For Quick Alerts
ALLOW NOTIFICATIONS  
For Daily Alerts

ಪ್ರಧಾನ ಮಂತ್ರಿ ಶ್ರಮ ಯೋಗಿ ಮಾನ್ ಧನ್ ಯೋಜನೆ: ತಿಂಗಳಿಗೆ 55 ಹೂಡಿಕೆ ಮಾಡಿ ಮಾಸಿಕ ಪಿಂಚಣಿ 3000 ಪಡೆಯುವುದು ಹೇಗೆ?

ಅಸಂಘಟಿತ ವಲಯದ ಕಾರ್ಮಿಕರಿಗಾಗಿ ಬಿಜೆಪಿ ಸರ್ಕಾರದ ಕೊನೆಯ ಮಧ್ಯಂತರ ಬಜೆಟ್ ನಲ್ಲಿ ಪಿಯೂಷ್ ಗೋಯಲ್ ಪ್ರಧಾನ ಮಂತ್ರಿ ಶ್ರಮ ಮಾನ್ ಧನ್ ಯೋಜನೆ ಘೋಷಿಸಿದ್ದಾರೆ.

|

ಅಸಂಘಟಿತ ವಲಯದ ಕಾರ್ಮಿಕರಿಗಾಗಿ ಬಿಜೆಪಿ ಸರ್ಕಾರದ ಕೊನೆಯ ಮಧ್ಯಂತರ ಬಜೆಟ್ ನಲ್ಲಿ ಪಿಯೂಷ್ ಗೋಯಲ್ ಪ್ರಧಾನ ಮಂತ್ರಿ ಶ್ರಮ ಮಾನ್ ಧನ್ ಯೋಜನೆ ಘೋಷಿಸಿದ್ದಾರೆ. ಇದು ಅಸಂಘಟಿತ ವಲಯದ ಜನರಿಗೆ ಆರ್ಥಿಕ ಭದ್ರತೆಯನ್ನು ಒದಗಿಸುವ ಗುರಿ ಹೊಂದಿದ್ದು, ನಿರ್ದಿಷ್ಟ ವಯಸ್ಸು ತಲುಪಿದ ನಂತರ ಅಸಂಘಟಿತ ವಲಯದ ಕಾರ್ಮಿಕರಿಗೆ ಕೇಂದ್ರ ಸರಕಾರ ಪಿಂಚಣಿ ನೀಡುತ್ತದೆ. ಪ್ರಧಾನ ಮಂತ್ರಿ ಶ್ರಮ ಯೋಗಿ ಮಾನ್‌ ಧನ್ ಯೋಜನೆಯನ್ನು ಲೈಫ್ ಇನ್ಶೂರೆನ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ (ಎಲ್ಐಸಿ) ಮೂಲಕ ಜಾರಿಗೆ ತರಲಾಗುತ್ತಿದೆ. ಐಆರ್ಡಿಎಐ ಈವರೆಗೂ ಮೊದಲ ವರ್ಷದ ಬಡ್ಡಿ ದರದ ಬಗ್ಗೆ ಅಧಿಕೃತ ಘೋಷಣೆ ಮಾಡಿಲ್ಲ. ಅಟಲ್ ಪಿಂಚಣಿ ಯೋಜನೆ(APY) ಮಾಡಿಸುವುದು ಹೇಗೆ?

 

ಯೋಜನೆಗೆ ಯಾರು ಅರ್ಹರು?

ಯೋಜನೆಗೆ ಯಾರು ಅರ್ಹರು?

