7ನೇ ವೇತನ ಆಯೋಗ: ಕೇಂದ್ರ ಸರ್ಕಾರವು ಮಾರ್ಚ್‌ನಲ್ಲಿ ವೇತನ ಆಯೋಗದಲ್ಲಿ ಫಿಟ್‌ಮೆಂಟ್ ಅಂಶವನ್ನು ಪರಿಷ್ಕರಿಸುವ ನಿರೀಕ್ಷೆಯಿರುವುದರಿಂದ ಹೋಳಿ ಹಬ್ಬದ ನಂತರ ಕೇಂದ್ರ ಸರ್ಕಾರಿ ನೌಕರರಿಗೆ ಶುಭ ಸುದ್ದಿ ಸಿಗುವ ಸಾಧ್ಯತೆಯಿದೆ. ವೇತನ ಆಯೋಗದಲ್ಲಿ ಫಿಟ್ ಮೆಂಟ್ ಅಂಶದ ಪರಿಷ್ಕರಣೆ ನಂತರ ಕೇಂದ್ರ ನೌಕರರ ಕನಿಷ್ಟ ವೇತನ 18,000 ರೂ. ಯಿಂದ 26,000 ರೂ ಗೆ ಏರುವ ನಿರೀಕ್ಷೆ ಇದೆ.
ವರದಿಗಳ ಪ್ರಕಾರ, ಕೇಂದ್ರ ಸರ್ಕಾರವು ಮಾರ್ಚ್ 8ರ ನಂತರ ಫಿಟ್ ಮೆಂಟ್ ಅಂಶ ಮತ್ತು ತುಟ್ಟಿಭತ್ಯೆ(ಡಿಎ)ಯನ್ನು ಪರಿಷ್ಕರಿಸಲು ಮುಂದಾಗಿದೆ. ಪ್ರಸ್ತುತ ಸಾಮಾನ್ಯ ಫಿಟ್ ಮೆಂಟ್ ಅಂಶವು 2.57% ದಷ್ಟಿದೆ. ಹೀಗಾಗಿ 4200 ಗ್ರೇಡ್ ಪೇನಲ್ಲಿ ರೂ 15,000 ಮೂಲ ವೇತನ ಪಡೆಯುತ್ತಿದ್ದರೆ , ಅವರ ಒಟ್ಟು ವೇತನ ರೂ. 15,500×2.57 ಅಥವಾ 39,835 ರೂ. ಪಡೆಯುತ್ತಾರೆ.

