For Quick Alerts
ALLOW NOTIFICATIONS  
For Daily Alerts

ಈ 4 ಹೂಡಿಕೆ ಮೇಲೆ ಬರುವ ಆದಾಯಕ್ಕೆ ಭಾರತದಲ್ಲಿ ತೆರಿಗೆ ಇಲ್ಲ

|

ಹಣ ಹೂಡಿಕೆ ಮಾಡುವಾಗ ಏನೆಲ್ಲ ಗಮನಿಸಬೇಕು? ಮುಖ್ಯವಾಗಿ ನಾವು ಹಾಕುವ ಹಣ ಸುರಕ್ಷಿತವಾಗಿರಬೇಕು, ಅದರ ಮೇಲೆ ರಿಟರ್ನ್ಸ್ ಚೆನ್ನಾಗಿ ಬರಬೇಕು ಹಾಗೂ ಆ ಆದಾಯಕ್ಕೆ ಯಾವುದೇ ತೆರಿಗೆ ಇರಬಾರದು. ಹೀಗೆಲ್ಲ ಲೆಕ್ಕಾಚಾರ ಬಂದುಬಿಡುತ್ತದೆ. ಆದರೆ ಕೆಲವೇ ಹೂಡಿಕೆಗಳ ಮೇಲಿನ ಆದಾಯಕ್ಕೆ ಮಾತ್ರ ಭಾರತದಲ್ಲಿ ತೆರಿಗೆ ಇಲ್ಲ.

ಬ್ಯಾಂಕ್ ಡೆಪಾಸಿಟ್ ಇರಲಿ, ಷೇರುಗಳಿಂದ ಬರುವ ಆದಾಯ ಇರಲಿ ತೆರಿಗೆ ಬಿದ್ದೇ ಬೀಳುತ್ತದೆ. ಬ್ಯಾಂಕ್ ಠೇವಣಿ ಮೇಲಿನ ಆದಾಯಕ್ಕೂ ತೆರಿಗೆ ಇದೆ. ಅದೇ ರೀತಿ ಷೇರುಗಳ ಮಾರಾಟದಿಂದ ಬರುವ ಆದಾಯವನ್ನು ಕ್ಯಾಪಿಟಲ್ ಗೇಯ್ನ್ಸ್ ಎಂದು ತೋರಿಸಬೇಕಾಗುತ್ತದೆ. ಆದರೆ ಇಲ್ಲಿ ನೀಡಲಾಗುತ್ತಿರುವ ನಾಲ್ಕು ಆದಾಯಕ್ಕೆ ತೆರಿಗೆ ಇಲ್ಲ. ಅವು ಯಾವುದು ಎಂದು ತಿಳಿಯುವುದಕ್ಕೆ ಮುಂದೆ ಓದಿ.

