For Quick Alerts
ALLOW NOTIFICATIONS  
For Daily Alerts

ಮಕ್ಕಳ ಸುರಕ್ಷಿತ ಭವಿಷ್ಯಕ್ಕೆ ಟಾಪ್ 6 ವಿಮಾ ಯೋಜನೆ, ತಪ್ಪದೇ ಖರೀದಿಸಿ..

ಮಕ್ಕಳ ಉತ್ತಮ ಭವಿಷ್ಯಕ್ಕಾಗಿ ಹಣ ಕೂಡಿಡುವುದು ಇಂದು ಎಲ್ಲಕ್ಕಿಂತ ಹೆಚ್ಚು ಪ್ರಾಶಸ್ತ್ಯ ಪಡೆದುಕೊಂಡಿದೆ. ಪಾಲಕರಾದವರು ತಮ್ಮ ಮಕ್ಕಳ ಸುರಕ್ಷಿತ ಭವಿಷ್ಯಕ್ಕಾಗಿ ಬಹು ಬೇಗನೆಯೇ ಹಣ ಹೂಡಿಕೆ ಆರಂಭಿಸುವುದು ಅನಿವಾರ್ಯ.

|

ದುಡಿದ ಹಣದಲ್ಲಿ ಕೆಲ ಭಾಗವನ್ನು ಜೀವನದಲ್ಲಿನ ಭವಿಷ್ಯದ ಸುರಕ್ಷತೆಗಾಗಿ ಕೂಡಿಡುವುದು ಅಗತ್ಯವಾಗಿದೆ. ಯಾವುದೋ ಆಪತ್ತಿನ ಕಾಲದ ನೆರವಿಗಾಗಿ, ನಿವೃತ್ತಿ ಜೀವನದ ಸುರಕ್ಷತೆಗಾಗಿ ಅಥವಾ ಮಕ್ಕಳ ವಿದ್ಯಾಭ್ಯಾಸ, ಮದುವೆ ಹೀಗೆ ಹಲವಾರು ಕಾರಣಗಳಿಗಾಗಿ ಹಣವನ್ನು ಸೂಕ್ತ ರೀತಿಯಲ್ಲಿ ಹೂಡಿಕೆ ಮಾಡಬೇಕಾಗುತ್ತದೆ. ಅದರಲ್ಲೂ ಮಕ್ಕಳ ಉತ್ತಮ ಭವಿಷ್ಯಕ್ಕಾಗಿ ಹಣ ಕೂಡಿಡುವುದು ಇಂದು ಎಲ್ಲಕ್ಕಿಂತ ಹೆಚ್ಚು ಪ್ರಾಶಸ್ತ್ಯ ಪಡೆದುಕೊಂಡಿದೆ. ಪಾಲಕರಾದವರು ತಮ್ಮ ಮಕ್ಕಳ ಸುರಕ್ಷಿತ ಭವಿಷ್ಯಕ್ಕಾಗಿ ಬಹು ಬೇಗನೆಯೇ ಹಣ ಹೂಡಿಕೆ ಆರಂಭಿಸುವುದು ಅನಿವಾರ್ಯ.

 

