ವಿಮೆಯನ್ನು ನಾವು ಕೊಂಡು ಕೊಳ್ಳುವಾಗ ಹೆಚ್ಚಿನ ಜನರು ಜೀವ ವಿಮೆಗೆ ಅಧಿಕ ಆದ್ಯತೆ ನೀಡುವುದಿಲ್ಲ. ಆರೋಗ್ಯ ವಿಮೆಯನ್ನು ಮಾಡಿಕೊಳ್ಳುತ್ತಾರೆ. ಆರೋಗ್ಯ ವಿಮೆ ಕೂಡಾ ಅಗತ್ಯವೇ. ಆದರೆ ನಮಗೆ ಎಷ್ಟು ಆರೋಗ್ಯ ವಿಮೆ ಅಗತ್ಯವೋ ಅಷ್ಟೇ ಜೀವ ಜಿಮೆಯೂ ಕೂಡಾ ಅತ್ಯಗತ್ಯವಾಗಿದೆ.
ಜೀವ ವಿಮೆಯು ಓರ್ವ ವ್ಯಕ್ತಿ ಸಾವನ್ನಪ್ಪಿದ ಬಳಿಕ ಆತನ ಕುಟುಂಬಕ್ಕೆ ದೊರಕುವ ಆರ್ಥಿಕ ಭದ್ರತೆಯಾಗಿದೆ. ಹಾಗೆಯೇ ವ್ಯಕ್ತಿಗೆ ಯಾವುದೇ ಅಪಘಾತವಾದ ಸಂದರ್ಭದಲ್ಲಿ ಈ ಜೀವ ವಿಮೆಗಳು ಸಹಕಾರಿ ಆಗುತ್ತದೆ. ಕೆಲವು ವಸ್ತುಗಳನ್ನು ಜನರು ಖರೀದಿ ಮಾಡುವಾಗ ಅದು ತಮಗೆ ಉಪಯೋಗವಿಲ್ಲ ಎಂಬ ಕಾರಣಕ್ಕೆ ಅದನ್ನು ಖರೀದಿ ಮಾಡಲು ಹೋಗುದಿಲ್ಲ. ಹಾಗೆಯೇ ಕೆಲವರು ಜೀವ ವಿಮೆಯನ್ನು ಅದೇ ದೃಷ್ಟಿಯಿಂದ ನೋಡುತ್ತಾರೆ. ತಾನು ಜೀವದಲ್ಲಿ ಇಲ್ಲದಿರುವ ಸಂದರ್ಭದಲ್ಲಿ ತನ್ನ ಕುಟುಂಬಕ್ಕೆ ದೊರೆಯುವ ವಿಮೆಯ ಬಗ್ಗೆ ಹಲವಾರು ಮಂದಿ ಯಾವುದೇ ಕಾಳಜಿ ವಹಿಸುವುದಿಲ್ಲ.
