ಪ್ರತಿ ತಿಂಗಳು ಕೂಡಾ ಯಾವೆಲ್ಲ ಕಾರ್ಯಗಳನ್ನು ನೀವು ಮಾಡಬೇಕು, ಯಾವ ದಿನಾಂಕಕ್ಕೂ ಮುನ್ನ ನಿಗದಿತ ಕಾರ್ಯವನ್ನು ಮಾಡಿಮುಗಿಸಬೇಕು ಎಂದು ನಾವು ತಿಳಿದಿರಬೇಕಾಗುವುದು ಮುಖ್ಯವಾಗುತ್ತದೆ. ಅದರಲ್ಲೂ ಮುಖ್ಯವಾಗಿ ತೆರಿಗೆ ಸಂಬಂಧಿತ ಕಾರ್ಯಗಳ ಬಗ್ಗೆ ನಾವು ಹೆಚ್ಚಿನ ಗಮನವನ್ನು ಹರಿಸುವುದು ಅಗತ್ಯವಾಗಿದೆ.
ದಂಡವನ್ನು ತಪ್ಪಿಸಲು, ಹಣಕಾಸನ್ನು ನಿರ್ವಹಣೆ ಮಾಡಲು, ಅವಧಿ ಕೊನೆಯಾಗುವುದಕ್ಕೂ ಮುನ್ನವೇ ನಾವು ಹಣಕಾಸು ಕಾರ್ಯಗಳನ್ನು ಮಾಡಿಮುಗಿಸುವುದು ಅತೀ ಮುಖ್ಯವಾಗುತ್ತದೆ. ಮುಂಗಡ ತೆರಿಗೆ ಪಾವತಿಗಳು, ಸೆಲ್ಫ್ ಅಸೆಸ್‌ಮೆಂಟ್ ತೆರಿಗೆ ಪಾವತಿಗಳು ಸೇರಿದಂತೆ ತೆರಿಗೆ ಪಾವತಿಗಳ ಗಡುವನ್ನು ನೀವು ನೋಡಬೇಕಾಗುತ್ತದೆ. ಜೂನ್‌ನಲ್ಲಿ ನೀವು ತಿಳಿದಿರಬೇಕಾದ 5 ದಿನಾಂಕಗಳ ಬಗ್ಗೆ ಇಲ್ಲಿದೆ ವಿವರ ಮುಂದೆ ಓದಿ...

ಆದಾಯ ತೆರಿಗೆ ರಿಟರ್ನ್‌ಗಳನ್ನು ಸಮಯಕ್ಕೆ ಸರಿಯಾಗಿ ಫೈಲ್ ಮಾಡುವುದರಿಂದಾಗಿ ತೆರಿಗೆದಾರರು ದಂಡ ಮತ್ತು ಶುಲ್ಕದಿಂದ ತಪ್ಪಿಸಿಕೊಳ್ಳಲು ಸಾಧ್ಯವಾಗುತ್ತದೆ. ಇದಲ್ಲದೆ, ತೆರಿಗೆ ಕಾನೂನುಗಳು ಮತ್ತು ನಿಬಂಧನೆಗಳಲ್ಲಿನ ಯಾವುದೇ ಪರಿಷ್ಕರಣೆಯ ಬಗ್ಗೆಯೂ ನೀವು ತಿಳಿದಿರುವುದು ಮುಖ್ಯವಾಗಿದೆ.
ಒಟ್ಟಾಗಿ ನಾವು ಹೇಳುವುದಾದರೆ ತೆರಿಗೆಗಳಿಗೆ ಸಂಬಂಧಿಸಿದ ಪ್ರಮುಖ ದಿನಾಂಕಗಳ ಬಗ್ಗೆ ತಿಳಿದಿರುವುದು ತೆರಿಗೆದಾರರಿಗೆ ಮುಖ್ಯವಾಗಿದೆ. ಇದು ತೆರಿಗೆ ಕಾನೂನುಗಳ ಅನುಸರಣೆಯನ್ನು ಕಾಪಾಡಿಕೊಳ್ಳಲು, ಆರ್ಥಿಕ ಮತ್ತು ಕಾನೂನು ಪರಿಣಾಮಗಳನ್ನು ತಪ್ಪಿಸಲು ಮತ್ತು ಅವರ ಹಣಕಾಸುಗಳನ್ನು ಸಮರ್ಥವಾಗಿ ನಿರ್ವಹಣೆ ಮಾಡಲು ಸಾಧ್ಯವಾಗುತ್ತದೆ.