ಪಬ್ಲಿಕ್ ಪ್ರಾವಿಡೆಂಟ್ ಫಂಡ್

ಪಬ್ಲಿಕ್ ಪ್ರಾವಿಡೆಂಟ್ ಫಂಡ್

ಭಾರತದಲ್ಲಿ ಪಬ್ಲಿಕ್ ಪ್ರಾವಿಡೆಂಟ್ ಫಂಡ್ ನ ಆದಾಯಕ್ಕೆ ತೆರಿಗೆ ಇಲ್ಲ. ಸೆಕ್ಷನ್ 80C ಅಡಿಯಲ್ಲಿ PPFಗೆ ಅವಳಿ ಅನುಕೂಲ ಇದೆ. ಜತೆಗೆ ಹೂಡಿಕೆ ದೃಷ್ಟಿಯಿಂದ ನೋಡಿದರೆ ಪಿಪಿಎಫ್ ಮೇಲೆ ಬಡ್ಡಿ ದರ ಕೂಡ ಚೆನ್ನಾಗಿದೆ. ಒಂದು ಸಮಸ್ಯೆ ಏನೆಂದರೆ, ಹೂಡಿಕೆ ಮೊತ್ತದ ಮೇಲೆ ಮಿತಿ ಇದೆ. 1.5 ಲಕ್ಷ ರುಪಾಯಿ ತನಕ ಮಾತ್ರ ಹಣ ಹೂಡಬಹುದು. ದೀರ್ಘಾವಧಿಗೆ ಹೂಡಿಕೆ ಮಾಡುವಂತಿದ್ದರೆ ಅತ್ಯುತ್ತಮ ಆಯ್ಕೆ ಆಗುತ್ತದೆ. ಆದರೆ ಕನಿಷ್ಠ ಇಷ್ಟು ಅವಧಿಗೆ ಹಣ ವಿಥ್ ಡ್ರಾ ಮಾಡಲು ಸಾಧ್ಯವಿಲ್ಲ. ನಿಮಗೆ ದೀರ್ಘಾವಧಿಗೆ ಹೂಡಿಕೆ ಮಾಡುವ ಇರಾದೆ ಇಲ್ಲದಿದ್ದರೆ ಪಿಪಿಎಫ್ ನಿಮಗಲ್ಲ. ಪಿಪಿಎಫ್ ಗೆ ಭಾರತ ಸರ್ಕಾರದ ಬೆಂಬಲವಿದೆ. ಆದ್ದರಿಂದ ಇದು ಅತ್ಯಂತ ಸುರಕ್ಷಿತವೂ ಹೌದು.

ಸುಕನ್ಯಾ ಸಮೃದ್ಧಿ

ಸುಕನ್ಯಾ ಸಮೃದ್ಧಿ

ಸುಕನ್ಯಾ ಸಮೃದ್ಧಿಯಿಂದ ಬರುವ ಆದಾಯಕ್ಕೂ ತೆರಿಗೆ ಇಲ್ಲ. ಆದಾಯ ಮಾತ್ರವಲ್ಲ, ಜತೆಗೆ ಹೂಡಿಕೆ ಮಾಡುವ ಮೊತ್ತಕ್ಕೂ ಆದಾಯ ತೆರಿಗೆ ಕಾಯ್ದೆ 80C ಅಡಿಯಲ್ಲಿ ವಿನಾಯಿತಿ ದೊರೆಯುತ್ತದೆ. ಇನ್ನು ಬಡ್ಡಿ ದರವು 8.40 ಪರ್ಸೆಂಟ್ ಇದೆ. ಅಂದ ಹಾಗೆ ಈ ಬಡ್ಡಿ ದರವನ್ನು ಸರ್ಕಾರ ಬದಲಾವಣೆ ಮಾಡುತ್ತಿರುತ್ತದೆ. ಈ ಖಾತೆಯನ್ನು ಹೆಣ್ಣುಮಗುವಿನ ಹೆಸರಿನಲ್ಲಿ ಮಾತ್ರ ತೆರೆಯಲು ಸಾಧ್ಯ. ಆ ಹೆಣ್ಣುಮಗುವಿಗೆ 18 ವರ್ಷ ತುಂಬಿದ ಮೇಲಷ್ಟೇ ಅರ್ಧ ಮೊತ್ತವನ್ನು ವಿಥ್ ಡ್ರಾ ಮಾಡಲು ಸಾಧ್ಯ. ಇನ್ನು ಆ ಖಾತೆಯನ್ನು ಸ್ಥಗಿತಗೊಳಿಸಬೇಕು ಅಂದುಕೊಂಡರೆ ಆ ಹೆಣ್ಣುಮಗುವಿಗೆ 20 ವರ್ಷ ಪೂರ್ತಿಯಾಗಬೇಕು.

ವಾಲಂಟರಿ ಪ್ರಾವಿಡೆಂಟ್ ಫಂಡ್ (ವಿಪಿಎಫ್)

ವಾಲಂಟರಿ ಪ್ರಾವಿಡೆಂಟ್ ಫಂಡ್ (ವಿಪಿಎಫ್)

