ಇಂದಿನ ಸಚಿವ ಸಂಪುಟ ಸಭೆಯಲ್ಲಿ ಕೇಂದ್ರ ಸರ್ಕಾರಿ ನೌಕರರ ತುಟ್ಟಿ ಭತ್ಯೆ (ಡಿಎ) ಹೆಚ್ಚಿಸುವುದಾಗಿ ಕೇಂದ್ರ ಸರ್ಕಾರ ಘೋಷಿಸಿದೆ. ಕೇಂದ್ರ ಸರಕಾರಿ ನೌಕರರಿಗೆ ಸರಕಾರ ಶೇಕಡ 4 ರಷ್ಟು ತುಟ್ಟಿಭತ್ಯೆಯನ್ನು ಹೆಚ್ಚಳ ಮಾಡಿದೆ. ಕೇಂದ್ರ ಸರ್ಕಾರಿ ನೌಕರರ ಡಿಎ ಈಗಿರುವ ಶೇಕಡ 42ರಿಂದ ಶೇಕಡ 46ಕ್ಕೆ ಏರಿಕೆಯಾಗಿದೆ.
ಈ ತುಟ್ಟಿಭತ್ಯೆ ಏರಿಕೆಯು ಜುಲೈ 1, 2023 ರಿಂದ ಜಾರಿಗೆ ಬರಲಿದೆ. ಹಣದುಬ್ಬರವನ್ನು ಎದುರಿಸಲು ಕೇಂದ್ರ ಸರ್ಕಾರವು ಸರ್ಕಾರಿ ನೌಕರರ ತುಟ್ಟಿಭತ್ಯೆಯನ್ನು ಏರಿಕೆ ಮಾಡುತ್ತದೆ. ಇದನ್ನು ಸಾಮಾನ್ಯವಾಗಿ ಜನವರಿ ಮತ್ತು ಜುಲೈನಲ್ಲಿ ಅಪ್‌ಡೇಟ್ ಮಾಡಲಾಗುತ್ತದೆ. ಆದರೆ, ಈ ಬಾರಿ ಡಿಎ ಹೆಚ್ಚಳವನ್ನು ತಡವಾಗಿ ಪ್ರಕಟಿಸಲಾಗಿದೆ.

ಕೇಂದ್ರ ಸರ್ಕಾರಿ ನೌಕರರಿಗೆ ಡಿಎ ಅನ್ನು ಹೇಗೆ ಲೆಕ್ಕ ಹಾಕಲಾಗುತ್ತದೆ?
ಕೈಗಾರಿಕಾ ಕಾರ್ಮಿಕರ ಇತ್ತೀಚಿನ ಗ್ರಾಹಕ ಬೆಲೆ ಸೂಚ್ಯಂಕವನ್ನು (ಸಿಪಿಐ- ಐಡಬ್ಲ್ಯೂ) ಕೇಂದ್ರ ಸರ್ಕಾರಿ ನೌಕರರಿಗೆ ತುಟ್ಟಿ ಭತ್ಯೆ (ಡಿಎ) ನಿರ್ಧರಿಸಲು ಬಳಸಲಾಗುತ್ತದೆ. ಉದ್ಯೋಗಿಯ ಮೂಲ ವೇತನದ ಒಂದು ಭಾಗವಾಗಿ ಡಿಎ ಅನ್ನು ನಿರ್ಧರಿಸಲಾಗುತ್ತದೆ. ಕೇಂದ್ರ ಸರ್ಕಾರಿ ನೌಕರರಿಗೆ ಡಿಎ ಅನ್ನು ಲೆಕ್ಕಾಚಾರ ಮಾಡಲು ಹಿಂದಿನ 12 ತಿಂಗಳ ಅಖಿಲ ಭಾರತ ಗ್ರಾಹಕ ಬೆಲೆ ಸೂಚ್ಯಂಕ (ಎಐಸಿಪಿಐ) ಸರಾಸರಿಯನ್ನು ಲೆಕ್ಕಹಾಕುತ್ತದೆ. 115.76 ಅನ್ನು ಕಳೆಯಲಾಗುತ್ತದೆ ಮತ್ತು ನಂತರ ಶೇಕಡಾವಾರು ಪ್ರಮಾಣವನ್ನು ಸೇರಿಸಲಾಗುತ್ತದೆ.
ಶೇಕಡ 4 ಡಿಎ ಏರಿಕೆ ಬಳಿಕ ಸರ್ಕಾರಿ ನೌಕರರ ಸಂಬಳ ಎಷ್ಟಾಗುತ್ತದೆ?
ಉದಾಹರಣೆಗೆ, ಕೇಂದ್ರ ಸರ್ಕಾರದ ಮೂಲ ವೇತನ 36,500 ರೂಪಾಯಿ ಎಂದು ಭಾವಿಸೋಣ. ಶೇಕಡ 42 ರಷ್ಟು ಡಿಎಯೊಂದಿಗೆ ಉದ್ಯೋಗಿಗಳು 15,330 ರೂಪಾಯಿಯನ್ನು ಪಡೆಯುತ್ತಾರೆ. ಆದರೆ ಡಿಎ ಶೇಕಡ 46 ಆಗಿದ್ದರೆ, ತಿಂಗಳಿಗೆ 16,790 ರೂಪಾಯಿಗಳನ್ನು ಪಡೆಯಬಹುದಾಗಿದೆ.
ಈ ಹಿಂದೆ, ಅರೆಸೇನಾ ಪಡೆಗಳು ಸೇರಿದಂತೆ ಗ್ರೂಪ್ ಸಿ ಮತ್ತು ಗೆಜೆಟೆಡ್ ಅಲ್ಲದ ಗ್ರೂಪ್ ಬಿ ಮಟ್ಟದ ಅಧಿಕಾರಿಗಳಿಗೆ ದೀಪಾವಳಿ ಬೋನಸ್‌ಗಳನ್ನು ಸರ್ಕಾರ ಅನುಮೋದಿಸಿತ್ತು. 2022-2023 ಕ್ಕೆ, ಕೇಂದ್ರ ಸರ್ಕಾರಿ ನೌಕರರಿಗೆ ನಾನ್ ಪ್ರೊಡಕ್ಟಿವಿಟಿ ಬೋನಸ್‌ಗಳ (ಆಡ್ ಹಾಕ್ ಬೋನಸ್‌ಗಳು) ಲೆಕ್ಕಾಚಾರಕ್ಕಾಗಿ ಹಣಕಾಸು ಸಚಿವಾಲಯವು 7000 ರೂಪಾಯಿ ಮಿತಿಯನ್ನು ನಿಗದಿಪಡಿಸಿದೆ.
ನವರಾತ್ರಿಯ ಹಬ್ಬಕ್ಕೂ ಮುನ್ನ ನಡೆಯುವ ಕೊನೆಯ ಕ್ಯಾಬಿನೆಟ್ ಸಭೆಯು ಪ್ರಧಾನಿ ನರೇಂದ್ರ ಮೋದಿಯವರ ಅಧ್ಯಕ್ಷತೆಯಲ್ಲಿ ಅಕ್ಟೋಬರ್ 11, 2023 ರ ಬುಧವಾರದಂದು ನಿಗದಿಯಾಗಿದೆ. ಈ ಸಭೆಯ ಬಳಿಕ ಕೇಂದ್ರ ನೌಕರರು ಮತ್ತು ಪಿಂಚಣಿದಾರರಿಗೆ ಮಹತ್ವದ ಘೋಷಣೆಯನ್ನು ಮಾಡು ಭರವಸೆಯಿತ್ತು.


Click it and Unblock the Notifications