For Quick Alerts
ALLOW NOTIFICATIONS  
For Daily Alerts

ನಿಮ್ಮ ಕಂಪನಿ ಯಶಸ್ವಿಯಾಗಿ ನಡೆಸಲು ಈ 10 ನಿಯಮ ಪಾಲಿಸಿ

|

ನಮ್ಮ ದೇಶದಲ್ಲಿ ಉದ್ಯಮ, ಸ್ಟಾರ್ಟ್ಅಪ್ ಅಥವಾ ಬಿಸಿನೆಸ್ ಆರಂಭಿಸಲು ಇಚ್ಚಿಸುವವರಿಗೆ ಉತ್ತಮವಾದ ವಾತಾವರಣವಿದೆ. ದೇಶದ ಯುವಶಕ್ತಿ, ಹಣಕಾಸು ವ್ಯವಸ್ಥೆ, ಉದ್ಯೋಗಿಗಳ ಕುಶಲತೆ, ಉದ್ಯಮಕ್ಕೆ ಅನುಕೂಲ ಮಾಡಿಕೊಡುವ ವಾತಾವರಣ ಮೊದಲಾದವು ಕಾರಣಗಳಿವೆ. ಡಿಜಿಟಲ್ ಯುಗದಲ್ಲಿ ಹೊಸತನಕ್ಕೆ ಹೆಚ್ಚು ಆದ್ಯತೆಗಳಿದ್ದು, ಹೊಸ ಬಗೆಯ ಸರಕುಗಳು ಮತ್ತು ಸೇವೆಗಳಿಗೆ ಸಾಕಷ್ಟು ಅವಕಾಶವಿದೆ. ಜನರ ಬೇಕುಗಳಿಗೆ ಕೊನೆಯೇ ಇಲ್ಲ. ಉದ್ಯಮದಲ್ಲಿ ಕೆಲವೊಂದು ನಿಯಮಗಳನ್ನು ಪಾಲಿಸಿದರೆ ಇಟ್ಟ ಗುರಿ ತಪ್ಪುವುದಿಲ್ಲ ಎಂಬುದಕ್ಕೆ ವಿಶ್ವದ್ಯಾದ್ಯಂತ ಹಲವಾರು ಉದ್ಯಮಿಗಳು ನಮ್ಮ ಮುಂದೆ ಇದ್ದಾರೆ. ಬಿಸಿನೆಸ್/ಉದ್ಯಮ ಯಶಸ್ವಿಯಾಗಿ ನಡೆಸಲು ಈ ಟಿಪ್ಸ್ ಗಳನ್ನು ಪಾಲಿಸಿದರೆ ಯಶಸ್ವಿಯಾಗುವುದು ಖಚಿತ.

ಒಂದು ಐಡಿಯಾ ಆಯ್ಕೆ ಮಾಡಿ
 

ಒಂದು ಐಡಿಯಾ ಆಯ್ಕೆ ಮಾಡಿ

ಪ್ರಸ್ತುತ ಮಾರುಕಟ್ಟೆಯ ಟ್ರೆಂಡ್ ನಲ್ಲಿ ಯಾವುದಕ್ಕೆ ಬೇಡಿಕೆ ಇದೆ ಅನ್ನುವುದನ್ನು ಅರಿತುಕೊಳ್ಳುವುದು ಹೊಸ ಉದ್ಯಮಿ ಮಾಡಬೇಕಾದ ಮೊದಲ ಕೆಲಸ. ಈಗಾಗಲೇ ಮಾರುಕಟ್ಟೆಯಲ್ಲಿ ಇರುವುದನ್ನು ಅಥವಾ ಜನರಿಗೆ ಬೇಡಿಕೆ ಇಲ್ಲದಿರುವುದನ್ನು ಉದ್ಯಮಿ ತನ್ನ ಪರಿಶ್ರಮದ ಬುಡ ಮಾಡಿಕೊಂಡರೆ ಮೊದಲನೇ ಹೆಜ್ಜೆಯಿಂದಲೇ ಸೋಲನ್ನು ಹಿಂಬಾಲಿಸಿದಂತೆ. ಜನರಿಗೆ ಯಾವ ಸೇವೆ ಅಗತ್ಯವಾಗಿ ಬೇಕು ಎಂಬುದನ್ನು ತಿಳಿದು ನಮ್ಮ ಪರಿಶ್ರಮಹಾಕಬೇಕು. ಇದು ಒಂದೇ ಏಟಿಗೆ ಕೈಗೆ ಸಿಗುವ ವಸ್ತು ಅಲ್ಲ. ಇದಕ್ಕೆ ಸಾಕಷ್ಟು ಪರಿಶ್ರಮ ಪಡಬೇಕಾಗುತ್ತದೆ. ಏಕೆಂದರೆ ನಾವು ಜನರಿಗೆ ಕೊಡಲು ಇಚ್ಚಿಸುವುದು ಒಂದಾದರೆ ಜನರಿಗೆ ನಿಜವಾಗಿಯೂ ಬೇಕಾಗಿರುವುದು ಬೇರೆಯದೇ ಆಗಿರುತ್ತದೆ. ಇದನ್ನು ಹಿಡಿತಕ್ಕೆ ತಂದು ಒಂದು ಹಂತಕ್ಕೆ ತರಲು ನವ ಉದ್ಯಮಿ ಬಹು ಸಾಹಸ ಪಡಲೇಬೇಕು ಹಾಗು ಇದಕ್ಕೆ ಎಷ್ಟು ಆದ್ಯತೆ ಮತ್ತು ಸಮಯ ಕೊಡಬೇಕೋ ಅಷ್ಟು ಕೊಡಲೇಬೇಕಾಗುತ್ತದೆ.

