ಭವಿಷ್ಯದ ಬಗ್ಗೆ ಯೋಚಿಸಿ; ಆರೋಗ್ಯ ವಿಮೆ ಸ್ವಾವಲಂಬನೆ ಬಗ್ಗೆ ನಿರ್ಧರಿಸಿ

ಮಕ್ಕಳ ಶಿಕ್ಷಣ, ಸ್ವಂತ ಹಾಗೂ ಅವಲಂಬಿತರ ಆರೋಗ್ಯ ತುರ್ತು ಸಂದರ್ಭಗಳು ಎದುರಾದರೆ ಏನು ಮಾಡಬೇಕು ಎಂಬುದು ಈ ದೇಶದಲ್ಲಿನ ಹತ್ತಕ್ಕೆ ಒಂಬತ್ತು ಮಂದಿಯ ಚಿಂತೆಯಾಗಿರುತ್ತದೆ. ಅಯ್ಯೋ, ಈಗಿರುವ ಕೆಲಸದಿಂದ ತೆಗೆದುಹಾಕಿದರೆ ಏನು ಮಾಡಬೇಕು? ಇದು ಕೂಡ ಚಿಂತೆಯೇ. ಸಾಮಾಜಿಕ ಭದ್ರತೆ (ಸೋಶಿಯಲ್ ಸೆಕ್ಯೂರಿಟಿ) ಎಂಬುದು ಎಲ್ಲರ ಪಾಲಿನ ಅಗತ್ಯ.

ಈ ಭದ್ರತೆಯನ್ನು ಅವಶ್ಯಕತೆಗೆ ತಕ್ಕಂತೆ ನಾವೇ ಮಾಡಿಕೊಳ್ಳಬಹುದು. ಉಳಿತಾಯ ಯೋಜನೆಗಳು ಹಿಂದಿನ ದಿನಗಳಲ್ಲಿದ್ದಂತೆ ಆಕರ್ಷಣೀಯವಾಗಿ ಇಲ್ಲ. ಉಳಿತಾಯ ಶೈಲಿಯಿಂದ ಜೀವನವು ಕೊಳ್ಳುಬಾಕತನದತ್ತ ವಾಲಿಕೊಂಡು ದಶಕಗಳೇ ಆಗಿ, ಸಾಮಾನ್ಯರ ಬವಣೆ ತಪ್ಪಿಲ್ಲ.

ಕೊಳ್ಳುಬಾಕತನದ ಕಾರಣ ಸೇವಿಂಗ್ಸ್ ಯೋಜನೆಗಳು ಪಕ್ಕಕ್ಕೆ ಸರಿದವು, ಮಾರ್ಕೆಟಿಂಗ್ ಯೋಜನೆಗಳು ತಾಂಡವವಾಡುತ್ತಿವೆ. ಭಾರತೀಯ ರಿಸರ್ವ್ ಬ್ಯಾಂಕ್ ತನ್ನ ಕ್ರೆಡಿಟ್ ಪಾಲಿಸಿಯಲ್ಲಿ ಬ್ಯಾಂಕ್ ಬಡ್ಡಿದರವನ್ನು ಕಡಿತಗೊಳಿಸುತ್ತಿರುವುದು, ಪಿಂಚಣಿ ವ್ಯವಸ್ಥೆ ಮಾಯವಾಗಿರುವ ಈಗಿನ ದಿನಗಳಲ್ಲಿ ತಮ್ಮ ಮಾಸಿಕ ಅಗತ್ಯಕ್ಕೆ ಬೇಕಾದ ಹಣವನ್ನು ಒದಗಿಸಿಕೊಳ್ಳುವುದು ನಿವೃತ್ತರಿಗೂ, ವೃದ್ಧರಿಗೂ, ಬ್ಯಾಂಕ್ ಬಡ್ಡಿಯನ್ನೇ ಆಧರಿಸಿದ ಅವಲಂಬಿತರಿಗೂ ಕಠಿಣವಾಗಿದೆ.

