ಖಾತರಿಯ ಆದಾಯವನ್ನು ಬಯಸುವಂತಹ ಹೂಡಿಕೆದಾರರಿಗೆ ಸ್ಥಿರ ಠೇವಣಿಗಳು (Fixed deposits) ಒಂದು ಸುರಕ್ಷಿತ ಹೂಡಿಕೆಯ ಆಯ್ಕೆಯಾಗಿದೆ. ಹೌದು, ಇತ್ತೀಚಿನ ದಿನಮಾನಗಳಲ್ಲಿ ಷೇರು ಮಾರುಕಟ್ಟೆ ಮತ್ತು ಮ್ಯೂಚುವಲ್ ಫಂಡ್‌ಗಳತ್ತ ಜನರು ಹೆಚ್ಚು ಆಸಕ್ತಿಯನ್ನ ತೋರುತ್ತಾರೆ.ಆದ್ದರಿಂದ ಸ್ವಲ್ಪ ಪ್ರಮಾಣದಲ್ಲಿ ಸ್ಥಿರ ಠೇವಣಿಗಳ ಮೇಲಿನ ಆಸಕ್ತಿ ಸ್ವಲ್ಪ ಕಡಿಮೆಯಾಗಿದೆ.ಆದರೆ ಕೆಲವೊಂದು ಬ್ಯಾಂಕ್‌ಗಳು ಹೆಚ್ಚಿನ ಬಡ್ಡಿ ದರವನ್ನು ತನ್ನ ಗ್ರಾಹರಿಗೆ ವಿಶೇಷ ಸ್ಥಿರ ಠೇವಣಿ ಯೋಜನೆಗಳನ್ನು ಜಾರಿಗೆ ತಂದಿದೆ.

ಈ ಯೋಜನೆಗಳು ಸಾಮಾನ್ಯ ಬಡ್ಡಿದರಗಳಿಗಿಂತ ಹೆಚ್ಚಿನ ಲಾಭವನ್ನು ನೀಡುತ್ತವೆ. ಪ್ರಸ್ತುತ, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI), ಪಂಜಾಬ್ ಮತ್ತು ಸಿಂಧ್ ಬ್ಯಾಂಕ್, ಇಂಡಿಯನ್ ಓವರ್‌ಸೀಸ್ ಬ್ಯಾಂಕ್ (IOB) ಮತ್ತು ಇಂಡಿಯನ್ ಬ್ಯಾಂಕ್ 444 ದಿನಗಳ ವಿಶೇಷ ಎಫ್‌ಡಿ ಸೌಲಭ್ಯವನ್ನು ತನ್ನ ಗ್ರಾಹಕರಿಗೆ ನೀಡುತ್ತಿದೆ. ಈ ಬ್ಯಾಂಕುಗಳು ತಮ್ಮ 444 ದಿನಗಳ ವಿಶೇಷ ಎಫ್‌ಡಿಗಳ ಮೇಲೆ ನೀಡುವ ಬಡ್ಡಿದರ ಸಿಗುತ್ತದೆ.12.25 ಲಕ್ಷಗಳ ಹೂಡಿಕೆಯ ಮೆಚ್ಯೂರಿಟಿ ಮೊತ್ತದ ಮೇಲೆ ಈ ಬ್ಯಾಂಕ್‌ಗಳಿಗೆ ಎಷ್ಟು ಹಣ ಸಿಗಬಹುದು ಎಂಬ ಲೆಕ್ಕಾಚಾರ ಇಲ್ಲಿದೆ.
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ 444 ಅವಧಿಯ ಎಫ್‌ಡಿ
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ) ಅಮೃತ್ ವೃಷ್ಟಿ ವಿಶೇಷ ಎಫ್‌ಡಿ ಯೋಜನೆಯ ಅಡಿಯಲ್ಲಿ ಸಾಮಾನ್ಯ ನಾಗರಿಕರಿಗೆ ಶೇಕಡಾ 6.60 ರಷ್ಟು ಬಡ್ಡಿದರವನ್ನು ಸೌಲಭ್ಯವನ್ನು ತನ್ನ ಗ್ರಾಹಕರಿಗೆ ನೀಡುತ್ತದೆ. ಎಸ್‌ಬಿಐ 444 ದಿನಗಳ ಎಫ್‌ಡಿಯ 12.25 ಲಕ್ಷ ಹೂಡಿಕೆಯ ಮೇಲಿನ ಮೆಚ್ಯೂರಿಟಿ ಹಣಸಾಮಾನ್ಯ ನಾಗರಿಕರಿಗೆ, ಅಂದಾಜು ಮೆಚ್ಯೂರಿಟಿ ಮೌಲ್ಯ 2,43,649.37 ರೂ ಆಗಿದೆ. ಗಳಿಸಿದ ಬಡ್ಡಿಯು 18,649.37 ರೂ.ಗಳು ಅವರ ಕೈಸೇರುತ್ತದೆ.