ಆದರೆ ಕೆಲವೊಂದು ಬಾರಿ ಯಾವುದಾದರೂ ಅವಘಡವಾದಾಗ ಹಣವು ಅತ್ಯಗತ್ಯವಾಗುತ್ತದೆ. ಈ ನಿಟ್ಟಿನಲ್ಲಿ ನಾವು ಈಗಲೇ ಜೀವ ವಿಮೆ ಮಾಡಿಕೊಳ್ಳುವುದು ಅತೀ ಮುಖ್ಯ. ನಮಗೆ ಬಾಯಾರಿಕೆ ಆದ ಸಂದರ್ಭದಲ್ಲಿ ನಾವು ಬಾವಿಯನ್ನು ಹುಡುಕಿಕೊಂಡು ಹೋಗುವುದಕ್ಕಿಂತ ಬಾಯಾರಿಕೆ ಆಗುವ ಮುನ್ನವೇ ಬಾವಿ ಹುಡುಕಿ ಸುರಕ್ಷಿತವಾಗಿರುವುದು ಹೇಗೆ ಉತ್ತಮವೋ ಹಾಗೆಯೇ ನಮ್ಮ ಜೀವಕ್ಕೆ ಕುತ್ತು ಬರುವ ಮೊದಲೇ ಜೀವ ವಿಮೆ ಮಾಡಿ ಜೀವನ ಸುರಕ್ಷಿತಗೊಳಿಸುವುದು ಅತೀ ಮುಖ್ಯ. ಆರ್ಥಿಕ ಸಂಕಷ್ಟಗಳು ಎಂಬುವುದು ಯಾವುದೇ ಸಂದರ್ಭದಲ್ಲೂ ಬರಬಹುದು ಆದ್ದರಿಂದ ನಾವು ಈಗಲೇ ಸಿದ್ದವಾಗಿರಬೇಕು. ಹಲವಾರು ಮಂದಿಗೆ ಕೆಲವು ವಿಮೆ ಯೋಜನೆಗಳು ಇದೇ ಎಂದು ಕೂಡಾ ತಿಳಿದಿರುವುದು ಕೂಡಾ ಇಲ್ಲ. ಆ ನಿಟ್ಟಿನಲ್ಲಿ ನಾವಿಲ್ಲಿ ನೀವು ಮುಖ್ಯವಾಗಿ ಅರಿಯಲೇ ಬೇಕಾದ ಐದು ಪ್ರಮುಖ ಜೀವ ರಕ್ಷಣೆ ವಿಮೆಯ ಬಗ್ಗೆ ಮಾಹಿತಿ ನೀಡಿದ್ದೇವೆ.
ಗಂಭೀರ ಅನಾರೋಗ್ಯ ವಿಮೆ: ಜೀವ ರಕ್ಷಣೆಗೆ ಆರ್ಥಿಕ ಸುರಕ್ಷತೆ
ನೀವು ಗಂಭೀರವಾಗಿ ಅನಾರೋಗ್ಯಕ್ಕೆ ಒಳಗಾದ ಸಂದರ್ಭದಲ್ಲಿ ನಿಮ್ಮ ಕುಟುಂಬಕ್ಕೆ ಈ ವಿಮೆ ಹಣವನ್ನು ನೀಡಲಾಗುತ್ತದೆ. ಈ ಹಣದ ಮೂಲಕ ನಿಮ್ಮ ಕುಟುಂಬಸ್ಥರು ನಿಮ್ಮ ಅನಾರೋಗ್ಯಕ್ಕೆ ಸರಿಯಾದ ಚಿಕಿತ್ಸೆ ಕೊಡಿಸಬಹುದಾಗಿದೆ. ಇದಲ್ಲದೆ, ಈ ಮೊತ್ತವು ನೀವು ಕಳೆದುಕೊಂಡಿರುವ ಆದಾಯಕ್ಕೆ ಬದಲಿ ಹಣವಾಗಿ ಕಾರ್ಯನಿರ್ವಹಿಸುತ್ತದೆ. ನೀವು ಹೃದಯಾಘಾತ, ಕಿಡ್ನಿ ಸಮಸ್ಯೆಯಂತಹ ಯಾವುದೇ ಗಂಭೀರ ಆರೋಗ್ಯ ಸಮಸ್ಯೆಗೆ ಒಳಗಾದರೆ ಆ ಸಂದರ್ಭದಲ್ಲಿ ನಿಮ್ಮ ಚಿಕಿತ್ಸೆಗೆ ಬೇಕಾದಷ್ಟು ಹಣ ನಿಮ್ಮ ಕುಟುಂಬಸ್ಥರಲ್ಲಿ ಇಲ್ಲದೆ ಇರಬಹುದು. ಈ ಸಂದರ್ಭದಲ್ಲಿ ನಿಮ್ಮ ಆರೋಗ್ಯ ವಿಮೆಯು ನಿಮ್ಮ ಕೈಹಿಡಿಯಲಿದೆ. ಈ ಗಂಭೀರ ಅನಾರೋಗ್ಯ ವಿಮೆಯ ಮೂಲಕ ನೀವು ನಿಮ್ಮ ಚಿಕಿತ್ಸಾ ವೆಚ್ಚ, ಆಸ್ಪತ್ರೆಯ ವೆಚ್ಚವನ್ನು ಭರಿಸಬಹುದು. ನಿಮ್ಮ ಉಳಿತಾಯದಿಂದಲ್ಲೇ ನೀವು ರಕ್ಷಣೆ ಪಡೆಯಬಹುದಾಗಿದೆ.