ವ್ಯವಹಾರ ಬದ್ದತೆ

ಗುರಿ ಯಾವುದು ಅನ್ನುವುದು ಖಚಿತ ಆದ ಮೇಲೆ ಗುರಿ ಮುಟ್ಟುವ ಸಲುವಾಗಿ ಬದ್ಧರಾಗಬೇಕು. ನಿರಂತರ ಪರಿಶ್ರಮದಿಂದ ಮಾತ್ರ ನಾವು ಮುಂದೆ ಸಾಗಬಹುದು. ಏನೇ ಬರಲಿ ಎದುರಿಸಿ ಆಯ್ಕೆ ಮಾಡಿದ ಕೆಲಸ ಮಾಡೇ ತೀರುತ್ತೇನೆ ಅನ್ನುವ ಒಂದು ಮೊಂಡು ಧೈರ್ಯ ಇರಬೇಕು. ಹೀಗಿದ್ದರೆ ಮಾತ್ರ ಮೊದಲಲ್ಲಿ ಎದಿರಾಗುವ ಸೋಲುಗಳು ನಿರಾಶೆಗಳನ್ನು ದಾಟಿ ಮುಂದೆ ಹೋಗಲು ಸಾಧ್ಯ. ಇದು ಇಲ್ಲದಿದ್ದಲ್ಲಿ ಇಷ್ಟೇ ಇದು ಎಂದು ಸೋಲು ಅಪ್ಪುವವರ ಪೈಕಿಗೆ ಸೇರುವುದಕ್ಕೆ ಎದುರು ಬಂದು ನಿಂತಂತೆ ಇರುತ್ತದೆ.

ಟೀಮ್ ವರ್ಕ್

ಟೀಮ್ ವರ್ಕ್ ಎನ್ನುವುದು ಬಹುಮುಖ್ಯ ಪಾತ್ರವಹಿಸುತ್ತದೆ. ಯಾವುದೇ ಒಬ್ಬ ಮನುಷ್ಯ ತಾನೊಬ್ಬನೇ ಸಾಧಿಸಲು ಸಾಧ್ಯವಿಲ್ಲ. ಆದರೆ ಬೇರೆಯವರೊಡನೆ ಒಡಗೂಡಿ ಬಹಳ ಬೇಗ ಮತ್ತು ಸುಲಭವಾಗಿ ಸಾಧಿಸಬಹುದು. ಇದಕ್ಕೆ ಟೀಮ್ ವರ್ಕ್ ಅಥವಾ ತಂಡ ಕಟ್ಟಿಕೊಂಡು ದುಡಿಯುವುದು ಅನ್ನಬಹುದು. ಒಂದು ಅದ್ಬುತ ಟೀಮ್ ಕಟ್ಟಿಕೊಂಡು ಎಲ್ಲರೂ ಜೊತೆಯಾಗಿ ಹಾಕಿದ ಗುರಿಗೆ ತಕ್ಕಂತೆ ಶ್ರಮಪಟ್ಟು ಒಟ್ಟಿಗೆ ದುಡಿದರೆ ಕೆಲ ಕಾಲದಲ್ಲಿಯೇ ಗುರಿಯನ್ನು ಸಾಧಿಸಬಹದು. ಉದಾಹರಣೆಗೆ ಪಡಬೇಕಾದ ಶ್ರಮ, ಬೇಕಾಗುವ ಸಮಯ ಎಲ್ಲವು ಕಡಿಮೆಯೇ. ತಂಡದಲ್ಲಿ ಎಲ್ಲರ ವಿಭಿನ್ನ ಯೋಚನೆಗಳು ಹಲವಾರು ಪರಿಹಾರಗಳು ಇವು ಉನ್ನತ ಉದ್ಯಮಕ್ಕೆ ಬೇಕೇ ಬೇಕು.ಹೀಗಾಗಿ ಉದ್ಯಮಿ ತನ್ನ ಗುರಿಗೆ ತಕ್ಕಂತೆ ನಡಿಯುವ ನುಡಿಯುವ ತಂಡವನ್ನು ಕಟ್ಟುವುದು ಅನಿವಾರ್ಯ. 10-20 ಸಾವಿರ ಬಂಡವಾಳದಲ್ಲಿ ಬಿಸಿನೆಸ್ ಆರಂಭಿಸಿ ಸಾಕಷ್ಟು ಹಣ ಗಳಿಸಿ..

