ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ) ಕಳೆದ ವರ್ಷ ಮೇ ತಿಂಗಳಿನಿಂದ ಈವರೆಗೆ ಸುಮಾರು ಆರು ಬಾರಿ ರೆಪೋ ದರವನ್ನು ಹೆಚ್ಚಿಸಿದೆ. ಈ ಬೆನ್ನಲ್ಲೇ ಬ್ಯಾಂಕುಗಳು ಕೂಡಾ ಎಫ್‌ಡಿ, ಸಾಲದ ಬಡ್ಡಿದರ ಏರಿಕೆ ಮಾಡಿದೆ. ಆದರೆ ಈಗ ಆರ್‌ಬಿಐ ದರ ಸ್ಥಿರವಾಗಿ ಇರಿಸಿರುವಾಗ ಬ್ಯಾಂಕುಗಳು ಕೂಡಾ ಎಫ್‌ಡಿ ಬಡ್ಡಿದರವನ್ನು ಇಳಿಸುತ್ತಿದೆ.
ಈ ನಡುವೆ ಇಲ್ಲೊಂದು 85 ವರ್ಷ ಹಳೆಯ ಬ್ಯಾಂಕ್ ಫಿಕ್ಸಿಡ್ ಡೆಪಾಸಿಟ್ (ಎಫ್‌ಡಿ) ಬಡ್ಡಿದರವನ್ನು ಏರಿಕೆ ಮಾಡಿದೆ. ಹೌದು, ನೀವು ಈ ಬ್ಯಾಂಕ್‌ನಲ್ಲಿ ಎಫ್‌ಡಿ ಖಾತೆಯನ್ನು ಹೊಂದಿದ್ದರೆ, ಅಥವಾ ತೆರೆಯಲು ಬಯಸಿದರೆ ನಿಮಗೆ ಅಧಿಕ ಬಡ್ಡಿದರ ಲಭ್ಯವಾಗಲಿದೆ. ನೂತನ ಬಡ್ಡಿದರ ವಿವರ ಇಲ್ಲಿದೆ ಮುಂದೆ ಓದಿ...

1938 ರಲ್ಲಿ ಸ್ಥಾಪನೆಯಾದ ಜಮ್ಮು ಮತ್ತು ಕಾಶ್ಮೀರ ಬ್ಯಾಂಕ್ (ಜೆ&ಕೆ ಬ್ಯಾಂಕ್) ಭಾರತದ ಅತ್ಯಂತ ಹಳೆಯ ಖಾಸಗಿ ವಲಯದ ಬ್ಯಾಂಕ್‌ಗಳಲ್ಲಿ ಒಂದಾಗಿದೆ ಮತ್ತು ನಿಗದಿತ ವಾಣಿಜ್ಯ ಬ್ಯಾಂಕ್ ಆಗಿದೆ. ಬ್ಯಾಂಕ್‌ನ ಕಾರ್ಪೊರೇಟ್ ಪ್ರಧಾನ ಕಛೇರಿ ಶ್ರೀನಗರದಲ್ಲಿದೆ. ಎನ್‌ಎಸ್‌ಇ, ಬಿಎಸ್‌ಇ ಎರಡರಲ್ಲೂ ಲೀಸ್ಟ್ ಮಾಡಲಾಗಿದೆ. ಬೆಂಗಳೂರಿನಲ್ಲಿಯೂ ಈ ಬ್ಯಾಂಕ್‌ನ ಶಾಖೆಗಳಿದೆ.