ಇನ್ನು ಕೆಲವು ಸಂದರ್ಭಗಳಲ್ಲಿ ನೀವು ಗಂಭೀರ ಆರೋಗ್ಯ ಸಮಸ್ಯೆಗೆ ಒಳಗಾಗಿ ಪ್ರಸ್ತುತ ಮಾಡುತ್ತಿರುವ ಕೆಲಸವನ್ನು ಬಿಟ್ಟು ಬೇರೆ ಕಡಿಮೆ ಸಂಬಳದ ಕೆಲಸಕ್ಕೆ ಹೋಗಬೇಕಾದೀತು ಅಥವಾ ಕೆಲಸವನ್ನೇ ನೀವು ಕಳೆದುಕೊಳ್ಳ ಬೇಕಾಗಬಹುದು. ಈ ಸಂದರ್ಭದಲ್ಲಿ ಕುಟುಂಬವೇ ನಿಮ್ಮ ಖರ್ಚನ್ನು ನೋಡಿಕೊಳ್ಳಬೇಕಾಗುತ್ತದೆ. ಹಾಗಾಗಿ ಈ ಅರೋಗ್ಯ ವಿಮೆಯನ್ನು ನೀವು ಮಾಡಿಕೊಳ್ಳುವುದು ಅತೀ ಉತ್ತಮ ಆಯ್ಕೆಯಾಗಿದೆ. ಗಂಭೀರ ಅನಾರೋಗ್ಯ ಸಮಸ್ಯೆಯಾದಾಗ ಗಂಭೀರ ಅನಾರೋಗ್ಯ ವಿಮೆಯು ಸಹಕಾರಿಯಾಗುತ್ತದೆ.
ಗೃಹ ವಿಮೆ: ಉಳಿಯಿರಿ ಸುರಕ್ಷಿತ ಮನೆಯಲ್ಲಿ
ನೀವು ಒಂದು ಮನೆ ನಿರ್ಮಾಣ ಮಾಡಬೇಕಾದರೆ ಸಾಕಷ್ಟು ಕಷ್ಟ ಪಡುತ್ತೀರಿ. ನೀವು ಉಳಿತಾಯ ಮಾಡಿ, ನಿಮ್ಮ ಕನಸಿನ ಮನೆಗಾಗಿ ಸಾಲ ಪಡೆದಿರುತ್ತೀರಿ, ನಿಮ್ಮ ಕನಸಿನ ಮನೆಗಾಗಿ ನೀವೇ ಪ್ರದೇಶ ಜಾಗ ಗೊತ್ತು ಮಾಡಿ ಮನೆ ನಿರ್ಮಾಣ ಮಾಡಿರುತ್ತೀರಿ. ಹಾಗಿರುವಾಗ ಈ ಮನೆಯನ್ನು ನೀವು ಸುರಕ್ಷಿತವಾಗಿರಿಸಲು ಒಂದು ಗೃಹ ವಿಮೆಯನ್ನು ಕೂಡಾ ನೀವು ಮಾಡಿಸಿಕೊಳ್ಳಬೇಕು ಎಂದು ನಿಮಗೆ ಅನಿಸುವುದಿಲ್ಲವೇ?. ಮನೆಗೆ ಒಮ್ಮೆಲೇ ಬೆಂಕಿ ಹತ್ತಿಕೊಂಡರೆ, ಯಾವುದಾದರೂ ನೈಸರ್ಗಿಕ ವಿಕೋಪ ಉಂಟಾದರೆ ನಿಮ್ಮ ಕನಸಿನ ಮನೆಯು ನಾಶವಾಗಬಹುದು. ಈ ಸಂದರ್ಭದಲ್ಲಿ ನಿಮಗೆ ಗೃಹ ವಿಮೆಯು ಸಹಕಾರಿಯಾಗಲಿದೆ. ಗೃಹ ವಿಮೆಯು ನಿಮ್ಮ ಮನೆಗೆ ಉಂಟಾದ ಹಾನಿಯನ್ನು ಸರಿಪಡಿಸಲು ಬೇಕಾದ ಆರ್ಥಿಕ ನೆರವನ್ನು ನೀಡುತ್ತದೆ.