ಬೆಸ್ಟ್ ಟೀಮ್ ಆಯ್ಕೆ ಮಾಡಿ
 

ಬೆಸ್ಟ್ ಟೀಮ್ ಆಯ್ಕೆ ಮಾಡಿ

ಟೀಮ್ ತಯಾರಿಸಿದರೆ ಮುಗಿಯಲಿಲ್ಲ. ದಿನ ಮಾಡಬೇಕಾದ ಕೆಲಸಕ್ಕೆ ಗು ರಿಮುಟ್ಟುವ ಸಾಹಸಕ್ಕೆ ಹುರಿದುಂಬಿಸುವುದು ಅತ್ಯಗತ್ಯ. ದಾರಿ ದೀಪದಂತೆ ಹೋಗುತ್ತಿರುವ ದಿಕ್ಕು ನೌಕೆಯ ನಾವಿಕನಂತೆ ಸರಿಯಾಗಿ ಇರುವಂತೆ ನೋಡಿಕೊಳ್ಳುವ ಜವಾಬ್ದಾರಿ ಉದ್ಯಮಿಯದ್ದು. ಇದಿಲ್ಲದೆ ತಂಡ ಬೇಗ ದಿಕ್ಕು ತಪ್ಪಿದಂತಾಗುತ್ತದೆ. ಶ್ರೇಷ್ಠ ಉದ್ಯಮಿ ತನ್ನ ತಂಡಕ್ಕೆ ಎಂದಿಗೂ ಹುರಿದುಂಬಿಸುವುದು ಬಿಡುವುದಿಲ್ಲ ಮತ್ತು ತಂಡಕ್ಕೆ ಬೆನ್ನೆಲುಬಾಗಿ ನಿಲ್ಲುವುದು ಮರೆಯುವುದಿಲ್ಲ.

ಸಹಪಾಠಿಗಳನ್ನು ಪ್ರೋತ್ಸಾಹಿಸಿ

ನಿಮ್ಮ ಟೀಮ್ ನ ಸಹಪಾಠಿಗಳನ್ನು ಹುರಿದುಂಬಿಸಬೇಕು. ತಂಡದ ಸದಸ್ಯರು ಮಾಡಿದ ಕೆಲಸಕ್ಕೆ ಶಭಾಷ್ ಹೇಳುವುದು, ತಪ್ಪಾಗಿದ್ದರೂ ಮಾಡಿದ ಪ್ರಯತ್ನ ಒಳ್ಳೆಯದು, ಹೇಗೆ ಮುಂದೆ ತಪ್ಪಾಗದಂತೆ ನೋಡಿಕೊಳ್ಳಬೇಕು ಅನ್ನುವ ದಾರಿ ತೋರಿಸಬೇಕು. ಇವೇಲ್ಲವೂ ಒಳ್ಳೆ ನಾಯಕನ ಲಕ್ಷಣಗಳು. ಇವಿಲ್ಲದೆ ತಂಡ ಬೇಗ ಬುಡ ಸಮೇತ ಕುಸಿದುಹೋಗುತ್ತದೆ.

