For Quick Alerts
ALLOW NOTIFICATIONS  
For Daily Alerts

ನೀವು ಈ ತಪ್ಪುಗಳನ್ನು ಮಾಡುತ್ತಿದ್ದರೆ ಇಲ್ಲಿ ಚೆಕ್ ಮಾಡಿ..

ವೈಯಕ್ತಿಕ ಮತ್ತು ಕೌಟುಂಬಿಕ ಹಣಕಾಸಿನ ಪರಿಸ್ಥಿತಿಗಳು, ಹಣಕಾಸಿಗೆ ಸಂಬಂಧಿಸಿದ ಮನೋಭಾವ, ಹೂಡಿಕೆ, ಉಳಿತಾಯ, ಹಣ ಗಳಿಕೆ ಇತ್ಯಾದಿ ವಿಚಾರವಾಗಿ ಒಬೊಬ್ಬರಲ್ಲಿ ಅನನ್ಯತೆ ಮತ್ತು ಭಿನ್ನತೆಯಿದೆ ಎಂಬುದನ್ನು ಅಲ್ಲಗಳೆಯಲು ಸಾಧ್ಯವಿಲ್ಲ.

|

ಪ್ರತಿಯೊಬ್ಬರ ಜೀವನದಲ್ಲಿ ಹಣಕಾಸಿನ ಬೇಕು ಬೇಡಿಕೆಗಳು ವಿಭಿನ್ನ ಭಿನ್ನವಾಗಿರುತ್ತವೆ. ವೈಯಕ್ತಿಕ ಮತ್ತು ಕೌಟುಂಬಿಕ ಹಣಕಾಸಿನ ಪರಿಸ್ಥಿತಿಗಳು, ಹಣಕಾಸಿಗೆ ಸಂಬಂಧಿಸಿದ ಮನೋಭಾವ, ಹೂಡಿಕೆ, ಉಳಿತಾಯ, ಹಣ ಗಳಿಕೆ ಇತ್ಯಾದಿ ವಿಚಾರವಾಗಿ ಒಬೊಬ್ಬರಲ್ಲಿ ಅನನ್ಯತೆ ಮತ್ತು ಭಿನ್ನತೆಯಿದೆ ಎಂಬುದನ್ನು ಅಲ್ಲಗಳೆಯಲು ಸಾಧ್ಯವಿಲ್ಲ.
ಹಣಕಾಸು ಯೋಜನೆ/ಹೂಡಿಕೆ/ಉಳಿತಾಯ ಯೋಜನೆಯ ವಿಷಯದಲ್ಲಿ ಒಂದೇ ತೆರನಾದ ಮಾನದಂಡ ಎಲ್ಲರಿಗೂ ಫಿಟ್ ಆಗುವುದಿಲ್ಲ. ಇದಕ್ಕೆ ಪ್ರತಿಯೊಬ್ಬರ ವೈಯಕ್ತಿಕ ಹಣಕಾಸು ಯೋಜನೆ, ಅಭಿರುಚಿ, ಕಾರ್ಯವೈಖರಿ, ಅಗತ್ಯತೆ, ಸಮಸ್ಯೆಗಳು ಕಾರಣ ಎನ್ನಬಹುದು.
ಆದರೆ, ತಜ್ಞರ/ಪರಿಣಿತರ ಅಭಿಪ್ರಾಯದಂತೆ, ಎಲ್ಲರಿಂದ ಗಮನಿಸಿದ ಒಂದು ಸಾಮಾನ್ಯ ಅಂಶವೆಂದರೆ ಹೆಚ್ಚಿನ ಹೂಡಿಕೆದಾರರು ಸರ್ವೇ ಸಾಮಾನ್ಯವಾದ ಹಾಗೂ ಒಂದೇ ತೆರನಾದ ಹಣಕಾಸಿನ ತಪ್ಪುಗಳಿಗೆ ಒಳಗಾಗುವುದಾಗಿದೆ.
ನಮ್ಮಲ್ಲಿ ಹೆಚ್ಚಿನ ಜನರು ಮಾಡುವ ಕೆಲ ಕಾಮನ್ ಆಗಿರುವ ಸಾಮಾನ್ಯವಾದ ಅಲ್ಲದೇ ದೊಡ್ಡದಾದ ಹಣಕಾಸು ಯೋಜನಾ ತಪ್ಪುಗಳನ್ನು ಇಲ್ಲಿ ಪಟ್ಟಿ ಮಾಡಲಾಗಿದೆ. ಬನ್ನಿ ಮುಂದೆ ನೋಡೋಣ..

