ಈ ವಿಷಯವನ್ನು ಪ್ರಮುಖ ಉದ್ಯೋಗ ದೊರಕಿಸುವ ಸಂಸ್ಥೆಯಾದ ಮೋಂಡೋ ಪ್ರಕಟಿಸಿದ ವರದಿಯಲ್ಲಿ ತಿಳಿಸಲಾಗಿದೆ.
ಹಣಕಾಸು ನಿರ್ವಾಹಕರು
ಅಂಕಿ ಅಂಶಗಳಲ್ಲಿ ಉತ್ತಮವಾಗಿರುವವರು ಹಾಗೂ ಇವುಗಳ ವಿಶ್ಲೇಷಣೆಯಲ್ಲಿ ನುರಿತ ಮನಸ್ಸುಳ್ಳವರಿಗೆ ಈ ಹುದ್ದೆ ಹೇಳಿ ಮಾಡಿಸಿದ್ದಾಗಿದೆ. ದೊಡ್ಡ ಹಾಗೂ ಪ್ರಮುಖ ಸಂಸ್ಥೆಗಳಿಗೆ ತಮ್ಮ ವ್ಯಾಪಾರ ಹಾಗೂ ಉತ್ಪನ್ನಗಳ ಅಂಕಿ ಅಂಶಗಳ ವಿಶ್ಲೇಷಣೆ ಸತತವಾಗಿ ಬೇಕಾಗಿರುತ್ತದೆ ಹಾಗೂ ಈ ಅಂಕಿ ಅಂಶಗಳನ್ನು ಆಧರಿಸಿಯೇ ಪ್ರತಿ ವರ್ಷದ ಪ್ರಮುಖ ತೀರ್ಮಾನಗಳನ್ನು ಕೈಗೊಳ್ಳಲಾಗುತ್ತದೆ. ಈ ಕೆಲಸವನ್ನು ನಿರ್ವಹಿಸಲು ಆರ್ಥಿಕ ನಿರ್ವಾಹಕರು ಅಗತ್ಯವಾಗಿದ್ದು ಇವರ ಕರ್ತವ್ಯಗಳಲ್ಲಿ ಆರ್ಥಿಕ ಮುನ್ಸೂಚನೆ, ಪ್ರವೃತ್ತಿಯ ವಿಶ್ಲೇಷಣೆ, ಹೊಸ ಉತ್ಪನ್ನಗಳ ಯಶಸ್ಸಿನ ಸಾಧ್ಯತೆಗಳ ಬಗ್ಗೆ ವಿಶ್ಲೇಷಣೆ ಮೊದಲಾದವು ಸೇರಿರುತ್ತವೆ. ಇವರ ನಿರ್ಧಾರಗಳ ಮೂಲಕವೇ ಸಂಸ್ಥೆ ಒಂದು ಹಂತಕ್ಕೆ ಬರಲು ಸಾಧ್ಯವಾಗುತ್ತದೆ. ಆದರೆ ಈ ಹುದ್ದೆಯನ್ನು ಪಡೆಯಲು ಈ ಕ್ಷೇತ್ರದಲ್ಲಿ ಕನಿಷ್ಟ ಐದು ವರ್ಷಗಳಾದರೂ ಕಾರ್ಯ ನಿರ್ವಹಿಸಿರುವ ಅನುಭವದ ಅಗತ್ಯವಿದೆ. ಬಿಎಲ್ಎಸ್ ವರದಿಯ ಪ್ರಕಾರ ಈ ಹುದ್ದೆಗೆ ವಾರ್ಷಿಕ ರೂ. 7795214.20 ರಷ್ಟು ವೇತನ ದೊರಕುತ್ತದೆ.
ವ್ಯಾಪಾರ
ಈ ಕ್ಷೇತ್ರದಲ್ಲಿರುವ ವೃತ್ತಿಪರರು ತಾವು ಮಾರಾಟ ಮಾಡಿದ ಒಟ್ಟು ಮೊತ್ತದ ಒಂದು ಭಾಗವನ್ನು ಕಮೀಷನ್ ರೂಪದಲ್ಲಿ ಪಡೆಯುವುದರಿಂದ ಇವರ ವೇತನ ಪ್ರತಿತಿಂಗಳೂ ಬದಲಾಗುತ್ತಾ ಇರುತ್ತದೆ. ಆದರೆ ಆರಂಕಿಯ ವೇತನ ಪಡೆಯಬೇಕಾದರೆ ಈ ವೃತ್ತಿಯಲ್ಲಿ ಸೊಗಸಾದ ಮಾತುಗಾರರಾಗಿರಬೇಕಾಗಿರುವುದು ತುಂಬಾ ಅಗತ್ಯ. ಇವರಿಗೆ ವ್ಯಾಪಾರದ ಹಾಗೂ ಗ್ರಾಹಕರೊಂದಿಗೆ ವ್ಯವಹರಿಸುವ ಕಲೆ ಸಿದ್ದಿಸಿರಬೇಕು. ಈ ವೃತ್ತಿಪರರಿಗೆ ರೂ. 