ಸಂಬಳ ಪಡೆಯುವ ವ್ಯಕ್ತಿಗಳು ವೈವಿಧ್ಯ ಹೂಡಿಕೆಗಾಗಿ ಏನು ಮಾಡಬೇಕು?

ವೇತನ ಪಡೆಯುವ ಹೆಚ್ಚಿನ ಉದ್ಯೋಗಿಗಳು ಹೂಡಿಕೆ ಮಾಡುವಾಗ ಹೆಚ್ಚು ಲೆಕ್ಕಾಚಾರ ಮಾಡುತ್ತಾರೆ! ಯಾವಾಗಲೂ ಹೆಚ್ಚಿನ ಲಾಭವನ್ನು ಸುರಕ್ಷತೆಯೊಂದಿಗೆ, ತೆರಿಗೆ ವಿನಾಯಿತಿಯೊಂದಿಗೆ ಹಾಗೂ ದ್ರವ್ಯತೆಯೊಂದಿಗೆ ನಿರೀಕ್ಷಿಸುತ್ತಾನೆ.

ವೇತನ ಪಡೆಯುವ ಹೆಚ್ಚಿನ ಉದ್ಯೋಗಿಗಳು ಹೂಡಿಕೆ ಮಾಡುವಾಗ ಹೆಚ್ಚು ಲೆಕ್ಕಾಚಾರ ಮಾಡುತ್ತಾರೆ! ಯಾವಾಗಲೂ ಹೆಚ್ಚಿನ ಲಾಭವನ್ನು ಸುರಕ್ಷತೆಯೊಂದಿಗೆ, ತೆರಿಗೆ ವಿನಾಯಿತಿಯೊಂದಿಗೆ ಹಾಗೂ ದ್ರವ್ಯತೆಯೊಂದಿಗೆ ನಿರೀಕ್ಷಿಸುತ್ತಾನೆ. ಈ ಎಲ್ಲಾ ಪ್ರಯೋಜನಗಳು ಸಿಗುವ ಹೂಡಿಕೆಗಳ ಆಯ್ಕೆ ಕೂಡ ಅಷ್ಟೇ ಮುಖ್ಯವಾಗಿರುತ್ತದೆ. ಮೇಲಿನ ನಿರೀಕ್ಷಗಳನ್ನು ಪೂರೈಸುವ ಹೂಡಿಕೆಗಳ ಬಗ್ಗೆ ಇಲ್ಲಿ ತಿಳಿಸಲಾಗಿದೆ. ಬನ್ನಿ ತಿಳಿಯೋಣ..

ಫಿಕ್ಸೆಡ್ ಡೆಪಾಸಿಟ್ (FD)

ಫಿಕ್ಸೆಡ್ ಡೆಪಾಸಿಟ್ (FD)

ಸಂಬಳ ಪಡೆಯುವ ಹೆಚ್ಚಿನ ನೌಕರರ ನೆಚ್ಚಿನ ಹೂಡಿಕೆ ವಿಧಾನ ಎಫ್ಡಿ. ಒಂದು ವೇಳೆ ನೀವು ವೇತನದಾರರಾಗಿದ್ದು, ತಮ್ಮ ಗಳಿಕೆಯ ಸ್ವಲ್ಪ ಪ್ರಮಾಣದ ಹಣವನ್ನು ಉಳಿಸುತ್ತಿದ್ದರೆ, ನೀವು KTDFC ಠೇವಣಿಯನ್ನು ಆಯ್ಕೆ ಮಾಡಿಕೊಳ್ಳಬಹುದು. ಇದು 1, 2 ಮತ್ತು 3 ವರ್ಷಗಳ ಅವಧಿಗೆ ಉತ್ತಮ ರಿಟರ್ನ್ ನೀಡುತ್ತದೆ. ಕಡಿಮೆ ಅವಧಿಯಿಂದ ಮಧ್ಯಮ ಅವಧಿಯ ಹೂಡಿಕೆ ನೀವು ಬಯಸುತ್ತಿದ್ದಲ್ಲಿ ಇದು ತಕ್ಕಮಟ್ಟಿಗೆ ಉತ್ತಮ ಆಯ್ಕೆಯಾಗಬಲ್ಲದು. ಈ ಹೂಡಿಕೆಯ ಆಯ್ಕೆಯಲ್ಲಿರುವ ಒಂದೇ ಒಂದು ತೊಂದರೆ ಎಂದರೆ, ಯಾವುದೇ ಮಧ್ಯವರ್ತಿಗಳಿರದ ಕಾರಣ ನೀವು ಫಾರಂ ಅನ್ನು ಆನ್ಲೈನ್ ನಲ್ಲಿ ಭರ್ತಿ ಮಾಡಬೇಕಾಗುತ್ತದೆ ಮತ್ತು ಗಳಿಸಿದ ಬಡ್ಡಿಯ ಮೇಲೆ ತೆರಿಗೆಯನ್ನು ವಿಧಿಸಲಾಗುತ್ತದೆ.