ನೂತನ ಬಡ್ಡಿದರ ಪರಿಶೀಲನೆ ಮಾಡಿ
7 ರಿಂದ 45 ದಿನಗಳ ನಡುವೆ ಮೆಚ್ಯೂರ್ ಆಗುವ ಡೆಪಾಸಿಟ್‌ಗಳ ಮೇಲೆ ಬ್ಯಾಂಕ್ ಶೇಕಡ 3.50 ಬಡ್ಡಿದರವನ್ನು ನೀಡುತ್ತದೆ. ಆದರೆ ಜಮ್ಮು ಮತ್ತು ಕಾಶ್ಮೀರ ಬ್ಯಾಂಕ್ 46 ರಿಂದ 90 ದಿನಗಳಲ್ಲಿ ಮೆಚ್ಯೂರ್ ಆಗುವ ಡೆಪಾಸಿಟ್‌ಗಳ ಮೇಲೆ ಶೇಕಡ 4.60 ರಷ್ಟು ಬಡ್ಡಿದರವನ್ನು ನೀಡುತ್ತದೆ. 91 ಮತ್ತು 180 ದಿನಗಳಲ್ಲಿ ಮೆಚ್ಯೂರ್ ಆಗುವ ಡೆಪಾಸಿಟ್‌ಗಳ ಮೇಲೆ ಜಮ್ಮು ಮತ್ತು ಕಾಶ್ಮೀರ ಬ್ಯಾಂಕ್ ಶೇಕಡ 4.75 ಬಡ್ಡಿದರವನ್ನು ಪಾವತಿಸುತ್ತದೆ.
181 ಮತ್ತು 221 ದಿನಗಳ ನಡುವಿನ ಡೆಪಾಸಿಟ್‌ಗಳಿಗೆ ಶೇಕಡ 5.60 ಬಡ್ಡಿದರವನ್ನು ಬ್ಯಾಂಕ್ ಜಮೆ ಮಾಡುತ್ತದೆ. ಇನ್ನು 223 ದಿನಗಳಿಂದ 270 ದಿನಗಳಿಗಿಂತ ಕಡಿಮೆ ಅವಧಿಯ ಡೆಪಾಸಿಟ್‌ಗಳ ಮೇಲೆ ಬ್ಯಾಂಕ್ ಶೇಕಡ 5.60 ಬಡ್ಡಿದರವನ್ನು ನೀಡುತ್ತದೆ. ಆದರೆ 222 ದಿನಗಳಲ್ಲಿ ಮೆಚ್ಯೂರ್ ಆಗುವ ಡೆಪಾಸಿಟ್‌ಗಳ ಮೇಲೆ ಬ್ಯಾಂಕ್ ಶೇಕಡ 6.30 ರಷ್ಟು ಬಡ್ಡಿದರವನ್ನು ನೀಡುತ್ತದೆ.
ಬ್ಯಾಂಕ್ 271 ದಿನಗಳಿಂದ 332 ದಿನಗಳಿಗಿಂತ ಕಡಿಮೆ ಅವಧಿಯ ಎಫ್‌ಡಿ ಮೇಲೆ ಶೇಕಡ 6.00 ಬಡ್ಡಿದರವನ್ನು ನೀಡುವುದನ್ನು ಮುಂದುವರಿಸುತ್ತದೆ. ಆದರೆ ಜಮ್ಮು ಮತ್ತು ಕಾಶ್ಮೀರ ಬ್ಯಾಂಕ್ (J&K ಬ್ಯಾಂಕ್) 333 ದಿನಗಳಲ್ಲಿ ಮೆಚ್ಯೂರ್ ಆಗುವ ಎಫ್‌ಡಿ ಮೇಲೆ ಶೇಕಡ 6.60 ಬಡ್ಡಿದರವನ್ನು ನೀಡುವುದನ್ನು ಮುಂದುವರಿಸುತ್ತದೆ.