ಭವಿಷ್ಯದ ಬಗ್ಗೆ ಯೋಚಿಸಿ; ಆರೋಗ್ಯ ವಿಮೆ ಸ್ವಾವಲಂಬನೆ ಬಗ್ಗೆ ನಿರ್ಧರಿಸಿ

ಈ ಕಾರಣದಿಂದ ಬ್ಯಾಂಕೇತರ ಖಾಸಗಿ ಯೋಜನೆಗಳ ಮೂಲಕ ಹೆಚ್ಚಿನ ಆದಾಯ ಗಳಿಸುವ ಪ್ರಯತ್ನವನ್ನು ಮಾಡುವ ಅನಿವಾರ್ಯ ಉಂಟಾಗಿದೆ. ಈ ಅನಿವಾರ್ಯದಿಂದಾಗಿ ಅನೇಕ 'ಪೊಂಜಿ ಯೋಜನೆ'ಗಳು ತಲೆ ಎತ್ತುವಂತೆ ಆಗಿದೆ. ಇತ್ತೀಚಿನ ಐಎಂಎ ಜ್ಯುವೆಲ್ಲರ್ಸ್, ಹಿಂದಿನ ವರ್ಷದ ಅಂಬಿಡೆಂಟ್ ಮಾರ್ಕೆಟಿಂಗ್, ಅದರ ಹಿಂದೆ ವಿಕ್ರಂ ಇನ್ವೆಸ್ಟ್ ಮೆಂಟ್, ವಿನಿವಿಂಕ್ ಮುಂತಾದ ಹತ್ತಾರು ಸಂಸ್ಥೆಗಳಲ್ಲಿ ಹೂಡಿಕೆ ಮಾಡಿದ್ದವರು ಮೋಸ ಹೋಗಿದ್ದಾರೆ.

ಇಎಂಐಗಳನ್ನು ನಿಭಾಯಿಸವುದು ಕಠಿಣವಾಗಿದೆ
ಹೊರನೋಟಕ್ಕೆ ದೇಶವು ಪ್ರಗತಿಯ ನಾಗಾಲೋಟದಲ್ಲಿ ಸಾಗಿದೆಯಾದರೂ ಆಂತರಿಕವಾಗಿ ಜನಸಾಮಾನ್ಯರ ಬವಣೆ ಹೇಳತೀರದು. ವೃತ್ತಿಪರರು ತಾವು ಕಟ್ಟಬೇಕಾದ ಇಎಂಐಗಳನ್ನು ನಿಭಾಯಿಸವುದು ಕಠಿಣವಾಗಿದೆ. ಸಾಮಾಜಿಕ ಭದ್ರತೆಗಾಗಿ ತೆಗೆದುಕೊಂಡಿರುವ ಜೀವ ವಿಮಾ ಪಾಲಿಸಿ, ಅರೋಗ್ಯ ವಿಮೆಗಳ ಪ್ರೀಮಿಯಂ ಪದೇ ಪದೇ ಏರಿಕೆ ಮಾಡಲಾಗುತ್ತಿದೆ. ಅದು ಯಾವ ಮಟ್ಟದಲ್ಲಿ ಏರಿಕೆ ಕಾಣುತ್ತಿವೆ ಎಂದರೆ 2017-18 ರಲ್ಲಿ ರು.7,000 ದಷ್ಟಿದ್ದಂತಹ ಅರೋಗ್ಯ ವಿಮಾ ಪ್ರೀಮಿಯಂ 2018-19ರಲ್ಲಿ ರು.11,500ಕ್ಕೆ ಏರಿಕೆ ಕಂಡಿದೆ.

ಈ ರೀತಿಯ ಅಸಹಜ ಏರಿಕೆಯನ್ನು ಮಾಡಿದ ವಿಮಾ ಕಂಪೆನಿಗಳೂ ವ್ಯವಹಾರಿಕತೆ ಹಾದಿಯಲ್ಲಿ ಸಾಗಿವೆ ಮತ್ತು ನಾಗರಿಕರ ಅನಿವಾರ್ಯವನ್ನು ತಮ್ಮ ಅನುಕೂಲಕ್ಕೆ ಬಳಸಿಕೊಂಡು ಹಿಂಸಿಸುತ್ತಿವೆ. ಈಗಿನ ಷೇರುಪೇಟೆಯಲ್ಲಿ ದಿ ನ್ಯೂ ಇಂಡಿಯಾ ಅಶುರನ್ಸ್ ಕಂಪೆನಿ 2017ರಲ್ಲಿ ಪ್ರತಿ ಷೇರಿಗೆ ರು.800 ರಂತೆ, ಜನರಲ್ ಇನ್ಷೂರೆನ್ಸ್ ಕಾರ್ಪೊರೇಷನ್ 2017ರಲ್ಲಿ ಪ್ರತಿ ಷೇರಿಗೆ ರು.912ರಂತೆ ಐಪಿಒ ಮೂಲಕ ಷೇರು ವಿತರಿಸಿದವು.

