Gold Loan: ಮನೆಯಲಿ ಇದ್ದರೆ ಚಿನ್ನ ಚಿಂತೆಯು ಏತಕೆ ಇನ್ನ

ಬ್ಯಾಂಕಿನಲ್ಲಿ ಸಾಲ ಪಡೆಯಲು ಕೇಳುವ ಹತ್ತಾರು ದಾಖಲೆಗಳನ್ನು ನೀಡುವುದು ತಲೆನೋವಿನ ಕೆಲಸ. ಆದರೆ, ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಆಪತ್ಪಾಂಧವನಂತೆ ಕೈ ಹಿಡಿಯುತ್ತಿರುವುದು ಕೂಡಿಟ್ಟ ಹಣದಿಂದ ಕೊಂಡುಕೊಂಡ ಚಿನ್ನ. ಏಕೆಂದರೆ ಬ್ಯಾಂಕ್‌ನಲ್ಲಿ ಚಿನ್ನ ಅಡವಿಟ್ಟು ಸಾಲ ಪಡೆಯುವುದು ಇತರ ಸಾಲದ ವಿಧಾನಗಳಿಗಿಂತಲೂ ಸುಲಭ.

ಪ್ರತಿಯೊಬ್ಬರಿಗೂ ತಮ್ಮ ಜೀವನದ ಕೆಲ ಹಂತದಲ್ಲಿ ಹಣಕಾಸಿನ ನೆರವು ಅಗತ್ಯವಿದ್ದೇ ಇರುತ್ತದೆ. ಹಾಗಾಗಿಯೇ ಅವರು ಸಾಲದ ಆಯ್ಕೆಗಳನ್ನು ನೋಡುವಾಗ ಯಾವುದೇ ಅವಮಾನ ಇದೆ ಅಂದುಕೊಳ್ಳುವುದಿಲ್ಲ. ಜೊತೆಗೆ ಹಲವಾರು ಆಯ್ಕೆ ವಿಧಾನಗಳು ಇರುವುದರಿಂದ ಒಂದು ವಿಧಾನ ಆಯ್ಕೆ ಮಾಡುವುದು ಕಷ್ಟವಾಗಬಹುದು.

ಹೌದು... ಬ್ಯಾಂಕ್‌ಗಳು ಮತ್ತು ಎನ್‌ಬಿಎಫ್‌ಸಿಗಳಂತಹ ಸಂಘಟಿತ ಸಂಸ್ಥೆಗಳು ಸಾಲ ನೀಡುವ ಉದ್ಯಮವನ್ನು ಔಪಚಾರಿಕವಾಗಿ ಮುಂದುವರಿಸಿದ ನಂತರ ಹೂಡಿಕೆ ವಲಯವು ತನ್ನ ಕಾರ್ಯ ವಿಧಾನದಲ್ಲಿ ಸುಧಾರಣೆ ಕಂಡಿದೆ. ಇದೇ ಸಮಯದಲ್ಲಿ ಚಿನ್ನದ ಮೇಲೆ ಪಡೆಯುವ ಸಾಲಗಳು ಅಗಾಧವಾಗಿ ಕೆಲಸ ಮಾಡಿರುವುದರಿಂದ ಸಾಮರ್ಥ್ಯ ಗ್ರಹಿಸಲು ಪ್ರಾರಂಭಿಸಿವೆ. ಹಾಗಾಗಿಯೇ ಇಂದು ವೈಯಕ್ತಿಕ ಸಾಲಗಳಿಗೆ ಹೋಲಿಸಿದರೆ ಚಿನ್ನದ ಸಾಲಗಳು ಹೆಚ್ಚು ಜನಪ್ರಿಯವಾಗಿವೆ.

* ಚಿನ್ನದ ಸಾಲದ ಪ್ರಯೋಜನಗಳು

ಅನೇಕ ಆರ್ಥಿಕ ತಜ್ಞರು ಚಿನ್ನದ ಮೇಲಿನ ಸಾಲವನ್ನು ಸ್ವಾಗತಿಸಿದ್ದಾರೆ. ಏಕೆಂದರೆ ವಿವಾಹ ಮಹೋತ್ಸವದಂತಹ ಕಾರ್ಯಕ್ರಮಗಳಿಗೆ, ವಸ್ತುಗಳ ಖರೀದಿಗೆ ಅಥವಾ ಇತರ ವೈಯಕ್ತಿಕ ಅವಶ್ಯಕತೆಗಳನ್ನು ಪೂರೈಸಲು ಯಾವುದೇ ಅರ್ಹತೆಯಿಲ್ಲದೆಯೂ ಚಿನ್ನದ ಮೇಲೆ ಸಾಲ ಪಡೆಯಬಹುದಾಗಿದೆ.

