ಎಲ್ಲಾ ಕೇಂದ್ರ ಸರ್ಕಾರಿ ನೌಕರರು ಮತ್ತು ಪಿಂಚಣಿದಾರರು ತುಟ್ಟಿಭತ್ಯೆ (ಡಿಎ) ಮತ್ತು ಡಿಆರ್ ಏರಿಕೆಗಾಗಿ ಕಾತುರದಿಂದ ಕಾಯುತ್ತಿದ್ದಾರೆ. ಈಗ ಕೇಂದ್ರ ಸರ್ಕಾರವು ಸರ್ಕಾರಿ ನೌಕರರು ಮತ್ತು ಪಿಂಚಣಿದಾರರಿಗೆ ತುಟ್ಟಿಭತ್ಯೆ (ಡಿಎ) ಹೆಚ್ಚಳವನ್ನು ಶೀಘ್ರದಲ್ಲೇ ಘೋಷಿಸಲು ಮೋದಿ ಸರ್ಕಾರ ಯೋಚಿಸುತ್ತಿದೆ ಎಂದು ವರದಿಯಾಗಿದೆ.
ನವರಾತ್ರಿ ಮತ್ತು ದೀಪಾವಳಿ ನಡುವೆ ಕೇಂದ್ರ ಸರ್ಕಾರ ಡಿಎ ಹೆಚ್ಚಳವನ್ನು ಘೋಷಿಸುವ ಸಾಧ್ಯತೆಯಿದೆ ಎಂದು ಮಾಧ್ಯಮ ವರದಿಗಳು ಉಲ್ಲೇಖ ಮಾಡಿದೆ. ಈ ಬಾರಿ ಡಿಎ ಏರಿಕೆ ಮಾಡಿದರೆ, ಈ ಡಿಎ ಹೆಚ್ಚಳವು ಜುಲೈ 1, 2023 ರಿಂದ ಜಾರಿಗೆ ಬರಲಿದೆ. ಇದಕ್ಕೂ ಮುನ್ನ ಜನವರಿಯಿಂದ ಜಾರಿಗೆ ಬರುವಂತೆ ಡಿಎ ಏರಿಕೆಯನ್ನು ಮಾಡಲಾಗಿದೆ. ಈ ಬಗ್ಗೆ ಇಲ್ಲಿದೆ ಅಧಿಕ ಮಾಹಿತಿ ಮುಂದೆ ಓದಿ...

ಈ ಬಾರಿ ಎಷ್ಟು ಡಿಎ ಹೆಚ್ಚಳ ನಿರೀಕ್ಷಿಸಲಾಗಿದೆ?
ಸರ್ಕಾರವು ಶೇಕಡ 4 ರಷ್ಟು ಡಿಎ ಹೆಚ್ಚಳವನ್ನು ಘೋಷಿಸಬಹುದು ಎಂದು ತಜ್ಞರು ಹೇಳುತ್ತಾರೆ. ಅಂಕಿ ಅಂಶವು ಮತ್ತಷ್ಟು ಹೆಚ್ಚಾಗಬಹುದು. ಸರ್ಕಾರಿ ನೌಕರರು ಮತ್ತು ಪಿಂಚಣಿದಾರರಿಗೆ ಹಣದುಬ್ಬರವನ್ನು ಎದುರಿಸಲು ಸಹಾಯ ಮಾಡಲು ಸರ್ಕಾರವು ತುಟ್ಟಿಭತ್ಯೆಯನ್ನು ಹೆಚ್ಚಿಸುತ್ತದೆ ಎಂಬುವುದು ಗಮನಾರ್ಹವಾಗಿದೆ.
ಪ್ರಸ್ತುತ, ಕೇಂದ್ರ ಸರ್ಕಾರಿ ನೌಕರರು ಮತ್ತು ಪಿಂಚಣಿದಾರರು ಶೇಕಡ 42 ರಷ್ಟು ತುಟ್ಟಿ ಭತ್ಯೆಯನ್ನು ಪಡೆಯುತ್ತಾರೆ. ಹಾಗಾಗಿ, ಪರಿಷ್ಕರಣೆ ನಂತರ, ಡಿಎಯನ್ನು ಶೇಕಡ 46 ಕ್ಕೆ ಹೆಚ್ಚಿಸುವ ನಿರೀಕ್ಷೆಯಿದೆ. ಹೀಗೆ ಆದಲ್ಲಿ, ಜುಲೈ 1, 2023ರಿಂದ ಜಾರಿಗೆ ಬರುವಂತೆ ಡಿಎ ಶೇಕಡ 46ಕ್ಕೆ ಏರಿಕೆಯಾಗಿದೆ.
ಸಾಮಾನ್ಯವಾಗಿ, ಜನವರಿ ಮತ್ತು ಜುಲೈನಲ್ಲಿ ಡಿಎ ಪರಿಷ್ಕರಿಸಲಾಗುತ್ತದೆ. ಆದರೆ, ನಾವು ಈಗಾಗಲೇ ಅಕ್ಟೋಬರ್ ಮೊದಲ ವಾರಕ್ಕೆ ಪ್ರವೇಶಿಸಿರುವುದರಿಂದ ಈ ಬಾರಿ ಡಿಎ ಹೆಚ್ಚಳದ ಬಗ್ಗೆ ಪ್ರಕಟಣೆ ಸ್ವಲ್ಪ ವಿಳಂಬವಾಗಿದೆ ಎಂಬುವುದು ಖಚಿತವಾಗಿದೆ.