 

1. ಜೀವ ವಿಮೆ ಖರೀದಿ

1. ಜೀವ ವಿಮೆ ಖರೀದಿ

ನಮ್ಮಲ್ಲಿ ಹೆಚ್ಚಿನ ಜನರು ಮಾಡುವ ಅತ್ಯಂತ ದೊಡ್ಡ ಮತ್ತು ಸಾಮಾನ್ಯ ತಪ್ಪು ಜೀವ ವಿಮೆಗೆ ಸಂಬಂಧಿಸಿದ್ದು. ಹೂಡಿಕೆಯ ಉದ್ದೇಶ ಸಂಪತ್ತು ಹೆಚ್ಚಿಸುವುದಾದರೆ, ಜೀವವಿಮೆಯ ಪಾತ್ರ ನಮ್ಮ ರಕ್ಷಣೆಯಾಗಿದೆ. ಇವೆರಡನ್ನು ಸೇರಿಸುವುದು ನಿರಾಶೆಯನ್ನು ಉಂಟುಮಾಡುತ್ತದೆ. ಸಾಂಪ್ರಾದಾಯಿಕ ಯೋಜನೆಗಳು ಅಂದರೆ ಎಂಡೋಮೆಂಟ್, ಮನಿಬ್ಯಾಕ್, ಮತ್ತು ಸಂಪೂರ್ಣ ಜೀವನ (whole life) ಪಾಲಿಸಿಗಳು ಇದಕ್ಕೆ ಉತ್ತಮ ಉದಾಹರಣೆಗಳಾಗಿವೆ. ಈ ಯೋಜನೆಯು ಹೂಡಿಕೆ ಮತ್ತು ಜೀವ ವಿಮೆ ಎರಡರ ಸಂಯೋಜನೆಯಲ್ಲಿ ಬರುತ್ತದೆ. ತಜ್ಞರ ಅಭಿಪ್ರಾಯದಂತೆ ಹೆಚ್ಚಿನ ಹೂಡಿಕೆದಾರರು ಈ ರೀತಿಯ ವೈವಿದ್ಯ ಜೀವ ವಿಮೆ ಯೋಜನೆಯನ್ನು ಆ ಯೋಜನೆಯ ಫಲಾಫಲ, ಅವಧಿ, ಲಾಭಗಳನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸದೆ ಖರೀದಿಸುತ್ತಾರೆ. ಭಾರತದಲ್ಲಿ ಜೀವ ವಿಮೆ ಹೆಚ್ಚಿನ ಸಂದರ್ಭಗಳಲ್ಲಿ ಮಾರುವುದಾಗಿರುತ್ತದೆಯೇ ಹೊರತು ಕೊಳ್ಳುವುದಾಗಿರುವುದಿಲ್ಲ. ಎಲ್ಲ ಹೂಡಿಕೆದಾರರು ಕೇವಲ ತೆರಿಗೆ ಯೋಜನೆಯ ಕಾರಣಕ್ಕಾಗಿ ಈ ಜೀವವಿಮೆಯನ್ನು ಖರೀದಿಸುವುದು. ಸ್ವಲ್ಪ ಪ್ರಮಾಣದ ತೆರಿಗೆ ಉಳಿಸಲು ಖರೀದಿಸಬೇಡಿ. ಜೀವವಿಮೆ ಎನ್ನುವುದು ದೀರ್ಘಾವಾಧಿಯ ಬದ್ದತೆಯಾಗಿರಬೇಕು.