1. ಚಿನ್ನವೇ ಆಧಾರ‌

1. ಚಿನ್ನವೇ ಆಧಾರ‌

ಚಿನ್ನದ ಮೇಲೆ ವೈಯಕ್ತಿಕ ಸಾಲ ಪಡೆಯುವ ಸಂದರ್ಭಗಳಲ್ಲಿ ಸಾಲಗಾರರು ಯಾವುದೇ ಆಧಾರ ಒದಗಿಸುವ ಅವಶ್ಯವಿರುವುದಿಲ್ಲ. ಏಕೆಂದರೆ, ಚಿನ್ನ ಇಡುವುದೇ ಇಲ್ಲಿ ಮೂಲಾಧಾರವಾಗಿ ಪರಿಗಣಿಸಲಾಗುತ್ತದೆ. ಹಾಗಾಗಿಯೇ ಜನರು ಸಮಸ್ಯೆಗಳಲ್ಲಿದ್ದಾಗ ಚಿನ್ನದ ಮೇಲೆ ಅಥವಾ ವೈಯಕ್ತಿಕ ಸಾಲಕ್ಕಾಗಿ ಅರ್ಜಿ ಸಲ್ಲಿಸುತ್ತಾರೆ. ಅವುಗಳನ್ನು ತ್ವರಿತವಾಗಿ ಪ್ರಕ್ರಿಯೆಗೊಳಿಸಿ ಸಾಲ ನೀಡುವ ‌ಸಂಸ್ಥೆಗಳು ಸಾಲ ಮಂಜೂರು ಮಾಡಿಸುತ್ತಾರೆ. ಆದರೆ, ವೈಯಕ್ತಿಕ ಸಾಲ ಪಡೆಯುವಾಗ ಸಾಲದ ಅರ್ಜಿಯೊಂದಿಗೆ ಸಂಬಂಧಿತ ದಾಖಲೆಗಳನ್ನು ಪ್ರಸ್ತುತ ಪಡಿಸಲೇಬೇಕಾಗುತ್ತದೆ. ಉದಾಹರಣೆಗೆ ಆದಾಯ ಮತ್ತು ವಾಸಸ್ಥಳದ ಸಾಕ್ಷ್ಯ ಇತ್ಯಾದಿ ದಾಖಲೆಗಳನ್ನು ನೀಡಬೇಕಾಗುತ್ತದೆ. ವೈಯಕ್ತಿಕ ಸಾಲ‌ ಸ್ವಲ್ಪ ಸಮಯ ತೆಗೆದುಕೊಳ್ಳುವ ಪ್ರಕ್ರಿಯೆಯಾಗಿದೆ. ಆದರೆ, ಚಿನ್ನದ ಸಾಲ ನಗದು ರೂಪದಲ್ಲಿ ವಿತರಣೆಯಾಗುವುದರಿಂದ ಹೆಚ್ಚು ಪರಿಣಾಮಕಾರಿ ಮತ್ತು ಬೇಗನೆ ಸಿಗುತ್ತದೆ. ಇದು ಗ್ರಾಹಕರಿಗೆ ಅನುಕೂಲ.

