ಡಿಎ ಏರಿಕೆಗೆ ಕೇಂದ್ರ ಉದ್ಯೋಗಿಗಳು ಕಾತುರದಿಂದ ಕಾಯುತ್ತಿದ್ದಾರೆ. ಈ ನಡುವೆ ನವರಾತ್ರಿ ಮತ್ತು ದೀಪಾವಳಿ ನಡುವೆ ಕೇಂದ್ರ ಸರ್ಕಾರ ತನ್ನ ಉದ್ಯೋಗಿಗಳಿಗೆ ಡಿಎ ಹೆಚ್ಚಳವನ್ನು ಘೋಷಿಸುವ ಸಾಧ್ಯತೆಯಿದೆ ಎಂದು ವರದಿಗಳು ತಿಳಿಸಿವೆ. ಈ ಡಿಎ ಏರಿಕೆಯು ಜುಲೈ 1, 2023 ರಿಂದ ಜಾರಿಗೆ ಬರಲಿದೆ.
ಈ ಹಿಂದೆ ವರದಿಯ ಪ್ರಕಾರ ಕೇಂದ್ರ ಸರ್ಕಾರವು ಸುಮಾರು ಶೇಕಡ 3 ರಷ್ಟು ಡಿಎ ಏರಿಕೆ ಮಾಡಬಹುದು ಎಂದು ಹೇಳಲಾಗಿದ್ದರೂ ಅದಕ್ಕಿಂತ ಅಧಿಕ ಡಿಎ ಏರಿಕೆ ಮಾಡುವ ನಿರೀಕ್ಷೆಯಿದೆ. ಇಂಡಸ್ಟ್ರಿಯಲ್ ವರ್ಕರ್ಸ್ (ಸಿಪಿಐ-ಐಡಬ್ಲ್ಯು) ಇತ್ತೀಚಿನ ಗ್ರಾಹಕ ಬೆಲೆ ಸೂಚ್ಯಂಕವನ್ನು ಆಧರಿಸಿ ಡಿಎ ಲೆಕ್ಕಾಚಾರದ ಸೂತ್ರದ ಪ್ರಕಾರ, ಕೇಂದ್ರ ಸರ್ಕಾರಿ ನೌಕರರಿಗೆ ಶೇಕಡ 4 ರಷ್ಟು ತುಟ್ಟಿಭತ್ಯೆ ಹೆಚ್ಚಳವಾಗುವ ಸಾಧ್ಯತೆಯಿದೆ.

ನೌಕರರ ಡಿಎ ಶೇಕಡ 3 ರಷ್ಟು ಹೆಚ್ಚಳವಾಗಬಹುದು ಎಂದು ಈ ಹಿಂದೆ ವರದಿಯಾಗಿದೆ. ಹೀಗೆ ಹೆಚ್ಚಳವಾದರೆ ಶೇಕಡ 45 ರಷ್ಟು ಏರಿಕೆಯಾಗುತ್ತದೆ. ಆದರೆ ಶೇಕಡ 4 ರಷ್ಟು ಹೆಚ್ಚಾದರೆ ಶೇಕಡ 45 ಆಗಲಿದೆ. ಸರ್ಕಾರಿ ನೌಕರರಿಗೆ ಡಿಎ ನೀಡಿದರೆ, ಪಿಂಚಣಿದಾರರಿಗೆ ಡಿಆರ್ ನೀಡಲಾಗುತ್ತದೆ. ಡಿಎ ಮತ್ತು ಡಿಆರ್ ಅನ್ನು ವರ್ಷಕ್ಕೆ ಎರಡು ಬಾರಿ ಹೆಚ್ಚಿಸಲಾಗುತ್ತದೆ. ಒಂದು ಬಾರಿ ಜನವರಿ ತಿಂಗಳಿಗೆ ಅನ್ವಯವಾಗುವಂತೆ, ಮತ್ತೊಂದು ಬಾರಿ ಜುಲೈ ತಿಂಗಳಿಗೆ ಅನ್ವಯವಾಗುವಂತೆ ಏರಿಕೆ ಮಾಡಲಾಗುತ್ತದೆ.
ಪ್ರಸ್ತುತ, ಒಂದು ಕೋಟಿಗೂ ಹೆಚ್ಚು ಕೇಂದ್ರ ಸರ್ಕಾರಿ ನೌಕರರು ಮತ್ತು ಪಿಂಚಣಿದಾರರು ಶೇಕಡ 42 ರಷ್ಟು ತುಟ್ಟಿಭತ್ಯೆಯನ್ನು ಪಡೆಯುತ್ತಿದ್ದಾರೆ. ಮಾರ್ಚ್ 2023 ರಲ್ಲಿ ಕೊನೆ ಬಾರಿಗೆ ತುಟ್ಟಿಭತ್ಯೆಯನ್ನು ಹೆಚ್ಚಳ ಮಾಡಲಾಗಿದೆ. ಪ್ರಸ್ತುತ ಹಣದುಬ್ಬರ ದರವನ್ನು ಗಮನಿಸಿದರೆ, ವಿವಿಧ ವರದಿಗಳ ಪ್ರಕಾರ ಮುಂದಿನ ಡಿಎ ಹೆಚ್ಚಳವು ಶೇಕಡ 4 ರಷ್ಟಿರುತ್ತದೆ ಎಂದು ನಿರೀಕ್ಷಿಸಲಾಗಿದೆ.
