ಜೀವನದ ಬಂಡಿ ಸಾಗಿಸಲು ಹಾಗು ನೆಮ್ಮದಿಯ ಜೀವನ ನಡೆಸಲು ಉದ್ಯೋಗ ಪ್ರತಿಯೊಬ್ಬರಿಗೂ ಬೇಕೇ ಬೇಕು. ಆದರೆ ಇಂದಿನ ಆಧುನಿಕ ಜಗತ್ತಿನಲ್ಲಿ ನಮಗೆ ಹೊಂದುವಂತಹ ಸೂಕ್ತ ನೌಕರಿ ಹುಡುಕುವುದು ಅಂದುಕೊಂಡಷ್ಟು ಸುಲಭವಲ್ಲ.
ಜೀವನದ ಬಂಡಿ ಸಾಗಿಸಲು ಹಾಗು ನೆಮ್ಮದಿಯ ಜೀವನ ನಡೆಸಲು ಉದ್ಯೋಗ ಪ್ರತಿಯೊಬ್ಬರಿಗೂ ಬೇಕೇ ಬೇಕು. ಆದರೆ ಇಂದಿನ ಆಧುನಿಕ ಜಗತ್ತಿನಲ್ಲಿ ನಮಗೆ ಹೊಂದುವಂತಹ ಸೂಕ್ತ ನೌಕರಿ ಹುಡುಕುವುದು ಅಂದುಕೊಂಡಷ್ಟು ಸುಲಭವಲ್ಲ.
ಒಳ್ಳೆಯ ವೇತನ ಹಾಗೂ ಕೆಲಸದಲ್ಲಿ ಬಡ್ತಿ, ಕೆಲಸ ಹಾಗೂ ವೈಯಕ್ತಿಕ ಜೀವನದ ಸಮತೋಲನ ಮತ್ತು ಹೇರಳ ಉದ್ಯೋಗಗಳ ಅವಕಾಶವಿರುವ ಮಹಾನಗರಗಳಲ್ಲಿ ನೌಕರಿಗಾಗಿ ಹುಡುಕಾಟ ನಡೆಸುವುದು ಜಾಣತನವಾಗಿದೆ. ಕಡಿಮೆ ಉದ್ಯೋಗವಕಾಶಗಳಿರುವ ಚಿಕ್ಕ ನಗರ ಅಥವಾ ಸಾಕಷ್ಟು ಉದ್ಯೋಗವಕಾಶ ಸಿಗುವ ಮೆಟ್ರೊಪಾಲಿಟನ್ ಸಿಟಿ ಹೀಗೆ ಯಾವುದನ್ನು ಆಯ್ಕೆ ಮಾಡಿಕೊಳ್ಳಬೇಕೆಂಬುದನ್ನು ನಿರ್ಧರಿಸುವುದು ತುಸು ಕಷ್ಟದ ಕೆಲಸ. ಆದರೂ ಭಾರತದಲ್ಲಿ ಉದ್ಯೋಗ ಮಾಡಲು ಕೆಲ ಉತ್ತಮ ನಗರಗಳ ಪಟ್ಟಿಯನ್ನು ನಿಮಗಾಗಿ ನೀಡುತ್ತಿದ್ದೇವೆ..
ಬೆಂಗಳೂರು
ನೈಸರ್ಗಿಕವಾಗಿ ಸುಂದರವಾಗಿರುವ ಹಾಗೂ ಉದ್ಯಾನಗಳ ನಗರ ಎಂದು ಹೆಸರು ಮಾಡಿರುವ ಬೆಂಗಳೂರು ಮಹಾನಗರದಲ್ಲಿ ಉದ್ಯೋಗ ಮಾಡುತ್ತೇನೆ ಎನ್ನುವವರಿಗೆ ಸಾಕಷ್ಟು ಅವಕಾಶಗಳಿವೆ. ವರದಿಯ ಪ್ರಕಾರ ಬೆಂಗಳೂರಿನಲ್ಲಿ ಸರಾಸರಿ ಸಂಬಳದ ಪ್ರಮಾಣ ೫,೮೫,೫೨೭ ರೂಪಾಯಿ ಹಾಗೂ ಬೆಳವಣಿಗೆ ದರ ಶೇ.೨೯ ರಷ್ಟಿದೆ. ತನ್ನಲ್ಲಿರುವ ಸಾವಿರಾರು ಐಟಿ ಕಂಪನಿಗಳಿಂದ ಸಿಲಿಕಾನ್ ವ್ಯಾಲಿ ಎಂದು ಹೆಸರಾಗಿರುವ ಬೆಂಗಳೂರು, ಶೇ.೭೫ ರಷ್ಟು ಎಂಜಿನೀಯರಿಂಗ್ ಪದವೀಧರರ ಮೊದಲ ಆಯ್ಕೆಯಾಗಿದೆ.