ಜೂನ್‌ನಲ್ಲಿರುವ ಪ್ರಮುಖ 5 ದಿನಾಂಕಗಳು
ಜೂನ್ 1, 2023
ತೆರಿಗೆ ಕಡಿತ ಅಥವಾ ತೆರಿಗೆ ಸಂಗ್ರಹಕ್ಕಾಗಿ ಮೇ 2023 ಕೊನೆಯ ದಿನಾಂಕವಾಗಿದೆ. ಸರ್ಕಾರದ ಕಚೇರಿಯಿಂದ ಕಡಿತಗೊಳಿಸಲಾದ/ಸಂಗ್ರಹಿಸಲಾದ ಎಲ್ಲಾ ಮೊತ್ತವನ್ನು ಆದಾಯ ತೆರಿಗೆ ಚಲನ್ ಇಲ್ಲದೆ ತೆರಿಗೆಯನ್ನು ಪಾವತಿಸಿದ ಅದೇ ದಿನದಂದು ಕೇಂದ್ರ ಸರ್ಕಾರದ ಕ್ರೆಡಿಟ್‌ಗೆ ಪಾವತಿಸಲಾಗುತ್ತದೆ.
ಜೂನ್ 14, 2023
ಸೆಕ್ಷನ್ 194-IA, 194-IB, 194M ಮತ್ತು 194S ಅಡಿಯಲ್ಲಿ ಕಡಿತಗೊಳಿಸಲಾದ ತೆರಿಗೆಗಾಗಿ ಟಿಡಿಎಸ್ ಪ್ರಮಾಣಪತ್ರ ವಿತರಣೆಯ ಕೊನೆಯ ದಿನಾಂಕ ಏಪ್ರಿಲ್ 2023 ಆಗಿದೆ. ಸೆಕ್ಷನ್ 194S ಅಡಿಯಲ್ಲಿ ಉಲ್ಲೇಖಿಸಲಾದ ವ್ಯಕ್ತಿಯ ಆಧಾರದಲ್ಲಿ ಇದು ಅನ್ವಯವಾಗುತ್ತದೆ.
ಜೂನ್ 15, 2023:
* 2023 ರ ಮೇ ತಿಂಗಳ ಟಿಡಿಎಸ್/ ಟಿಸಿಎಸ್ ಅನ್ನು ಚಲನ್ ಇಲ್ಲದೆ ಪಾವತಿಸಿದ ಸರ್ಕಾರದ ಕಛೇರಿಯಿಂದ ಫಾರ್ಮ್ 24G ಅನ್ನು ಪಡೆಯಲು ಅಂತಿಮ ದಿನಾಂಕವಾಗಿದೆ.
* ಮಾರ್ಚ್, 2023 ಕ್ಕೆ ಕೊನೆಗೊಳ್ಳುವ ತ್ರೈಮಾಸಿಕಕ್ಕೆ ಟಿಡಿಎಸ್ ಪ್ರಮಾಣಪತ್ರ
* 2024-25 ಮೌಲ್ಯಮಾಪನ ವರ್ಷಕ್ಕೆ ಮುಂಗಡ ತೆರಿಗೆಯ ಮೊದಲ ಕಂತು ಪಾವತಿಗೆ ಕೊನೆಯ ದಿನಾಂಕ
* 2022-23ರ ಹಣಕಾಸು ವರ್ಷದಲ್ಲಿ ಪಾವತಿಸಿದ ಸಂಬಳ ಮತ್ತು ತೆರಿಗೆ ಕಡಿತಕ್ಕೆ ಸಂಬಂಧಿಸಿದಂತೆ ಉದ್ಯೋಗಿಗಳಿಗೆ ಮೂಲದಲ್ಲಿ ತೆರಿಗೆ ಕಡಿತಗೊಳಿಸಲಾದ ಪ್ರಮಾಣಪತ್ರ
* ಹಿಂದಿನ ವರ್ಷ 2022-23 ಗಾಗಿ ಹೂಡಿಕೆ ನಿಧಿಯಿಂದ ಅದರ ಹೋಲ್ಡರ್‌ಗಳಿಗೆ ಪಾವತಿಸಿದ ಅಥವಾ ಡಿಟ್ ಮಾಡಿದ ಆದಾಯದ ಸ್ಟೇಟ್‌ಮೆಂಟ್ (ಫಾರ್ಮ್ ಸಂಖ್ಯೆ 64D ನಲ್ಲಿ) ಒದಗಿಸುವುದು