6402850 + ಕಮೀಶನ್ ಎಂಬ ಪ್ರಲೋಭನೆಯನ್ನು ಸುಲಭವಾಗಿ ಹೆಚ್ಚಿನ ಸಂಸ್ಥೆಗಳು ಒಡ್ಡುತ್ತವೆ. ಆದರೆ ಈ ಉದ್ಯೋಗ ಪಡೆಯಲು ಕನಿಷ್ಟ ಐದು ವರ್ಷಗಳ ಅನುಭವದ ಅವಶ್ಯಕತೆ ಇದೆ. ಈಗಿರುವ ನಿಮ್ಮ ಕೌಶಲವನ್ನು ಇನ್ನಷ್ಟು ಹೆಚ್ಚಿಸಿಕೊಳ್ಳಲು ನೀವು ಸೇಲ್ಸ್ ಟ್ರೇನಿಂಗ್ ಎಂಬ ತರಬೇತಿ ಶಿಬಿರಗಳಲ್ಲಿ ಭಾಗವಹಿಸಬೇಕು ಹಾಗೂ ಇನ್ನೂ ಉತ್ತಮ ಅವಕಾಶಗಳನ್ನು ಪಡೆಯಬಹುದು. ಬಿಎಲ್ಎಸ್ ವರದಿಗಳ ಪ್ರಕಾರ ಸೇಲ್ಸ್ ಮ್ಯಾನೇಜರ್ ಹುದ್ದೆಯಲ್ಲಿರುವ ವ್ಯಕ್ತಿಗಳು ೨೦೧೬ ರಲ್ಲಿ ರೂ. 7552919.82 ರಷ್ಟು ವಾರ್ಷಿಕ ವೇತನ ಪಡೆಯುತ್ತಿದ್ದಾರೆ.
ಶಿಕ್ಷಕ ಹಾಗೂ ಪ್ರೇರಕ (Teaching and motivating)
ಮಾನ್ಯವಾಗಿ ಶಿಕ್ಷಕರ ಸಂಭಾವನೆ ಕಡಿಮೆ ಇರುತ್ತದೆ. ಆರಂಕಿಯ ಸಂಬಳವಂತೂ ಇವರಿಗೆ ಎಷ್ಟೇ ಅನುಭವವಿದ್ದರೂ ಪಡೆಯಲು ಸಾಧ್ಯವಿಲ್ಲ. ೨೦೧೬ ರಲ್ಲಿ ಒಬ್ಬ ಪ್ರೌಢಶಾಲಾ ಶಿಕ್ಷಕರಿಗೆ ವಾರ್ಷಿಕ ರೂ. 3715666.70 ರಷ್ಟು ಮಾತ್ರವಿತ್ತು. ಆದರೆ ಈ ಹುದ್ದೆಯಲ್ಲಿರುವವರು ತಮ್ಮ ಮಾತಿನ ಕೌಶಲವನ್ನು ಇತರ ಕ್ಷೇತ್ರಗಳಲ್ಲಿ ವಿಸ್ತರಿಸುವ ಮೂಲಕ ಹೆಚ್ಚಿನ ಆದಾಯವನ್ನು ಪಡೆಯಬಹುದು. ಸಲಹಾಕಾರ ಅಥವಾ ಜೀವನ ತರಬೇತುರಾರ ಹುದ್ದೆಗಳನ್ನು ಇವರು ಪಡೆಯಬಹುದು. ಈ ಹುದ್ದೆಗಳನ್ನು ಅಲಂಕರಿಸುವವರಿಗೆ ಒಂದು ನಿರ್ದಿಷ್ಟ ಗುಂಪಿಗೆ ಸೇರಿದ ವ್ಯಕ್ತಿಗಳನ್ನು ಅಥವಾ ಒಂದು ಸಂಸ್ಥೆಯ ಉದ್ಯೋಗಿಗಳಿಗೆ ತರಬೇತಿ ನೀಡುವ ಅಥವಾ ಒಂದು ವಿಷಯದ ಬಗ್ಗೆ ಸಮಗ್ರ ಮಾಹಿತಿಯನ್ನು ಒದಗಿಸುವ ಕೌಶಲವಿರಬೇಕಾಗುತ್ತದೆ. ಇವರಿಗೆ ಹೆಚ್ಚಿನ ಬೇಡಿಕೆ ಇದ್ದು ಉತ್ತಮ ವೇತನ ಪಡೆಯಲು ಸಾಧ್ಯವಾಗುತ್ತದೆ. ವಿಶೇಷವಾಗಿ ಜೀವನ ತರಬೇತುರಾರರು ತಮ್ಮದೇ ಆದ ಸಂಬಳ ನೀಡಲು ಬೇಡಿಕೆ ಇಡಬಹುದು. ೨೦೧೭ರಲ್ಲಿ ಈ ಹುದ್ದೆಯಲ್ಲಿರುವವರಿಗೆ ವಾರ್ಷಿಕ ರೂ. 13401600.00 ರಷ್ಟು ವೇತನವಿದೆ.
ಹೂಡಿಕೆದಾರರು
ನಿಮ್ಮ ಹಣವನ್ನು ಸೂಕ್ತ ರೀತಿಯಲ್ಲಿ ಹೂಡಿಕೆ ಮಾಡಿ ಇತರರನ್ನೂ ಈ ಹೂಡಿಕೆಯಲ್ಲಿ ಒಳಗೊಳ್ಳುವಂತೆ ಮಾಡುವ ಮೂಲಕ ಅವರಿಗೂ ಲಾಭ ನೀಡಿ ನೀವೂ ಲಾಭ ಗಳಿಸುತ್ತಾ ಬಂದಿದ್ದರೆ ಹಾಗೂ ಹೂಡಿಕೆಯ ಬಗ್ಗೆ ಸೂಕ್ತ ಸಲಹೆಗಳನ್ನು ನೀಡುತ್ತಾ ಬಂದಿದ್ದರೆ ನೀವು ವೈಯಕ್ತಿಕ ಆರ್ಥಿಕ ಸಲಹಾಕಾರ ಹುದ್ದೆಯನ್ನು ಪಡೆಯಲು ಅರ್ಹರಿದ್ದೀರಿ ಎಂದರ್ಥ. ಈ ಸಲಹಾಕಾರರು ಕೇವಲ ಬ್ಯಾಂಕುಗಳಿಂದ ಮಾತ್ರವಲ್ಲ, ಹೂಡಿಕೆ ತಜ್ಞರು, ದೊಡ್ಡ ಸಂಸ್ಥೆಗಳು ಸಹಾ ಇವರ ಸೇವೆಯನ್ನು ಪಡೆಯಬಯಸುತ್ತವೆ. ಅಷ್ಟೇ ಅಲ್ಲ, ದೊಡ್ಡ ದೊಡ್ಡ ವೈಜ್ಞಾನಿಕ ಹಾಗೂ ತಂತ್ರಜ್ಞಾನ ಸಂಸ್ಥೆಗಳೂ ಉದ್ಯೋಗ ನೀಡುತ್ತವೆ. ಈ ಕೌಶಲಗಳೊಂದಿಗೆ ನೀವು ಭದ್ರತೆ ಹಾಗೂ ಸರಕುಗಳ ಒಪ್ಪಂದದ ಬಗ್ಗೆ ಹೆಚ್ಚಿನ ಕೌಶಲಗಳನ್ನು ಪಡೆದರೆ ಇನ್ನೂ ಉತ್ತಮ ವೇತನ ಪಡೆಯಬಹುದು. ಅಷ್ಟೇ ಅಲ್ಲ, ನೀವು ದಳ್ಳಾಳಿಯಾಗಿ ಕಾರ್ಯ ನಿರ್ವಹಿಸುವ ಮೂಲಕ ಸ್ವತಂತ್ರವಾಗಿಯೂ ನಿಮ್ಮದೇ ಆದ ಗ್ರಾಹಕರನ್ನು ಪಡೆಯುವ ಮೂಲಕ ಕಮೀಶನ್ ಆಧಾರಿತ ಗಳಿಕೆಯನ್ನು ಪಡೆಯಬಹುದು.
More From GoodReturns