2. ಸಾಲ ಹೆಚ್ಚಿಸುವ ವೆಚ್ಚ

2. ಸಾಲ ಹೆಚ್ಚಿಸುವ ವೆಚ್ಚ

ವೈಯಕ್ತಿಕ ಸಾಲಗಳನ್ನು ಪಡೆಯುವಾಗ ಬ್ಯಾಂಕುಗಳು ಯಾವುದೇ ಭದ್ರತೆ ನೀಡುವುದಿಲ್ಲ. ಹಾಗಾಗಿ ಸಾಲ ನೀಡುವಾಗ ಆದಾಯಕ್ಕೆ ಸಂಬಂಧಿಸಿದ ದಾಖಲೆಗಳನ್ನು ಪರಿಶೀಲಿಸಿ, ಸಣ್ಣ ಪ್ರಮಾಣದ ಸಂಸ್ಕರಣಾ ವೆಚ್ಚವನ್ನು ವಿಧಿಸುತ್ತಾರೆ. ವೈಯಕ್ತಿಕ ಸಾಲಕ್ಕೆ ಸಾಮಾನ್ಯವಾಗಿ ಶೇ.0.5 ಪ್ರತಿಶತದಿಂದ ಶೇ.1 ವರೆಗೆ ಇರುತ್ತದೆ. ಆದರೆ, ಚಿನ್ನದ ಮೇಲಿನ ಸಾಲಕ್ಕೆ ಇದಾವುದೂ ಅಗತ್ಯವಿರುವುದಿಲ್ಲ. ಏಕೆಂದರೆ, ತಮ್ಮ ಚಿನ್ನದ ಇಡುವಳಿಯನ್ನೇ ಬಳಸುತ್ತಿದ್ದಾರೆ. ಈ ಲೆಕ್ಕದಲ್ಲಿ ಸಂಸ್ಕರಣಾ ವೆಚ್ಚ ಕಂಡುಬರುವುದಿಲ್ಲ.

3. ಸಾಲದ ಅವಧಿ

3. ಸಾಲದ ಅವಧಿ

ಬ್ಯಾಂಕುಗಳು, ಸಾಲನೀಡುವ ಸಂಸ್ಥೆಗಳು ಅಥವಾ ಎನ್‌ಬಿಎಫ್‌ಸಿ ಗಳು ವೈಯಕ್ತಿಕ ಸಾಲದ ಅರ್ಜಿಗಳನ್ನು ಸ್ವೀಕರಿಸಿದಾಗ, ಅವರು ಆದಾಯಕ್ಕೆ ಸಂಬಂಧಿಸಿದ ದಾಖಲೆಗಳನ್ನು ‌ಮೌಲ್ಯಮಾಪನ ಮಾಡುತ್ತಾರೆ. ಅರ್ಜಿದಾರನು ಮರು ಪಾವತಿ ಮಾಡುವ ಸಾಮರ್ಥ್ಯ ‌ಹೊಂದಿದ್ದಾರೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಲು ತನಿಖೆ ನಡೆಸುತ್ತಾರೆ. ಇದು ಸಾಕಷ್ಟು ಸಮಯ ತೆಗೆದುಕೊಳ್ಳುವುದರಿಂದ ಸಾಲ ಪಡೆಯುವುದು ವಿಳಂಬವಾಗುತ್ತದೆ. ಆದರೆ, ಚಿನ್ನದ ಮೇಲಿನ ಸಾಲ ಪಡೆಯುವ ಕಾರ್ಯ ವಿಧಾನವು ‌ನೇರವಾಗಿರುತ್ತದೆ. ಸಾಲಗಾರರು ವಿವಿಧ‌ ಅರ್ಜಿ ನಮೂನೆಗಳಲ್ಲಿ ಸಹಿ ಮಾಡಿದ ನಂತರ, ತಮ್ಮ ಚಿನ್ನದ ವಸ್ತುವನ್ನು ಮೇಲಾಧಾರವಾಗಿ ಇಡುತ್ತಾರೆ. ಆ ನಂತರವೇ ಸಂಸ್ಥೆಯು ಅದರ ಮೌಲ್ಯದ ಮೇಲೆ ಸಾಲದ ಮೊತ್ತವನ್ನು ನಿಗದಿ ಮಾಡುತ್ತದೆ.