ಮಕ್ಕಳ ಆರೋಗ್ಯ ಹಾಗೂ ವಿದ್ಯಾಭ್ಯಾಸದ ದೃಷ್ಟಿಯಿಂದ ಹಣ ತೊಡಗಿಸಿ ಅದು ಬೆಳೆಯುವಂತೆ ನೋಡಿಕೊಳ್ಳುವುದು ಜಾಣತನದ ಕ್ರಮವಾಗಿದೆ. ಆದರೆ ಯಾವುದೇ ಆರೋಗ್ಯ ವಿಮೆ ಅಥವಾ ವಿದ್ಯಾಭ್ಯಾಸಕ್ಕಾಗಿ ಹೂಡಿಕೆ ಯೋಜನೆಯನ್ನು ಆಯ್ದುಕೊಳ್ಳುವ ಮುನ್ನ ಅವುಗಳ ಕಂತು, ಹಣದುಬ್ಬರ, ಇಂದಿನ ಹಾಗೂ ಮುಂದೆ ಬರಬಹುದಾದ ವಿದ್ಯಾಭ್ಯಾಸದ ಖರ್ಚು, ವೈದ್ಯಕೀಯ ವೆಚ್ಚ ಹೀಗೆ ಹಲವಾರು ಅಂಶಗಳ ಬಗ್ಗೆ ಗಮನಹರಿಸಬೇಕಾಗುತ್ತದೆ. ಈ ಎಲ್ಲ ಅಂಶಗಳನ್ನು ಪರಿಗಣಿಸಿದ ನಂತರವಷ್ಟೆ ಉತ್ತಮ ಹೂಡಿಕೆ ಯೋಜನೆಯನ್ನು ಆರಿಸಿಕೊಳ್ಳಲು ಸಾಧ್ಯ.
ಪ್ರಸ್ತುತ ಮಕ್ಕಳಿಗಾಗಿ ಯಾವೆಲ್ಲ ಹೂಡಿಕೆ ಯೋಜನೆಗಳು ಉತ್ತಮವಾಗಿವೆ ಎಂಬ ಬಗ್ಗೆ ಇಲ್ಲಿ ತಿಳಿಸಲಾಗಿದ್ದು, ನೀವೂ ತಿಳಿದುಕೊಂಡು ಉತ್ತಮ ಯೋಜನೆಯನ್ನು ಆಯ್ದುಕೊಳ್ಳಿ.

ಮಕ್ಕಳಿಗಾಗಿ ಇರುವ ಅತ್ಯುತ್ತಮ ಹೂಡಿಕೆ ಯೋಜನೆಗಳ ಪಟ್ಟಿ ಇಲ್ಲಿ ನೀಡಲಾಗಿದೆ.

1. ಎಸ್‌ಬಿಐ ಲೈಫ್ - ಸ್ಮಾರ್ಟ್ ಸ್ಕಾಲರ್ (SBI Life - Smart Scholar)

1. ಎಸ್‌ಬಿಐ ಲೈಫ್ - ಸ್ಮಾರ್ಟ್ ಸ್ಕಾಲರ್ (SBI Life - Smart Scholar)

ಎಸ್‌ಬಿಐ ಲೈಫ್-ಸ್ಮಾರ್ಟ್ ಸ್ಕಾಲರ್ ಇದೊಂದು ಒಳಗೊಳ್ಳದ (ನಾನ್ ಪಾರ್ಟಿಸಿಪೇಟಿಂಗ್) ಯೂನಿಟ್ ಆಧರಿತ ವಿಮಾ ಯೋಜನೆ (ಯೂಲಿಪ್) ಆಗಿದೆ. ಈ ಯೋಜನೆ ನಿಮ್ಮ ಕುಟುಂಬಕ್ಕೆ ಎರಡು ರೀತಿಯಲ್ಲಿ ಹಣಕಾಸು ಭದ್ರತೆಯನ್ನು ನೀಡುತ್ತದೆ. ಮೂಲ ಅಶ್ಯೂರ್ಡ್ ಮೊತ್ತದ ಪಾವತಿ ಮತ್ತು ಇದರೊಳಗಿನ ಪ್ರೀಮಿಯಂ ಪಾವತಿಸುವಿಕೆ ಅಥವಾ ಪ್ರೀಮಿಯಂ ಪಾವತಿಸದೆಯೂ ವಿಮಾ ಯೋಜನೆ ಮುಂದುವರಿಯುವಂಥ ಸೌಲಭ್ಯಗಳು ಇದರಲ್ಲಿವೆ. ಮಾರ್ಕೆಟ್ ಲಿಂಕ್ಡ್ ರೆಂಟ್ ಹಾಗೂ ವಿಮಾ ಸೌಲಭ್ಯ ಹೀಗೆ ಎರಡು ರೀತಿಯಲ್ಲಿ ಇದು ಆದಾಯ ನೀಡಬಲ್ಲದು. ಇದರಲ್ಲಿ ಹೂಡಿಕೆ ಮಾಡುವ ಕನಿಷ್ಠ ವಯಸ್ಸು ಸೊನ್ನೆಯಿಂದ ಗರಿಷ್ಠ ವಯಸ್ಸು 17 ಆಗಿದೆ. 80ಸಿ ಪ್ರಕಾರ ತೆರಿಗೆ ವಿನಾಯಿತಿ ಸೌಲಭ್ಯವಿರುವುದು ಸ್ಮಾರ್ಟ್ ಸ್ಕಾಲರ್‌ನ ಮತ್ತೊಂದು ವೈಶಿಷ್ಟ್ಯವಾಗಿದೆ. ಒಂದೊಮ್ಮೆ ಅಕಾಲಿಕ ಮರಣ ಸಂಭವಿಸಿದಲ್ಲಿ ಸಮ್ ಅಶ್ಯೂರ್ಡ್‌ನ ಗರಿಷ್ಠ ಮೊತ್ತ ಅಥವಾ ಇಲ್ಲಿಯವರೆಗೆ ಪಾವತಿ ಮಾಡಲಾದ ಎಲ್ಲ ಪ್ರೀಮಿಯಂಗಳ ಶೇ.105 ರಷ್ಟು ಮೊತ್ತವನ್ನು ಏಕಗಂಟಿನಲ್ಲಿ ಪಡೆಯಬಹುದಾಗಿದೆ.

