ಬೆಂಗಳೂರಿನಲ್ಲಿ ನಮ್ಮ ಮೆಟ್ರೋಗೆ ಎಲ್ಲ ಮಾರ್ಗಗಳಿಂದ ಸಂಪರ್ಕವನ್ನು ಹೆಚ್ಚಳ ಮಾಡುವ ನಿಟ್ಟಿನಲ್ಲಿ ನಿರ್ದಿಷ್ಟ ಮಾರ್ಗಗಳಿಗೆ ಬಿಎಂಟಿಸಿ ಫೀಡರ್ ಬಸ್‌ಗಳನ್ನು ಆರಂಭ ಮಾಡಲು ಮುಂದಾಗಿದೆ. ಬೆಂಗಳೂರು ಮೆಟ್ರೋಪಾಲಿಟನ್ ಸಾರಿಗೆ ಸಂಸ್ಥೆ (ಬಿಎಂಟಿಸಿ) ಮೆಟ್ರೋ ನಿಲ್ದಾಣಗಳನ್ನು ಸಂಪರ್ಕಿಸುವ ಹೊಸ ಫೀಡರ್ ಮಾರ್ಗಗಳನ್ನು ಪರಿಚಯಿಸಿದೆ.
ನವೆಂಬರ್ 20 ರಿಂದ ಬಿಎಂಟಿಸಿ ಉತ್ತರ ಬೆಂಗಳೂರಿನಲ್ಲಿ ಏಳು ಹೊಸ ಮೆಟ್ರೋ ಫೀಡರ್ ಸೇವೆಗಳನ್ನು ಪರಿಚಯಿಸಿದೆ. ಹೊಸ ಮಾರ್ಗಗಳೆಂದರೆ ಎಂಎಫ್-23ಇ, ಎಂಎಫ್-25 ಮತ್ತು ಎಂಎಫ್ 27 ಆಗಿದೆ. ಈ ಮಾರ್ಗದ ಬಿಎಂಟಿಸಿ ಬಸ್ ಯಾವ ಮಾರ್ಗದಲ್ಲಿ ಸಂಚಾರ ಮಾಡುತ್ತದೆ, ಎಂಬ ವಿವರ ಇಲ್ಲಿದೆ ಮುಂದೆ ಓದಿ...

ಯಾವ ಬಸ್, ಯಾವ ಮಾರ್ಗದಲ್ಲಿ ಸಂಚಾರ?
ಮಾರ್ಗ ಸಂಖ್ಯೆ ಎಂಎಫ್-23ಇ ಜಾಲಹಳ್ಳಿ ಮೆಟ್ರೋ ನಿಲ್ದಾಣವನ್ನು ಎಂಎಸ್ ಪಾಳ್ಯ ಮಾರ್ಗವಾಗಿ ಚಿಕ್ಕಬಾಣಾವರ, ಗಾಣಿಗರಹಳ್ಳಿ, ಗುಣಿ ಅಗ್ರಹಾರ ಮಾರ್ಗವಾಗಿ ಸಂಪರ್ಕ ಮಾಡುತ್ತದೆ. ಮಾರ್ಗ ಸಂಖ್ಯೆ ಎಂಎಫ್-25 ನಾಗಸಂದ್ರದ ಮೂಲಕ ತಿಪ್ಪೇನಹಳ್ಳಿಗೆ 8ನೇ ಮೈಲಿ ಸಂಪರ್ಕಿಸುತ್ತದೆ.
Namma Metro: ಆಸ್ತಿ ಮೌಲ್ಯ ದುಬಾರಿಯಾಗಿರುವಾಗ ನಮ್ಮ ಮೆಟ್ರೋಗೆ ಉಚಿತವಾಗಿ ಜಾಗ ಬಿಟ್ಟು ಕೊಟ್ರು!
