ಇತ್ತೀಚೆಗೆ ಕೇಂದ್ರ ಸರ್ಕಾರಿ ನೌಕರರಿಗೆ ತುಟ್ಟಿಭತ್ಯೆಯನ್ನು ಹೆಚ್ಚಳ ಮಾಡಲಾಗಿದೆ. ಇದಾದ ಬಳಿಕ ಕೇಂದ್ರ ಸರ್ಕಾರಿ ನೌಕರರಿಗೆ ಮತ್ತೊಂದು ಸಂತಸದ ಸುದ್ದಿ ಕಾದಿದೆ. ವರದಿ ಪ್ರಕಾರ ಕೇಂದ್ರ ಸರ್ಕಾರಿ ನೌಕರರಿಗೆ ಮನೆ ಬಾಡಿಗೆ ಭತ್ಯೆ (ಎಚ್‌ಆರ್‌ಎ) ಶೀಘ್ರದಲ್ಲೇ ಹೆಚ್ಚಾಗುವ ಸಾಧ್ಯತೆಯಿದೆ.
ಇತ್ತೀಚಿನ ಡಿಎ ಹೆಚ್ಚಳವು ಕೇಂದ್ರ ಸರ್ಕಾರಿ ನೌಕರರಿಗೆ ಹಬ್ಬದ ಸಮಯದಲ್ಲಿ ಆರ್ಥಿಕ ಪ್ರಯೋಜನವನ್ನು ನೀಡಿದೆ. ಕೇಂದ್ರ ಸರ್ಕಾರಿ ನೌಕರರ ಖಾತೆಗಳಿಗೆ ದೀಪಾವಳಿ ಬೋನಸ್ ಮತ್ತು ಡಿಎ ಬಾಕಿ ಜೊತೆಗೆ ಗ್ರಾಚ್ಯುಟಿಯನ್ನು ಜಮಾ ಮಾಡಲಾಗಿದೆ. ಈಗ ಶೀಘ್ರವೇ ಮನೆ ಬಾಡಿಗೆ ಭತ್ಯೆ ಹೆಚ್ಚಿಸುವ ನಿರೀಕ್ಷೆಯಿದೆ.

ಡಿಎ ಏರಿಕೆ ಮಾಡಿದ ಮಾತ್ರಕ್ಕೆ ಕೇಂದ್ರ ಸರ್ಕಾರಿ ನೌಕರರಿಗೆ ಸಿಹಿಸುದ್ದ ಕೊನೆಯಾಗಿಲ್ಲ. ಉದ್ಯೋಗಿಗಳ ಸಂಬಳ ಹೆಚ್ಚಳದ ರೂಪದಲ್ಲಿ ಹೊಸ ವರ್ಷದ ಉಡುಗೊರೆ ಪಡೆಯಲಿದ್ದಾರೆ ಎಂದು ವರದಿಯಾಗಿದೆ. ಕೇಂದ್ರ ಸರ್ಕಾರಿ ನೌಕರರ ವೇತನ ಹೆಚ್ಚಳವು 2024 ರಲ್ಲಿ ಮತ್ತೆ ಪ್ರಾರಂಭವಾಗುತ್ತದೆ.
ಜುಲೈ, ಆಗಸ್ಟ್ ಮತ್ತು ಸೆಪ್ಟೆಂಬರ್‌ನಲ್ಲಿ ಅಖಿಲ ಭಾರತ ಗ್ರಾಹಕ ಬೆಲೆ ಸೂಚ್ಯಂಕ (ಎಐಸಿಪಿಐ) ಸೂಚ್ಯಂಕದೊಂದಿಗೆ, ಪ್ರಸ್ತುತ ತುಟ್ಟಿಭತ್ಯೆ ಶೇಕಡ 46 ರಷ್ಟಿದೆ. ಇತ್ತೀಚಿನ ಎಐಸಿಪಿಐ ಸೂಚ್ಯಂಕ ದತ್ತಾಂಶವು 137.5 ಪಾಯಿಂಟ್‌ಗಳಲ್ಲಿ ಶೇಕಡ 48.54ಕ್ಕೆ ತಲುಪುವುದರೊಂದಿಗೆ, ಮುಂಬರುವ ತಿಂಗಳುಗಳಲ್ಲಿ ತುಟ್ಟಿಭತ್ಯೆ ಶೇಕಡ 4-5 ರಷ್ಟು ಹೆಚ್ಚಳವನ್ನು ನಿರೀಕ್ಷಿಸಲಾಗಿದೆ.