ಮುಂಬೈ
ಕನಸುಗಳನ್ನು ಸಾಕಾರಗೊಳಿಸುವ ನಗರವಾಗಿ ಹೆಸರು ಪಡೆದಿರುವ ಮುಂಬೈ ಮಹಾನಗರಿ ವಿಭಿನ್ನ ರೀತಿಯ ಉದ್ಯೋಗವಕಾಶಗಳನ್ನು ಯಾವಾಗಲೂ ಸೃಷ್ಟಿಸುತ್ತ, ಹೊಸಬರಿಗೆ ಆಶಾಕಿರಣವಾಗಿದೆ. ಮುಂಬೈನಲ್ಲಿ ಸರಾಸರಿ ವಾರ್ಷಿಕ ಸಂಬಳ ೪,೯೮,೪೭೫ ರೂಪಾಯಿಗಳಾಗಿದ್ದು, ತಲಾ ಆದಾಯ ೧,೨೫,೭೪೯ ರೂಪಾಯಿಗಳಾಗಿದೆ. ಇಲ್ಲಿ ಮನೆ ಬಾಡಿಗೆ ದರ ದುಬಾರಿ ಆಗಿದ್ದರೂ ಗಳಿಕೆಗೆ ಅಷ್ಟೇ ಹೇರಳ ಅವಕಾಶಗಳೂ ಇವೆ.
ದೆಹಲಿ
ಹೊಸದಾಗಿ ಉದ್ಯೋಗ ಆರಂಭಿಸಿ ಜೀವನ ಕಟ್ಟಿಕೊಳ್ಳಬಯಸುವವರಿಗೆ ದೆಹಲಿ ಆಕರ್ಷಕವಾಗಿದ್ದು, ಇಲ್ಲಿ ಸರಾಸರಿ ವಾರ್ಷಿಕ ೪,೮೨,೩೦೭ ರೂಪಾಯಿ ಸಂಬಳ ಪಡೆಯುವ ಸಾಧ್ಯತೆಗಳಿವೆ. ಎಎಂಆರ್‌ಸಿ (ಂಒಖಅ) ಯ ಅಧ್ಯಯನದ ಪ್ರಕಾರ ಶೇ.೩೨ ರಷ್ಟು ಉದ್ಯೋಗಾಕಾಂಕ್ಷಿಗಳು ದೆಹಲಿ ಮಹಾನಗರ ತಮ್ಮ ಮೊದಲ ಆಯ್ಕೆಯಾಗಿದೆ ಎಂದು ಹೇಳಿದ್ದು ಕಂಡು ಬಂದಿದೆ.
ಪುಣೆ
ಮಾಹಿತಿ ತಂತ್ರಜ್ಞಾನ, ಅಟೊಮೊಬೈಲ್ ಹಾಗೂ ಉತ್ಪಾದನಾ ಉದ್ದಿಮೆಗಳ ಸಂಗಮವಾಗಿರುವ ಪುಣೆ ದೇಶದ ಮತ್ತೊಂದು ಬೃಹತ್ ಉದ್ಯೋಗವಕಾಶಗಳ ನಗರವಾಗಿದೆ. ಸರಾಸರಿ ವಾರ್ಷಿಕ ೫,೩೦,೯೧೮ ರೂಪಾಯಿ ಸಂಬಳ ಪಡೆಯುವ ಸಾಧ್ಯತೆ ಇರುವ ಇದು ಹೊಸಬರಿಗೂ ಅವಕಾಶಗಳ ಆಗರವಾಗಿದೆ.
ಚೆನ್ನೈ
ಅಟೊಮೊಬೈಲ್ ಉದ್ದಿಮೆಯ ರಾಜಧಾನಿ ಎಂದು ಕರೆಸಿಕೊಳ್ಳುವ ಚೆನ್ನೈ, ಹಲವಾರು ದಕ್ಷಿಣ ಭಾರತದ ಕಂಪನಿಗಳ ಪ್ರಮುಖ ಕೇಂದ್ರವಾಗಿದೆ. ಸಮತೋಲಿತ ಬಜೆಟ್ ನಲ್ಲಿ ಜೀವನ ಸಾಗಿಸಬಹುದಾದ ಉತ್ತಮ ನಗರಗಳಲ್ಲಿ ಚೆನ್ನೈ ಒಂದಾಗಿದೆ. ವಾರ್ಷಿಕವಾಗಿ ಸರಾಸರಿ ೪,೪೪,೨೩೫ ರೂಪಾಯಿಗಳಷ್ಟು ಸಂಬಳ ಪಡೆಯಬಹುದಾದ ಹಾಗೂ ಶೇ.೬ ರಷ್ಟು ಉದ್ಯೋಗದಲ್ಲಿ ಬೆಳವಣಿಗೆ ಹೊಂದಿರುವ ನಗರ ಇದಾಗಿದೆ.