2. ಸ್ವಂತ ಮನೆ/ಆಸ್ತಿಯನ್ನು ಖರೀದಿಸುವುದು
 

2. ಸ್ವಂತ ಮನೆ/ಆಸ್ತಿಯನ್ನು ಖರೀದಿಸುವುದು

ನಮ್ಮ ದೇಶದಲ್ಲಿ ಚಿನ್ನದ ಖರೀದಿ ನಿರ್ಧಾರ ಅಥವಾ ಆಸ್ತಿಯ ಮೇಲಿನ ಹೂಡಿಕೆ ನಿಜವಾದ ಅವಶ್ಯಕತೆಗಿಂತ ಹೆಚ್ಚಾಗಿ ಅದು ಭಾವನಾತ್ಮಕವಾದುದಾಗಿದೆ. ನಮಗೆ ಗೊತ್ತಿರುವಂತೆ ಮದುವೆಯಾದ ನಂತರ ಎಷ್ಟು ಸಾಧ್ಯ ಅಷ್ಟು ಬೇಗ ಯುವಕ ಅಥವಾ ಯುವತಿ ಸ್ವಂತ ಮನೆಯನ್ನು ಹೊಂದಲು ಮೊದಲ ಹಣಕಾಸಿನ ಯೋಜನೆಯ ನಿರ್ಧಾರವನ್ನು ತೆಗೆದುಕೊಳ್ಳುತ್ತಾರೆ. ಇದು ಕುಟುಂಬದ ಸದಸ್ಯರ ಬೇಡಿಕೆಯಾಗಿರುತ್ತದೆ. ಇಲ್ಲವೆ ಸಹೋದ್ಯೋಗಿಗಳ ಒತ್ತಡ ಅಥವಾ ನಾವು ಸ್ವಂತ ಮನೆ ಮಾಡಿಕೊಳ್ಳುವುದನ್ನು ಬಿಟ್ಟು ಏಕೆ ಬಾಡಿಗೆ ತೆರಬೇಕು ಎಂಬುದಾಗಿರುತ್ತದೆ. ಚಾಲ್ತಿಯಲ್ಲಿರುವ ಆಸ್ತಿಯ ಮಾರುಕಟ್ಟೆ ಬೆಲೆಯನ್ನು ಪರಿಗಣಿಸಿ ನಾವು ಹೆಚ್ಚಿನ ಜನರು ಗೃಹ ಸಾಲದ ಮೂಲಕ ಆ ಆಸ್ತಿಯನ್ನು ಖರೀದಿಸುತ್ತೇವೆ. ಒಂದು ಸಾರಿ ನೀವು ಗೃಹ ಸಾಲವನ್ನು ತೆಗೆದುಕೊಂಡ ಮೇಲೆ ನಿಮ್ಮ ಮಾಸಿಕ ಆದಾಯದ ಶೇ. 30 ರಿಂದ ಶೇ. 40ವರಗಿನ ಹಣವು ನಿಮ್ಮ ಗೃಹ ಸಾಲ ಮಾಸಿಕ ಕಂತುಗಳಿಗೆ ಹೋಗುತ್ತದೆ. ಇದು ನಿಮ್ಮ ಹಣಕಾಸಿನ ವ್ಯವಸ್ಥೆಯ ಮೇಲೆ ಹೆಚ್ಚಿನ ಒತ್ತಡವನ್ನು ಉಂಟು ಮಾಡುತ್ತದೆ. ಇನ್ನೊಂದು ಪ್ರಮುಖ ಅಂಶವೆಂದರೆ ಇದು ನೀವು ನಿಮ್ಮ ಬೇರೆ ಇನ್ನಿತರ ಹಣಕಾಸಿನ ಯೋಜನೆಯ ಗುರಿಗಳನ್ನು ಅಂದರೆ ನಿವೃತ್ತಿ ಯೋಜನೆಗಳಂತಹವುಗಳನ್ನು ಮುಂದೂಡಬೇಕಾಗುತ್ತದೆ. ನಿಮ್ಮ ನಿವೃತ್ತಿ ಯೋಜನೆಯ ಬಗ್ಗೆಯೇ ನೀವು ಮೊದಲು ಗಮನ ಹರಿಸಬೇಕು.

