For Quick Alerts
ALLOW NOTIFICATIONS  
For Daily Alerts

ನೀವು ಪಾರ್ಟ್ ಟೈಂ ಜಾಬ್ ಮಾಡಬೇಕಾ?

ನಿಮ್ಮ ಕೆಲಸದ ನಡುವೆ ದೊರಕುವ ಅಪಾರ ಪ್ರಮಾಣದ ಬಿಡುವಿನ ವೇಳೆಯನ್ನು ಉಪಯುಕ್ತ ರೀತಿಯಲ್ಲಿ ಸದ್ಬಳಕೆ ಮಾಡಿಕೊಂಡು ಅರೆಕಾಲಿಕ ಕೆಲಸದ ಮೂಲಕ ಹಣ ಸಂಪಾದಿಸಬಹುದು. ವಿದ್ಯಾರ್ಥಿ ದೆಸೆಯಲ್ಲೂ ಪಾರ್ಟ್ ಟೈಂ ಕೆಲಸಕ್ಕಾಗಿ ಪ್ರಯತ್ನಿಸಬಹುದು.

|

ನಿಮ್ಮ ಕೆಲಸದ ನಡುವೆ ದೊರಕುವ ಅಪಾರ ಪ್ರಮಾಣದ ಬಿಡುವಿನ ವೇಳೆಯನ್ನು ಉಪಯುಕ್ತ ರೀತಿಯಲ್ಲಿ ಸದ್ಬಳಕೆ ಮಾಡಿಕೊಂಡು ಅರೆಕಾಲಿಕ ಕೆಲಸದ ಮೂಲಕ ಹಣ ಸಂಪಾದಿಸಬಹುದು. ವಿದ್ಯಾರ್ಥಿ ದೆಸೆಯಲ್ಲೂ ಪಾರ್ಟ್ ಟೈಂ ಕೆಲಸಕ್ಕಾಗಿ ಪ್ರಯತ್ನಿಸಬಹುದು.
ಮೊದಲಿಗೆ ಇದರಿಂದ ಹಣ ಗಳಿಕೆ ಸಾಧ್ಯವಾಗುವುದರಿಂದ ಪೋಷಕರ ಮೇಲಿನ ಆರ್ಥಿಕ ಭಾರವನ್ನು ಕಡಿಮೆ ಮಾಡಬಹುದು ಅಷ್ಟೇ ಅಲ್ಲದೆ ಕೆಲಸದ ವೇಳೆ ದೊರಕುವ ಅನುಭವ ಮತ್ತು ಸಂಪರ್ಕಗಳು ಮುಂದಿನ ಜೀವನದಲ್ಲಿ ಅತ್ಯವಶ್ಯವಾಗಿ ಉಪಯುಕ್ತವಾಗಲಿವೆ.
ಈ ಹಂತದಲ್ಲಿನ ದುಡಿಮೆಯಿಂದ ಆತ್ಮವಿಶ್ವಾಸ ವೃದ್ಧಿಸುತ್ತದೆ, ಸಮಾಜ ಅಂತಹವರನ್ನು ಗೌರವಭಾವದಿಂದ ಕಾಣುತ್ತದೆ ವ್ಯಾಸಂಗದ ಬಳಿಕ ನೀವು ಪೂರ್ಣಾವಧಿ ಉದ್ಯೋಗ ಪಡೆಯಲು ಯತ್ನಿಸಿದಾಗ ನಿಮ್ಮ ಈ ಕೆಲಸದ ಪೂರ್ವಾನುಭವ ನಿಮಗೆ ಇತರೆ ಅಭ್ಯರ್ಥಿಗಳಿಗಿಂತ ಒಂದು ಕೈ ಹೆಚ್ಚು ಅನುಕೂಲಕರವಾಗಿ ನೆರವಿಗೆ ನಿಲ್ಲುತ್ತದೆ.
ಬಿಡುವಿನ ವೇಳೆ ಉದ್ಯೋಗ ಮಾಡುವ ಆಕಾಂಕ್ಷೆ ಇದ್ದರೆ ನೀವು ಮಾಡಬಹುದಾದ ಕೆಲಸಗಳ ಪರಿಚಯ ಇಲ್ಲಿದೆ ನೋಡೋಣ ಬನ್ನಿ..