ಹೈದರಾಬಾದ್
ಮುತ್ತುಗಳ ನಗರಿ ಹೈದರಾಬಾದ್ ತನ್ನಲ್ಲಿನ ವಿಶಿಷ್ಟ ಪುರಾತನ ಸ್ಮಾರಕಗಳಿಂದಲೂ ಹೆಸರಾಗಿದೆ. ಈ ಮಹಾನಗರದಲ್ಲಿ ಜಗತ್ತಿನ ಬೃಹತ್ ಕಂಪನಿಗಳಾದ ಗೂಗಲ್, ಫೇಸ್ ಬುಕ್ ಮತ್ತು ಮೈಕ್ರೊಸಾಫ್ಟ್ ಕಚೇರಿಗಳೂ ಇವೆ ಎಂಬುದನ್ನು ತಿಳಿದರೆ ಆಶ್ಚರ್ಯವಾಗುತ್ತದೆ. ವಾರ್ಷಿಕ ಸರಾಸರಿ ೪,೮೯,೫೦೫ ರೂಪಾಯಿ ಸಂಬಳ ನೀಡುವ ಇದು ದೇಶದ ಶೇ.೩೦ ರಷ್ಟು ಜನರ ಮೆಚ್ಚಿನ ಆಯ್ಕೆಯಾಗಿದೆ.
ಚಂಡೀಗಢ
ಸುಂದರ ನಗರವಾಗಿ ಕರೆಸಿಕೊಳ್ಳುವ ಚಂಡೀಗಢ ವಾಸಿಸಲು ಅತ್ಯಂತ ಮಧುರವಾದ ನಗರವಾಗಿದೆ. ಹೊಸದಾಗಿ ನೌಕರಿ ಜೀವನ ಆರಂಭಿಸಲು ಈ ನಗರ ಸೂಕ್ತವಾಗಿದೆ. ಟೆಲಿಕಮ್ಯುನಿಕೇಶನ್ ಕ್ಷೇತ್ರದ ಹಲವಾರು ಕಂಪನಿಗಳನ್ನು ಹೊಂದಿರುವ ಇಲ್ಲಿ ವಾರ್ಷಿಕ ಸರಾಸರಿ ೫,೫೨,೪೮೫ ರೂಪಾಯಿ ಸಂಬಳ ಪಡೆಯುವ ಅವಕಾಶವಿದೆ. ಇಲ್ಲಿನ ಶೇ.೨೨ ರಷ್ಟು ಜನ ವರ್ಷಕ್ಕೆ ೧೦ ಲಕ್ಷ ರೂಪಾಯಿಗಳಿಗಿಂತಲೂ ಹೆಚ್ಚು ಗಳಿಸುವುದು ವಿಶೇಷವಾಗಿದೆ. ಉತ್ತಮ ಜೀವನ ಸೇರಿದಂತೆ ಒಳ್ಳೆಯ ಉದ್ಯೋಗ ಭವಿಷ್ಯವನ್ನು ಚಂಡೀಗಢ ನೀಡುತ್ತದೆ.
ಗುರುಗ್ರಾಮ
ಈ ಮುಂಚೆ ಗುರಗಾಂವ್ ಎಂದು ಕರೆಯಲ್ಪಡುತ್ತಿದ್ದ ಹರಿಯಾಣಾ ರಾಜ್ಯದ ಪ್ರಮುಖ ನಗರ ಗುರುಗ್ರಾಮ ಉದ್ಯೋಗಾವಕಾಶಗಳಿಗೆ ಹೆಸರಾಗಿದೆ. ಇಲ್ಲಿ ಶೇ.೧೧ ರಷ್ಟು ಉದ್ಯೋಗ ಬೆಳವಣಿಗೆಯ ಅವಕಾಶಗಳಿವೆ. ಇಲ್ಲಿ ಕೆಲಸ ಮಾಡುವ ಶೇ.೫೯ ರಷ್ಟು ಉದ್ಯೋಗಿಗಳು ವರ್ಷಕ್ಕೆ ೩ ರಿಂದ ೧೦ ಲಕ್ಷ ರೂಪಾಯಿ ಸಂಬಳ ಪಡೆಯುತ್ತಿದ್ದು, ಕೆಲಸದಲ್ಲಿ ಉನ್ನತಿ ಹೊಂದುವ ಅವಕಾಶಗಳು ಹೇರಳವಾಗಿವೆ. ಗುರುಗ್ರಾಮನಲ್ಲಿ ವಾರ್ಷಿಕ ಸರಾಸರಿ ಸಂಬಳ ೭,೫೦,೦೦೦ ರೂಪಾಯಿಗಳಾಗಿದೆ.
More From GoodReturns