3. ಆಕಸ್ಮಿಕ ಮತ್ತು ತುರ್ತು ಪರಿಸ್ಥಿತಿ ನಿಧಿ

3. ಆಕಸ್ಮಿಕ ಮತ್ತು ತುರ್ತು ಪರಿಸ್ಥಿತಿ ನಿಧಿ

ಅನಿರೀಕ್ಷಿತ ಘಟನೆಗಳು ಜನರನ್ನು ಕಂಗಾಲು ಮಾಡುತ್ತವೆ. ವೈದಕೀಯ ಪರಿಸ್ಥಿತಿ ಮತ್ತು ದುರಾದೃಷ್ಟಕರವಾದ ಘಟನೆಗಳ ಸಂದರ್ಭಗಳಲ್ಲಿ ಲಕ್ಷ ಲಕ್ಷ ಸಂಬಳ ಪಡೆಯುವ ವ್ಯಕ್ತಿಗಳು ಸಹ ಹಣಕಾಸಿನ ನೆರವನ್ನು ಕೇಳುವುದನ್ನು ನೀವು ನೋಡಿರಬಹುದು. ಅವರು ಚೆನ್ನಾಗಿ ಗಳಿಸುತ್ತಿರುತ್ತಾರೆ ಅದರೆ ಹಣವನ್ನು ಉಳಿಸುವುದಿಲ್ಲ. ಅದ್ದರಿಂದ ಅವರು ಇಂತಹ ತುರ್ತು ಪರಿಸ್ಥಿತಿಗಳಿಗೆ ಹಣ ಹೂಡಲು ಏನು ಮಾಡುತ್ತಾರೆ ಎಂಬ ಪ್ರಶ್ನೆ ಬರುತ್ತದೆ. ಅದಕ್ಕಾಗಿ ಅವರು ಹೋಗಿ ವೈಯಕ್ತಿಕ ಸಾಲಗಳನ್ನೋ (ಪರ್ಸನಲ್ ಲೋನ್) ಅಥವಾ ಕ್ರೆಡಿಟ್ ಕಾರ್ಡಿನ ಸಾಲಗಳನ್ನು ತೆಗೆದುಕೊಳ್ಳುತ್ತಾರೆ. ಇದು ಅವರನ್ನು ಕಂಗಾಲಾಗಿಸಿ ಜಿಗುಟುತನದ ವೃತ್ತದಲ್ಲಿರಿಸುತ್ತದೆ. ಅಂತವರು ಈ ಸಾಲದಿಂದ ಹೊರಬರಲು ವರ್ಷಾನುಗಟ್ಟಲೆ ಸಮಯವನ್ನು ತೆಗೆದುಕೊಳ್ಳುತ್ತಾರೆ. ಹೆಚ್ಚಿನ ಬಡ್ಡಿದರವನ್ನು ಪಾವತಿ ಮಾಡುತ್ತಾರೆ. ನಾವು ಮೇಲಿನ ಎರಡನೇ ಅಂಶವನ್ನು ಇಲ್ಲಿ ಮತ್ತೊಮ್ಮೆ ಪರಿಗಣಿಸಬಹುದು. ನಾನು ಗಮನಿಸಿದ ಹಾಗೆ ಜನರು ಆಸ್ತಿಯನ್ನು ಖರೀದಿಸಲು ತಮ್ಮ ಎಲ್ಲ ಹಣದ ಹೂಡಿಕೆಗಳನ್ನು ಅಂದರೆ ಪಿಪಿಎಫ್, ಇಪಿಎಫ್ ನಿದಿಗಳನ್ನು ಹಿಂತೆಗೆದುಕೊಳ್ಳುತ್ತಾರೆ. ಅದರೆ ಹಾಗೆ ಮಾಡಬೇಡಿ. ಸರಿಸುಮಾರು 6 ತಿಂಗಳ ಮಾಸಿಕ ಆದಾಯವನ್ನು (ನಿಗಧಿತ + ಪರಿವರ್ತಿತ) ತುರ್ತು ಪರಿಸ್ಥಿತಿಯಲ್ಲಿ ಖರ್ಚು ಮಾಡಲು ಕೈಯಲ್ಲಿ ಸಾಕಷ್ಟು ಹಣವನ್ನು ಅಥವಾ ಹಣವನ್ನು ಬ್ಯಾಂಕಿನ ಉಳಿತಾಯ ಖಾತೆಯಲ್ಲಿ ಹೊಂದಿರಿ. ನಿಮ್ಮ ಬಳಿ ಹೆಚ್ಚಿನ ಹಣಕಾಸು ಇಲ್ಲದಿದ್ದರೆ ರಿಕರಿಂಗ್ ಡಿಪಾಸಿಟ್ ಹಣ ಉಳಿಸಲು ಪ್ರಾರಂಭಿಸಿ.

