ಕೇಂದ್ರ ಸರ್ಕಾರಿ ಉದ್ಯೋಗಿಗಳಿಗೆ ತುಟ್ಟಿಭತ್ಯೆಯನ್ನು (ಡಿಎ) ಏರಿಸುವ ನಿರೀಕ್ಷೆಯಿದೆ. ಹೋಳಿಗೂ ಮುನ್ನ ಡಿಎ ಘೋಷಣೆ ಮಾಡುವ ಸುದ್ದಿಯಾಗಿತ್ತು, ಆದರೆ ಮುಂದಿನ ವಾರಗಳಲ್ಲಿ ಡಿಎ ಹೆಚ್ಚಳ ಮಾಡುವ ಸಾಧ್ಯತೆಯಿದೆ. ಈ ನಡುವೆ 7ನೇ ವೇತನದ ಆಯೋಗದ ಬದಲಾಗಿ 8ನೇ ವೇತನ ಆಯೋಗವನ್ನು ಜಾರಿ ಮಾಡುವ ಬಗ್ಗೆ ವರದಿಯಾಗುತ್ತಿದೆ. ಹಾಗೆಯೇ 7ನೇ ವೇತನ ಆಯೋಗದ ಬದಲಾಗಿ 8ನೇ ವೇತನ ಆಯೋಗವನ್ನು ಜಾರಿ ಮಾಡಬೇಕು ಎಂಬುವುದು ಬೇಡಿಕೆಯಾಗಿದೆ.
ಕೇಂದ್ರ ಬಜೆಟ್ 2023ರಲ್ಲಿ ಕೇಂದ್ರ ಸರ್ಕಾರವು 8ನೇ ವೇತನ ಆಯೋಗದ ಘೋಷನೆ ಮಾಡಬಹುದು ಎಂಬ ವದಂತಿ ಹರಡಿತ್ತು. ಆದರೆ ಫೆಬ್ರವರಿ 1, 2023ರಂದು ಮಂಡನೆ ಮಾಡಲಾದ 2023-24ನೇ ಸಾಲಿನ ಕೇಂದ್ರ ಬಜೆಟ್‌ನಲ್ಲಿ 7ನೇ ವೇತನ ಆಯೋಗವನ್ನು 8ನೇ ವೇತನ ಆಯೋಗಕ್ಕೆ ಬದಲಾವಣೆ ಮಾಡುವ ಬಗ್ಗೆ ಯಾವುದೇ ಸಿಹಿಸುದ್ದಿಯನ್ನು ಘೋಷಣೆಯನ್ನು ಮಾಡಿಲ್ಲ.

ವೇತನ ಆಯೋಗದ ಬದಲಾವಣೆ ಹೇಗೆ?
ನೂತನ ವರದಿಯು ಮತ್ತೆ ಸರ್ಕಾರಿ ಉದ್ಯೋಗಿಗಳಲ್ಲಿ ನಿರೀಕ್ಷೆಯನ್ನು ಹೆಚ್ಚಿಸಿದೆ. 8ನೇ ವೇತನ ಆಯೋಗ ಆರಂಭದ ಸುದ್ದಿಯು ಈಗ ಸರ್ಕಾರಿ ನೌಕರರಲ್ಲಿ ಹೊಸ ಭರಸೆಯನ್ನು ಸೃಷ್ಟಿಸಿದೆ. ಸಾಮಾನ್ಯವಾಗಿ 10 ವರ್ಷಗಳಿಗೊಮ್ಮೆ ಸರ್ಕಾರಿ ಉದ್ಯೋಗಿಗಳಿಗಾಗಿ ಇರುವ ವೇತನ ಆಯೋಗ ನಿಯಮವನ್ನು ಪರಿಷ್ಕರಣೆ ಮಾಡಲಾಗುತ್ತದೆ. ಇತ್ತೀಚಿನ 5ನೇ, 6ನೇ, 7ನೇ ವೇತನ ಆಯೋಗವನ್ನು ಜಾರಿ ಮಾಡುವಾಗಲೂ ಇದೆ ರಚನೆ ಕಂಡು ಬಂದಿದೆ.