- ತಿಂಗಳಿಗೆ ರೂ. 15,000ವರೆಗೆ ಗಳಿಸುವ ಅಸಂಘಟಿತ ವಲಯದ ಕಾರ್ಮಿಕರು
- 18 ಮತ್ತು 40 ವರ್ಷ ವಯಸ್ಸಿನ ಉದ್ಯೋಗಿಗಳು ಅರ್ಜಿ ಸಲ್ಲಿಸಬಹುದು.
- 60 ವರ್ಷ ವಯಸ್ಸಿನ ನಂತರ 3,000 ರೂ. ಮಾಸಿಕ ಪಿಂಚಣಿ ಪಡೆಯುತ್ತಾರೆ
- ಮಾಸಿಕ ಕೊಡುಗೆ ಮೊತ್ತವನ್ನು ವಯಸ್ಸಿನ ಆಧಾರದ ಮೇಲೆ 60 ವಯಸ್ಸಿನವರೆಗೆ ಪಾವತಿಸಬೇಕು. - ಗೃಹಾಧಾರಿತ ಕಾರ್ಮಿಕರು, ಬೀದಿ ಮಾರಾಟಗಾರರು, ಮಿಡ್ ಡೇ ಮೀಲ್ ಕಾರ್ಮಿಕರು, ಹೆಡ್ ಲೋಡರ್, ಇಟ್ಟಿಗೆ ಕೆಲಸಗಾರರು, ಚಮ್ಮಾರರು,ಸ್ಥಳೀಯ ಕಾರ್ಮಿಕರು, ಬಟ್ಟೆ ತೊಳೆಯುವವರು, ರಿಕ್ಷಾ, ಭೂಮಿರಹಿತ ಕಾರ್ಮಿಕರು, ಕೃಷಿ ಕಾರ್ಮಿಕರು, ಕಟ್ಟಡ ನಿರ್ಮಾಣ ಕಾರ್ಮಿಕರು, ಬೀಡಿ ಕಾರ್ಮಿಕರು, ಕೈಮಗ್ಗ ಕಾರ್ಮಿಕರು, ಚರ್ಮದ ಕೆಲಸಗಾರರು, ಆಡಿಯೋ-ದೃಶ್ಯ ಕೆಲಸಗಾರರು ಮತ್ತು ಇದೇ ರೀತಿಯ ಇತರ ತೊಡಗಿರುವ ಅಸಂಘಟಿತ ಕಾರ್ಮಿಕರು.

ವಯಸ್ಸು ಆಧಾರಿತ ಪಿಂಚಣಿ

ವಯಸ್ಸು ಆಧಾರಿತ ಪಿಂಚಣಿ

ಒಂದು ಜೀವನ ಮಾದರಿಯ ಮೂಲಕ ನೋಡೋಣ. ಅಧಿಸೂಚನೆಯ ಪ್ರಕಾರ, 30 ರ ವಯಸ್ಸಿನವರು ತಿಂಗಳಿಗೆ 105 ರೂಪಾಯಿ 60 ರ ವರೆಗೆ ಪಾವತಿಸಬೇಕಾಗುತ್ತದೆ. ಒಟ್ಟಾರೆಯಾಗಿ, ವ್ಯಕ್ತಿಯು ರೂ. 37,800 (105x12=1260, 1260x30=37,800) ಹಣ ಪಾವತಿಸಿದರೆ ಅಷ್ಟೇ ಮೊತ್ತವನ್ನು ಸರ್ಕಾರ ಭರಿಸಲಿದೆ. ಅಸಂಘಟಿತ ವಲಯದ ಕಾರ್ಮಿಕರು ತಮ್ಮ ನೆರೆಹೊರೆಯಲ್ಲಿ ಈ ಯೋಜನೆಯನ್ನು ಲಾಭ ಪಡೆಯಲು ಮಾಹಿತಿ ನೀಡಬಹುದು. ಅಟಲ್ ಪಿಂಚಣಿ ಯೋಜನೆ ಮಾಡಿಸಿ, ತಿಂಗಳಿಗೆ 5000 ಪಡೆಯೋದು ಹೇಗೆ?

ರೂ. 55 ಮಾಸಿಕ ಕೊಡುಗೆ
 

ರೂ. 55 ಮಾಸಿಕ ಕೊಡುಗೆ

18 ರಿಂದ 40 ವರ್ಷ ವಯಸ್ಸಿನೊಳಗಿನ ಜನರು ಈ ಯೋಜನೆಗೆ ಅರ್ಜಿ ಸಲ್ಲಿಸಬಹುದು. ಈ ಯೋಜನೆಯಲ್ಲಿ ಅರ್ಜಿ ಸಲ್ಲಿಸುವಾಗ ಕಾರ್ಮಿಕರು ಆಧಾರ್ ಕಾರ್ಡ್ ಮತ್ತು ಉಳಿತಾಯ ಬ್ಯಾಂಕ್ ಖಾತೆ ಹೊಂದಿರಬೇಕಾಗುತ್ತದೆ. ಚಂದಾದಾರರು 18 ವರ್ಷ ವಯಸ್ಸಿನಲ್ಲಿ ಈ ಯೋಜನೆಗೆ ಪ್ರವೇಶಿಸಿ, ರೂ. 55 ರ ಮಾಸಿಕ ಕೊಡುಗೆ ಪಾವತಿಸುತ್ತಾ ಹೋದರೆ ಅವನು ಅಥವಾ ಅವಳು ನಿವೃತ್ತಿಯ ಮಾಸಿಕ ಪಿಂಚಣಿಯಾಗಿ ರೂ. 3,000 ಪಡೆಯಬಹುದು. ಖಾತೆಗೆ ಪಿಂಚಣಿದಾರರು ಪಾವತಿಸುವಷ್ಟೇ ಮೊತ್ತವನ್ನು ಸರ್ಕಾರ ಪಾವತಿಸುತ್ತದೆ.

