ನವರಾತ್ರಿಯ ಹಬ್ಬಕ್ಕೂ ಮುನ್ನ ನಡೆಯುವ ಕೊನೆಯ ಕ್ಯಾಬಿನೆಟ್ ಸಭೆಯು ಪ್ರಧಾನಿ ನರೇಂದ್ರ ಮೋದಿಯವರ ಅಧ್ಯಕ್ಷತೆಯಲ್ಲಿ ಅಕ್ಟೋಬರ್ 11, 2023 ರ ಬುಧವಾರದಂದು ನಿಗದಿಯಾಗಿದೆ. ಈ ಸಭೆಯ ಬಳಿಕ ಕೇಂದ್ರ ನೌಕರರು ಮತ್ತು ಪಿಂಚಣಿದಾರರಿಗೆ ಮಹತ್ವದ ಘೋಷಣೆಯನ್ನು ಮಾಡು ಭರವಸೆಯಿದೆ.
ಸಚಿವ ಸಂಪುಟವು ತುಟ್ಟಿಭತ್ಯೆಯ ಹೆಚ್ಚಳಕ್ಕೆ ತನ್ನ ಒಪ್ಪಿಗೆಯನ್ನು ನೀಡುವ ನಿರೀಕ್ಷೆಯಿದೆ. ಅಕ್ಟೋಬರ್ 11, ಬುಧವಾರ ಬೆಳಿಗ್ಗೆ 10:30 ಕ್ಕೆ ಸಂಪುಟ ಸಭೆ ಸೇರಲಿದೆ. ಈ ಸಭೆಯಲ್ಲಿ, ಕೇಂದ್ರ ನೌಕರರು ಮತ್ತು ಪಿಂಚಣಿದಾರರಿಗೆ ತುಟ್ಟಿಭತ್ಯೆ ನೀಡುವ ಬಗ್ಗೆ ಪ್ರಧಾನಿ ಮೋದಿ ಸರ್ಕಾರವು ನಿರ್ಣಾಯಕ ನಿರ್ಧಾರವನ್ನು ತೆಗೆದುಕೊಳ್ಳಲು ಸಜ್ಜಾಗಿದೆ.

ತುಟ್ಟಿಭತ್ಯೆ ಎಷ್ಟು ಹೆಚ್ಚಾಗಬಹುದು?
ತುಟ್ಟಿಭತ್ಯೆಯನ್ನು ಶೇಕಡ 3 ರಷ್ಟು ಹೆಚ್ಚಿಸುವ ಸಾಧ್ಯತೆಯಿದೆ. ಇಷ್ಟು ಹೆಚ್ಚಳ ಮಾಡಿದರೆ ತುಟ್ಟಿಭತ್ಯೆಯು ಶೇಕಡ 42 ರಿಂದ 45 ಕ್ಕೆ ಏರಿಕೆಯಾಗುತ್ತೆದ. ಈ ತುಟ್ಟಿ ಭತ್ಯೆಯ ಹೆಚ್ಚಳವು ಜುಲೈ 1, 2023 ರಿಂದ ಜಾರಿಗೆ ಬರಲಿದೆ. ಅಂದರೆ ಉದ್ಯೋಗಿಗಳು ಅಕ್ಟೋಬರ್ ತಿಂಗಳಿನಿಂದ ಅಧಿಕ ವೇತನವನ್ನು ಪಡೆಬಹುದು. ಜೊತೆಗೆ ಜುಲೈನಿಂದ ಸೆಪ್ಟೆಂಬರ್‌ವರೆಗಿನ ಬಾಕಿಯನ್ನು ಪಡೆಯಬಹುದು.