ಪಂಜಾಬ್ ಮತ್ತು ಸಿಂಧ್ ಬ್ಯಾಂಕ್
ಪಂಜಾಬ್ ಮತ್ತು ಸಿಂಧ್ ಬ್ಯಾಂಕ್ ತನ್ನ 444 ದಿನಗಳ ಸ್ಥಿರ ಠೇವಣಿಗೆ ಸಾಮಾನ್ಯ ನಾಗರಿಕರಿಗೆ ವಾರ್ಷಿಕ ಶೇಕಡಾ 7.05 ರಷ್ಟು ಬಡ್ಡಿದರವನ್ನು ನೀಡುತ್ತಿದೆ.444 ದಿನಗಳ ಎಫ್‌ಡಿಯ 12.25 ಲಕ್ಷ ಹೂಡಿಕೆಯ ಮೇಲಿನ ಮೆಚ್ಯೂರಿಟಿ ಮೊತ್ತ ಪಂಜಾಬ್ ಮತ್ತು ಸಿಂಧ್ ಬ್ಯಾಂಕ್‌ನಲ್ಲಿ, ಅಂದಾಜು ಮೆಚ್ಯೂರಿಟಿ ಮೌಲ್ಯವು 2,44,964.26 ರೂ ಆಗಿದೆ. ಸಾಮಾನ್ಯ ನಾಗರಿಕರಿಗೆ ಬಡ್ಡಿಯು 19,964.26 ರೂ ಆಗಿರುತ್ತದೆ.
ಇಂಡಿಯನ್ ಬ್ಯಾಂಕ್
ಇಂಡಿಯನ್ ಬ್ಯಾಂಕ್ ತನ್ನ 444 ದಿನಗಳ ಸ್ಥಿರ ಠೇವಣಿ ಯೋಜನೆಗೆ ಸಾಮಾನ್ಯ ನಾಗರಿಕರಿಗೆ ವಾರ್ಷಿಕವಾಗಿ ಶೇಕಡಾ 6.90 ರಷ್ಟು ಬಡ್ಡಿದರವನ್ನು ನೀಡುತ್ತದೆ.ಇಂಡಿಯನ್ ಬ್ಯಾಂಕ್ 444 ದಿನಗಳ ಎಫ್‌ಡಿ ಯೋಜನೆಯಲ್ಲಿ 12.25 ಲಕ್ಷ ಹೂಡಿಕೆಯ ಮೇಲಿನ ಮೆಚ್ಯೂರಿಟಿ ಮೊತ್ತ ಸಾಮಾನ್ಯ ನಾಗರಿಕರಿಗೆ, ಅಂದಾಜು ಮೆಚ್ಯೂರಿಟಿ ಮೌಲ್ಯ 2,44,525.34 ರೂ ಆಗಿದೆ. ಗಳಿಸಿದ ಬಡ್ಡಿಯು19,525.34 ರೂ ಆಗಿರುತ್ತದೆ.
ಇಂಡಿಯನ್ ಓವರ್‌ಸೀಸ್ ಬ್ಯಾಂಕ್
ಇಂಡಿಯನ್ ಓವರ್‌ಸೀಸ್ ಬ್ಯಾಂಕ್ ತನ್ನ 444 ದಿನಗಳ ಸ್ಥಿರ ಠೇವಣಿಯ ಮೇಲೆ ಸಾಮಾನ್ಯ ನಾಗರಿಕರಿಗೆ ಶೇಕಡಾ 6.75 ರಷ್ಟು ಬಡ್ಡಿದರವನ್ನು ನೀಡುತ್ತಿದೆ.ಒಬ್ಬ ವ್ಯಕ್ತಿಯು 2 ಲಕ್ಷ ರೂಪಾಯಿ ಠೇವಣಿ ಇಟ್ಟರೆ, ಅವಧಿ ಮುಗಿದ ನಂತರ ಸುಮಾರು 2,43,649 ರೂಪಾಯಿಗಳ ಲಾಭ ಪಡೆಯಬಹುದು. ನೀವು 12.25 ಲಕ್ಷ ರೂ.ಗಳಂತಹ ದೊಡ್ಡ ಮೊತ್ತವನ್ನು ಹೂಡಿಕೆ ಮಾಡಿದರೆ, ಅದರ ಮೇಲೆ ಬರುವ ಬಡ್ಡಿ ಇನ್ನಷ್ಟು ಹೆಚ್ಚಾಗುತ್ತದೆ.
ನೀವು ಎಲ್ಲಿ ಹೂಡಿಕೆಯನ್ನು ಮಾಡಬೇಕೆಂದುಕೊಂಡರೆ ಎಲ್ಲಾ ಅಂಶಗಳನ್ನು ಗಮನದಲಿಟ್ಟುಕೊಳ್ಳವುದು ಮುಖ್ಯವಾಗುತ್ತದೆ.


Click it and Unblock the Notifications