1:1ರ ಬೋನಸ್ ಷೇರು ವಿತರಿಸಿದ ನಂತರ ಷೇರಿನ ಬೆಲೆ ಕ್ರಮವಾಗಿ ರು.150 ಮತ್ತು ರು.226ರ ಸಮೀಪವಿದ್ದು, ಷೇರುದಾರರ ಬಂಡವಾಳ, ನಂಬಿಕೆಯನ್ನು ಕರಗಿಸಿವೆ. ಸಾರ್ವಜನಿಕ ವಲಯದ ಸಾಮಾನ್ಯ ವಿಮಾ ಕಂಪೆನಿಗಳು ಷೇರುಪೇಟೆಯಲ್ಲಿ ಹೂಡಿಕೆದಾರರಿಗೆ ಹಾನಿಯುಂಟು ಮಾಡಿದರೆ, ವಿಮಾ ಪಾಲಿಸಿದಾರರಿಗೆ ಹೆಚ್ಚಿನ ಪ್ರೀಮಿಯಂ ವಸೂಲಿ ಮಾಡುವ ಮೂಲಕ ಬರೆ ಎಳೆಯುತ್ತಿವೆ.

ಪರ್ಯಾಯ ಸಾಧ್ಯತೆಗಳ ಬಗ್ಗೆ ಗಮನ ಹರಿಸಿ
ಪರ್ಯಾಯವಾಗಿ ಕೆಲವು ಬ್ಯಾಂಕ್ ಗಳು ಅಂದರೆ ಕರ್ನಾಟಕ ಬ್ಯಾಂಕ್, ಕರೂರು ವೈಶ್ಯ ಬ್ಯಾಂಕ್ ಗಳು ತೇಲಿ ಬಿಟ್ಟಿರುವ ಕ್ರಮವಾಗಿ ಶೇ.12 ಮತ್ತು ಶೇ.11.95 ರಂತೆ ವಾರ್ಷಿಕ ಬಡ್ಡಿ ನೀಡುವ ನಾನ್ ಕನ್ವರ್ಟಬಲ್ ಡಿಬೆಂಚರ್ ಗಳಲ್ಲಿ ಹೂಡಿಕೆ ಮಾಡಿ, ಅದರ ಮೂಲಕ ಬರುವ ಬಡ್ಡಿ ಹಣವನ್ನು ಸೇರಿಸಿ ಪ್ರತ್ಯೇಕವಾಗಿ ಇರಿಸಿಕೊಂಡಲ್ಲಿ ಅದು ವಿಮಾ ಪಾಲಿಸಿಯ ಮೊತ್ತದ ಹಣಕ್ಕೆ ಸಮಾನವಾಗಿರುತ್ತದೆ.

ಉದಾಹರಣೆಗೆ ಕರ್ನಾಟಕ ಬ್ಯಾಂಕ್ ಶೇ.12ರಷ್ಟು ವಾರ್ಷಿಕ ಬಡ್ಡಿ ನೀಡುವುದರಿಂದ ರು.5 ಲಕ್ಷ ಮೌಲ್ಯದ ಬಾಂಡ್ ಖರೀದಿ ಮಾಡಿದಲ್ಲಿ ಪ್ರತಿ ವರ್ಷ ರು.60 ಸಾವಿರ ಹಣ ಬಡ್ಡಿ ರೂಪದಲ್ಲಿ ಬರುತ್ತದೆ. ಐದು ವರ್ಷಗಳಲ್ಲಿ ರು.3 ಲಕ್ಷ ಹಣ ಶೇಖರಣೆ ಆಗುವುದು. ಇದನ್ನು ಪ್ರತ್ಯೇಕವಾಗಿರಿಸಿ ಆರೋಗ್ಯದ ವೆಚ್ಚಕ್ಕಾಗಿ ಮೀಸಲಿಟ್ಟರೆ ಯಾವ ವಿಮಾ ಸಂಸ್ಥೆಗಳನ್ನೂ ಅವಲಂಬಿಸದೇ ಸ್ವಾವಲಂಬಿಗಳಾಗಬಹುದು.

ಇದು ವಿಶೇಷವಾಗಿ ಯುವಕರು ತಮ್ಮ ವೃತ್ತಿಯ ಆರಂಭಿಕ ದಿನಗಳಲ್ಲಿ ದುಂದುವೆಚ್ಚದ ಕಡೆ ಗಮನಹರಿಸದೇ, ಇಎಂಐಗಳ ಬಾಧೆಯಿಂದ ಮುಕ್ತರಾಗಿ ಈ ರೀತಿಯ ಯೋಜನೆ ಅಳವಡಿಸಿಕೊಂಡಲ್ಲಿ ಆರ್ಥಿಕ ಸಾಕ್ಷರತೆಯನ್ನು ಸಾಧಿಸಿದಂತಾಗುತ್ತದೆ.

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+