6ನೇ ವೇತನ ಆಯೋಗ 1.86ಕ್ಕೆ ಶಿಫಾರಸ್ಸು ಮಾಡಲಾಗಿತ್ತು. ಹೀಗಾಗಿ ಕೇಂದ್ರ ನೌಕರರು ಈ ಬಾರಿ ಫಿಟ್ ಮೆಂಟ್ ಅಂಶವನ್ನು 3.68ಕ್ಕೆ ಏರಿಸಬೇಕು ಎಂದು ಆಗ್ರಹಿಸಿದ್ದು ಒಂದು ವೇಳೆ ಇದೇ ರೀತಿ ಪರಿಷ್ಕರಣೆಯಾದಲ್ಲಿ ಕನಿಷ್ಟ ವೇತನ ರೂ. 18,000 ದಿಂದ 26,000 ರೂ.ಗಳಿಗೆ ಏರಿಕೆಯಾಗಲಿದೆ.
7ನೇ ವೇತನ ಆಯೋಗದಡಿಯಲ್ಲಿ ಕೇಂದ್ರ ಸರ್ಕಾರದ ನೌಕರರ ತುಟ್ಟಿಭತ್ಯೆ(ಡಿಎ)ಯು ಜನವರಿ 1ರಿಂದ 2023 ಅನ್ವಯವಾಗುವಂತೆ ಮಾರ್ಚ್ ನಲ್ಲಿ ಹೆಚ್ಚಳವಾಗಲಿದೆ ಎಂದು ಈ ಹಿಂದೆ ವರದಿಯಾಗಿತ್ತು. ಇದಲ್ಲದೆ ಕೇಂದ್ರ ಸರ್ಕಾರವು ಪಿಂಚಣಿದಾರರ ತುಟ್ಟಿಭತ್ಯೆ (ಡಿಆರ್) ಅನ್ನು ಕೂಡಾ ಹೆಚ್ಚಳ ಮಾಡಲು ಚಿಂತನೆ ನಡೆಸಿದ್ದು, ಕೇಂದ್ರ ನೌಕರರು 18 ತಿಂಗಳ ಡಿಎ ಬಾಕಿ ಮೊತ್ತ ಪಡೆಯಲಿದ್ದಾರೆ ಎಂದು ಕೆಲವು ವರದಿಗಳು ತಿಳಿಸಿವೆ.
ಈ ಹಿಂದೆ 7ನೇ ವೇತನ ಆಯೋಗದಡಿಯಲ್ಲಿ ಕೇಂದ್ರ ಸರ್ಕಾರದ ನೌಕರರು ಮಾರ್ಚ್ 2023ರಲ್ಲಿ ತುಟ್ಟಿಭತ್ಯೆ(ಡಿಎ)ಏರಿಕೆ ಪಡೆಯುತ್ತಾರೆ ಎಂದು ವರದಿಯಾಗಿದೆ.ಜನವರಿ 1 ಹಾಗೂ ಜುಲೈ 1ರಿಂದ ಜಾರಿಗೆ ಬರುವಂತೆ ಡಿಎ ಮತ್ತು ಡಿಆರ್‌ನ್ನು ವರ್ಷಕ್ಕೆ ಎರಡು ಬಾರಿ ಪರಿಷ್ಕರಿಸಲಾಗುತ್ತದೆ ಎಂಬುದನ್ನು ಗಮನಿಸಬೇಕು. ಕೊನೆಯ ಬಾರಿಗೆ 2022ರ ಸೆಪ್ಟೆಂಬರ್ ಹೆಚ್ಚಳವನ್ನು ಘೋಷಿಸಿ, ಡಿಎಯನ್ನು ಶೇಕಡಾ 4ರಷ್ಟು ಹೆಚ್ಚಿಸಿ ಶೇಕಡಾ 3.8ಕ್ಕೆ ಏರಿಸಿತ್ತು.
ಜನವರಿಯಲ್ಲಿ ಮನೆ ಬಾಡಿಗೆ ಭತ್ಯೆ(ಎಚ್‌ಆರ್‌ಎ) ನಿಯಮವನ್ನು ಹಣಕಾಸು ಸಚಿವಾಲಯವು ಪರಿಷ್ಕರಿಸಿದ್ದು, ಕೇಂದ್ರ ಸರ್ಕಾರಿ ಉದ್ಯೋಗಿಗಳು ಈ ಕೆಳಕಂಡ ಸಂದರ್ಭಗಳಲ್ಲಿ ಎಚ್‌ಆರ್‌ಎ ಪಡೆಯಲು ಅರ್ಹರಲ್ಲ ಎಂದು ಸಚಿವಾಲಯ ತಿಳಿಸಿದೆ.
ಇನ್ನೊಬ್ಬ ಸರ್ಕಾರಿ ನೌಕರನಿಗೆ ಹಂಚಿಕೆಯಾದ ಸರ್ಕಾರಿ ವಸತಿಗಳನ್ನು ಅವನು/ಅವಳು ಹಂಚಿಕೊಂಡಿದ್ದರೆ; ಅಥವಾ ಅವನು ಅಥವಾ ಅವಳು ತನ್ನ ತಂದೆ-ತಾಯಿ/ಮಗ/ಮಗಳಿಗೆ ಕೇಂದ್ರ, ರಾಜ್ಯ ಸರ್ಕಾರ, ಸಾರ್ವಜನಿಕ ಸ್ವಾಮ್ಯದ ಅಥವಾ ಅರೆ ಸರ್ಕಾರಿ ಸಂಸ್ಥೆಗಳಾದ ಮುನಿಸಿಪಾಲಿಟಿ, ಬಂದರು ಟ್ರಸ್ಟ್, ರಾಷ್ಟ್ರೀಕೃತ ಬ್ಯಾಂಕ್‌ಗಳು, ಭಾರತೀಯ ಜೀವ ವಿಮಾ ನಿಗಮ ಮುಂತಾದ ಸಂಸ್ಥೆಗಳಿಂದ ವಸತಿ ಹಂಚಿಕೆಯಾಗಿದ್ದರೆ; ಅಥವಾ ಅವನ/ಅವಳ ಸಂಗಾತಿಗೆ ಒಂದೇ ಸ್ಥಳದಲ್ಲಿ ಕೇಂದ್ರ ಸರ್ಕಾರ/ ರಾಜ್ಯ ಸರ್ಕಾರ, ಸ್ವಾಯತ್ತ ಸಾರ್ವಜನಿಕ ಉದ್ಯಮ/ಅರೆ ಸರ್ಕಾರಿ ಸಂಸ್ಥೆಗಳಾದ ಮುನಿಸಿಪಾಲಿಟಿ, ಬಂದರು ಟ್ರಸ್ಟ್ ಮುಂತಾದ ಸಂಸ್ಥೆಗಳಿಂದ ವಸತಿ ಹಂಚಿಕೆಯಾಗಿ ಅವನು/ಅವಳು ಅದೇ ವಸತಿಯಲ್ಲಿ ವಾಸವಿದ್ದರೆ ಅಥವಾ ಅವನು/ಅವಳು ಪ್ರತ್ಯೇಕ ಬಾಡಿಗೆ ಪಡೆದ ವಸತಿಯಲ್ಲಿ ವಾಸವಾಗಿದ್ದರೆ.
More From GoodReturns