2. ಎಸ್‌ಬಿಐ ಲೈಫ್ - ಸ್ಮಾರ್ಟ್ ಚಾಂಪ್ ಇನ್ಸೂರೆನ್ಸ್ ಪ್ಲಾನ್ (SBI Life - Smart Champ Insurance Plan)
 

2. ಎಸ್‌ಬಿಐ ಲೈಫ್ - ಸ್ಮಾರ್ಟ್ ಚಾಂಪ್ ಇನ್ಸೂರೆನ್ಸ್ ಪ್ಲಾನ್ (SBI Life - Smart Champ Insurance Plan)

ಎಸ್‌ಬಿಐನ ಸ್ಮಾರ್ಟ್ ಚಾಂಪ್ ಇನ್ಸೂರೆನ್ಸ್ ಇದೊಂದು ವೈಯಕ್ತಿಕ ನಾನ್ ಲಿಂಕ್ಡ್, ಒಳಗೊಳ್ಳುವಿಕೆಯ ವಿಮಾ ಪಾಲಿಸಿಯಾಗಿದೆ. ಮಗುವಿನ ಭವಿಷ್ಯದ ವಿದ್ಯಾಭ್ಯಾಸದ ಖರ್ಚು ವೆಚ್ಚಗಳನ್ನು ನಿಭಾಯಿಸುವ ನಿಟ್ಟಿನಲ್ಲಿ ವಿಶೇಷವಾಗಿ ರೂಪಿಸಲಾದ ಹೂಡಿಕೆ ಯೋಜನೆ ಇದಾಗಿದೆ. ಪಾಲಿಸಿ ಜಾರಿಯಲ್ಲಿರುವ ಅವಧಿಯಲ್ಲಿ ನಿಯಮಿತವಾಗಿ ಆದಾಯ ನೀಡುವ ಹಾಗೂ ಪಾಲಿಸಿ ಕೊಂಡವರಿಗೆ ವಿಮಾ ಸುರಕ್ಷೆ ನೀಡುವ ಯೋಜನೆಯಾಗಿದೆ. ಪಾಲಿಸಿಯ ಅವಧಿಯುದ್ದಕ್ಕೂ ಪಾಲಿಸಿಧಾರಕನಿಗೆ ಜೀವ ವಿಮಾ ಸೌಲಭ್ಯವಿರುತ್ತದೆ ಹಾಗೂ ಅಪಘಾತದಲ್ಲಿ ಮರಣ ಸಂಭವಿಸಿದಲ್ಲಿ ಅಥವಾ ಶಾಶ್ವತ ಅಂಗವಿಕಲತೆ ಉಂಟಾದಲ್ಲಿ ವಿಮಾ ಮೊತ್ತವನ್ನು ಪಾವತಿ ಮಾಡಲಾಗುತ್ತದೆ. ಹಾಗೆಯೇ ಮಗುವಿಗೆ ೧೮ ವರ್ಷಗಳಾದ ನಂತರ ನಾಲ್ಕು ಸಮಾನ ಕಂತುಗಳಲ್ಲಿ ಸ್ಮಾರ್ಟ್ ಬೆನೆಫಿಟ್ ಹೆಸರಲ್ಲಿ ಮೊತ್ತಗಳನ್ನು ಪಾವತಿಸಲಾಗುತ್ತದೆ.