ಗ್ರಾಹಕರ ಅಗತ್ಯ ಮುಖ್ಯ

ಉದ್ಯಮ ನಡೆಸುತ್ತ ಸಾಗುವಾಗ ಗ್ರಾಹಕ ಬಹು ಮುಖ್ಯ ಅನ್ನುವುದು ನೆನಪು ಇಟ್ಟುಕೊಳ್ಳಬೇಕು. ಗ್ರಾಹಕರಿಗಾಗಿ ಮಾಡುತ್ತಿರುವುದರಿಂದ ಗ್ರಾಹಕನ ಸೇವೆಯೇ ಅಂತಿಮ. ನಮ್ಮ ಸರಕು ಹಾಗು ಸೇವೆ ಗ್ರಾಹಕರಿಗೆ ಮೆಚ್ಚುಗೆ ಇದೆಯೋ ಇಲ್ಲವೋ ತಿಳಿದುಕೊಳ್ಳಲೇ ಬೇಕು ತಪ್ಪಿದ್ದರೆ ತಿದ್ದುಕೊಳ್ಳಲೇಬೇಕು. ಗ್ರಾಹಕನ ಬೇಕು ಬೇಡಗಳನ್ನೂ ಚೆನ್ನಾಗಿ ಅರಿತುಕೊಳ್ಳುವುದು ಶ್ರೇಷ್ಠ ಉದ್ಯಮಿಯ ಒಳಗುಣ. ಗ್ರಾಹಕನನ್ನ ಮನದಲ್ಲಿಟ್ಟುಕೊಂಡು ತಯಾರಿಸಿದ ಸರಕು ಹಾಗು ಸೇವೆ ಎಂದಿಗೂ ಅಸಫಲ ಆಗುವುದಿಲ್ಲ. ಇನ್ನೊಂದು ಯಶಸ್ಸಿನ ಗುಟ್ಟು ಏನೆಂದರೆ ಗ್ರಾಹಕನ ಬದಲಾಗುವ ರುಚಿಗಳನ್ನು ಕೂಡ ಒಬ್ಬ ಶ್ರೇಷ್ಠ ಉದ್ಯಮಿ ಮನದಟ್ಟು ಮಾಡಿಕೊಂಡಿರುತ್ತಾನೆ.

ಸರಕು ಹಾಗು ಗ್ರಾಹಕ

ಒಬ್ಬ ಗ್ರಾಹಕನ ಆಪೇಕ್ಷೆಗಿಂತ ಹೆಚ್ಚು ಸಮಾಧಾನ ತರುವಂತ ಸರಕು ಅಥವಾ ಸೇವೆ ಕೊಟ್ಟರೆ ಆ ಗ್ರಾಹಕ ತಾನು ಅಲ್ಲದೆ ತನಗೆ ಗೊತ್ತಿರುವ ಹತ್ಆರು ಜನರಿಗೆ ಪ್ರಚಾರ ಮಾಡುತ್ತಾನೆ. ಇದರಿಂದ ಉದ್ಯಮಿಗೆ ಖರ್ಚಿಲ್ಲದೆ ಶ್ರೇಷ್ಟ ಮಟ್ಟದ ವೈಯಕ್ತಿಕ ಪ್ರಚಾರ ಸಿಗುತ್ತದೆ. ಇದರ ಮೌಲ್ಯ ತೂಕ ಮಾಡಲು ಅಸಾಧ್ಯ. ಇದನ್ನು ಗಳಿಸುವ ಸಲುವಾಗಿ ಉದ್ಯಮಿ ಸದಾ ಪರಿಶ್ರಮಿಸಬೇಕು.

ಖರ್ಚುವೆಚ್ಚಗಳ ಮೇಲೆ ಹಿಡಿತ

ಯಶಸ್ವಿ ಉದ್ಯಮಿ ಆಗಬಯಸುವವರು ಪಾಲಿಸಲೇಬೇಕಾದ ಇನ್ನೊಂದು ನಿಯಮವೇನೆಂದರೆ ಖರ್ಚುವೆಚ್ಚಗಳ ನಿಯಂತ್ರಣ ಇಟ್ಟುಕೊಳ್ಳುವುದು. ಇಲ್ಲವಾದರೆ ಗಳಿಸುವುದೆಲ್ಲವನ್ನು ಧಾರೆ ಎರೆದು ದಾನ ಮಾಡಿದ ಹಾಗೆ ಆಗುತ್ತದೆ. ಲಾಭ ಮಾಡುವುದು ಉದ್ಯಮದ ಒಂದು ಗುರಿ. ಇದರಿಂದ ಉದ್ಯಮಿಗೆ ತನ್ನ ತಂಡಕ್ಕೆ ಎಲ್ಲರಿಗೂ ಒಂದು ಸಾಧನೆ ಮಾಡಿದ ಹಾಗೆ ಅನಿಸುತ್ತದೆ. ಲಾಭ ಇಲ್ಲದಲ್ಲಿ ಮಾಡಿದ ಕೆಲಸಕ್ಕೆ ತಕ್ಕ ಪ್ರತಿಫಲ ಸಿಗಂದಂತೆ ಭಾಸವಾಗುತ್ತದೆ ಹಾಗು ನಿರಾಶೆಗೆ ದಾರಿಯಾಗುತ್ತದೆ. ಇದು ಬಹಳ ಅಪಾಯಕಾರಿ ಹಾಗು ಉದ್ಯಮಕ್ಕೆ ಮತ್ತು ತಂಡದ ಬೆಳವಣಿಗೆಗೆ ಒಂದು ಮಾರಕ ಹೊಡೆತವಾಗುತ್ತದೆ.