ಪ್ರಾವಿಡೆಂಟ್ ಫಂಡ್ ಗೆ ಹೊರತಾಗಿ ಹೂಡಿಕೆದಾರರು ವಾಲಂಟರಿ ಪ್ರಾವಿಡೆಂಟ್ ಫಂಡ್ (ವಿಪಿಎಫ್) ಮೂಲಕ ಹೆಚ್ಚುವರಿ ಹಣ ಹಾಕಬಹುದು. ತೆರಿಗೆ ಉಳಿತಾಯಕ್ಕೆ ಇದು ಮತ್ತೊಂದು ಉತ್ತಮ ದಾರಿ. ಬಡ್ಡಿಯ ಆದಾಯಕ್ಕೆ ಯಾವುದೇ ತೆರಿಗೆ ಇಲ್ಲ. ಆದರೆ ನೀವು ಐದು ವರ್ಷಗಳ ಕಾಲ ಹೂಡಿಕೆ ಮಾಡಿರಬೇಕು. ವಿಪಿಎಫ್ ಗೆ ಕೂಡ ಇಪಿಎಫ್ ರೀತಿಯಲ್ಲೇ ಬಡ್ಡಿ ದರ ಬರುತ್ತದೆ. ಐದು ವರ್ಷದ ನಂತರ ಗಳಿಸಿದ ಬಡ್ಡಿಗೆ ತೆರಿಗೆ ಇಲ್ಲ. ಬ್ಯಾಂಕ್ ಗಳಲ್ಲಿ ನೀಡುವ ಬಡ್ಡಿಗಿಂತ ಇದರಲ್ಲಿ ಒಂದೆರಡು ಪರ್ಸೆಂಟ್ ಹೆಚ್ಚಾಗಿಯೇ ಸಿಗುತ್ತದೆ. ಜತೆಗೆ ಅತ್ಯಂತ ಸುರಕ್ಷಿತ. ಬೇರೆ ಹೂಡಿಕೆಗಳನ್ನು ಹೋಲಿಸಿದರೆ ಇದನ್ನು ಆಯ್ಕೆ ಮಾಡಿಕೊಳ್ಳುವುದು ಸಹ ಬಲು ಸಲೀಸು.

ULIP (Unit Linked Insurance Plan)

ULIP (Unit Linked Insurance Plan)

ಸೆಕ್ಷನ್ 10 (10D), ಆದಾಯ ತೆರಿಗೆ ಕಾಯ್ದೆ 1961ರ ಅಡಿಯಲ್ಲಿ ಯುಲಿಪ್ ಮೇಲಿನ ಆದಾಯಕ್ಕೆ ತೆರಿಗೆ ಇಲ್ಲ. ಆದರೆ ಇದರಲ್ಲಿ ಒಂದು ನಿಬಂಧನೆ ಇದೆ. ವಾರ್ಷಿಕ ಪ್ರೀಮಿಯಂ ಸಮ್ ಅಶ್ಯೂರ್ಡ್ ನ 10 ಪರ್ಸೆಂಟ್ ಗಿಂತ ಕಡಿಮೆ ಇರಬೇಕು. ಇನ್ನು ಈ ಯೋಜನೆಯನ್ನು ಏಪ್ರಿಲ್ 1, 2012ರ ನಂತರ ಖರೀದಿಸಿರಬೇಕು. ಇದರಲ್ಲಿ ಇನ್ಷೂರೆನ್ಸ್ ಮತ್ತು ಹೂಡಿಕೆ ಎರಡೂ ಅನುಕೂಲ ಇದೆ. ಆರಂಭದ ವರ್ಷದಲ್ಲಿ ಇದರ ಮೇಲೆ ಪ್ರತಿಫಲ ಬಹಳ ಕಡಿಮೆ ಇರುತ್ತದೆ. ಆದ್ದರಿಂದ ಹೂಡಿಕೆದಾರರು ದೀರ್ಘಾವಧಿಗೆ ಹೂಡಿಕೆ ಮಾಡಬೇಕು. ಈಕ್ವಿಟಿ ಅಥವಾ ಡೆಟ್ ನಿಂದ ಆರಿಸಿಕೊಳ್ಳಬಹುದು ಅಥವಾ ಎರಡನ್ನೂ ಆರಿಸಿಕೊಳ್ಳಬಹುದು.

English summary

4 Tax Free Income On Investments In India

Here is the 4 tax free income on investments in India. It can be choose according to priority.
Story first published: Friday, December 6, 2019, 12:57 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X