ಎಲ್ಲಾ ಯಶಸ್ಸಿನ ಕಥೆಗಳು ನಮಗೆ ಒಂದು ವಿಷಯವನ್ನು ಕಲಿಸುತ್ತವೆ, ಅದುವೇ ನಮ್ಮ ಯಶಸ್ಸಿಗೆ ಯಾವುದೇ ಶಾರ್ಟ್‌ಕಟ್ ಇಲ್ಲ ಎಂಬುವುದು ಆಗಿದೆ. ಯಾವುದೇ ಯಶಸ್ಸನ್ನು ಪಡೆಯಲು ಕಠಿಣ ಪರಿಶ್ರಮವನ್ನು ಮಾಡಿದರೆ ಮಾತ್ರ ನೀವು ಬಯಸಿದ ಗುರಿಗಳನ್ನು ತಲುಪಲು ಸಾಧ್ಯ. ಇಂದು ನಾವು ತಮ್ಮ ಪಾನ್ ಅಂಗಡಿಯನ್ನು 300 ಕೋಟಿ ರೂ.ಗಳ ಡೈರಿ ಸಾಮ್ರಾಜ್ಯವನ್ನಾಗಿ ಪರಿವರ್ತಿಸಿದ ನಾಲ್ವರು ಸಹೋದರರ ಯಶೋಗಾಥೆಯನ್ನು ನಿಮಗೆ ತಿಳಿಸಲಿದ್ದೇವೆ.
1987ರಲ್ಲಿ ಚವಂದ್ ಗ್ರಾಮದ ನಾಲ್ಕು ಸಹೋದರರು ಜೀವನದಲ್ಲಿ ಏನಾದರೂ ಯಶಸ್ಸಿನ ಮೂಲಕ ಹಣ ಸಂಪಾದನೆ ಮಾಡಬೇಕು ಎಂಬ ಉದ್ದೇಶದಿಂದ ಗುಜರಾತ್‌ನ ಅಮ್ರೇಲಿಗೆ ತೆರಳಿದರು. ಹೊಸ ನಗರದಲ್ಲಿ, ನಾಲ್ವರು ಸಹೋದರರಾದ ದಿನೇಶ್, ಜಗದೀಶ್, ಭೂಪತ್ ಮತ್ತು ಸಂಜೀವ್ ಮನೆಯಿಂದ ಹೊರಟು ತಂದೆ ಕೊಟ್ಟ ಹಣದಿಂದ ಪಾನ್ ಅಂಗಡಿಯನ್ನು ತೆರೆದರು. ಅವರ ತಂದೆ ಹಳ್ಳಿಯಲ್ಲಿ ಕೃಷಿಕರಾಗಿದ್ದರು.
ಹಿರಿಯ ಸಹೋದರ ದಿನೇಶ್ ಸಲಹೆ ಮೇರೆಗೆ ಸಿಟಿ ಬಸ್ ನಿಲ್ದಾಣದ ಬಳಿ ಪಾನ್ ಶಾಪ್ ತೆರೆಯಲಾಗಿದ್ದು, ಗ್ರಾಹಕರಿಂದ ಉತ್ತಮ ಪ್ರತಿಕ್ರಿಯೆ ಲಭಿಸಿದೆ. ಈ ಪುಟ್ಟ ಅಂಗಡಿಯಲ್ಲಿ ತಂಪು ಪಾನೀಯಗಳನ್ನೂ ಮಾರುತ್ತಿದ್ದರು. ಮೂರು ದಶಕಗಳ ನಂತರ, ಅವರು ನೂರಾರು ವಿಧದ ಡೈರಿ ಮತ್ತು ಆಹಾರ ಉತ್ಪನ್ನಗಳನ್ನು ಮಾರಾಟ ಮಾಡುವ 300 ಕೋಟಿ ರೂಪಾಯಿಗಳ ಸಾಮ್ರಾಜ್ಯದ ಅಡಿಪಾಯವನ್ನು ಹಾಕಲು ಆರಂಭ ಮಾಡಿದರು.
ಪಾನ್ ಅಂಗಡಿಯ ಆದಾಯದಿಂದ ಸಂಪಾದನೆ!