ಇತ್ತೀಚೆಗೆ, ಮಧ್ಯಪ್ರದೇಶ, ಒಡಿಶಾ, ಕರ್ನಾಟಕ, ಜಾರ್ಖಂಡ್ ಮತ್ತು ಹಿಮಾಚಲ ಪ್ರದೇಶ ಸೇರಿದಂತೆ ವಿವಿಧ ರಾಜ್ಯ ಸರ್ಕಾರಗಳು ತಮ್ಮ ರಾಜ್ಯ ಸರ್ಕಾರಿ ನೌಕರರಿಗೆ ತುಟ್ಟಿ ಭತ್ಯೆಯನ್ನು ಹೆಚ್ಚಿಸಿವೆ. ಕರ್ನಾಟಕ ಸರ್ಕಾರವು ಈ ಹಿಂದೆ ಮೇ 30 ರಂದು ಎಲ್ಲಾ ರಾಜ್ಯ ಸರ್ಕಾರಿ ನೌಕರರು ಮತ್ತು ಪಿಂಚಣಿದಾರರಿಗೆ ತುಟ್ಟಿಭತ್ಯೆಯನ್ನು (ಡಿಎ) ಶೇಕಡ 31 ರಿಂದ 35 ಕ್ಕೆ ಹೆಚ್ಚಿಸಿದೆ. ಇದು ಜನವರಿ 1, 2023 ರಿಂದ ಜಾರಿಗೆ ಬಂದಿದೆ.
ಡಿಎ ಹೆಚ್ಚಳದ ಬಗ್ಗೆ ಸರ್ಕಾರ ಹೇಗೆ ನಿರ್ಧರಿಸುತ್ತದೆ?
ಜೂನ್ 2022 ಕ್ಕೆ ಕೊನೆಗೊಳ್ಳುವ ಅವಧಿಗೆ ಅಖಿಲ ಭಾರತ ಗ್ರಾಹಕ ಬೆಲೆ ಸೂಚ್ಯಂಕದ (ಎಐಸಿಪಿಐ) 12 ಮಾಸಿಕ ಸರಾಸರಿಯಲ್ಲಿ ಶೇಕಡಾವಾರು ಹೆಚ್ಚಳದ ಆಧಾರದ ಮೇಲೆ ತುಟ್ಟಿಭತ್ಯೆ ಮತ್ತು ಡಿಆರ್ ಹೆಚ್ಚಳವನ್ನು ನಿರ್ಧರಿಸಲಾಗುತ್ತದೆ. ಕೇಂದ್ರ ಸರ್ಕಾರವು ಪ್ರತಿ ವರ್ಷ ಜನವರಿ 1 ಮತ್ತು ಜುಲೈ 1 ರಂದು ಭತ್ಯೆಗಳನ್ನು ಪರಿಷ್ಕರಿಸುತ್ತದೆ.
ನಿರ್ಧಾರವನ್ನು ಸಾಮಾನ್ಯವಾಗಿ ಮಾರ್ಚ್ ಮತ್ತು ಸೆಪ್ಟೆಂಬರ್‌ನಲ್ಲಿ ಪ್ರಕಟಿಸಲಾಗುತ್ತದೆ. ಆದರೆ ಇಂದು ಸೆಪ್ಟೆಂಬರ್ ಕೊನೆಯ ದಿನವಾಗಿದ್ದು ಸರ್ಕಾರವು ಇನ್ನೂ ಕೂಡಾ ಡಿಎ ಏರಿಕೆಯನ್ನು ಘೋಷಣೆ ಮಾಡಿಲ್ಲ. ಈ ಬಾರಿ ದೀಪಾವಳಿ, ದಸರಾ ಸಂದರ್ಭದಲ್ಲಿ ಡಿಎ ಏರಿಕೆ ಘೋಷಣೆ ಮಾಡುವ ನಿರೀಕ್ಷೆಯಿದೆ ಎಂದು ವರದಿಯು ಹೇಳುತ್ತದೆ.
2006 ರಲ್ಲಿ, ಕೇಂದ್ರ ಸರ್ಕಾರವು ಕೇಂದ್ರ ಸರ್ಕಾರಿ ನೌಕರರು ಮತ್ತು ಪಿಂಚಣಿದಾರರಿಗೆ ಡಿಎ ಮತ್ತು ಡಿಆರ್ ಅನ್ನು ಲೆಕ್ಕಾಚಾರ ಮಾಡಲು ಸೂತ್ರವನ್ನು ಪರಿಷ್ಕರಿಸಿದೆ. ಈ ಸೂತ್ರ ತುಟ್ಟಿಭತ್ಯೆ ಶೇಕಡಾವಾರು = ((ಅಖಿಲ-ಭಾರತೀಯ ಗ್ರಾಹಕ ಬೆಲೆ ಸೂಚ್ಯಂಕದ ಸರಾಸರಿ (ಮೂಲ ವರ್ಷ 2001=100) ಕಳೆದ 12 ತಿಂಗಳುಗಳಲ್ಲಿ -115.76)/115.76)x100. ಆಗಿದೆ.
ಕೇಂದ್ರ ಸಾರ್ವಜನಿಕ ವಲಯದ ಉದ್ಯೋಗಿಗಳಿಗೆ: ತುಟ್ಟಿಭತ್ಯೆ ಶೇಕಡಾವಾರು = ((ಅಖಿಲ-ಭಾರತೀಯ ಗ್ರಾಹಕ ಬೆಲೆ ಸೂಚ್ಯಂಕದ ಸರಾಸರಿ (ಮೂಲ ವರ್ಷ 2001=100) ಕಳೆದ 3 ತಿಂಗಳುಗಳಿಂದ -126.33)/126.33)x100.


Click it and Unblock the Notifications