7ನೇ ವೇತನ ಆಯೋಗವನ್ನು 8ನೇ ವೇತನ ಆಯೋಗವಾಗಿ ಬದಲಾವಣೆ ಮಾಡುವ ಬಗ್ಗೆ ಈವರೆಗೆ ಯಾವುದೇ ಅಧಿಕೃತ ಮಾಹಿತಿ ಲಭ್ಯವಾಗಿಲ್ಲ. ಆದರೆ ಸರ್ಕಾರವು ಈ ನಿಟ್ಟಿನಲ್ಲಿ ಕಾರ್ಯನಿರ್ವಹಣೆ ಮಾಡುತ್ತಿದೆ ಹಾಗೂ 2024ರಲ್ಲಿ ಸರ್ಕಾರ ಈ ಬಗ್ಗೆ ಘೋಷಣೆ ಮಾಡಬಹುದು ಎಂಬ ವರದಿಯಾಗಿದೆ. ವರದಿಯು ಎರಡು ರೀತಿಯ ಬೆಳವಣಿಗೆ ಸಾಧ್ಯತೆಯನ್ನು ಉಲ್ಲೇಖ ಮಾಡಿದ್ದಾರೆ.
2024ರ ಲೋಕಸಭೆ ಚುನಾವಣೆಗೂ ಮುನ್ನ 8ನೇ ವೇತನ ಆಯೋಗವನ್ನು ಸರ್ಕಾರವು ಘೋಷಣೆ ಮಾಡಬುಉದು ಎಂಬ ಮಾಹಿತಿಯಿದೆ. ಈ ಮೂಲಕ ಸರ್ಕಾರಿ ಉದ್ಯೋಗಿಗಳ ಮತವನ್ನು ಪಡೆಯುವ ತಂತ್ರವನ್ನು ಸರ್ಕಾರ ಮಾಡಿದೆ. ಇನ್ನೊಂದೆಡೆ ಮತ್ತೊಂದೆಡೆ, ಚುನಾವಣಾ ಫಲಿತಾಂಶಗಳು ಪ್ರಕಟವಾದ ನಂತರ ಮತ್ತು ಹೊಸ ಸರ್ಕಾರ ರಚನೆಯಾದ ನಂತರ ಮಾತ್ರ ಈ ಬಗ್ಗೆ ಚರ್ಚೆ ನಡೆಯಲಿದೆ ಎಂದು ವರದಿ ಹೇಳಿದೆ.
ಎರಡೂ ಸನ್ನಿವೇಶಗಳಲ್ಲಿ, 7 ನೇ ವೇತನ ಆಯೋಗದ ಬದಲಿಗೆ 8 ನೇ ವೇತನ ಆಯೋಗದ ಘೋಷಣೆಯನ್ನು 2024 ರ ಅಂತ್ಯದ ವೇಳೆಗೆ ಮಾಡಬಹುದಾಗಿದೆ ಎಂದು ಹೇಳುತ್ತದೆ. ಇದು ಸಂಭವಿಸಿದಲ್ಲಿ, 2026 ರ ವೇಳೆಗೆ ಶಿಫಾರಸು ಜಾರಿಗೆ ತರಲು ಸಾಧ್ಯವಾಗಲಿದೆ. 8 ನೇ ವೇತನ ಆಯೋಗವು ಸರ್ಕಾರಿ ನೌಕರರಿಗೆ ಕನಿಷ್ಠ ವೇತನ ಶ್ರೇಣಿಯಿಂದ ಅತ್ಯುನ್ನತ ಹಂತದವರೆಗೆ ಭಾರಿ ವೇತನವನ್ನು ನೀಡುತ್ತದೆ. ಮೂಲ ವೇತನ, ಫಿಟ್‌ಮೆಂಟ್ ಅಂಶ ಮತ್ತು ಭತ್ಯೆ ಹೆಚ್ಚಳ ಇದಾಗಿದೆ.


Click it and Unblock the Notifications