ಸಹೋದರರ ಪ್ರಕಾರ, ಪಾನ್ ಅಂಗಡಿಯಿಂದ ಬರುವ ಆದಾಯವು ಅವರಿಗೆ ಚೆನ್ನಾಗಿ ಸಂಪಾದಿಸಲು ಸಹಾಯ ಮಾಡಿದೆ. ಅವರ ಶಿಕ್ಷಣದ ವೆಚ್ಚವನ್ನು ಭರಿಸಲು ಕೂಡಾ ಸಹಾಯಕವಾಗಿದೆ. ಆದರೂ ಆರಂಭದಲ್ಲಿ ಕೆಲವು ಬಿಕ್ಕಟ್ಟುಗಳು ಉಂಟಾಗಿದೆ. 1989 ರಲ್ಲಿ, ನಗರವು ಅಭಿವೃದ್ಧಿ ಹೊಂದಿತು. ಈ ಸಂದರ್ಭದಲ್ಲಿ ಅವರ ಅಂಗಡಿಯನ್ನು ಕೆಡವಲಾಯಿತು. ಸಹೋದರರು ನಂತರ ಬಸ್ ನಿಲ್ದಾಣದ ಬಳಿ ಒಂದು ಸಣ್ಣ ಅಂಗಡಿಯನ್ನು ಖರೀದಿ ಮಾಡಿದರು.
ವ್ಯವಹಾರದಲ್ಲಿ ಪ್ರಯೋಗ
ಈ ವರ್ಷಗಳಲ್ಲಿ ಅವರು ತಮ್ಮ ವ್ಯವಹಾರದಲ್ಲಿ ಪ್ರಯೋಗವನ್ನು ಆರಂಭ ಮಾಡಿದರು. 1993ರ ಜನ್ಮಾಷ್ಟಮಿಯಂದು ಐಸ್ ಕ್ರೀಂ ಮಾರಾಟವನ್ನೂ ಆರಂಭಿಸಿದರು. ಇದಕ್ಕಾಗಿ ಸ್ಥಳೀಯ ಕಂಪನಿಯಿಂದ ಐಸ್ ಕ್ರೀಮ್ ಗಳನ್ನು ಹೊರಗುತ್ತಿಗೆ ಪಡೆದು ಕಮಿಷನ್ ಗೆ ಮಾರಾಟ ಮಾಡುತ್ತಿದ್ದರು. ವ್ಯಾಪಾರವು ಉತ್ತಮವಾಗಿ ನಡೆಯಿತು. ಇದು ಅವರ ಸ್ವಂತ ಐಸ್ ಕ್ರೀಮ್ ಘಟಕವನ್ನು ಸ್ಥಾಪಿಸಲು ದಾರಿ ಮಾಡಿಕೊಟ್ಟಿತು. 1996 ರಿಂದ ಅವರು ಐಸ್‌ಕ್ರೀಮ್ ಮಾಡುವುದನ್ನು ಕಲಿತರು. ನಂತರ ತಾವೇ ತಯಾರಿಸಿದ ಐಸ್ ಕ್ರೀಮ್‌ಗಳನ್ನು ಮಾರಾಟ ಮಾಡಲು ಆರಂಭ ಮಾಡಿದರು.