ಸಾರ್ವಜನಿಕ ಭವಿಷ್ಯ ನಿಧಿ (PPF)

ಸಾರ್ವಜನಿಕ ಭವಿಷ್ಯ ನಿಧಿ (PPF)

ವೇತನದಾರರ ಹೂಡಿಕೆ ಆಯ್ಕೆ ವಿಧಾನಗಳಲ್ಲಿ ಪಬ್ಲಿಕ್ ಪ್ರಾವಿಡೆಂಟ್ ಫಂಡ್ ಒಳ್ಳೆಯ ಹೂಡಿಕೆ ಆಯ್ಕೆಯಾಗಿದೆ. ಏಕೆಂದರೆ, ಪಿಪಿಎಫ್ ಮೇಲೆ ಗಳಿಸಿದ ಬಡ್ಡಿಯು ತೆರಿಗೆಯಿಂದ ಮುಕ್ತವಾಗಿರುತ್ತದೆ. ಇದು ಸೆಕ್ಷನ್ 80ಸಿ ನಿಯಮದಡಿ ತೆರಿಗೆ ವಿನಾಯಿತಿ ನೀಡುತ್ತದೆ. ಈ ಸೆಕ್ಷನ್ನಿನ ಪ್ರಕಾರ ರೂ. 1.5 ಲಕ್ಷ ಹೂಡಿಕೆಯ ಮೊತ್ತದ ಮೇಲೆ ತೆರಿಗೆ ವಿನಾಯಿತಿ ಪಡೆಯಬಹುದು. ಪ್ರಸ್ತುತ ಬಡ್ಡಿದರ ಶೇ. 7.9 ರಷ್ಟಿದೆ. ಪಿಪಿಎಫ್ ಮುಕ್ತಾಯದ ಅವಧಿ 15ವರ್ಷ ಆಗಿರುತ್ತದೆ. ನೀವು ವರ್ಷಕ್ಕೆ ರೂ. 500 ರಷ್ಟು ಕಡಿಮೆ ಹೂಡಿಕೆಯನ್ನು ಮಾಡಬಹುದು.

ಮ್ಯೂಚುವಲ್ ಫಂಡ್ (SIP)

ಮ್ಯೂಚುವಲ್ ಫಂಡ್ (SIP)

ಇತ್ತೀಚಿನ ದಿನಗಳಲ್ಲಲಿ ಮ್ಯೂಚುವಲ್ ಫಂಡ್ ಸಿಪ್ ಹೂಡಿಕೆದಾರರಿಗೆ ಇಷ್ಟವಾಗುತ್ತಿವೆ. ಹೆಚ್ಚಿನ ಹೂಡಿಕೆದಾರರು ಸಣ್ಣ ಪ್ರಮಾಣದ ಮೊತ್ತವನ್ನು ಇಕ್ವಿಟಿ ಮ್ಯೂಚುವಲ್ ಫಂಡ್ಸ್ ನ ವ್ಯವಸ್ಥಿತ ಹೂಡಿಕೆ ಯೋಜನೆ (SIP) ಗಳಲ್ಲಿ ವ್ಯವಸ್ಥಿತವಾಗಿ ಹೂಡುತ್ತಿದ್ದಾರೆ. ಕೆಲವು ಇಕ್ವಿಟಿ ಸ್ಕೀಂಗಳು ದೀರ್ಘಾವದೀಯಲ್ಲಿ ಯೋಗ್ಯ ಆದಾಯವನ್ನು ಗಳಿಸಿವೆ. ಸುರಕ್ಷತೆಯ ವಿಚಾರಕ್ಕೆ ಸಂಬಂಧಪಟ್ಟಂತೆ, ಇದು PPF ನಂತೆ ಖಾತರಿಯನ್ನು ನೀಡುವುದಿಲ್ಲ.