ಇನ್ನು ನೀವು ಗೃಹ ವಿಮೆಯನ್ನು ಖರೀದಿ ಮಾಡುವಾಗ ಎಲ್ಲಾ ವಿಮೆಗಳು ಒಂದೇ ರೀತಿ ಇರುವುದಿಲ್ಲ ಎಂಬುವುದನ್ನು ಗಮನದಲ್ಲಿ ಇಟ್ಟುಕೊಳ್ಳಬೇಕು. ನೀವು ಎಲ್ಲಾ ಗೃಹ ವಿಮೆಗಳನ್ನು ತುಲನೆ ಮಾಡಿ ಯಾವುದು ಉತ್ತಮ ಎಂದು ಅನಿಸುತ್ತದೆಯೋ ಅದನ್ನು ಖರೀದಿ ಮಾಡಬೇಕು. ಇನ್ನು ಗೃಹ ವಿಮೆಯು ಅತ್ಯಂತ ಕಡಿಮೆಯ ವಿಮೆಯಾಗಿದೆ. ಈ ವಿಮೆಯು ನಿಮ್ಮ ಒಟ್ಟು ಆಸ್ತಿ ಮೊತ್ತದ ಶೇಕಡ ಅರ್ಧ ಮೊತ್ತವನ್ನು ಒಳಗೊಳ್ಳುತ್ತದೆ. ಅಂದರೆ ನೀವು 20 ಲಕ್ಷದ ವಿಮೆ ಮಾಡುವುದಾದರೆ ವರ್ಷಕ್ಕೆ 10,800 ರೂಪಾಯಿ ನೀವು ಪಾವತಿ ಮಾಡಬೇಕಾಗುತ್ತದೆ.
ವೈಯಕ್ತಿಕ ಅಪಘಾತ ವಿಮೆ: ನಿಮ್ಮ ಜೀವಕ್ಕೆ ನೀವೇ ಸುರಕ್ಷೆ
ಅಪಘಾತವಾಗುತ್ತದೆ ಎಂದು ನಮಗೆ ಎಂದಿಗೂ ಮೊದಲೆ ತಿಳಿದಿರುವುದಿಲ್ಲ. ನೀವು ಅಪಘಾತದಿಂದಾಗಿ ಅಂಗ ನ್ಯೂನ್ಯತೆಗೆ ಒಳಗಾದರೆ ನಿಮ್ಮ ಕುಟಂಬದ ಆರ್ಥಿಕತೆಯ ಮೇಲೆ ಭಾರೀ ಪೆಟ್ಟು ಬಿದ್ದೀತು. ನೀವು ಹಣ ಸಂಪಾದಿಸುವ ಪರಿಸ್ಥಿತಿಯಲ್ಲಿ ಇಲ್ಲದಿರಬಹುದು ಅಥವಾ ನಿಮಗೆ ಅಧಿಕ ಖರ್ಚು ಉಂಟಾಗಬಹುದು. ನಿಮಗೆ ವೀಲ್ಹ್ ಚೇರ್, ನರ್ಸ ಮೊದಲಾದ ಅಗತ್ಯ ಉಂಟಾಗಬಹುದು. ಹಾಗೆಯೇ ಥೆರಪಿಗಳು ಇರಬಹುದು. ಈ ಸಂದರ್ಭದಲ್ಲಿ ನಿಮಗೆ ವೈಯಕ್ತಿಕ ಅಪಘಾತ ವಿಮೆಯು ಸಹಕಾರಿಯಾಗುತ್ತದೆ. ಈ ವೈಯಕ್ತಿಕ ಅಪಘಾತ ವಿಮೆಯು ನಿಮಗೆ ಪರಿಹಾರ ನೀಡುತ್ತದೆ. ಸಂಪೂರ್ಣ ಹಾಗೂ ಜೀವನ ಪೂರ್ತಿ ನೀವು ಅಂಗ ನ್ಯೂನತೆಗೆ ಒಳಗಾದರೆ, ಭಾಗಶಃ ಹಾಗೂ ಜೀವನ ಪೂರ್ತಿ ನೀವು ಅಂಗ ನ್ಯೂನತೆಗೆ ಒಳಗಾದರೆ, ಸಂಪೂರ್ಣ ಹಾಗೂ ತಾತ್ಕಾಲಿಕ ನ್ಯೂನ್ಯತೆಗೆ ಒಳಗಾದರೆ ಈ ವಿಮೆಯು ನಿಮಗೆ ದೊರೆಯುತ್ತದೆ. ಇನ್ನು ಕೆಲವು ವಿಮೆಗಳು ಸಾವು ಸಂಭವಿಸಿದರೂ ದೊರೆಯುತ್ತದೆ.