3. ಎಲ್‌ಐಸಿ - ಚೈಲ್ಡ್ ಕರಿಯರ್ ಪ್ಲಾನ್ (LIC - Child Career Plan)

3. ಎಲ್‌ಐಸಿ - ಚೈಲ್ಡ್ ಕರಿಯರ್ ಪ್ಲಾನ್ (LIC - Child Career Plan)

ಇತ್ತೀಚಿನ ದಿನಗಳಲ್ಲಿ ವಿಪರೀತವಾಗಿ ಹೆಚ್ಚಾಗುತ್ತಿರುವ ವಿದ್ಯಾಭ್ಯಾಸದ ಖರ್ಚು ವೆಚ್ಚಗಳನ್ನು ನಿಭಾಯಿಸಲು ಸಾಧ್ಯವಾಗುವಂತೆ ಚೈಲ್ಡ್ ಕರಿಯರ್ ಪ್ಲಾನ್ ರೂಪಿಸಲಾಗಿದೆ. ಪಾಲಿಸಿಯ ಅವಧಿಯಲ್ಲಿ ಮಾತ್ರವಲ್ಲದೆ ಹೆಚ್ಚುವರಿ ಅವಧಿಯಲ್ಲಿಯೂ ಸಹ ಮಗುವಿನ ಜೀವನಕ್ಕೆ ರಿಸ್ಕ್ ಕವರ್ ಅನ್ನು ಈ ಯೋಜನೆ ನೀಡುತ್ತದೆ. ಪಾಲಿಸಿಯ ಅವಧಿಯಲ್ಲಿ ನಿಯಮಿತವಾಗಿ ಆದಾಯ ಬರುತ್ತಿದ್ದು ಮಗುವಿಗೆ 18 ವರ್ಷ ಪೂರ್ಣಗೊಂಡ ನಂತರ ದೊಡ್ಡ ಮೊತ್ತದ ಏಕಗಂಟಿನ ಪಾವತಿ ಲಭಿಸುತ್ತದೆ. ವಾರ್ಷಿಕ, ಅರ್ಧ ವಾರ್ಷಿಕ, ತ್ರೈಮಾಸಿಕ ಅಥವಾ ಸಂಬಳದಲ್ಲಿ ಕಡಿತ ಮಾಡಿಸುವ ಮೂಲಕ ಸಹ ಈ ಯೋಜನೆಯ ಪ್ರೀಮಿಯಂ ಪಾವತಿಸಬಹುದು. ಪಾಲಿಸಿ ಅವಧಿಯೊಳಗೆ ಒಂದೇ ಬಾರಿಗೆ 6 ವರ್ಷ ಅಥವಾ 5 ವರ್ಷದ ಪ್ರೀಮಿಯಂ ಪಾವತಿಸಲು ಅವಕಾಶವಿದೆ.

4. ಎಲ್‌ಐಸಿ - ನ್ಯೂ ಚಿಲ್ಡ್ರನ್ಸ್ ಮನೀ ಬ್ಯಾಕ್ ಪ್ಲಾನ್ (LIC - New Children's Money Back Plan)

4. ಎಲ್‌ಐಸಿ - ನ್ಯೂ ಚಿಲ್ಡ್ರನ್ಸ್ ಮನೀ ಬ್ಯಾಕ್ ಪ್ಲಾನ್ (LIC - New Children's Money Back Plan)