ನೀವು ಪಾರ್ಟ್ ಟೈಂ ಜಾಬ್ ಮಾಡಬೇಕಾ?

ಸೋಷಿಯಲ್ ಮಿಡಿಯಾ ಅಸಿಸ್ಟಂಟ್
ಪ್ರಸ್ತುತ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳು ಎಲ್ಲರಿಗೂ ತಮ್ಮ ಆಸಕ್ತಿ, ಅಭಿರುಚಿಯನ್ನು ಚರ್ಚಿಸಲು, ಹಂಚಿಕೊಳ್ಳಲು ಅತ್ಯುತ್ತಮ ವೇದಿಕೆ ಕಲ್ಪಿಸಿಕೊಟ್ಟಿದೆ. ಕಾಲೇಜು ವಿದ್ಯಾರ್ಥಿಗಳು ಉಳಿದೆಲ್ಲಾ ವಯೋಮಾನದ ಜನರಿಗಿಂತ ಹೆಚ್ಚಾಗಿ ಸಾಮಾಜಿಕ ಜಾಲವನ್ನು ಬಳಸುತ್ತಾರೆ. ಹಾಗಾಗಿ ಈ ಜಾಲತಾಣಗಳ ಮೂಲಕ ತಮ್ಮ ಬ್ರ್ಯಾಂಡ್ನ ಉತ್ಪನ್ನಗಳ ಪ್ರಚಾರ ಮಾಡಲು ಸಂಸ್ಥೆಗಳು ವಿದ್ಯಾರ್ಥಿಗಳನ್ನು ಕೆಲಸಕ್ಕೆ ತೆಗೆದುಕೊಳ್ಳುತ್ತವೆ.
ಈ ಸ್ಥಾನಗಳು ಅರೆಕಾಲಿಕ ಸ್ವರೂಪದ್ದಾಗಿರುತ್ತವೆ ಹಾಗು ಸಣ್ಣಮಟ್ಟದ ಸ್ಟೈಫೆಂಡ್( ಶಿಷ್ಯವೇತನ) ನೀಡಲಾಗುತ್ತದೆ. ಕೆಲಸದಲ್ಲಿ ಉತ್ತಮ ಕಾರ್ಯದಕ್ಷತೆ ಪ್ರದರ್ಶಿಸಿದವರಿಗೆ ಕಾಲೇಜು ವ್ಯಾಸಂಗದ ಬಳಿಕ ಪೂರ್ಣಾವಧಿ ಹುದ್ದೆಗೆ ನೇಮಕವಾಗುವ ಅವಕಾಶಗಳು ಕೂಡ ಮುಕ್ತವಾಗಿರುತ್ತವೆ.

ಟ್ಯೂಟರ್
ಶೈಕ್ಷಣಿಕವಾಗಿ ಉನ್ನತ ದರ್ಜೆಯವರಾಗಿದ್ದರೆ ಮತ್ತು ಕಲಿಸುವ ಹಂಬಲ ಹಾಗು ಮನೋಭಾವ ನಿಮ್ಮದಾದರೆ ಚಿಕ್ಕ ಮಕ್ಕಳ ಪೋಷಕರು ತಮ್ಮ ಮಕ್ಕಳಿಗೆ ಪಾಠ ಕಲಿಸಲು ನಿಮ್ಮನ್ನು ಆರಿಸಲು ಉತ್ಸುಕರಾಗುತ್ತಾರೆ. ನಿಮ್ಮ ಈ ಹಂಬಲದ ಕುರಿತು ನಿಮ್ಮ ನೆರೆಹೊರೆಯ ಜನರಲ್ಲಿ ಮಾತಾಡಿದರೆ ಅದು ಉತ್ತಮ ಫಲಿತಾಂಶ ಒದಗಿಸುತ್ತದೆ. ಇಂತಹ ಕೆಲಸಕ್ಕೆ ಬಾಯಿಮಾತಿನ ಪ್ರಚಾರ ಹೆಚ್ಚು ಪ್ರಯೋಜನಕಾರಿ.
ವಿಜ್ಞಾನ, ಗಣಿತದಂತಹ ಬಹುಪಾಲು ವಿದ್ಯಾರ್ಥಿಗಳ ಪಾಲಿನ ಕಬ್ಬಿಣದ ಕಡಲೆಯಂತಹ ಸಬ್ಜೆಕ್ಟ್ ಮತ್ತು ಮಕ್ಕಳ ವಯೋಮಾನದ ಆಧಾರದ ಮೇಲೆ ದಿನಕ್ಕೆ ಒಂದೆರಡು ತಾಸುಗಳನ್ನು ವ್ಯಯಿಸಿ ಹೆಚ್ಚು ಹಣ ಗಳಿಸಬಹುದು.