ದ್ವಿ ಚಕ್ರ ವಿಮೆ: ನಿಮ್ಮ ಸುರಕ್ಷತೆ
ದ್ವಿ ಚಕ್ರ ವಿಮೆ ನಮಗೆ ತಿಳಿದಿದ್ದರೂ ಕೂಡಾ ಖರೀದಿ ಮಾಡದ ವಿಮೆಗಳಲ್ಲಿ ಒಂದಾಗಿದೆ. ಯಾಕೆಂದರೆ ಇದನ್ನು ಹೆಚ್ಚಾಗಿ ಮಾರಾಟ ಮಾಡಲಾಗುತ್ತಿಲ್ಲ. ಅಪಘಾತ, ಕಳ್ಳತನ ಅಥವಾ ಯಾವುದೇ ಹಾನಿ ಉಂಟಾದ ಸಂದರ್ಭದಲ್ಲಿ ಈ ದ್ವಿ ಚಕ್ರ ವಿಮೆಯೂ ನಿಮಗೆ ಸಹಕಾರಿಯಾಗಲಿದೆ. ದ್ವಿ ಚಕ್ರ ವಿಮೆಯಲ್ಲಿ ಎರಡು ವಿಧಗಳಿವೆ. ಒಂದು ಮೂರನೇ ವ್ಯಕ್ತಿಗೆ ಲಭಿಸುವುದು ವಿಮೆ ಹಾಗೂ ಸಮಗ್ರ ಯೋಜನೆ. ಹಣಕಾಸು ಸಂಬಂಧಿತ ಅಥವಾ ಹಾನಿಗೆ ಒಳಗಾದ ಸಂದರ್ಭದಲ್ಲಿ ಸಂಚಾರ ಮಾಡುತ್ತಿದ್ದ ವ್ಯಕ್ತಿ ಅಥವಾ ಮಾಲೀಕರ ಬದಲಾಗಿ ವ್ಯಕ್ತಿಗೆ ದೊರಕುವ ವಿಮೆಯು ಮೂರನೇ ವ್ಯಕ್ತಿಗೆ ಲಭಿಸುವುದು ವಿಮೆಯಾಗಿದೆ. ನಿಮ್ಮನ್ನು ಹೊರತುಪಡಿಸಿ ಇನ್ನೋರ್ವ ವ್ಯಕ್ತಿಗೆ ದೊರೆಯುವುದು ಈ ವಿಮೆಯಾಗಿದೆ. ವಾಹನವು ಸಂಪೂರ್ಣವಾಗಿ ನಾಶವಾದರೆ ಅಥವಾ ಕಳ್ಳತನವಾದರೆ ಈ ಸಂದರ್ಭದಲ್ಲಿ ದೊರೆಯುವ ವಿಮೆ ಸಮಗ್ರ ಯೋಜನೆ ವಿಮೆಯಾಗಿದೆ. ಸರ್ಕಾರವು ದ್ವಿ ಚಕ್ರ ವಾಹನ ಹೊಂದಿರುವ ಎಲ್ಲಾ ವ್ಯಕ್ತಿಗಳು ದ್ವಿ ಚಕ್ರ ವಿಮೆ ಖರೀದಿ ಮಾಡುವುದನ್ನು ಕಡ್ಡಾಯಗೊಳಿಸಿದೆ. ಈ ದ್ವಿ ಚಕ್ರ ವಿಮೆ ಖರೀದಿ ಮಾಡುವುದರಿಂದಾಗಿ ದ್ವಿ ಚಕ್ರ ವಾಹನಕ್ಕೆ ಆಗುವ ಹಾನಿಗೆ ಪರಿಹಾರ ಪಡೆಯಬಹುದಾಗಿದೆ. ರೂಪಾಯಿ 1,500 ರಿಂದ ರೂಪಾಯಿ 25,000 ರವರೆಗೆ ಈ ವಿಮೆ ಇದೆ.