ಜಮ್ಮು ಮತ್ತು ಕಾಶ್ಮೀರ ಬ್ಯಾಂಕ್ (J&K ಬ್ಯಾಂಕ್) ನೀಡುತ್ತಿರುವ ಬಡ್ಡಿ ದರವು 334 ದಿನಗಳಿಂದ ಒಂದು ವರ್ಷಕ್ಕಿಂತ ಕಡಿಮೆ ಅವಧಿಯ ಠೇವಣಿಗಳಿಗೆ ಶೇಕಡ 6 ಆಗಿದ್ದು, ವರ್ಷದಿಂದ 554 ದಿನಗಳ ಅವಧಿಯ ಠೇವಣಿಗಳಿಗೆ ಶೇಕಡ 7.10 ಆಗಿದೆ. 555 ದಿನಗಳಲ್ಲಿ ಮೆಚ್ಯೂರ್ ಆಗುವ ಡೆಪಾಸಿಟ್‌ಗಳ ಮೇಲೆ ಬ್ಯಾಂಕ್ ಶೇಕಡ 7.50 ರಷ್ಟು ಅಂದರೆ ಹೆಚ್ಚುವರಿ 40 ಬಿಪಿಎಸ್ ಬಡ್ಡಿದರ ನೀಡುತ್ತದೆ.
556 ದಿನಗಳಿಂದ 2 ವರ್ಷಗಳಿಗಿಂತ ಕಡಿಮೆ ಅವಧಿಯ ಎಫ್‌ಡಿ ಮೇಲೆ ಬ್ಯಾಂಕ್ ಶೇಕಡ 7.10 ಬಡ್ಡಿದರ ನೀಡುತ್ತದೆ. 2 ವರ್ಷದಿಂದ 3 ವರ್ಷಕ್ಕಿಂತ ಕಡಿಮೆ ಅವಧಿಯ ಎಫ್‌ಡಿಗಳ ಮೇಲೆ ಬ್ಯಾಂಕ್ ಶೇಕಡ 7.00 ಬಡ್ಡಿದರವನ್ನು ಪಾವತಿಸುತ್ತಿದೆ. ಇನ್ನು ಬ್ಯಾಂಕ್ 3 ವರ್ಷದಿಂದ 5 ವರ್ಷಕ್ಕಿಂತ ಕಡಿಮೆ ಅವಧಿಯ ಎಫ್‌ಡಿಗಳ ಮೇಲೆ ಶೇಕಡ 6.50 ಬಡ್ಡಿದರವನ್ನು ಪಾವತಿಸುತ್ತಿದೆ. ಐದು ಮತ್ತು ಹತ್ತು ವರ್ಷಗಳವರೆಗೆ ಮಾಡಿದ ಠೇವಣಿಗಳ ಮೇಲೆ ಬ್ಯಾಂಕ್ ಶೇಕಡ 6.50 ಬಡ್ಡಿಯನ್ನು ಪಾವತಿಸುತ್ತಲೇ ಇರುತ್ತದೆ.
ಹಿರಿಯ ನಾಗರಿಕರಿಗೆ ಹೆಚ್ಚುವರಿ ಬಡ್ಡಿದರ
60 ವರ್ಷಕ್ಕಿಂತ ಮೇಲ್ಪಟ್ಟ ಹಿರಿಯ ನಾಗರಿಕರು ಎಲ್ಲಾ ಮೆಚ್ಯೂರಿಟಿ ಅವಧಿಗಳ ಫಿಕ್ಸಿಡ್ ಡೆಪಾಸಿಟ್‌ಗಳ ಮೇಲೆ ಹೆಚ್ಚುವರಿಯಾಗಿ ಶೇಕಡ 0.50 ಬಡ್ಡಿದರವನ್ನು ಪಡೆಯಬಹುದಾಗಿದೆ. 2 ಕೋಟಿ ರೂಪಾಯಿಗಿಂತ ಕಡಿಮೆ ಮೊತ್ತದ ಎಫ್‌ಡಿ ಮೇಲೆ ಬ್ಯಾಂಕ್ ಹಿರಿಯ ನಾಗರಿಕರಿಗೆ ಹೆಚ್ಚುವರಿ ಬಡ್ಡಿದರವನ್ನು ನೀಡುತ್ತದೆ.


Click it and Unblock the Notifications