ಉಬರ್ ಅಥವಾ ಓಲಾ ಚಾಲಕ
ನಿಮ್ಮ ನಗರದ ರಸ್ತೆ ಮತ್ತು ಮಾರ್ಗಗಳ ಕುರಿತು ನಿಮಗಿರುವ ಅರಿವನ್ನು ನಿಮ್ಮ ಹಣ ಸಂಪಾದನೆಗೆ ದಾರಿ ಮಾಡಿಕೊಳ್ಳಬಹುದು ಕಾರು ಚಾಲಕರಾಗಿ .ಕಾರು ಹಾಗು ಅದರ ಚಾಲನಾ ಪರವಾನಿಗೆ (ಡ್ರೈವಿಂಗ್ ಲೈಸೆನ್ಸ್) ಹೊಂದಿರಬೇಕಾದ್ದು ಅವಶ್ಯಕ. ಸಂಸ್ಥೆಗಳು ನಿಮ್ಮಿಂದ ನೋಂದಣಿ ಶುಲ್ಕವನ್ನು ಸಂಗ್ರಹಿಸುತ್ತವೆ. ಒಂದಕ್ಕಿಂತ ಹೆಚ್ಚು ಬ್ರ್ಯಾಂಡ್ಗಳನ್ನು ಆಯ್ದುಕೊಂಡು ನಿಮ್ಮ ಆದಾಯವನ್ನು ಹೆಚ್ಚಿಸಿಕೊಳ್ಳಲೂಬಹುದು.
ಇದು ಅತ್ಯಂತ ಸರಳ ಕೆಲಸವಾಗಿದೆ. ಸುರಕ್ಷತಾ ಅಂಶಗಳ ಪಾಲನೆ ಅತ್ಯಗತ್ಯ ಎಂಬುದನ್ನು ಎಂದಿಗೂ ಮರೆಯಕೂಡದು. ನಿಮ್ಮ ವಾಹನ ಚಾಲನೆ ಕುರಿತು ನಿಮಗೆ ಸಮಾಧಾನವಿಲ್ಲದ ಪಕ್ಷದಲ್ಲಿ ಈ ಹುದ್ದೆಯಿಂದ ದೂರವಿರುವುದು ಉತ್ತಮ ಇಲ್ಲದಿದ್ದರೆ ಪ್ರಯಾಣಿಕರ ಮತ್ತು ಪಾದಚಾರಿಗಳ ಸಾವು ನೋವುಗಳು ಉಂಟಾಗುವ ಅಪಾಯವಿರುತ್ತದೆ.