4. ಆರೋಗ್ಯ ವಿಮಾ ಭದ್ರತೆ

4. ಆರೋಗ್ಯ ವಿಮಾ ಭದ್ರತೆ

ಹೆಚ್ಚಿನ ಜನರು ಉತ್ತಮವಾದ ಆರೋಗ್ಯ ವಿಮೆ ಹೊಂದಿರುವುದಿಲ್ಲ. ಸಂಬಳ ಪಡೆಯುವವರರಿಗೆ ವೈದ್ಯಕೀಯ ವಿಮೆ ಯೋಜನೆಯ ಬಗ್ಗೆ ಕೇಳಿದಾಗ ನಾನು ಕೆಲಸ ಮಾಡುವ ಸಂಸ್ಥೆಯು ನನಗೆ ಆರೋಗ್ಯ ವಿಮಾ ರಕ್ಷಣೆಯನ್ನು ಒದಗಿಸುತ್ತದೆ ಎಂಬ ಉತ್ತರವನ್ನು ನೀವು ಕೇಳಿರಬಹುದು. ಈಗ ಹೆಚ್ಚುತ್ತಿರುವ ವೈದಕೀಯ ವೆಚ್ಚಗಳು ಮತ್ತು ಅನಾರೋಗ್ಯಕರ ಜೀವನ ಶೈಲಿಗೆ ನೀವು ಕೆಲಸ ಮಾಡುವ ಸಂಸ್ಥೆಯಿಂದ ಒದಗಿಸಲ್ಪಟ್ಟ ಕವರೇಜ್ ಸಾಕಾಗುತ್ತದೆಯೇ ಎಂದು ಯೋಚಿಸಿ? ಈ ಕೆಲವು ಪ್ರಶ್ನೆಗಳನ್ನು ನಿಮಗೆ ನೀವೆ ಹಾಕಿಕೊಳ್ಳಬಹುದು. ನಾನು ನನ್ನ ಕೆಲಸವನ್ನು ಕಳೆದುಕೊಂಡರೆ ಅಥವಾ ಕೆಲಸ ಬಿಟ್ಟರೆ ನನ್ನ ಆರೋಗ್ಯ ವಿಮೆಯ ಕವರೆಜ್ ಏನಾಗುತ್ತದೆ? ನಾನು ನನ್ನ 58ನೇ ವಯಸ್ಸಿಗೆ ನಿವೃತ್ತಿ ಹೊಂದಿದಾಗ ಹೊಸ ಆರೋಗ್ಯ ವಿಮೆ ಯೋಜನೆಯನ್ನು ಖರೀದಿಸಬೇಕೆ ಅಥವಾ ಪಡೆಯಬೇಕೆ? ನಾನು ಕೆಲಸ ನಿರ್ವಹಿಸುವ ಸಂಸ್ಥೆಯು ಇದ್ದಕ್ಕಿದ್ದಂತೆ ನೌಕರರ ಮೆಡಿ ಕ್ಲೈಮ್ ಪಾಲಿಸಿಯ ನಿಯಮಗಳನ್ನು ಮತ್ತು ಷರತ್ತುಗಳನ್ನು ಬದಲಾಯಿಸಿದರೆ? ಈ ರೀತಿ ಆದಾಗ ನೀವು ನಿಮ್ಮ ಇಡೀ ಕುಟುಂಬವನ್ನು ತೊಂದರೆಯಲ್ಲಿ ಇಡುತ್ತಿರಲ್ಲವೆ? ಅದಕ್ಕಾಗಿ ಒಂದು ಸ್ವತಂತ್ರ ವೈದ್ಯಕೀಯ ವಿಮೆ ಪಾಲಿಸಿಯನ್ನು ಹೊಂದಿ. ಜೊತೆಗೆ ನೀವು ನಿಮ್ಮ ಎಲ್ಲ ಅವಲಂಬಿತರಿಗಾಗಿ ಆರೋಗ್ಯ ವಿಮಾ ಯೋಜನೆಯನ್ನು ಮಾಡಿಸಿ.