ನ್ಯೂ ಚಿಲ್ಡ್ರನ್ಸ್ ಮನೀ ಬ್ಯಾಕ್ ಪ್ಲಾನ್ ಇದೊಂದು ಒಳಗೊಳ್ಳುವ ನಾನ್ ಲಿಂಕ್ಡ್ ಮನೀ ಬ್ಯಾಕ್ ಪ್ಲಾನ್ ಆಗಿದೆ. ಮಗುವಿನ ವಿದ್ಯಾಭ್ಯಾಸ, ವಿವಾಹ ಹಾಗೂ ಜೀವನದ ಸುಭದ್ರತೆ ಹೀಗೆ ಎಲ್ಲದಕ್ಕೂ ಭದ್ರತೆ ನೀಡುವಂತೆ ಈ ಯೋಜನೆಯನ್ನು ರೂಪಿಸಲಾಗಿದೆ. ಡೆತ್ ಬೆನೆಫಿಟ್ ಸೇರಿದಂತೆ ಸರ್ವೈವಲ್ ಬೆನೆಫಿಟ್ ಹಾಗೂ ಮ್ಯಾಚುರಿಟಿ ಬೆನೆಫಿಟ್‌ಗಳನ್ನು ಸಹ ಈ ಯೋಜನೆ ಒಳಗೊಂಡಿದೆ. ಪಾಲಿಸಿಧಾರಕನು ಯಾವುದೇ ಸಮಯದಲ್ಲಿ ಸರ್ವೈವಲ್ ಬೆನೆಫಿಟ್ ಅಥವಾ ಪಾಲಿಸಿ ಮುಗಿದ ನಂತರ ಸರ್ವೈವಲ್ ಬೆನೆಫಿಟ್ ಪಡೆದುಕೊಳ್ಳಬಹುದು. ಆದರೆ ಪಾಲಿಸಿ ಅವಧಿಯಲ್ಲಿಯೇ ಈ ಸೌಲಭ್ಯ ಪಡೆಯಲು ಸಾಧ್ಯ. ಈ ಯೋಜನೆಯಲ್ಲಿ ಎಲ್‌ಐಸಿಯ ಪ್ರೀಮಿಯಂ ವೇವರ್ ಬೆನೆಫಿಟ್ ರೈಡರ್ ಸೌಲಭ್ಯವಿದ್ದು, ಹೆಚ್ಚುವರಿ ಪ್ರೀಮಿಯಂ ಪಾವತಿಸುವುದರ ಮೂಲಕ 18 ರಿಂದ 55 ವರ್ಷದೊಳಗಿನ ಪ್ರಪೋಸರ್ ಈ ಹೆಚ್ಚುವರಿ ರೈಡರ್ ಖರೀದಿಸಬಹುದು.

5. ಐಸಿಐಸಿಐ ಪ್ರು ಸ್ಮಾರ್ಟ್ ಕಿಡ್ ರೆಗ್ಯೂಲರ್ ಪ್ರೀಮಿಯಂ (ICICI PruSmartKid's Regular Premium)

5. ಐಸಿಐಸಿಐ ಪ್ರು ಸ್ಮಾರ್ಟ್ ಕಿಡ್ ರೆಗ್ಯೂಲರ್ ಪ್ರೀಮಿಯಂ (ICICI PruSmartKid's Regular Premium)

ಇದೊಂದು ಒಳಗೊಳ್ಳುವಿಕೆಯ ಎಂಡೋಮೆಂಟ್ ರೆಗ್ಯೂಲರ್ ಪ್ರೀಮಿಯಂ ಪ್ಲಾನ್ ಆಗಿದೆ. ಇದರಲ್ಲಿ ಖಾತ್ರಿದಾಯಕ ವಿದ್ಯಾಭ್ಯಾಸ ಖರ್ಚು ಪಾವತಿ ಸೌಲಭ್ಯಗಳಿವೆ. ಒಂದೊಮ್ಮೆ ಪಾಲಿಸಿ ಮಾಡಿಸಿದ ಪಾಲಕರು ಅಕಾಲಿಕ ಮರಣಕ್ಕೆ ತುತ್ತಾದಲ್ಲಿ ಕಂಪನಿಯು ಸಮ್ ಅಶ್ಯೂರ್ಡ್ ಮೊತ್ತದಷ್ಟು ಏಕಗಂಟು ಪಾವತಿಸುವುದು ಹಾಗೂ ಭವಿಷ್ಯದ ಪ್ರೀಮಿಯಂ ಪಾವತಿಗಳನ್ನು ಸಹ ಕಂಪನಿ ಭರಿಸುವುದು. ಅಪಘಾತ ಮತ್ತು ಶಾಶ್ವತ ಅಂಗವಿಕಲತೆ ಉಂಟಾದ ಸಂದರ್ಭಗಳಲ್ಲಿ ಭದ್ರತೆಯನ್ನು ನೀಡುವ ಈ ಯೋಜನೆಯು ಮಗುವಿನ ಮುಖ್ಯ ಶೈಕ್ಷಣಿಕ ಖರ್ಚು ವೆಚ್ಚಗಳನ್ನು ಸಹ ಭರಿಸುವುದು. ಇದರಲ್ಲಿ ಹೆಚ್ಚುವರಿಯಾಗಿ ಎರಡು ರೈಡರ್‌ಗಳನ್ನು ಸಹ ಪಡೆದುಕೊಳ್ಳಬಹುದಾಗಿದೆ. ಇನಕಂ ಬೆನೆಫಿಟ್ ರೈಡರ್ ಹಾಗೂ ಅಪಘಾತ, ಶಾಶ್ವತ ಅಂಗವಿಕಲತೆ ರೈಡರ್ ಸೌಲಭ್ಯಗಳಿವೆ. ಭಾಗಶಃ ಮೊತ್ತ ಹಿಂಪಡೆಯುವ ಸೌಲಭ್ಯವಿದ್ದು, ಪಾಲಿಸಿಯ 15ನೇ ವರ್ಷದ ಕೊನೆಯಲ್ಲಿ ವಾರ್ಷಿಕ ಪ್ರೀಮಿಯಂನ ಶೇ.120 ರಿಂದ ಶೇ.170 ರಷ್ಟು ಮೊತ್ತವನ್ನು ನಿಮ್ಮ ಫಂಡ್‌ಗೆ ಸೇರಿಸಲಾಗುತ್ತದೆ.