ಈವೆಂಟ್ ನಿರ್ವಹಣೆ
ಈವೆಂಟ್ ಮ್ಯನೆಜ್ಮೆಂಟ್ ಮತ್ತು ಸಾಮಾಜಿಕ ಮಾಧ್ಯಮದ ಮ್ಯಾನೇಜರ್ ಹುದ್ದೆಗೆ ಬೇಕಾಗುವಂತಹ ಉತ್ತಮ ಸಂಪರ್ಕ ಜಾಲ ಅಗತ್ಯವಿರುತ್ತದೆ. ಆದರೆ ಇಲ್ಲಿ ವ್ಯಕ್ತಿಗತ ಮಟ್ಟದ ಸಂಪರ್ಕಗಳು ಹೆಚ್ಚು ಸಹಾಯಕ್ಕೆ ಬರುತ್ತವೆ.
ಈವೆಂಟ್ ನಿರ್ವಹಣಾ ಸಂಸ್ಥೆಗಳು ಆಯೋಜಿಸುವ ಕಾರ್ಪೋರೇಟ್ ಸಮ್ಮೇಳನದಂತಹ ಬೃಹತ್ ಕಾರ್ಯಕ್ರಮಗಳಿಗೆ ಪ್ರಮೋಟರ್ ಗಳು ಮತ್ತು ಸಭಿಕರ ಅವಶ್ಯಕತೆ ಇರುತ್ತದೆ.
ಪ್ರಮೋಟರ್ ಗಳು ಈವೆಂಟ್ ಗಳ ಪ್ರಾಯೋಜಕತ್ವ ವಹಿಸಿಕೊಳ್ಳುವಂತೆ ಮನವರಿಕೆ ಮಾಡಿಕೊಡುವುದು ಈ ಹುದ್ದೆಯ ಒಂದು ಭಾಗವಾಗಿರುತ್ತದೆ, ಸಾಧ್ಯವಿರುವಷ್ಟೂ ಹೆಚ್ಚೆಚ್ಚು ಜನರು ಭಾಗವಹಿಸುವಂತೆ ಮಾಡುವುದು ಈ ಹುದ್ದೆಯ ಪ್ರಮುಖ ಜವಾಬ್ದಾರಿಯಾಗಿರುತ್ತದೆ.
ಹೊಸದಾಗಿ ಆರಂಭಗೊಂಡ ರೆಸ್ಟೋರಂಟ್ಗಳು ಗ್ರಾಹಕರನ್ನು ತಮ್ಮಲ್ಲಿಗೆ ಸೆಳೆಯಬೇಕಾಗುತ್ತದೆ. ಈ ಕಾರ್ಯಸಾಧನೆಗಾಗಿ ಅವು ಕಮಿಷನ್ ಆಧಾರದ ಮೇಲೆ ಪ್ರಮೋಟರ್ ಗಳನ್ನು ನೇಮಕ ಮಾಡಿಕೊಳ್ಳುತ್ತವೆ. ವೈಯಕ್ತಿಕ ಮತ್ತು ಸಾಮಾಜಿಕ ತಾಣಗಳ ಮೂಲಕ ಸಂಪಾದಿಸಿದ ಸಂಪರ್ಕ ಇಲ್ಲಿ ನೆರವು ನೀಡುತ್ತದೆ.

ರೆಸ್ಯೂಮ್ ತಯಾರಿಸುವುದು
ಭಾಷಾ ಕೌಶಲ್ಯ ಉತ್ತಮವಾಗಿದ್ದು ಅಸ್ತವ್ಯಸ್ತ, ಚೆದುರಿದ ವಿಷಯಗಳನ್ನು ವ್ಯವಸ್ಥಿತ ರೂಪದಲ್ಲಿ ಪುನರ್ಮೂಡಿಸುವ, ಅದನ್ನು ಅರ್ಥಪೂರ್ಣವಾಗಿಸುವ ಕಲೆ ನಿಮಗೆ ಸಿದ್ಧಿಸಿದ್ದರೆ ರೆಸ್ಯೂಮ್ ತಯಾರಿಕೆಯ ಕೆಲಸ ನಿಮಗೆ ಹೇಳಿ ಮಾಡಿಸಿದಂಥದ್ದು.
ಸಾಕಷ್ಟು ವಿದ್ಯಾರ್ಥಿಗಳಿಗೆ ಈ ದಿಸೆಯಲ್ಲಿ ಅಗತ್ಯ ಕುಶಲತೆ ಇರದೆ ಅವರು ಈ ವಿಷಯದಲ್ಲಿ ಹಿಂದುಳಿದಿರುತ್ತಾರೆ, ಹಾಗಾಗಿ ಈ ಉದ್ಯೋಗಕ್ಕೆ ಹೆಚ್ಚು ಹೆಚ್ಚು ಬೇಡಿಕೆ ಸೃಷ್ಟಿಯಾಗುತ್ತಿದೆ. ಈ ಕೆಲಸಕ್ಕೆ ಯಾವುದೇ ಆರಂಭಿಕ ಬಂಡವಾಳದ ಅವಶ್ಯಕತೆಯೂ ಇಲ್ಲ.