ಪ್ರಯಾಣ ಭತ್ಯೆ ಹೆಚ್ಚಾಗುವ ಸಾಧ್ಯತೆ
ಇತ್ತೀಚಿನ ಡಿಎ ಹೆಚ್ಚಳದ ನಂತರ, ಕೇಂದ್ರ ಸರ್ಕಾರಿ ನೌಕರರಿಗೆ ಪ್ರಯಾಣ ಭತ್ಯೆಯು ಡಿಎಗೆ ಸಂಬಂಧಿಸಿರುವುದರಿಂದ ಹೆಚ್ಚಳವಾಗುವ ನಿರೀಕ್ಷೆಯಿದೆ. ಪ್ರಮುಖ ಟಿಪಿಟಿಎ ನಗರಗಳಲ್ಲಿ ಗ್ರೇಡ್ 1 ರಿಂದ 2 ರವರೆಗಿನ ಉದ್ಯೋಗಿಗಳು ಈ ಬಾರಿ ಕ್ರಮವಾಗಿ 1800 ರೂಪಾಯಿ ಮತ್ತು 1900 ರೂಪಾಯಿ ಪಡೆಯಬಹುದಾಗಿದೆ. ಗ್ರೇಡ್ 3 ರಿಂದ 8 ನೌಕರರು 3600 ರೂಪಾಯಿ ಜೊತೆ ಡಿಎ ಪಡೆಯುವ ನಿರೀಕ್ಷೆಯಿದೆ. ಇತರ ನಗರಗಳಲ್ಲಿ, ದರವು 1800 ರೂಪಾಯಿ + ಡಿಎ ಆಗಿರುವ ಸಾಧ್ಯತೆಯಿದೆ.
ಮನೆ ಬಾಡಿಗೆ ಭತ್ಯೆ ಕೂಡ ಹೆಚ್ಚಳ
ಈ ಆರ್ಥಿಕ ಉತ್ತೇಜನಗಳ ಹೊರತಾಗಿ, ಮುಂದಿನ ವರ್ಷಕ್ಕೆ ಮನೆ ಬಾಡಿಗೆ ಭತ್ಯೆ (ಎಚ್‌ಆರ್‌ಎ) ಪರಿಷ್ಕರಣೆ ನಿಗದಿಪಡಿಸಲಾಗಿದೆ. ಸುಮಾರು ಶೇಕಡ 3 ರಷ್ಟು ಎಚ್‌ಆರ್‌ಎ ಹೆಚ್ಚಳ ನಿರೀಕ್ಚೆಯಿದೆ. ಡಿಎ ಶೇಕಡ 50 ಮೀರಿದರೆ ಎಚ್‌ಆರ್‌ಎ ಪರಿಷ್ಕರಣೆ ಮಾಡಲಾಗುತ್ತದೆ.
ಪ್ರಸ್ತುತ X, Y, Z ವರ್ಗದ ನಗರಗಳಲ್ಲಿ ಕ್ರಮವಾಗಿ ಶೇಕಡ 27, 24, ಮತ್ತು 18 ಮನೆ ಬಾಡಿಗೆ ಭತ್ಯೆ ನಿಗದಿಪಡಿಸಲಾಗಿದೆ. ಮನೆ ಬಾಡಿಗೆ ಭತ್ಯೆ ಪರಿಷ್ಕರಣೆಯಾದರೆ ಈ ದರಗಳನ್ನು ಕ್ರಮವಾಗಿ ಶೇಕಡ 30, 27 ಮತ್ತು 21ಕ್ಕೆ ಏರಿಕೆಯಾಗುತ್ತದೆ. ಕನಿಷ್ಠ ಭತ್ಯೆ ಮಿತಿ ಶೇಕಡ 50 ಮೀರಿದ ಬಳಿಕ ಈ ಬೆಳವಣಿಗೆ ಕಂಡು ಬರುತ್ತದೆ.


Click it and Unblock the Notifications