For Quick Alerts
ALLOW NOTIFICATIONS  
For Daily Alerts

ಸಣ್ಣ ಅಂಗಡಿ ಮತ್ತು ಚಿಲ್ಲರೆ ವ್ಯಾಪಾರಿಗಳಿಗೆ 3,000 ಮಾಸಿಕ ಪಿಂಚಣಿ ಯೋಜನೆ, ಪಡೆಯುವುದು ಹೇಗೆ?

ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ನಡೆದ ಮೊದಲ ಕೇಂದ್ರ ಕ್ಯಾಬಿನೆಟ್ ಸಭೆಯಲ್ಲಿ, ಎಲ್ಲಾ ಸಣ್ಣ ಅಂಗಡಿಯವರು ಮತ್ತು ಚಿಲ್ಲರೆ ವ್ಯಾಪಾರಿಗಳಿಗೆ ತಿಂಗಳಿಗೆ ಕನಿಷ್ಠ ರೂ. 3,000 ಪಿಂಚಣಿ ನೀಡಲು ಮಹತ್ವದ ತೀರ್ಮಾನ ಕೈಗೊಳ್ಳಲಾಗಿದೆ.

|

ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ನಡೆದ ಮೊದಲ ಕೇಂದ್ರ ಕ್ಯಾಬಿನೆಟ್ ಸಭೆಯಲ್ಲಿ, ಎಲ್ಲಾ ಸಣ್ಣ ಅಂಗಡಿಯವರು ಮತ್ತು ಚಿಲ್ಲರೆ ವ್ಯಾಪಾರಿಗಳಿಗೆ ತಿಂಗಳಿಗೆ ಕನಿಷ್ಠ ರೂ. 3,000 ಪಿಂಚಣಿ ನೀಡಲು ಮಹತ್ವದ ತೀರ್ಮಾನ ಕೈಗೊಳ್ಳಲಾಗಿದೆ.

60 ವರ್ಷ ವಯಸ್ಸು ಮೀರಿದ ಸಣ್ಣ ವ್ಯಾಪಾರಿಗಳಿಗೆ ಮಾಸಿಕ ರೂ. 3,000 ಪಿಂಚಣಿ ನೀಡುವ ಯೋಜನೆ ಅನುಷ್ಠಾನಕ್ಕೆ ಸಂಪುಟ ಒಪ್ಪಿಗೆ ನೀಡಿದೆ.
ಕೇಂದ್ರ ಕ್ಯಾಬಿನೆಟ್ ಸಭೆಯ ಬಳಿಕ ಮಾತನಾಡಿದ ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್, 3 ವರ್ಷಗಳಲ್ಲಿ ರೂ. 5 ಕೋಟಿ ವ್ಯಾಪಾರಿಗಳು ಈ ಯೋಜನೆಯ ವ್ಯಾಪ್ತಿಗೆ ಸೇರುವ ನಿರೀಕ್ಷೆ ಇದೆ ಎಂದಿದ್ದಾರೆ.
ಈ ಹೊಸ ಮಾಸಿಕ ಪಿಂಚಣಿ ಯೋಜನೆಯು ನರೇಂದ್ರ ಮೋದಿಯವರ ಸಾರ್ವತ್ರಿಕ ಸಾಮಾಜಿಕ ಭದ್ರತಾ ಕಾರ್ಯಕ್ರಮದ ಒಂದು ಭಾಗವಾಗಿದೆ.

3,000 ಮಾಸಿಕ ಪಿಂಚಣಿ

3,000 ಮಾಸಿಕ ಪಿಂಚಣಿ

ಈ ಯೋಜನೆಯಡಿಯಲ್ಲಿ 60 ವರ್ಷ ವಯಸ್ಸಿಗೆ ತಲುಪಿದ ನಂತರ ಎಲ್ಲಾ ಅಂಗಡಿಯವರು, ಚಿಲ್ಲರೆ ವ್ಯಾಪಾರಿಗಳು ಮತ್ತು ಸ್ವಯಂ ಉದ್ಯೋಗಿಗಳು ಮಾಸಿಕ ಪಿಂಚಣಿ ಮೊತ್ತ ರೂ. 3,000 ಪಡೆದುಕೊಳ್ಳುತ್ತಾರೆ. 3 ಕೋಟಿಗೂ ಹೆಚ್ಚು ವ್ಯಾಪಾರಿಗಳು ಮತ್ತು ಅಂಗಡಿಯವರು ಇದರ ಲಾಭ ಪಡೆಯುವ ಗುರಿ ಇದೆ.