ಮಾರ್ಗ ಸಂಖ್ಯೆ ಎಂಎಫ್ 27 ಜಾಲಹಳ್ಳಿ ಮೆಟ್ರೊ ನಿಲ್ದಾಣ ಮತ್ತು ಮಾಕಳಿಗೆ ಬಾಗಲಗುಂಟೆ, ಆಚಾರ್ಯ ಕಾಲೇಜು, ಆಲೂರು ಮೂಲಕ ಸಂಪರ್ಕ ಕಲ್ಪಿಸಲಿದೆ. ಬಿಎಂಟಿಸಿಯು ಮಾದಾವರದಿಂದ ನೈಸ್ ರಸ್ತೆ (ಮಾರ್ಗ ಸಂಖ್ಯೆ 8C) ಮೂಲಕ ಎಲೆಕ್ಟ್ರಾನಿಕ್ಸ್ ಸಿಟಿಗೆ ಹೊಸ ಮಾರ್ಗವನ್ನು ಪರಿಚಯಿಸಿದೆ.
ಬಿಎಂಟಿಸಿಯ ಈ ಕ್ರಮವು ಎಲೆಕ್ಟ್ರಾನಿಕ್ಸ್ ಸಿಟಿಯ ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ಕೇಂದ್ರದಲ್ಲಿ ಸಾವಿರಾರು ಉದ್ಯೋಗಿಗಳಿಗೆ ಸಹಾಯ ಮಾಡುತ್ತದೆ. ಬೆಂಗಳೂರಿನೊಳಗೆ ತನ್ನ ಬಸ್‌ಗಳ ದಟ್ಟಣೆಯನ್ನು ಕಡಿಮೆ ಮಾಡುತ್ತದೆ ಎಂದು ನಿರೀಕ್ಷಿಸುತ್ತದೆ.
ಬೆಂಗಳೂರಿನಲ್ಲಿ ಹೊಸ ಮಾರ್ಗಗಳು
ಮೇಲಿನವುಗಳ ಜೊತೆಗೆ, ಬಿಎಂಟಿಸಿ ಬೆಂಗಳೂರಿನಲ್ಲಿ ಹೊಸ ಬಸ್ ಮಾರ್ಗಗಳನ್ನು ಪರಿಚಯಿಸಿದೆ. ನಿಗಮವು ಹೊಸ ಮಾರ್ಗ ಸಂಖ್ಯೆಗಳನ್ನು ಪರಿಚಯಿಸಿದೆ. ಅದುವೆ ನಾನ್ ಎಸಿ ಸೇವೆಗಳಾದ 515 ಎ, 507 ಜಿ, 290-ಇಎಚ್ ಆಗಿದೆ.
ಮಾರ್ಗ ಸಂಖ್ಯೆ 515 ಎ ಉಳ್ಳಾಲ ಸ್ಯಾಟಲೈಟ್ ಪೇಟೆಯಿಂದ ಮುದ್ದೈಹನಪಾಳ್ಯ, ಅಂದ್ರಹಳ್ಳಿ, ಪೀಣ್ಯ 2ನೇ ಹಂತ, ಜಾಲಹಳ್ಳಿ ಕ್ರಾಸ್ ಮೂಲಕ ಯಶವಂತಪುರ ಟಿ.ಟಿ.ಎಂ.ಸಿಗೆ ತಲುಪಲಿದೆ.
ಮಾರ್ಗ ಸಂಖ್ಯೆ 507 ಜಿ ಕೆ.ಆರ್. ಪುರಂನಿಂದ ಟಿನ್ ಫ್ಯಾಕ್ಟರಿ, ಕಸ್ತೂರಿನಗರ, ಬಾಬುಸಪ್ಪಳ್ಯ, ಹೆಣ್ಣೂರು ಕ್ರಾಸ್, ಕೊತ್ತನೂರು, ಮತ್ತು ಕಣ್ಣೂರು ಬಾಗಲೂರಿಗೆ ತಲುಪಲಿದೆ. ಮಾರ್ಗ ಸಂಖ್ಯೆ 290-ಇಹೆಚ್ ಶಿವಾಜಿನಗರ ಬಸ್ ನಿಲ್ದಾಣದಿಂದ ಕೋಗಿಲು, ಅಗ್ರಹಾರ ಲೇಔಟ್, ತಿರುಮೇನಹಳ್ಳಿ ಕ್ರಾಸ್, ನಾಗವಾರ ಮಾರ್ಗವಾಗಿ ಯಲಹಂಕ 5ನೇ ಹಂತಕ್ಕೆ ತಲುಪುತ್ತದೆ.


Click it and Unblock the Notifications