Bengaluru 2nd Airport: ಬೆಂಗಳೂರು 2ನೇ ವಿಮಾನ ನಿಲ್ದಾಣ ಯೋಜನೆಗೆ ಹೊಸ ಶಕ್ತಿ…ಸಿಎಂ ಸಿದ್ದರಾಮಯ್ಯ ಮಹತ್ವದ ಘೋಷಣೆ!

IPL 2026: ಕೊನೆಗೂ ಐಪಿಎಲ್ 2026ರ ಆರಂಭದ ದಿನಾಂಕ ಬಹಿರಂಗ! ಯಾವಾಗ ಗೊತ್ತಾ?

Bengaluru 2nd Airport: ಬೆಂಗಳೂರು 2ನೇ ಏರ್ಪೋರ್ಟ್ಗೆ ಇದೇ ಸ್ಥಳ ಬೆಸ್ಟ್; ಉದ್ಯಮಿ ಕೊಟ್ರು ಬಿಗ್ ಟ್ವಿಸ್ಟ್

LPG Gas Helpline Number: ದೇಶದಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ; ತುರ್ತು ಅಗತ್ಯಕ್ಕೆ ಇಲ್ಲಿದೆ ಸಹಾಯವಾಣಿ

Gold Price Bengaluru: ಆಭರಣ ಪ್ರಿಯರಿಗೆ ಗುಡ್ನ್ಯೂಸ್…ಚಿನ್ನದ ಬೆಲೆಯಲ್ಲಿ 19,600 ರೂ. ಕುಸಿತ

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

Bengaluru Metro: ಗ್ರೀನ್ ಲೈನ್ ಮೆಟ್ರೋ ಪ್ರಯಾಣಿಕರಿಗೆ ಸಿಹಿಸುದ್ದಿ! ಮತ್ತೊಂದು ರೈಲಿನ ಆಗಮನ

New Airport: ಕಲ್ಯಾಣ ಕರ್ನಾಟಕ ಜನರಿಗೆ ಗುಡ್ನ್ಯೂಸ್; ಈ ಭಾಗದಲ್ಲಿ ಹೊಸ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಚಿಂತನೆ

Hosur Airport: ಬೆಂಗಳೂರು ಹತ್ತಿರ ಹೊಸೂರು ಏರ್ಪೋರ್ಟ್ಗಾಗಿ 2,979 ಎಕರೆ ಭೂಸ್ವಾಧೀನ-ಎಲ್ಲೆಂದು ತಿಳಿಯಿರಿ

Bengaluru Metro: ಬೆಂಗಳೂರು ಮೆಟ್ರೋ 3ನೇ ಹಂತ ಮತ್ತೆ ವಿಳಂಬ, ಯಾವ ವರ್ಷಕ್ಕೆ ಈ ಸೇವೆ ಸಿಗಲಿದೆ ತಿಳಿಯಿರಿ

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ



Click it and Unblock the Notifications