For Quick Alerts
ALLOW NOTIFICATIONS  
For Daily Alerts

ಹೊಸ ಕಾರಿಗೆ ಹಣ ಉಳಿತಾಯ ಮಾಡುವುದು ಹೇಗೆ?

|

ಕಾರು ಎಂದರೆ ಒಬ್ಬೊಬ್ಬರಿಗೆ ಒಂದೊಂದು ಭಾವನೆ. ಕೆಲವರಿಗೆ ಇದು ಪ್ರಯಾಣಕ್ಕೆ ಅನುಕೂಲಕರ ಮಾರ್ಗವಾಗಿರಬಹುದು, ಕೆಲವರಿಗೆ ಇದು ಘನತೆಯ ಪ್ರತೀಕವಾಗಿದೆ. ಇತರರಿಗೆ ಕಾರು ಕುಟುಂಬವನ್ನು ಭೋಜನಕ್ಕೆ ಅಥವಾ ವಾರಾಂತ್ಯದ ವಿಹಾರಕ್ಕೆ ಕರೆದೊಯ್ಯಲು ಆರಾಮದಾಯಕ ಮಾರ್ಗ ಎಂದು ಅನಿಸಬಹುದು.

ನೀವು ಹೊಚ್ಚ ಹೊಸ ಕಾರನ್ನು ಖರೀದಿ ಮಾಡಬೇಕು ಎಂಬ ಬಯಕೆ ನಿಮಗೆ ಇರಬಹುದು. ಆದರೆ ಅದಕ್ಕಾಗಿ ಹಣ ಬೇಕಾಲ್ಲವೇ, ಹಣ ಇದ್ದರೂ ಎಲ್ಲಾ ಹಣವನ್ನು ಕಾರಿಗೆ ವೆಚ್ಚ ಮಾಡಿದರೆ ಮುಂದೇನು ಎಂಬ ಪ್ರಶ್ನೆ ಬರುತ್ತದೆ ಹೌದಲ್ಲವೇ? ಕಾರಿನ ಬೆಲೆಯನ್ನು ನೀವು ಕಡಿಮೆ ಮಾಡಲು ಸಾಧ್ಯವಾಗದಿದ್ದರೂ ಕಾರು ಖರೀದಿಗಾಗಿ ಸಾಧ್ಯವಾದಷ್ಟು ಉಳಿತಾಯ ಮಾಡಿ ಬಳಿಕ ಕಾರು ಸಾಲವನ್ನು ಪಡೆದುಕೊಳ್ಳಬಹುದು.

ಕಾರಿನ ವಿಮೆ ನವೀಕರಿಸೋದು ಹೇಗೆ?, ನೀವು ಮಾಡಬೇಕಿರೋದು ಇಷ್ಟೇ..ಕಾರಿನ ವಿಮೆ ನವೀಕರಿಸೋದು ಹೇಗೆ?, ನೀವು ಮಾಡಬೇಕಿರೋದು ಇಷ್ಟೇ..

ನೀವು ಕಾರನ್ನು ಖರೀದಿ ಮಾಡಲು ಉಳಿತಾಯ ಮಾಡಿ ಹೇಗೋ ಖರೀದಿ ಮಾಡಿದ್ದೀರಿ ಅಂದುಕೊಳ್ಳಿ, ಆದರೆ ಬಳಿಕ ಏನು ಮಾಡುವುದು? ಬಳಿಕ ಕಾರಿನ ಸಾಲದಲ್ಲಿ ಉಳಿತಾಯ ಮಾಡುವುದು ಹೇಗೆ ಎಂಬುವುದು ತಿಳಿಯಲು ಮುಂದೆ ಓದಿ...

 ಬಜೆಟ್ ನಿರ್ಧರಿಸಿ

ಬಜೆಟ್ ನಿರ್ಧರಿಸಿ

ನಿಮ್ಮ ಆದಾಯ ಮತ್ತು ತತ್ಪರಿಣಾಮ ವೆಚ್ಚವನ್ನು ಖಚಿತಪಡಿಸಿಕೊಳ್ಳುವುದು ಬಹಳ ಮುಖ್ಯ. ಕಾರನ್ನು ಖರೀದಿಸುವುದು ಒಂದು ಪ್ರಮುಖ ಆರ್ಥಿಕ ನಿರ್ಧಾರವಾಗಿದೆ. ಎಚ್ಚರಿಕೆಯಿಂದ ಯೋಜನೆ ಮಾಡುವುದು ಅಗತ್ಯವಾಗಿದೆ. ಕೆಲವು ಜನರು ತಮ್ಮ ಉಳಿತಾಯವನ್ನು ಬುದ್ಧಿವಂತಿಕೆಯಿಂದ ಮಾಡುತ್ತಾರೆ. ಇದರಿಂದಾಗಿ ಸಾಲವನ್ನು ತಪ್ಪಿಸಬಹುದು. ಸರಿಯಾದ ರೀತಿಯಲ್ಲಿ ಬಜೆಟ್ ಮಾಡಿದರೆ ನೀವು ಕಾರನ್ನು ಸಾಲವಿಲ್ಲದೆಯೇ ಖರೀದಿ ಮಾಡಬಹುದು.