5. ಸ್ಥಿರ ಆದಾಯ ಸೆಕ್ಯುರಿಟಿಗಳಲ್ಲಿ ಹೆಚ್ಚಿನ ಹೂಡಿಕೆ

5. ಸ್ಥಿರ ಆದಾಯ ಸೆಕ್ಯುರಿಟಿಗಳಲ್ಲಿ ಹೆಚ್ಚಿನ ಹೂಡಿಕೆ

ನಮಗೆ ಗೊತ್ತಿರುವಂತೆ ನಮ್ಮ ಹೆಚ್ಚಿನ ಸ್ನೇಹಿತರು ಸ್ಥಿರ ಠೇವಣಿಗಳಲ್ಲಿ ಹೂಡಿಕೆ ಮಾಡುವುದನ್ನು ನೋಡಿರಬಹುದು. ಆದರೆ ಇದು ಅಘಾತಕಾರಿ ಸಂಗತಿ. ಇಂತಹ ವ್ಯಕ್ತಿಗಳಿಗೆ ಯಾವುದೆ ಅವಲಂಬಿತರು ಇಲ್ಲ ಮತ್ತು ಯಾವುದೇ ಹಣಕಾಸಿನ ಬದ್ದತೆಯು ಇಲ್ಲ. ಇಲ್ಲಿ ನಾವು ನಿಜವಾದ ದರದ ಆದಾಯದ ಮಹತ್ವವನ್ನು ಅರ್ಥಮಾಡಿಕೊಳ್ಳುವ ಅಗತ್ಯತೆ ಇದೆ. ಬ್ಯಾಂಕ್ ಠೇವಣಿಗಳು, ರಿಕರಿಂಗ್ ಡಿಪಾಸಿಟ್, ಅಥವಾ ಅಂಚೆ ಕಛೇರಿಯ ಸಣ್ಣ ಉಳಿತಾಯ ಯೋಜನೆಗಳಂತಹ ಸ್ಥಿರವಾದ ಆದಾಯ ಭದ್ರತೆಗಳು ಸುಮಾರು ಶೇ. 7-9 ರವರಗೆ ಆದಾಯವನ್ನು ನೀಡುತ್ತವೆ. ಕಳೆದ ಕೆಲವು ವರ್ಷಗಳಿಂದ ಜೀವನಾವಶ್ಯಕತೆಗಳ ವೆಚ್ಚಗಳು ಹೆಚ್ಚಾಗಿರುವುದರ ಅರಿವು ನಮಗೆ ಇದೆ ಮತ್ತು ಇದು ಭವಿಷ್ಯದಲ್ಲಿ ಇದು ಹೆಚ್ಚಾಗುತ್ತಲೇ ಇರುತ್ತದೆ. ನೀವು ನಿಮ್ಮ ಸ್ಥಿರ ಠೇವಣಿಗಳ ಮೇಲೆ ಶೇ. 8 ಲಾಭವನ್ನು ಹೊಂದಿದ್ದರೆ ಮತ್ತು ಹಣದುಬ್ಬರವು ಶೇ. 6 ಆಗಿದ್ದರೆ ನಿಜವಾದ ದರದ ಆದಾಯವು ಸುಮಾರು ಶೇ. 2 ಆಗಿರುತ್ತದೆ. ನೀವು ಇನ್ನೂ ಪಾವತಿಸುವ ತೆರಿಗೆಗೆ ಈ ಶೇ. 2ನ್ನು ನೀವು ಹೊಂದಿಸಬೇಕು. ಇದರರ್ಥ ನಿಮ್ಮ ಸಂಪತ್ತು/ಹೂಡಿಕೆಗಳು ಬೆಳೆಯುತ್ತಿಲ್ಲ. ಹಾಗಾಗಿ ನಿಮ್ಮ ಹಣಕಾಸು ವಹಿವಾಟನ್ನು ಬದಲಿಸಿಕೊಳ್ಳಿ. ದೀರ್ಘಾವಾಧಿಯ ಸಂಪತ್ತನ್ನು ಸೃಷ್ಠಿಸಲು ನೀವು ಇಕ್ವಿಟಿ ಸಂಬಂಧಿತ ವಿಧಾನಗಳಲ್ಲಿ ಹೂಡಿಕೆ ಮಾಡಬೇಕು. ಸರಿಯಾದ ಇಕ್ವಿಟಿಯಲ್ಲಿ ಮತ್ತು ಇಕ್ವಿಟಿ ಸಂಬಂಧಿತ ಮ್ಯೂಚುಯಲ್ ಫಂಡ್‌ಗಳಲ್ಲಿ ನಿಮ್ಮ ಉಳಿತಾಯದ ಕನಿಷ್ಠ ಭಾಗವನ್ನಾದರೂ ಹೂಡಿಕೆ ಮಾಡಿ. ಅಲ್ಲದೆ ವಿವಿಧ ಸ್ವತ್ತು ವರ್ಗಗಳಲ್ಲಿ ಹೂಡಿಕೆ ಮಾಡಿ ಮತ್ತು ವೈವಿಧ್ಯಗೊಳಿಸಿ. ಆದರೆ ಹೂಡಿಕೆ ಮಾಡುವಾಗ ಎದುರಾಗುವ ರಿಸ್ಕ್ ಗಳನ್ನು ಸರಿಯಾಗಿ ಅರ್ಥಮಾಡಿಕೊಳ್ಳಿ. ಹಾಗಾಗಿ ಹಣಕಾಸು ಜ್ಞಾನ, ಅರಿವು ಬಹಳ ಮುಖ್ಯವಾಗಿದೆ.