ಸೈಬರ್ ವಿಮೆ: ನಿಮಗಿದೆ ತಾಂತ್ರಿಕ ಸುರಕ್ಷತೆ
ಈ ಕೊರೊನಾ ವೈರಸ್ ಸಾಂಕ್ರಾಮಿಕದ ಸಂದರ್ಭದಲ್ಲಿ ಜನರು ವರ್ಕ್ ಫ್ರಮ್ ಹೋಮ್ ಹೆಚ್ಚಿಸಿದ ಬಳಿಕ, ಆನ್‌ಲೈನ್ ವ್ಯವಹಾರ ನಡೆಸಲು ಆರಂಭ ಮಾಡಿದ ಬಳಿಕ, ಈ ಸೈಬರ್ ವಿಮೆಯು ಅಧಿಕ ಆಧ್ಯತೆಯನ್ನು ಪಡೆದಿದೆ. ಯಾರಾದರೂ ನಿಮ್ಮ ಲಾಪ್‌ಟಾಪ್, ಕಂಪ್ಯೂಟರ್‌ಗೆ ಹಾನಿ ಮಾಡಿದರೆ, ಅಥವಾ ಅಗತ್ಯ ದಾಖಲೆ ನಾಶವಾದರೆ ನಿಮಗೆ ಹೆಚ್ಚಿನ ನಷ್ಟ ಉಂಟಾಗುತ್ತದೆ. ಈ ಹಾನಿಯಿಂದ ನಿಮ್ಮನ್ನು ಸೈಬರ್ ವಿಮೆ ರಕ್ಷಿಸುತ್ತದೆ. ಹಾಗೆಯೇ ನಿಮ್ಮ ಸೊತ್ತಿನ ಹಳೆಯ ಮಾಲೀಕರು ಕೈಯಲ್ಲಿ ಸ್ಮಾರ್ಟ್ ಫೋನ್ ಇಟ್ಟುಕೊಂಡು ಸೈಬರ್ ವಂಚನೆ ಮಾಡುತ್ತಿದ್ದರೆ ಅವರು ಈ ಮೂಲಕ ಸಿಕ್ಕಿಹಾಕಿಕೊಳ್ಳಬಹುದು. ಆದರೆ ಸೈಬರ್ ವಿಮೆಯು ಹಲವಾರು ನಿಯಮಗಳನ್ನು ಹೊಂದಿದೆ ಎಂಬುವುದನ್ನು ನೀವು ನೆನಪಿನಲ್ಲಿ ಇಟ್ಟುಕೊಳ್ಳಬೇಕು. ನೀವು ಪಾಲಿಸಿಗೆ ಒಳಪಡುವ ಮೊದಲು ಎಚ್ಚರಿಕೆಯಿಂದ ಎಲ್ಲಾ ನಿಯಮಗಳನ್ನು ಓದುವುದು ಅತ್ಯಗತ್ಯವಾಗಿರುತ್ತದೆ. ಸೈಬರ್ ವಿಮಾ ಪಾಲಿಸಿಯ ಪ್ರೀಮಿಯಂಗಳನ್ನು ನೀವು ಯಾವ ರೀತಿಯ ನಷ್ಟವನ್ನು ಭರಿಸಲು ಬಯಸುತ್ತೀರಿ ಎಂಬುದನ್ನು ಆಧರಿಸಿ ನಿಗದಿಪಡಿಸಲಾಗಿದೆ. ಸಾಮಾನ್ಯವಾಗಿ, ಈ ಪಾಲಿಸಿಯ ವೆಚ್ಚವು ತುಂಬಾ ಕಡಿಮೆ ಮತ್ತು ಕೈಗೆಟುಕುವಂತದ್ದು. ಉದಾಹರಣೆಗೆ, ಬಜಾಜ್ ಅಲಿಯಾನ್ಸ್ ಸೈಬರ್‌ಸೇಫ್‌ನಿಂದ ರೂ .50,000 ನ ವಿಮೆ ಖರೀದಿ ಮಾಡಲು ನಿಮಗೆ ರೂ. 662 ರಂತೆ ವೆಚ್ಚವಾಗಬಹುದು.