ದಿನವೂ 500 ರೂ. ಖರ್ಚು ಮಾಡ್ತಿದ್ದೀರಾ? ನಿಮ್ಮ ಭವಿಷ್ಯದ ಲಕ್ಷಗಳನ್ನು ನೀವೇ ಕಳೆದುಕೊಳ್ಳುತ್ತಿದ್ದೀರಾ!

Karnataka BPL Card: ಬಿಪಿಎಲ್ ಕಾರ್ಡ್ದಾರರಿಗೆ ಬಿಗ್ ಶಾಕ್! ಸರ್ಕಾರದ ಮಹತ್ವದ ಕ್ರಮ

IPL 2026: ಕೊನೆಗೂ ಐಪಿಎಲ್ 2026ರ ಆರಂಭದ ದಿನಾಂಕ ಬಹಿರಂಗ! ಯಾವಾಗ ಗೊತ್ತಾ?

Bengaluru 2nd Airport: ಬೆಂಗಳೂರು 2ನೇ ವಿಮಾನ ನಿಲ್ದಾಣ ಯೋಜನೆಗೆ ಹೊಸ ಶಕ್ತಿ…ಸಿಎಂ ಸಿದ್ದರಾಮಯ್ಯ ಮಹತ್ವದ ಘೋಷಣೆ!

LPG Gas Helpline Number: ದೇಶದಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ; ತುರ್ತು ಅಗತ್ಯಕ್ಕೆ ಇಲ್ಲಿದೆ ಸಹಾಯವಾಣಿ

Bengaluru 2nd Airport: ಬೆಂಗಳೂರು 2ನೇ ಏರ್ಪೋರ್ಟ್ಗೆ ಇದೇ ಸ್ಥಳ ಬೆಸ್ಟ್; ಉದ್ಯಮಿ ಕೊಟ್ರು ಬಿಗ್ ಟ್ವಿಸ್ಟ್

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

Bengaluru Metro: ಗ್ರೀನ್ ಲೈನ್ ಮೆಟ್ರೋ ಪ್ರಯಾಣಿಕರಿಗೆ ಸಿಹಿಸುದ್ದಿ! ಮತ್ತೊಂದು ರೈಲಿನ ಆಗಮನ

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ

Bengaluru Metro: ಬೆಂಗಳೂರು ಮೆಟ್ರೋ 3ನೇ ಹಂತ ಮತ್ತೆ ವಿಳಂಬ, ಯಾವ ವರ್ಷಕ್ಕೆ ಈ ಸೇವೆ ಸಿಗಲಿದೆ ತಿಳಿಯಿರಿ



Click it and Unblock the Notifications