ಗ್ರಾಹಕರ ವಿಸ್ತರಣೆಗೆ ಕಾರಣವಾದ ಐಸ್‌ಕ್ರೀಮ್ ಅಂಗಡಿ
ಐಸ್ ಕ್ರೀಮ್‌ಗಳನ್ನು ಮಾರಾಟ ಮಾಡಲು ಆರಂಭ ಮಾಡಿದ್ದು ಗ್ರಾಹಕರ ನೆಲೆಯ ವಿಸ್ತರಣೆಗೆ ಕಾರಣವಾಯಿತು. 1998 ರಲ್ಲಿ, ಅವರು ಕಂಪನಿಯನ್ನು ಶ್ರೀ ಶೀತಲ್ ಇಂಡಸ್ಟ್ರೀಸ್‌ನ ಮಾಲೀಕತ್ವವಾಗಿ ತಮ್ಮ ಅಂಗಡಿಯ ಅಭಿವೃದ್ಧಿ ಮಾಡಿದರು. ಕಂಪನಿಯು ನಂತರ ಮಾರುಕಟ್ಟೆಯನ್ನು ವಿಸ್ತರಿಸಲು ಪ್ರಾರಂಭಿಸಿತು. ನಗರದೊಳಗೆ ಚಿಲ್ಲರೆ ಮಾರಾಟ ಮಳಿಗೆಗಳಲ್ಲಿ ಐಸ್ ಕ್ರೀಮ್‌ಗಳನ್ನು ಮಾರಾಟ ಮಾಡಲು ಪ್ರಾರಂಭಿಸಿತು ಮತ್ತು ಅಂತಿಮವಾಗಿ ಜಿಲ್ಲೆ ಮತ್ತು ರಾಜ್ಯದ ಇತರ ಭಾಗಗಳಲ್ಲಿ ಐಸ್‌ಕ್ರೀಮ್ ಮಾರಾಟ ಮಾಡಲು ಆರಂಭ ಮಾಡಿದರು.
ಸಮಸ್ಯೆಯಾದ ವಿದ್ಯುತ್ ಕಡಿತ
ವಿದ್ಯುತ್ ಕಡಿತ ಮತ್ತು ವಿದ್ಯುತ್ ಏರಿಳಿತವು ಅವರ ವ್ಯವಹಾರಕ್ಕೆ ಅಡ್ಡಿಯಾಗಿತ್ತು. ಆದರೆ ನಂತರ ಅದೃಷ್ಟವು ಅವರ ಯಶಸ್ಸಿಗೆ ನಾಂದಿಯಾಯಿತು. ಅಂದಿನ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಆ ಸಂದರ್ಭದಲ್ಲಿ ವಿದ್ಯುತ್ ನೀಡುವ ಯೋಜನೆಯಾಗಿ ಜ್ಯೋತಿ ಯೋಜನೆಯನ್ನು ಘೋಷಿಸಿದರು. ಆ ಬಳಿಕ ಕಂಪನಿಯು ಹೊಸ ಹಾಲಿನ ಉತ್ಪನ್ನಗಳನ್ನು ಪರಿಚಯಿಸಿತು. 2012 ರಲ್ಲಿ ಅವರು ಕಂಪನಿಯನ್ನು ಶೀತಲ್ ಕೂಲ್ ಪ್ರಾಡಕ್ಟ್ಸ್ ಪ್ರೈವೇಟ್ ಲಿಮಿಟೆಡ್ ಎಂದು ಮರುನಾಮಕರಣ ಮಾಡಿದರು. 2016 ರ ಹೊತ್ತಿಗೆ ಕಂಪನಿಯು ತಿಂಡಿ ತಿನಿಸುಗಳ ಮಾರುಕಟ್ಟೆ ಆರಂಭ ಮಾಡಿತು. ಸಾರ್ವಜನಿಕ ಸೀಮಿತ ಕಂಪನಿ, ಶೀತಲ್ ಕೂಲ್ ಪ್ರಾಡಕ್ಟ್ಸ್ ಲಿಮಿಟೆಡ್ ಎಂದು ಹೆಸರು ನೀಡಿತು. ಇಂದು, ಕಂಪನಿಯು ದಿನಕ್ಕೆ 2 ಲಕ್ಷ ಲೀಟರ್ ಹಾಲನ್ನು ಸಂಸ್ಕರಿಸುತ್ತದೆ. 1,500 ಉದ್ಯೋಗಿಗಳಲ್ಲಿ 800 ಮಹಿಳೆಯರು ಆಗಿದ್ದಾರೆ. ಇದು ಎಂಟು ವಿಭಾಗಗಳಲ್ಲಿ ವ್ಯವಹಾರ ನಡೆಸುತ್ತಿದೆ. ಮಾರುಕಟ್ಟೆಯಲ್ಲಿ 500 ಕ್ಕೂ ಹೆಚ್ಚು ಉತ್ಪನ್ನಗಳನ್ನು ನೀಡುತ್ತದೆ.


Click it and Unblock the Notifications