ನೀವು ಪಾರ್ಟ್ ಟೈಂ ಜಾಬ್ ಮಾಡಬೇಕಾ?

ರೆಸ್ಟೋರಂಟ್/ಪಾಸ್ಟ್ ಪುಡ್
ಸಾಕಷ್ಟು ಪಾಸ್ಟ್ ಪುಡ್ ಸಮೂಹಗಳು ಸಂಜೆಯ ಪಾಳಿಯಲ್ಲಿ ವಿದ್ಯಾರ್ಥಿಗಳು ಕೆಲಸ ಮಾಡಲು ಅವಕಾಶ ಒದಗಿಸುತ್ತವೆ. ವಿದ್ಯಾರ್ಥಿಗಳ ಬಿಡುವಿನ ವೇಳೆಯಾದ ಸಂಜೆ ೫ ರಿಂದ ರಾತ್ರಿ ೧೧ ರ ವರೆಗೆ ಅವರು ಕಾರ್ಯನಿರ್ವಹಿಸಲು ಅನುವು ಮಡಿಕೊಡುತ್ತವೆ. ಈ ಕೆಲಸ ಸ್ವಲ್ಪ ಕಠಿಣವೆನಿಸಿದರೂ ಸಹ ಇದು ರೆಸ್ಟೋರಂಟ್ ವ್ಯಾಪಾರದ ಬಗ್ಗೆ ಅಪಾರ ತಿಳುವಳಿಕೆ ಒದಗಿಸುತ್ತದೆ. ಜೊತೆಗೆ ಉದ್ಯೋಗಿಗಳಿಗೆ ಆಕರ್ಷಕ ರಿಯಾಯ್ತಿಗಳು ಸಹ ದೊರೆಯುತ್ತವೆ.
ಒಂದು ವೇಳೆ ನೀವು ಸರ್ವರ್ ಆಗಿ ದುಡಿಯಲು ಇಚ್ಛಿಸಿದಲ್ಲಿ ಟಿಪ್ಸ್ ಮೂಲಕ ಹೆಚ್ಚುವರಿ ಸಂಪಾದನೆ ಸಹ ಸಾಧ್ಯವಿದೆ.

ಇ-ಕಾಮರ್ಸ್ ಡೆಲಿವರಿ
ನಿಮ್ಮ ನಗರ ಮತ್ತು ತಮ್ಮ ನೆರೆಹೊರೆಯ ಪ್ರದೇಶಗಳು ಮತ್ತು ರಸ್ತೆಗಳ ಸಂಪೂರ್ಣ ತಿಳುವಳಿಕೆ ಹೊಂದಿರುವ ಕಾರಣಕ್ಕೆ ಸ್ಥಳೀಯ ಪ್ರತಿಭಾವಂತರಿಗೆ ಇ-ಕಾಮರ್ಸ್ ಸಂಸ್ಥೆಗಳು ಆದ್ಯತೆ ನೀಡುತ್ತವೆ. ಈ ಸಂಸ್ಥೆಗಳಿಗೆ ಲಾಜಿಸ್ಟಿಕ್ಸ್ ಒದಗಿಸುವವರೊಂದಿಗೆ ಸಂಪರ್ಕ ಸಾಧಿಸಿ ತಮ್ಮ ಪ್ರದೇಶಕ್ಕೆ ಡೆಲಿವರಿ ಬಾಯ್ಸ್ಗಳಾಗಿ ಅರೆಕಾಲಿಕ ಉದ್ಯೋಗ ಪಡೆದುಕೊಳ್ಳಬಹುದು. ಸಾಮಾನ್ಯವಾಗಿ ಹುದ್ದೆಗೆ ಸ್ವಂತ ವಾಹನ ಹೊಂದಿರಬೇಕಾಗುತ್ತದೆ.

English summary

Are you looking for Best Part Time Jobs?

As a student, one can sometimes have a lot of free time at hand which can be productively utilised to make money from part time jobs.
Story first published: Friday, September 27, 2019, 17:28 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X