More From GoodReturns

Karnataka BPL Card: ಬಿಪಿಎಲ್ ಕಾರ್ಡ್ದಾರರಿಗೆ ಬಿಗ್ ಶಾಕ್! ಸರ್ಕಾರದ ಮಹತ್ವದ ಕ್ರಮ

Bengaluru 2nd Airport: ಬೆಂಗಳೂರು 2ನೇ ವಿಮಾನ ನಿಲ್ದಾಣ ಯೋಜನೆಗೆ ಹೊಸ ಶಕ್ತಿ…ಸಿಎಂ ಸಿದ್ದರಾಮಯ್ಯ ಮಹತ್ವದ ಘೋಷಣೆ!

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

High Speed Train: ಬೆಂಗಳೂರಿಗೆ ಮತ್ತೊಂದು ಹೈಸ್ಪೀಡ್ ರೈಲು! ಇನ್ಮೇಲೆ ಹೈದರಾಬಾದ್ಗೆ ಬರೀ 2 ಗಂಟೆ ಜರ್ನಿ

Train Service: ಬೆಂಗಳೂರು-ಕೇರಳ ಪ್ರಯಾಣ ಈಗ ಇನ್ನೂ ಸುಲಭ…ಕೇವಲ 230 ರೂ., ಹೆಚ್ಚು ಸೌಕರ್ಯ!

Gold Rate Bengaluru: ಇಂದೂ ಚಿನ್ನದ ಬೆಲೆ ಇಳಿಕೆ…24 ಕ್ಯಾರಟ್ನಲ್ಲಿ ಒಂದೇ 4,900 ರೂ. ಕುಸಿತ!

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

Bengaluru Metro: ಬೆಂಗಳೂರು ಮೆಟ್ರೋ 3ನೇ ಹಂತ ಮತ್ತೆ ವಿಳಂಬ, ಯಾವ ವರ್ಷಕ್ಕೆ ಈ ಸೇವೆ ಸಿಗಲಿದೆ ತಿಳಿಯಿರಿ

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ

Gold Rate Today: ಮಧ್ಯಪ್ರಾಚ್ಯದಲ್ಲಿ ಸಂಘರ್ಷ; ಚಿನ್ನದ ಬೆಲೆ ಸ್ಥಿರ! ಎಷ್ಟಿದೆ ದರ?

Bengaluru Traffic: ಗೊರಗುಂಟೆಪಾಳ್ಯ ಟ್ರಾಫಿಕ್ ಮುಕ್ತಿಗೆ ಸುರಂಗ ರಸ್ತೆ ಯೋಜನೆ? ಸರ್ಕಾರದ ಮಹತ್ವದ ಹೆಜ್ಜೆ



Click it and Unblock the Notifications