ನವರಾತ್ರಿಗೂ ಮುನ್ನವೇ ಕೇಂದ್ರ ಸರ್ಕಾರವು ಕೇಂದ್ರ ಸರ್ಕಾರಿ ಉದ್ಯೋಗಿಗಳಿಗೆ ಮತ್ತು ಪಿಂಚಣಿದಾರರಿಗೆ ಈ ಸಿಹಿಸುದ್ದಿಯನ್ನು ನೀಡುವ ನಿರೀಕ್ಷೆಯಿದೆ. ಅಕ್ಟೋಬರ್ 15 ರಂದು ಪ್ರಾರಂಭಗೊಂಡು ಅಕ್ಟೋಬರ್ 24 ರವರೆಗೆ ದಸರಾ ಸಂಭ್ರಮ ಇರಲಿದೆ. ಕೇಂದ್ರ ಸರ್ಕಾರವು ನವರಾತ್ರಿಗೂ ಮುನ್ನವೇ ಹೀಗೆ ಡಿಎ ಏರಿಕೆ ಘೋಷಣೆ ಮಾಡುವುದು ಹಿಂದಿನಿಂದಲೂ ಬಂದ ಸಂಪ್ರದಾಯವಾಗಿದೆ.
ಸಾಮಾನ್ಯವಾಗಿ ಕೇಂದ್ರ ಸರ್ಕಾರ ವರ್ಷದಲ್ಲಿ ಎರಡು ಬಾರಿ ಡಿಎಯನ್ನು ಪರಿಷ್ಕರಣೆ ಮಾಡಬೇಕಾಗುತ್ತದೆ. ಮೊದಲನೆಯ ಡಿಎ ಜನವರಿಯಿಂದ ಜಾರಿಗೆ ಬಂದರೆ, ಇನ್ನೊಂದು ಬಾರಿ ಮಾಡಿದ ಪರಿಷ್ಕರಣೆ ಜುಲೈನಿಂದ ಜಾರಿಗೆ ಬರುತ್ತದೆ. ಆದರೂ ಹಬ್ಬ ಹತ್ತಿರ ಬರುತ್ತಿದಂತೆ ಮಾಡುವ ಡಿಎ ಏರಿಕೆಯನ್ನು ಉದ್ಯೋಗಿಗಳಿಗೆ ನೀಡಲಾಗುವ ಹಬ್ಬದ ಉಡುಗೊರೆ ಎಂದೇ ಪರಿಗಣಿಸಲಾಗುತ್ತದೆ. ಈ ನಿರ್ಧಾರದಿಂದ 47 ಲಕ್ಷ ನೌಕರರು ಮತ್ತು 68 ಲಕ್ಷ ಪಿಂಚಣಿದಾರರಿಗೆ ಲಾಭವಾಗಲಿದೆ. ಕಳೆದ ವರ್ಷ ಸರ್ಕಾರ ನವರಾತ್ರಿಗೆ ಮುನ್ನ ನಡೆದ ಸಂಪುಟ ಸಭೆಯಲ್ಲಿ ತುಟ್ಟಿಭತ್ಯೆ ಹೆಚ್ಚಿಸಿತ್ತು.
ಕಾರ್ಮಿಕ ಬ್ಯೂರೋ ಮಾಸಿಕ ಬಿಡುಗಡೆ ಮಾಡುವ ಅಂಕಿ ಅಂಶ ಕೈಗಾರಿಕಾ ಕಾರ್ಮಿಕರಿಗೆ ಗ್ರಾಹಕ ಬೆಲೆ ಸೂಚ್ಯಂಕವನ್ನು ಆಧರಿಸಿ ತುಟ್ಟಿ ಭತ್ಯೆಯನ್ನು ಲೆಕ್ಕಹಾಕಲಾಗುತ್ತದೆ. ಕೇಂದ್ರ ನೌಕರರು ಶೇಕಡ 4ರಷ್ಟು ಹೆಚ್ಚಳದ ನಿರೀಕ್ಷೆಯಲ್ಲಿದ್ದರೆ, ಶೇ.3ರಷ್ಟು ಏರಿಕೆಯಾಗುವ ಸೂಚನೆಗಳಿವೆ. ಹಣದುಬ್ಬರದ ಹೊರೆಯನ್ನು ಎದುರಿಸುತ್ತಿರುವವರಿಗೆ ಇದು ಸಹಾಯವಾಗುವ ನಿರೀಕ್ಷೆಯಿದೆ.


Click it and Unblock the Notifications