ಷೇರು ಮಾರುಕಟ್ಟೆ ಏರಿಕೆ: ಹೂಡಿಕೆದಾರರಿಗೆ ಸಿಕ್ಕಿತು ಭರ್ಜರಿ ಲಾಭದ ಅವಕಾಶ

ಆರ್ಬಿಐ ರೆಪೋ ದರ ಸ್ಥಿರ: ನಿಮ್ಮ ಹಣದ ಭವಿಷ್ಯ ಬದಲಾಗುತ್ತಾ?

ಚಿನ್ನದ ಬೆಲೆ ಸ್ಥಿರ: ಆರ್ಬಿಐ ನಿರ್ಧಾರದಿಂದ ದರ ಇಳಿಕೆಯಾಗುತ್ತಾ?

ಎಮಿಯಾಕ್ ಟೆಕ್ನಾಲಜೀಸ್ ಐಪಿಒ: ಹೂಡಿಕೆದಾರರ ಮುಗಿಬಿದ್ದ ಭರ್ಜರಿ ಬೇಡಿಕೆ!

ಆರ್ಬಿಐ ನಿರ್ಧಾರದಿಂದ ನಿಮ್ಮ ಇಎಂಐ ಹೊರೆ ಹೆಚ್ಚಾಗಲಿದೆಯೇ? ಎಚ್ಚರ!

ಆರ್ಬಿಐ ರೆಪೋ ದರ ಸ್ಥಿರತೆ: ನಿಮ್ಮ ಇಎಂಐ ಹೊರೆ ಇಳಿಯುತ್ತಾ?

ಟಿಸಿಎಸ್ ಫಲಿತಾಂಶದ ಬಳಿಕ ಮಾರುಕಟ್ಟೆಯಲ್ಲಿ ಅನಿರೀಕ್ಷಿತ ಏರಿಳಿತದ ಭೀತಿ!

ಆರ್ಬಿಐ ಪಾಲಿಸಿಗೂ ಮುನ್ನ ನಿಮ್ಮ ಬಂಡವಾಳಕ್ಕೆ ಈ ರಕ್ಷಣೆ ಬೇಕೇ?

ಓಂ ಪವರ್ ಟ್ರಾನ್ಸ್ಮಿಷನ್ ಐಪಿಒ: ಹೂಡಿಕೆದಾರರ ಪಾಲಿಗೆ ಲಾಭದಾಯಕವೇ?

ಆರ್ಬಿಐ ನಿರ್ಧಾರದ ನಂತರ ನಿಮ್ಮ ಹಣಕ್ಕೆ ಯಾವುದು ಬೆಸ್ಟ್?

ಆರ್ಬಿಐ ಪಾಲಿಸಿ ಅಬ್ಬರ: ನಿಮ್ಮ ಹಣ ಉಳಿಸಲು ಈ ತಂತ್ರ ಬಳಸಿ



Click it and Unblock the Notifications