ಚಿನ್ನ ಮೇಲೆ ಹೂಡಿಕೆ

ಚಿನ್ನ ಮೇಲೆ ಹೂಡಿಕೆ

ಸಂಬಳ ಪಡೆಯುವ ವ್ಯಕ್ತಿಗಳು, ಸಂಭವನೀಯ ಹಾನಿಯನ್ನು ವೈವಿಧ್ಯಗೊಳಿಸಲು ಚಿನ್ನದ ಮೇಲೆ ಹೂಡಿಕೆ ಮಾಡಬಹುದು. ಉದಾಹರಣೆಗೆ, ನೀವು ನಿಮ್ಮ ಎಲ್ಲಾ ಹಣವನ್ನು ಷೇರುಗಳಲ್ಲಿ ಹೂಡಿಕೆ ಮಾಡಿ, ಅವು ಒಂದು ವೇಳೆ ಕುಸಿತ ಕಾಣಲು ಪ್ರಾರಂಭಿಸಿದ್ದಲ್ಲಿ ಗಣನೀಯ ಪ್ರಮಾಣದಲ್ಲಿ ಹಣವನ್ನು ಕಳೆದುಕೊಳ್ಳಬಹುದು. ಒಂದು ವೈವಿದ್ಯೀಕರಣದ ಕ್ರಮವಾಗಿ ಚಿನ್ನದ ಮೇಲೆ ಹೂಡಿಕೆ ಮಾಡುವುದು ಜಾಣ ನಡೆಯಾಗಿದೆ. ಮದುವೆ, ಹಬ್ಬ, ವಾರ್ಷಿಕೋತ್ಸವಗಳಂತ ಸಮಾರಂಭಗಳಿಗೆ ಬೇಕಾಗುವ ಚಿನ್ನದ ಅವಶ್ಯಕತೆಯನ್ನು ಪೂರೈಸಲು ಚಿನ್ನದ ಮೇಲೆ ಹೂಡಿಕೆ ಪ್ರಯೋಜನಕಾರಿ.

ರಿಕರಿಂಗ್ ಡಿಪಾಸಿಟ್ (ಆರ್ ಡಿ)

ರಿಕರಿಂಗ್ ಡಿಪಾಸಿಟ್ (ಆರ್ ಡಿ)

ಕಡಿಮೆ ಬಡ್ಡಿದರವೇ ಆವರ್ತಕ ಠೇವಣಿಯ ಒಂದು ತೊಡಕಾಗಿದ್ದಲ್ಲದೇ ಇವು ತೆರಿಗೆಗೆ ಒಳಪಡುತ್ತವೆ. ಅಂದರೆ ಒಂದು ವೇಳೆ ನೀವು ಅತ್ಯಧಿಕ ತೆರಿಗೆಯ ವ್ಯಾಪ್ತಿಗೆ ಒಳಪಡುವವರಾಗಿದ್ದರೆ, ಇದು ಅತೀ ಕಡಿಮೆ ಗಳಿಕೆಯನ್ನು ನೀಡುತ್ತದೆ. ಇತರ ಬದಲಿ ಹೂಡಿಕೆಗಳನ್ನು ಆಯ್ಕೆ ಮಾಡಿಕೊಳ್ಳುವುದೇ ಉತ್ತಮ. ಆದರೆ ಆರ್ಡಿ ಹೂಡಿಕೆಯ ಅನುಕೂಲವೆಂದರೆ ಅವು ಹೂಡಿಕೆಯಲ್ಲಿ ಉತ್ತಮ ದ್ರವ್ಯತೆಯನ್ನು ನೀಡುತ್ತವೆ. ಪ್ರತಿಯೊಬ್ಬರೂ ಹೂಡಿಕೆ ಮಾಡುವ ಮೊದಲು ಬಡ್ಡಿದರವನ್ನು ಹೋಲಿಸಿ, ಆನ್ಲೈನ್ ಹೂಡಿಕೆಯ ಇತರೆ ಅವಕಾಶಗಳನ್ನು ನೋಡಬಹುದು. ಇವುಗಳನ್ನು ಪ್ರಯಾಣ, ಮದುವೆಗಳಂತಹ ಯೋಜಿತ ಖರ್ಚುಗಳಿಗಾಗಿ ಬಳಸಬಹುದು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+