ವೈಶಿಷ್ಟ್ಯ, ಅರ್ಹತೆ ಮತ್ತು ಅನುಕೂಲ

ವೈಶಿಷ್ಟ್ಯ, ಅರ್ಹತೆ ಮತ್ತು ಅನುಕೂಲ

ಇದು ಸ್ವಯಂಪ್ರೇರಿತ ಮತ್ತು ಕೊಡುಗೆ ಪಿಂಚಣಿ ಯೋಜನೆಯಾಗಿದೆ. ಪಿಂಚಣಿ ಸ್ವೀಕೃತಿಯ ಸಂದರ್ಭದಲ್ಲಿ, ಚಂದಾದಾರರು ತೀರಿಕೊಂಡರೆ ಫಲಾನುಭವಿಗಳ ಸಂಗಾತಿಯು ಕುಟುಂಬದ ಸದಸ್ಯರಾಗಿ ಫಲಾನುಭವಿ ಪಡೆಯುವ 50% ಪಿಂಚಣಿ ಸ್ವೀಕರಿಸಲು ಅರ್ಹರಾಗಿರುತ್ತಾರೆ. ಕುಟುಂಬದ ಪಿಂಚಣಿ ಸಂಗಾತಿಗೆ ಮಾತ್ರ ಅನ್ವಯಿಸುತ್ತದೆ ಎಂದು ಗಮನಿಸಬಹುದು.
ಒಬ್ಬ ಫಲಾನುಭವಿ ನಿಯಮಿತ ಕೊಡುಗೆ ನೀಡುತ್ತಿದ್ದು, ಯಾವುದೇ ಕಾರಣದಿಂದಾಗಿ ಅಂದರೆ 60 ವರ್ಷಕ್ಕೆ ಮುಂಚಿತವಾಗಿ ಮರಣಿಸಿದರೆ, ಅವನ / ಅವಳ ಸಂಗಾತಿಯು ನಿಯಮಿತ ಕೊಡುಗೆಗಳನ್ನು ಪಾವತಿಸುವ ಮೂಲಕ ಯೋಜನೆಗೆ ಸೇರಲು ಅಥವಾ ಮುಂದುವರಿಸಲು ಅರ್ಹರಾಗಿರುತ್ತಾರೆ. (Source: labour.gov.in/pm-sym)

ಸ್ವಯಂ ಪಾವತಿ (auto-debit)

ಸ್ವಯಂ ಪಾವತಿ (auto-debit)

PM-SYM ಯೋಜನೆಯ ಚಂದಾದಾರರು ಕೊಡುಗೆಗಳನ್ನು ತನ್ನ ಉಳಿತಾಯ ಬ್ಯಾಂಕ್ ಖಾತೆಯಿಂದ ಅಥವಾ ಜನ್ ಧನ್ ಖಾತೆಯಿಂದ 'ಸ್ವಯಂ-ಡೆಬಿಟ್' ಸೌಲಭ್ಯದ ಮೂಲಕ ಪಾವತಿ ಮಾಡಬೇಕಾಗುತ್ತದೆ. ಸೇರಿದ ವಯಸ್ಸಿನಿಂದ 60 ವರ್ಷ ವಯಸ್ಸಿನವರೆಗೂ ನಿಗದಿತ ಮೊತ್ತವನ್ನು ಚಂದಾದಾರರು ಪಾವತಿಸುತ್ತಾ ಹೋಗಬೇಕಾಗುತ್ತದೆ.