ಲಾಭದಲ್ಲಿ ಹಂಚಿಕೆ

ಂದು ಉದ್ಯಮ ಲಾಭ ಕಂಡ ಮೇಲೆ ತನ್ನ ಲಾಭದಲ್ಲಿ ತನ್ನ ತಂಡದೊಡನೆ ಸರಿಯಾದ ಹಂಚುವಿಕೆ ಮಾಡಬೇಕು. ಇಲ್ಲದಲ್ಲಿ ತಂಡಕ್ಕೆ ಬೇರೆಯವರ ಬೆಳೆವಣಿಗೆಗೆ ದುಡಿದಂತೆ ತಮಗೆ ಏನು ದಕ್ಕದಂತೆ ಭಾಸವಾಗುತ್ತದೆ. ಉದ್ಯೋಗಿಗಳಿಗೆ ಬೋನಸ್ ಕೊಡಬಹುದು.

ಬಿಸಿನೆಸ್ ಬ್ರಾಂಡ್ ಆಗಿ

ಉದ್ಯಮಿ ಮಾಡುವ ಎಲ್ಲ ಕೆಲಸಗಳು ತನ್ನ ಒಂದು ವೈಯಕ್ತಿಕ ಬ್ರಾಂಡ್ ಇಮೇಜ್ ಅನ್ನು ಬೆಳೆಸಲು ಸಹಕಾರಿ. ಇದು ಬಹು ಮುಖ್ಯವಾದ ನಿಯಮ. ನಿಮ್ಮ ಉದ್ಯಮಕ್ಕೆ, ಸರಕುಗಳಿಗೆ ನೀವೇ ಬ್ರಾಂಡ್ ಆಗಿ ಹೊರಹೊಮ್ಮಬೇಕು. ಸರಕು ಅಥವಾ ಸೇವೆಗಳಿಗೆ ಬೇಡಿಕೆ ಇರಬೇಕಾದರೆ ಗ್ರಾಹಕರ ಮನದಲ್ಲಿ ಇವುಗಳಿಂದ ತನ್ನ ಬ್ರಾಂಡ್ ಹೆಚ್ಚುತ್ತದೆ ಅನ್ನುವ ಒಂದು ಭಾವನೆ ಬರಬೇಕು. ಆಗಲೇ ಉದ್ಯಮಿಯ ಸರಕು ಹಾಗು ಸೇವೆಗೆ ಕಾಲ ಮೀರಿದರೂ ಬೇಡಿಕೆಯಿರುತ್ತದೆ.

ಈ ಎಲ್ಲ ನಿಯಮಗಳನ್ನು ಮನವರಿಕೆಮಾಡಿಕೊಂಡು ನಿಮ್ಮ ಸ್ವಉದ್ಯಮದ ದಾರಿಯಲ್ಲಿ ಸಾಗಿ ನೀವೆಲ್ಲರೂ ಯಶಸ್ವಿಯಾಗುತ್ತೀರೆಂದು ಆಶಿಸುತ್ತೇವೆ. ನಿಮಗೆ ಇನ್ನೂ ಉದ್ಯಮದ ಕುರಿತು ಹೆಚ್ಚು ಪ್ರಶ್ನೆಗಳಿದ್ದರೆ ಕಾಮೆಂಟ್ಸ್ ಸೆಕ್ಷನ್ ಅಲ್ಲಿ ಬರೆಯಿರಿ.

 

Read more about: business money savings
English summary

Top 10 Rules for Successful Business

Starting a business in India is easy today. Availability of fund, a good business environment and willingness to start a business is major driving force behind it.
Story first published: Saturday, May 11, 2019, 10:21 [IST]
Company Search
Enter the first few characters of the company's name or the NSE symbol or BSE code and click 'Go'

Find IFSC

We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Goodreturns sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Goodreturns website. However, you can change your cookie settings at any time. Learn more