ಡಿಎ ಏರಿಕೆಗೆ ಫಾರ್ಮೂಲ ತಿಳಿಯಿರಿ
ಕೇಂದ್ರ ಸರ್ಕಾರಿ ನೌಕರರಿಗೆ, ಕೈಗಾರಿಕಾ ಕಾರ್ಮಿಕರ ಇತ್ತೀಚಿನ ಗ್ರಾಹಕ ಬೆಲೆ ಸೂಚ್ಯಂಕ (CPI-IW) ಆಧಾರದ ಮೇಲೆ ಡಿಎ ಅನ್ನು ಲೆಕ್ಕಹಾಕಲಾಗುತ್ತದೆ. ಎಕನಾಮಿಕ್ ಟೈಮ್ಸ್ ವರದಿಯ ಪ್ರಕಾರ, ನಾವು ಜುಲೈ 2022 ರಿಂದ ಜೂನ್ 2023 ರವರೆಗಿನ ಸಿಪಿಐ - ಐ ಡಬ್ಲ್ಯೂ ಮೂಲ ವರ್ಷ 2001=100 ಅನ್ನು ನೋಡಿದರೆ, ಕಳೆದ 12 ತಿಂಗಳುಗಳಲ್ಲಿ AICPI-IW ನ ಸರಾಸರಿಯು 382.32 ಆಗಿದೆ.
7ನೇ ಸಿಪಿಐ ಡಿಎ ಶೇಕಡ= [{AICPI-IW ನ ಸರಾಸರಿ (ಬೇಸ್ ಇಯರ್ 2001=100) ಕಳೆದ 12 ತಿಂಗಳುಗಳಲ್ಲಿ - 261.42}/261.42x100]
=[{382.32-261.42}/261.42x100]
= 46.24
ಹೀಗಾಗಿ, ಕಳೆದ 12 ತಿಂಗಳುಗಳಲ್ಲಿ ಸರಾಸರಿ ಸಿಪಿಐ- ಐಡಬ್ಲ್ಯೂ 382.32 ಆಗಿದ್ದರೆ, ಈ ಸೂತ್ರವನ್ನು ನೋಡಿದಾಗ ಡಿಎ ಶೇಕಡ 46.24 ಆಗಿರುತ್ತದೆ.
ಎಷ್ಟು ವೇತನ ಹೆಚ್ಚಾಗುತ್ತದೆ?
ಶೇಕಡ 4 ರಷ್ಟು ಡಿಎ ಏರಿಕೆ ಆಗುತ್ತದೆ ಎಂದು ತಿಳಿದುಕೊಳ್ಳಿ. ವೇತನ ಹೆಚ್ಚಾಗುತ್ತದೆ ಎಂಬವುದನ್ನು ತಿಳಿಯಬೇಕಾಗುತ್ತದೆ. ಡಿಎ ಹೆಚ್ಚಿಸಿದಾಗ ಸಾಮಾನ್ಯವಾಗಿಯೇ ಕೇಂದ್ರ ಸರ್ಕಾರಿ ನೌಕರರ ಸಂಬಳ ಹೆಚ್ಚಾಗುತ್ತದೆ. ಒಂದು ಉದಾಹರಣೆಯ ಸಹಾಯದಿಂದ ಇದನ್ನು ಅರ್ಥಮಾಡಿಕೊಳ್ಳುವುದಾದರೆ, ಕೇಂದ್ರ ಸರ್ಕಾರವು ತಿಂಗಳಿಗೆ 38,500 ರೂಪಾಯಿ ವೇತನ ನೀಡುತ್ತದೆ ಎಂದುಕೊಳ್ಳಿ.
ಪ್ರಸ್ತುತ ಶೇಕಡ 42 ರಷ್ಟು ಡಿಎಯಂತೆ 16,170 ರೂಪಾಯಿ ಮೂಲ ವೇತನವಾಗಿರುತ್ತದೆ. ಜುಲೈ 2023 ರಿಂದ ಡಿಎ ಶೇಕಡ 4 ರಷ್ಟು ಏರಿಕೆ ಮಾಡಿದರೆ ಡಿಎ ಸುಮಾರು 17,710 ರೂಪಾಯಿಗೆ ಏರಿಕೆಯಾಗಲಿದೆ. ಹೀಗಾಗಿ ವೇತನವು ತಿಂಗಳಿಗೆ 17,710 ರೂಪಾಯಿ - 16,170 ರೂಪಾಯಿ = 1,540 ರೂಪಾಯಿಯಷ್ಟು ಹೆಚ್ಚಾಗುವ ಸಾಧ್ಯತೆಯಿದೆ.


Click it and Unblock the Notifications