6. ಎಚ್‌ಡಿಎಫ್‌ಸಿ ಎಸ್‌ಎಲ್ ಯಂಗಸ್ಟಾರ್ ಸೂಪರ್ ಪ್ರೀಮಿಯಂ (HDFC SL Youngstar Super Premium)

6. ಎಚ್‌ಡಿಎಫ್‌ಸಿ ಎಸ್‌ಎಲ್ ಯಂಗಸ್ಟಾರ್ ಸೂಪರ್ ಪ್ರೀಮಿಯಂ (HDFC SL Youngstar Super Premium)

ಯಂಗಸ್ಟಾರ್ ಸೂಪರ್ ಪ್ರೀಮಿಯಂ ಇದೊಂದು ಯೂನಿಟ್ ಆಧರಿತ ಜೀವ ವಿಮಾ ಸೌಲಭ್ಯದ ಯೋಜನೆಯಾಗಿದೆ. ನಿಮ್ಮ ಮಗುವಿಗೆ ಉತ್ತಮ ಹಣಕಾಸು ಭದ್ರತೆ ನೀಡುವುದರೊಂದಿಗೆ ಸೇವ್ ಬೆನೆಫಿಟ್ ಅಥವಾ ಸೇವ ಎನ್ ಗೇನ್ ಬೆನೆಫಿಟ್ ಎಂಬ ಎರಡು ರೀತಿಯ ಆಕರ್ಷಕ ಬೆನೆಫಿಟ್ ಪಾವತಿ ವಿಧಾನಗಳನ್ನು ಹೊಂದಿದೆ. ಇನಕಂ ಫಂಡ್, ಬ್ಯಾಲೆನ್ಸಡ್ ಫಂಡ್, ಬ್ಲ್ಯೂಚಿಪ್ ಫಂಡ್ ಹಾಗೂ ಅಪಾರ್ಚುನಿಟೀಸ್ ಫಂಡ್ ಹೀಗೆ ನಿಮ್ಮ ಅಗತ್ಯಕ್ಕೆ ತಕ್ಕಂತೆ ಯಾವುದಾದರೂ ಯೋಜನೆಯನ್ನು ಆಯ್ದುಕೊಳ್ಳುವ ಸೌಲಭ್ಯ ಈ ಯೋಜನೆಯಲ್ಲಿದೆ. ನಿಮ್ಮ ಮಕ್ಕಳಿಗಾಗಿ ಉತ್ತಮ ಉಳಿತಾಯ ಯೋಜನೆಗಳು ಇಲ್ಲಿವೆ..

Read more about: investments savings insurance money
English summary

Top 6 Child Investment Plans in India

Before you plan to buy a health insurance or education plan for your child, it is important that you consider aspects such as premium rate.
Story first published: Wednesday, May 8, 2019, 11:01 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X