6. ಹಣಕಾಸು ಗುರಿ ಇಟ್ಟುಕೊಳ್ಳದೆ ಇರುವುದು

6. ಹಣಕಾಸು ಗುರಿ ಇಟ್ಟುಕೊಳ್ಳದೆ ಇರುವುದು

ನಾನು ಎಷ್ಟು ಆದಾಯ ಪಡೆಯುತ್ತೇನೆ? ಶೇ. 15 ಖಾತರಿ ರಿಟರ್ನ್ ಪಡೆಯಬಹುದೇ? ಯಾವುದೇ ರಿಸ್ಕ್ ತೆಗೆದುಕೊಳ್ಳದೆ ಶೇ. 20 ಆದಾಯ ಕೊಡುವ ಯಾವುದಾದರೂ ಹೂಡಿಕೆ ಇದೆಯೇ? ಷೇರು ಮಾರುಕಟ್ಟೆಯು ಎಲ್ಲ ಸಮಯದಲ್ಲೂ ಉನ್ನತ ಮಟ್ಟದಲ್ಲಿರುತ್ತದೆಯೆ? ಷೇರು ಮಾರುಕಟ್ಟೆ ಪ್ರವೇಶಿಸಲು ಇದು ಸರಿಯಾದ ಸಮಯವೇ? ಆಸ್ತಿ ಅಥವಾ ಚಿನ್ನವನ್ನು ಖರೀದಿಸಲು ಇದು ಸರಿಯಾದ ಸಮಯವೇ? ಎಂಬುದು ಹಣಕಾಸು ಸಲಹೆಗಾರರು/ತಜ್ಞರು ಪ್ರತಿದಿನ ಸ್ವೀಕರಿಸುವ ಸಾಮಾನ್ಯ ಪ್ರಶ್ನೆಗಳಾಗಿವೆ. ಈ ಎಲ್ಲ ಪ್ರಶ್ನೆಗಳಿಗೂ ಒಂದೇ ಉತ್ತರ ಇದೆ. ಹಣಕಾಸಿನ ಮಾರುಕಟ್ಟೆಗಳಿಗೆ ಸಮಯ ತೆಗೆದುಕೊಳ್ಳುವ ಬದಲು ನಾವು ಮೊದಲು ಆರ್ಥಿಕ ಗುರಿಯನ್ನು ಗುರುತಿಸಿಕೊಳ್ಳಲು ಪ್ರಯತ್ನಿಸುವುದು ಉತ್ತಮ. ಇದು ನಿಮ್ಮ ಹೂಡಿಕೆ ಅಗತ್ಯತೆಗಳ ಬಗ್ಗೆ ಸ್ಪಷ್ಟತೆ ಹೊಂದಲು ನಿಮಗೆ ಸಹಾಯ ಮಾಡುತ್ತದೆ. ನಿಮ್ಮ ಹಣಕಾಸಿನ ಯೋಜನೆಗಳನ್ನು ಗಂಭೀರವಾಗಿ ತೆಗೆದುಕೊಳ್ಳಿ ಮತ್ತು ನಿಮ್ಮ ಹಣಕಾಸಿನ ಗುರಿಗಳಿಗಾಗಿ ಹೂಡಿಕೆ ಮಾಡುವುದನ್ನು ಮುಂದೂಡಬೇಡಿ.

ಈ ಬಿಸಿನೆಸ್ ಆರಂಭಿಸಿದರೆ ಪ್ರತಿ ತಿಂಗಳು 2 ಲಕ್ಷ ಆದಾಯ ಗ್ಯಾರಂಟಿಈ ಬಿಸಿನೆಸ್ ಆರಂಭಿಸಿದರೆ ಪ್ರತಿ ತಿಂಗಳು 2 ಲಕ್ಷ ಆದಾಯ ಗ್ಯಾರಂಟಿ

English summary

Money and Investment: Most common Personal Finance Mistakes

I have been practicing Financial counseling for the last 5 years. In this journey, I am lucky enough to meet lot of investors, my clients, friends, well-wishers and relatives.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X