ಅರ್ಹತೆ

ಅರ್ಹತೆ

ಎಲ್ಲಾ ಸಣ್ಣ ಅಂಗಡಿಯವರು ಮತ್ತು ಸ್ವಯಂ ಉದ್ಯೋಗಿಗಳು ಮತ್ತು ರೂ. 1.5 ಕೋಟಿಗಿಂತ ಕಡಿಮೆ ಜಿಎಸ್ಟಿ ವಹಿವಾಟು ಹೊಂದಿರುವ ಚಿಲ್ಲರೆ ವ್ಯಾಪಾರಿಗಳು ಮತ್ತು 18-40 ವರ್ಷಗಳ ನಡುವಿನ ವಯಸ್ಸಿನವರು ಈ ಯೋಜನೆಗೆ ಸೇರಿಕೊಳ್ಳಬಹುದು.

ದಾಖಲಾತಿ

ದಾಖಲಾತಿ

ಈ ಯೋಜನೆಯನ್ನು ಪಡೆಯಲು ಕನಿಷ್ಠ ದಾಖಲಾತಿಯು ಅಗತ್ಯವಾಗಿರುತ್ತದೆ. ಪಿಂಚಣಿ ಯೋಜನೆಗೆ ಸೇರ್ಪಡೆಗೊಳ್ಳಲು ಫಲಾನುಭವಿಗಳು 12 ಅಂಕಿಯ ಆಧಾರ್ ಕಾರ್ಡ್ ಸಂಖ್ಯೆ ಮತ್ತು ಬ್ಯಾಂಕ್ ಖಾತೆ ವಿವರಗಳು ಬೇಕಾಗುತ್ತವೆ. ದೇಶಾದ್ಯಂತ ಇರುವ 3.25 ಲಕ್ಷ ಸಾಮಾನ್ಯ ಸೇವಾ ಕೇಂದ್ರಗಳ ಮೂಲಕ ಜನರನ್ನು ಸೇರಿಸಿಕೊಳ್ಳಬಹುದು.

50:50 ಕೊಡುಗೆ

50:50 ಕೊಡುಗೆ

ಹೊಸ ಯೋಜನೆ 50:50 ಆಧಾರದ ಮೇಲೆ ಸ್ವಯಂಪ್ರೇರಿತ ಮತ್ತು ಕೊಡುಗೆ ಪಿಂಚಣಿ ಯೋಜನೆಯಾಗಿದೆ. ಇಲ್ಲಿ ಫಲಾನುಭವಿಗಳು ನಿಶ್ಚಿತ ವಯಸ್ಸಿಗೆ ನಿರ್ದಿಷ್ಟ ಕೊಡುಗೆ ನೀಡಬೇಕು. ಫಲಾನುಭವಿಗಳು ಪಾವತಿಸುವಷ್ಟು ಮೊತ್ತವನ್ನು/ಕೊಡುಗೆಯನ್ನು ಕೇಂದ್ರ ಸರಕಾರವು ಭರಿಸುತ್ತದೆ.
ಉದಾಹರಣೆಗೆ ಒಬ್ಬ ವ್ಯಕ್ತಿಯು ತಿಂಗಳಿಗೆ ರೂ. 100 ಕೊಡುಗೆ ನೀಡಿದರೆ, ಕೇಂದ್ರ ಸರಕಾರ ಪ್ರತಿ ತಿಂಗಳು ಚಂದಾದಾರರ ಪಿಂಚಣಿ ಖಾತೆಗೆ ಸಬ್ಸಿಡಿಯ ರೂಪದಲ್ಲಿ ರೂ. 100 ಕೊಡುಗೆ ನೀಡುತ್ತದೆ. ಪ್ರಧಾನ ಮಂತ್ರಿ ಶ್ರಮ ಯೋಗಿ ಮಾನ್ ಧನ್ ಯೋಜನೆ: ತಿಂಗಳಿಗೆ 55 ಹೂಡಿಕೆ ಮಾಡಿ ಮಾಸಿಕ ಪಿಂಚಣಿ 3000 ಪಡೆಯುವುದು ಹೇಗೆ?

English summary

₹3,000 monthly pension for kirana shopkeepers, traders

The newly-inducted Union Cabinet, in its first meeting, approved a mega pension scheme to provide a minimum assured pension of ₹3000 per month to all small shopkeepers and retail traders.
Story first published: Tuesday, June 4, 2019, 15:39 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X