ಕೊರೊನಾ ಬಿಕ್ಕಟ್ಟು ಉತ್ತುಂಗದಲ್ಲಿದ್ದ ಈ ವರ್ಷದ ಮಾರ್ಚ್ ತಿಂಗಳಲ್ಲಿ ಕನಿಷ್ಠ ಮಟ್ಟ ಮುಟ್ಟಿದ್ದ ಭಾರತದ ಷೇರು ಮಾರುಕಟ್ಟೆ ಅದ್ಭುತ ಚೇತರಿಕೆ ಕಂಡಿದೆ. ಕೊರೊನಾ ಲಸಿಕೆಯಲ್ಲಿನ ಪ್ರಗತಿ ಹಾಗೂ ಜಾಗತಿಕ ಮಾರುಕಟ್ಟೆಯಲ್ಲಿನ ಪ್ರಭಾವದಿಂದಾಗಿ ಬಿಎಸ್ ಇ ಸೆನ್ಸೆಕ್ಸ್, ಎನ್ ಎಸ್ ಇ ನಿಫ್ಟಿ ಸೂಚ್ಯಂಕವು ಸಾರ್ವಕಾಲಿಕ ಗರಿಷ್ಠ ಮಟ್ಟವನ್ನು ತಲುಪಿದೆ.
ಶುಕ್ರವಾರದಂದು (ಡಿಸೆಂಬರ್ 18, 2020) ಸೆನ್ಸೆಕ್ಸ್, ನಿಫ್ಟಿ ಅದ್ಭುತ ದಾಖಲೆ ಬರೆದಿದೆ. ಸತತ ಆರನೇ ದಿನ ಏರಿಕೆ ಕಂಡಿದೆ. ಇನ್ನೂ ಏರಿಕೆ ಮುಂದುವರಿದಿರುವುದರಿಂದ ಅವಕಾಶ ಇದ್ದೇ ಇದೆ. ಅಂದಹಾಗೆ ಭಾರತದ ಬ್ರೋಕರೇಜ್ ಸಂಸ್ಥೆ ಮೋತಿಲಾಲ್ ಓಸ್ವಾಲ್ ಫೈನಾನ್ಷಿಯಲ್ ಸರ್ವೀಸಸ್ ಲಿಮಿಟೆಡ್ ಈಚಿನ ವರದಿಯಲ್ಲಿ ಕೆಲವು ಶಿಫಾರಸು ಮಾಡಿದೆ.
2021ನೇ ಸಾಲಿಗೆ ಮೋತಿಲಾಲ್ ಓಸ್ವಾಲ್ ನಿಂದ ಟಾಪ್ ಲಾರ್ಜ್ ಕ್ಯಾಪ್ ಫೈನಾನ್ಸ್ ಮತ್ತು ಬ್ಯಾಂಕಿಂಗ್ ವಲಯದ ಷೇರುಗಳನ್ನು ಶಿಫಾರಸು ಮಾಡಲಾಗಿದೆ. ಆ ವಿವರ ಹೀಗಿದೆ:

ಐಸಿಐಸಿಐ ಬ್ಯಾಂಕ್
ಬ್ರೋಕರೇಜ್ ಸಂಸ್ಥೆಯ ಪ್ರಕಾರ, ಐಸಿಐಸಿಐ ಬ್ಯಾಂಕ್ ರೀಟೇಲ್ ಡೆಪಾಸಿಟ್ ಗಳಲ್ಲಿ ಪ್ರಬಲ ಬೆಳವಣಿಗೆ ಮುಂದುವರಿಸಿದೆ. ಖಾಸಗಿ ಬ್ಯಾಂಕ್ ಗಳ ಪೈಕಿಯೇ ಅತ್ಯಂತ ಕಡಿಮೆ ಸಾಲದ ದರ ಹೊಂದಿರುವ ಬ್ಯಾಂಕ್ ಇದು. ಆದರೂ ಮೋತಿಲಾಲ್ ಓಸ್ವಾಲ್ ನಿಂದ ಬ್ಯಾಂಕ್ ಆಸ್ತಿಯ ಗುಣಮಟ್ಟ ಒತ್ತಡದಲ್ಲಿದೆ ಎಂದಿದೆ.
ಮುತ್ತೂಟ್ ಫೈನಾನ್ಸ್
ಚಿನ್ನದ ಬೆಲೆಯಲ್ಲಿನ ಏರಿಕೆ ಹಾಗೂ ಕೊರೊನಾ ಲಾಕ್ ಡೌನ್ ನಿಂದ ಚಿನ್ನದ ಸಾಲಕ್ಕೆ ಬಂದಿರುವ ಬೇಡಿಕೆ ಕಾರಣಕ್ಕೆ ಮುತ್ತೂಟ್ ಫೈನಾನ್ಸ್ ಬೆಳವಣಿಗೆ ಬಗ್ಗೆ ನಿರೀಕ್ಷೆ ಮಾಡಲಾಗಿದೆ. 2020- 21ನೇ ಸಾಲಿಗೆ ಮುತ್ತೂಟ್ ಫೈನಾನ್ಸ್ ವರ್ಷದಿಂದ ವರ್ಷಕ್ಕೆ 20% AUM (ಅಸೆಟ್ ಅಂಡರ್ ಮ್ಯಾನೇಜ್ ಮೆಂಟ್) ಮತ್ತು ಸಿಎಜಿಆರ್ ಹದಿನೈದು ಪರ್ಸೆಂಟ್ ನಿರೀಕ್ಷಿಸಲಾಗಿದೆ.
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ
ಉಳಿದ ಸಾರ್ವಜನಿಕ ವಲಯದ ಬ್ಯಾಂಕ್ ಗಳಿಗೆ ಹೋಲಿಸಿದಲ್ಲಿ ಮಾರ್ಕೆಟ್ ಪಾಲು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಹೊಂದಿದೆ. ಎಸ್ ಬಿಐ ಆಸ್ತಿ ಹಾಗೂ ಸಾಲ ಮತ್ತು ಫ್ರಾಂಚೈಸ್ ಪ್ರಬಲವಾಗಿದೆ. ಸದ್ಯಕ್ಕೆ ಮೌಲ್ಯಮಾಪನ ಉತ್ತಮವಾಗಿದೆ ಎನ್ನಲಾಗಿದೆ.
ಇತರ ಆಯ್ಕೆಗಳು
* ಭಾರ್ತಿ ಏರ್ ಟೆಲ್
* ಇನ್ಫೋಸಿಸ್
* ಹಿಂದೂಸ್ತಾನ್ ಯುನಿಲಿವರ್ ಲಿಮಿಟೆಡ್ (ಎಚ್ ಯುಎಲ್)
* ಹೀರೋ ಮೋಟೋ ಕಾರ್ಪ್
* ಅಲ್ಟ್ರಾಟೆಕ್ ಸಿಮೆಂಟ್
* ಡಿವೀಸ್ ಲ್ಯಾಬ್ಸ್
* ಸನ್ ಫಾರ್ಮಾ


Click it and Unblock the Notifications