 ಡೌನ್ ಪೇಮೆಂಟ್ ಮಾಡಿ

ಡೌನ್ ಪೇಮೆಂಟ್ ಮಾಡಿ

ಡೌನ್ ಪೇಮೆಂಟ್ ಮೊತ್ತವನ್ನು ನಿರ್ಧರಿಸುವುದು ಬಹಳ ಮುಖ್ಯ. ಒಮ್ಮೆ ನೀವು ಕಾರಿನ ಬೆಲೆಯನ್ನು ಖಚಿತಪಡಿಸಿಕೊಂಡ ನಂತರ ಹೊಸ ಕಾರಿಗೆ ಕನಿಷ್ಠ ಶೇಕಡ 20 ಮತ್ತು ಹೊಸದಕ್ಕೆ ಶೇಕಡ 10 ಅನ್ನು ಕಡಿಮೆ ಮಾಡುವ ಗುರಿಯನ್ನು ಹೊಂದಿರಬೇಕು. ನೀವು ಉಳಿತಾಯ ಖಾತೆಯ ಮೂಲಕ ಸಾಕಷ್ಟು ಹಣವನ್ನು ಉಳಿಸಿದ್ದರೆ, ನೀವು ದೊಡ್ಡ ಮೊತ್ತದ ಡೌನ್ ಪೇಮೆಂಟ್ ಮಾಡಬಹುದು. ಇದು ನಿಮಗೆ ಮುಂದಿನ ಇಎಂಐಗೆ ಸಹಾಯಕವಾಗಲಿದೆ.

 ಕಾರಿಗೆ ಸಂಬಂಧಿಸಿದ ವೆಚ್ಚಗಳು

ಕಾರಿಗೆ ಸಂಬಂಧಿಸಿದ ವೆಚ್ಚಗಳು

ಕಾರಿನ ಬೆಲೆಯು ಅದರ ತಕ್ಷಣದ ಬೆಲೆಗೆ ಸೀಮಿತವಾಗಿಲ್ಲ. ಸರಿಯಾದ ಕಾರನ್ನು ನೀವು ಖರೀದಿ ಮಾಡಿದರೆ ಇತರೆ ಖರ್ಚುಗಳು ತಗುಲದು. ಸೆಕೆಂಡ್ ಹ್ಯಾಂಡ್ ಕಾರನ್ನು ನೀವು ಖರೀದಿ ಮಾಡಿದಾಗ, ಕೆಲವು ವೆಚ್ಚಗಳು ತಗುಲುತ್ತದೆ. ನೀವು ಕಾರನ್ನು ಖರೀದಿ ಮಾಡುವಾಗ ಹಲವಾರು ಇತರೆ ವೆಚ್ಚಗಳು ಕೂಡಾ ಇದೇ ಎಂಬುವುದು ಗಮನದಲ್ಲಿ ಇರಲಿ. ಪೆಟ್ರೋಲ್, ಡೀಸೆಲ್ ಅಥವಾ ಸಿಎನ್‌ಜಿ, ಕಾರು ವಿಮೆ ದರಗಳನ್ನು ಕೂಡಾ ಪರಿಗಣನೆಗೆ ತೆಗೆದುಕೊಳ್ಳಬೇಕಾಗುತ್ತದೆ.

 ವಿಶ್ವಾಸಾರ್ಹ ಹಣಕಾಸು ಯೋಜನೆ

ವಿಶ್ವಾಸಾರ್ಹ ಹಣಕಾಸು ಯೋಜನೆ

ನೀವು ಕಾರನ್ನು ಖರೀದಿ ಮಾಡಿದ ಬಳಿಕ ಪ್ರತಿ ತಿಂಗಳು ನಿಮ್ಮ ಬಜೆಟ್ ಮೇಲೆ ಹೊರೆಯಾಗಲಿದೆ. ನೀವು ಕಾರನ್ನು ಖರೀದಿ ಮಾಡಬೇಕಾದರೆ ಈಗಲೇ ದೀರ್ಘಾವಧಿ ಯೋಜನೆಯನ್ನು ಮಾಡಿಕೊಳ್ಳಬೇಕಾಗುತ್ತದೆ. ದೀರ್ಘಾವಧಿಯ ಯೋಜನೆಗೆ ಸಹಾಯ ಮಾಡುವ ಗಟ್ಟಿಮುಟ್ಟಾದ ಹಣಕಾಸು ಖಾತೆಯನ್ನು ಸ್ಥಾಪಿಸುವುದು ಅತ್ಯಗತ್ಯ. ಉಳಿತಾಯ ಖಾತೆಯು ಅದನ್ನು ಮಾಡಲು ಅತ್ಯಂತ ವಿಶ್ವಾಸಾರ್ಹ ಮಾರ್ಗವಾಗಿದೆ.

 ಕಾರು ಖರೀದಿ ಬಳಿಕ ಮತ್ತೇನು?

ಕಾರು ಖರೀದಿ ಬಳಿಕ ಮತ್ತೇನು?

ನೀವು ಕಾರನ್ನು ಖರೀದಿ ಮಾಡಿದ ಬಳಿಕ ಅದರ ಹೊರೆಯನ್ನು ಕೊಂಚ ಕಡಿಮೆ ಮಾಡುವ ಬಗ್ಗೆ ಗಮನ ಹರಿಸಬೇಕಾಗುತ್ತದೆ. ಅದಕ್ಕಾಗಿ ರಿಫಂಡ್‌ಗೆ ವಿನಾಯಿತಿ ಮಾಡಿ. ಕಡಿಮೆ ಬಡ್ಡಿದರ ಇರುವ ಬ್ಯಾಂಕ್‌ನಲ್ಲಿಯೇ ಕಾರಿನ ಸಾಲವನ್ನು ಪಡೆಯಿರಿ. ಕಾರಿಗೆ ವಿಮೆ ಮಾಡಿಕೊಳ್ಳಿ.

English summary

4 Ways To Save Money For A Brand New Car, Explained Here

4 Ways To Save Money For A Brand New Car, Explained Here.
Story first published: Saturday, May 14, 2022, 13:11 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X