ಸರ್ಕಾರದ ಸಮಾನ ಕೊಡುಗೆ

ಸರ್ಕಾರದ ಸಮಾನ ಕೊಡುಗೆ

ಈ ಯೋಜನೆ ಇನ್ನೊಂದು ವಿಶೇಷತೆಯೆಂದರೆ ಫಲಾನುಭವಿ ಕೊಡುಗೆ ಜೊತೆಗೆ ಸಮಾನ ಪ್ರಮಾಣದ ಮೊತ್ತವನ್ನು ಕೇಂದ್ರ ಸರ್ಕಾರವು ನೀಡುತ್ತದೆ. ಉದಾಹರಣೆಗೆ, ಫಲಾನುಭವಿಯು ತನ್ನ 20 ವರ್ಷ ವಯಸ್ಸಿನಲ್ಲಿ ಈ ಯೋಜನೆಯನ್ನು ಪಾರಂಭಿಸಿದರೆ, ಅವನು ಅಥವಾ ಅವಳು 60 ವರ್ಷ ವಯಸ್ಸಿನವರೆಗೆ ತಿಂಗಳಿಗೆ ರೂ. 61 ಹಣವನ್ನು ನೀಡಬೇಕಾಗಿರುತ್ತದೆ. ಕೇಂದ್ರ ಸರ್ಕಾರ ಕೂಡ ಇಷ್ಟೇ ಪ್ರಮಾಣದ ಸಮಾನ ಮೊತ್ತವನ್ನು ರೂ. 61 ಪ್ರತಿ ತಿಂಗಳು ಭರಿಸುತ್ತದೆ. ಆದ್ದರಿಂದ, ಒಂದು ತಿಂಗಳಲ್ಲಿ ಪ್ರತಿ ವ್ಯಕ್ತಿಯ ಒಟ್ಟು ಕೊಡುಗೆ ರೂ. 122 ಆಗಿರುತ್ತದೆ.

ಒಂದು ವೇಳೆ ಚಂದಾದಾರರು ನಿರಂತರವಾಗಿ ಕೊಡುಗೆ ನೀಡಲು ವಿಫಲವಾದರೆ, ಪಾವತಿಸಬೇಕಾಗುವ ಒಟ್ಟಾರೆ ಮೊತ್ತವನ್ನು ಪೆನಾಲ್ಟಿ ಶುಲ್ಕದೊಂದಿಗೆ ಪಾವತಿಸುವ ಮೂಲಕ ಕ್ರಮಬದ್ಧಗೊಳಿಸಬಹುದು.

 

ಕನಿಷ್ಠ 3,000 ಪಿಂಚಣಿ

ಕನಿಷ್ಠ 3,000 ಪಿಂಚಣಿ

http://pmjandhanyojana.co.in ಪ್ರಕಾರ, ಈ ಯೋಜನೆ ಪ್ರಾಥಮಿಕವಾಗಿ ಅಸಂಘಟಿತ ವಲಯದ ಕಾರ್ಮಿಕರ ಪಿಂಚಣಿ ಯೋಜನೆಯಾಗಿದೆ ಎಂದು ಗಮನಿಸಬಹುದು. 2016 ರ ಫೆಬ್ರವರಿಯಲ್ಲಿ ಪಿಯೂಶ್ ಗೋಯಲ್ ಸಂಘಟಿತ ಮತ್ತು ಅಸಂಘಟಿತ ಕ್ಷೇತ್ರದ ಕಾರ್ಮಿಕರ ಉದ್ದೇಶಿತ ಫಲಾನುಭವಿಗಳಾಗಿ ಈ ಯೋಜನೆಯನ್ನು ಪ್ರಾರಂಭಿಸಿದರು. ಈ ಯೋಜನೆಯು ಅಸಂಘಟಿತ ವಲಯದ ಕಾರ್ಮಿಕರಿಗೆ ಕನಿಷ್ಠ ರೂ. 3,000 ಪಿಂಚಣಿ ಒದಗಿಸುತ್ತದೆ. ಮಾತೃಶ್ರೀ ಯೋಜನೆ: ರೂ. 12 ಸಾವಿರ ಸಹಾಯಧನ ಪಡೆಯಲು ಅರ್ಜಿ ಸಲ್ಲಿಸುವುದು ಹೇಗೆ?

English summary

Pradhan Mantri Shram yogi Mandhan yojana: How to get a monthly pension 3000 per month investing 55?

With an aim to provide financial security to the people working in the unorganized sector, there is a government scheme called 'Pradhan Mantri Shram yogi Mandhan yojana (PM-SYM)'.
Story first published: Tuesday, June 4, 2019, 10:59 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X