4. ಮರುಪಾವತಿ ಆಯ್ಕೆಗಳು

4. ಮರುಪಾವತಿ ಆಯ್ಕೆಗಳು

ವೈಯಕ್ತಿಕ ಸಾಲ ಅಥವಾ ಚಿನ್ನದ ಸಾಲವು ಸಾಲಗಾರರಿಗೆ ಇಎಂಐ ಮೂಲಕ ಮರುಪಾವತಿಸಲು ಅನುವು ಮಾಡಿಕೊಡುತ್ತದೆ. ಸುರಕ್ಷಿತ ಸಾಲಗಳು ಸಮಯಕ್ಕೆ ಪಾವತಿಗಳನ್ನು ಖಾತರಿಪಡಿಸುವುದರಿಂದ ಅವರು ಗ್ರಾಹಕರಿಗೆ ಹೆಚ್ಚು ಹೊಂದಿಕೊಳ್ಳುತ್ತಾರೆ. ಆದರೆ, ವೈಯಕ್ತಿಕ ಸಾಲಗಳಿಗೆ‌ ಹೋಲಿಸಿದರೆ, ಚಿನ್ನದ ಮೇಲಿನ ಸಾಲ ಮರು ಪಾವತಿ ಆಯ್ಕೆ ಹೆಚ್ಚಾಗಿರುತ್ತದೆ ಮತ್ತು ಕಠಿಣವಾಗಿರುವುದಿಲ್ಲ. ಚಿನ್ನದ ಸಾಲ ಮರುಪಾವತಿಗೆ ಸಾಮಾನ್ಯವಾಗಿ ಇಎಂಐ ವಿಧಾನವನ್ನು ಆಯ್ಕೆ ಮಾಡಿಕೊಳ್ಳಬಹುದು. ಅಥವಾ ಸಾಲದ ಅವಧಿಯಲ್ಲೇ ಬಡ್ಡಿಯನ್ನು ಹಿಂದಿರುಗಿಸಲು ಆಯ್ಕೆ ಮಾಡಬಹುದು ಅಥವಾ ಸಾಲದ ಅವಧಿಯ ಕೊನೆಯಲ್ಲಿ ಬಡ್ಡಿ ಮತ್ತು ಸಾಲವನ್ನು ಮರುಪಾವತಿ ಮಾಡುವ ವಿಧಾನವನ್ನು ಆಯ್ಕೆ ಮಾಡಿಕೊಳ್ಳಬಹುದು. ಇದರಲ್ಲಿ ಬಹು ಆಯ್ಕೆಗಳು ಇರುವುದರಿಂದ ಸಾಲವನ್ನು ಮರುಪಾವತಿ ಮಾಡಲು ಉತ್ತಮ ಅವಕಾಶಗಳಿರುತ್ತವೆ.

5. ಕಡಿಮೆ-ಬಡ್ಡಿ ದರಗಳು

5. ಕಡಿಮೆ-ಬಡ್ಡಿ ದರಗಳು

ವೈಯಕ್ತಿಕ ಸಾಲಗಳಿಗೆ ಹೋಲಿಸಿದಷ್ಟೂ ಚಿನ್ನದ ಸಾಲದ ಮೇಲಿನ ಬಡ್ಡಿದರಗಳು ಕಡಿಮೆಯಿರುತ್ತದೆ. ವೈಯಕ್ತಿಕ ಸಾಲಗಳಿಗೆ ಶೇ.16ರಿಂದ 22 ರ ವರಗೆ ಬಡ್ಡಿ ದರ ನಿಗದಿ ಮಾಡಿದರೆ, ಚಿನ್ನದ ಸಾಲಗಳಿಗೆ ಶೇ.11 ರಿಂದ 13 ಮಾತ್ರ ನಿಗದಿ ಮಾಡಲಾಗುತ್ತದೆ.

ದೇಶದ ಹೆಚ್ಚಿನ ಸಂಖ್ಯೆಯ ಜನಕ್ಕೆ ಚಿನ್ನ ಅತ್ಯಂತ ವಿಶ್ವಾಸಾರ್ಹ ಹೂಡಿಕೆಯ ಆಯ್ಕೆಯಾಗಿದೆ. ಅಲ್ಲದೆ, ಚಿನ್ನದ ಬೆಲೆ ಏರಿಕೆ ಮತ್ತು ಇಳಿಕೆಯು ಹೂಡಿಕೆದಾರರಿಗೆ ಇತರ ಲೋಹದ ವಸ್ತುಗಳನ್ನು ಪಡೆಯಲು ಅವಕಾಶ ಮಾಡಿಕೊಡುತ್ತದೆ. ಚಿನ್ನದ ಸಾಲವು ದೀರ್ಘಾವಧಿಯಲ್ಲಿ ‌ಲಾಭದಾಯಕ ಪ್ರಯೋಜನಗಳನ್ನು ಕಲ್ಪಿಸಿಕೊಡುತ್ತದೆ. ಹಾಗಾಗಿ ವೈಯಕ್ತಿಕ ಸಾಲಗಳಿಗಿಂತ ಚಿನ್ನದ ಮೇಲಿನ ಸಾಲ ಪಡೆಯುವುದು ಹೆಚ್ಚು ಅನುಕೂಲಕರವೆಂಬುದು ಸಮಂಜಸವಾಗಿದೆ.

 

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+