ಜೂನ್ 29, 2023
2022-23 ಹಣಕಾಸು ವರ್ಷದಲ್ಲಿ ಅದರ ಚಟುವಟಿಕೆಗಳಿಗೆ ಸಂಬಂಧಿಸಿದಂತೆ ಸೆಕ್ಷನ್ 9A ಅಡಿಯಲ್ಲಿ ಅರ್ಹ ಹೂಡಿಕೆ ನಿಧಿಯಿಂದ ಸ್ಟೇಟ್‌ಮೆಂಟ್‌ನ ಇ-ಫೈಲಿಂಗ್‌ಗೆ (ಫಾರ್ಮ್ ಸಂಖ್ಯೆ. 3CEK ನಲ್ಲಿ) ಅಂತಿಮ ದಿನಾಂಕ
ಜೂನ್ 30, 2023
* ಮೇ, 2023 ರಲ್ಲಿ ಸೆಕ್ಷನ್ 194-IA ಅಡಿಯಲ್ಲಿ ಕಡಿತಗೊಳಿಸಲಾದ ತೆರಿಗೆಗೆ ಸಂಬಂಧಿಸಿದಂತೆ ಚಲನ್-ಕಮ್-ಸ್ಟೇಟ್‌ಮೆಂಟ್ ಅನ್ನು ಸಲ್ಲಿಸಲು ಅಂತಿಮ ದಿನಾಂಕ
* ಮೇ, 2023 ರಲ್ಲಿ ಸೆಕ್ಷನ್ 194M ಅಡಿಯಲ್ಲಿ ಕಡಿತಗೊಳಿಸಲಾದ ತೆರಿಗೆಗೆ ಸಂಬಂಧಿಸಿದಂತೆ ಚಲನ್-ಕಮ್-ಸ್ಟೇಟ್‌ಮೆಂಟ್ ಅನ್ನು ಸಲ್ಲಿಸಲು ಅಂತಿಮ ದಿನಾಂಕ
* ಮೇ, 2023 ರಲ್ಲಿ ಸೆಕ್ಷನ್ 194S ಅಡಿಯಲ್ಲಿ ಕಡಿತಗೊಳಿಸಲಾದ ತೆರಿಗೆಗೆ ಸಂಬಂಧಿಸಿದಂತೆ ಚಲನ್-ಕಮ್-ಸ್ಟೇಟ್‌ಮೆಂಟ್ ಅನ್ನು ಸಲ್ಲಿಸಲು ಅಂತಿಮ ದಿನಾಂಕ
* ಮಾರ್ಚ್ 31, 2023ಕ್ಕೂ ಮುನ್ನ ಪ್ಯಾನ್ ಕಾರ್ಡ್ ಮತ್ತು ಆಧಾರ್ ಕಾರ್ಡ್ ಅನ್ನು ಲಿಂಕ್ ಮಾಡಿದವರಿಗೆ ಉಚಿತವಾಗಿಯೇ ಆಧಾರ್ ಕಾರ್ಡ್ ಹಾಗೂ ಪ್ಯಾನ್ ಕಾರ್ಡ್ ಅನ್ನು ಲಿಂಕ್ ಮಾಡಿದ್ದಾರೆ. ಆದರೆ ಅದಾದ ಬಳಿಕ ಪ್ಯಾನ್ ಕಾರ್ಡ್ ಲಿಂಕ್ ಮಾಡದವರಿಗೆ 1000 ರೂಪಾಯಿ ದಂಡವನ್ನು ವಿಧಿಸಲಾಗುತ್ತದೆ. ಜೂನ್ 30ರ ಒಳಗಾಗಿ ಲಿಂಕ್ ಮಾಡದಿದ್ದರೆ ಪ್ಯಾನ್ ಕಾರ್ಡ್ ನಿಷ್ಕ್ರೀಯವಾಗಲಿದೆ.


Click it and Unblock the Notifications