ಪ್ರಸ್ತುತ ದೇಶದಲ್ಲಿ ಬಹುತೇಕ ಕಾರ್ಯಗಳಿಗೆ ಆಧಾರ್ ಕಾರ್ಡ್ ಹಾಗೂ ಪ್ಯಾನ್ ಕಾರ್ಡ್ ಅನ್ನು ಕಡ್ಡಾಯಗೊಳಿಸಲಾಗಿದೆ. ಹಾಗೆಯೇ ಕೇಂದ್ರ ಸರ್ಕಾರವು ಸಣ್ಣ ಉಳಿತಾಯ ಯೋಜನೆಗಳಲ್ಲಿ ನಾವು ಹೂಡಿಕೆ ಮಾಡಬೇಕಾದರೂ ಪ್ಯಾನ್ ಕಾರ್ಡ್ ಹಾಗೂ ಆಧಾರ್ ಕಾರ್ಡ್ ಅನ್ನು ಕಡ್ಡಾಯಗೊಳಿಸಿದೆ. ಸುಕನ್ಯ ಸಮೃದ್ಧಿ ಯೋಜನೆ, ಪಬ್ಲಿಕ್ ಪ್ರಾವಿಡೆಂಟ್ ಫಂಡ್ (ಪಿಪಿಎಫ್), ಹಿರಿಯ ನಾಗರಿಕರ ಉಳಿತಾಯ ಯೋಜನೆಗೆ (ಎಸ್‌ಸಿಎಸ್‌ಎಸ್) ಈ ಎರಡು ದಾಖಲೆಗಳನ್ನು ಏಪ್ರಿಲ್ 1, 2023ರಿಂದ ಕೇಂದ್ರ ಸರ್ಕಾರವು ಕಡ್ಡಾಯಗೊಳಿಸಿದೆ. ಈ ಬಗ್ಗೆ ಮಾರ್ಚ್ 31ರಂದು ಅಧಿಕೃತ ಹೇಳಿಕೆಯನ್ನು ಕೇಂದ್ರ ಹಣಕಾಸು ಸಚಿವಾಲಯ ನೀಡಿದೆ.
ಸರ್ಕಾರದ ನೋಟಿಫಿಕೇಷನ್ ಪ್ರಕಾರ, ಯಾವುದೆ ಸರ್ಕಾರ ಬೆಂಬಲಿತ ಸಣ್ಣ ಉಳಿತಾಯ ಯೋಜನೆಗಳ ಚಂದಾದಾರಿಕೆ ಮಾಡುವಾಗ ಪ್ಯಾನ್ ಕಾರ್ಡ್ ಹಾಗಾ ಆಧಾರ್ ಕಾರ್ಡ್ ಪ್ರತಿಯನ್ನು ಕಡ್ಡಾಯವಾಗಿ ನೀಡಬೇಕಾಗುತ್ತದೆ. ಸೆಪ್ಟೆಂಬರ್ 30ಕ್ಕೂ ಮುನ್ನ ಆಧಾರ್ ಕಾರ್ಡ್ ಸಂಖ್ಯೆಯನ್ನು ನೀಡಬೇಕಾಗಿದೆ. ಈ ದಿನಾಂಕಕ್ಕೂ ಮುನ್ನ ಆಧಾರ್ ಕಾರ್ಡ್ ಸಲ್ಲಿಕೆ ಮಾಡಿಲ್ಲದಿದ್ದರೆ, ಆಧಾರ್ ಕಾರ್ಡ್ ಸಲ್ಲಿಕೆ ಮಾಡುವವರೆಗೂ ಅವರ ಸಣ್ಣ ಉಳಿತಾಯ ಖಾತೆಯನ್ನು ನಿರ್ಬಂಧಿಸಲಾಗುವುದು. ಈ ಬಗ್ಗೆ ಅಧಿಕ ಮಾಹಿತಿಯನ್ನು ನಾವು ಈ ಕೆಳಗೆ ನೀಡಿದ್ದೇವೆ ಮುಂದೆ ಓದಿ...

ಇದಲ್ಲದೆ, ನೀವು ಪಿಪಿಎಫ್, ಎಸ್‌ಎಸ್‌ವೈ, ಎನ್‌ಎಸ್‌ಸಿ (ರಾಷ್ಟ್ರೀಯ ಉಳಿತಾಯ ಪ್ರಮಾಣಪತ್ರ), ಎಸ್‌ಸಿಎಸ್‌ಎಸ್ ಅಥವಾ ಆಧಾರ್ ಇಲ್ಲದೆ ಯಾವುದೇ ಇತರ ಸಣ್ಣ ಉಳಿತಾಯ ಖಾತೆಯನ್ನು ತೆರೆಯಲು ಬಯಸಿದರೆ ತೆರೆಯಬಹುದು. ಆದರೆ ಸಣ್ಣ ಉಳಿತಾಯ ಯೋಜನೆ ಹೂಡಿಕೆಯೊಂದಿಗೆ ಲಿಂಕ್ ಮಾಡಲು ನೀವು ಖಾತೆ ತೆರೆದ ಆರು ತಿಂಗಳೊಳಗೆ ಆಧಾರ್ ಸಂಖ್ಯೆಯನ್ನು ಒದಗಿಸಬೇಕು ಎಂದು ಅಧಿಸೂಚನೆಯಲ್ಲಿ ಸ್ಪಷ್ಟಪಡಿಸಲಾಗಿದೆ. ನೀವು ಈವರೆಗೂ ಆಧಾರ್ ಕಾರ್ಡ್ ಮಾಡಿಲ್ಲದಿದ್ದರೆ ಅಥವಾ ಯುಐಡಿಎಐನಿಂದ ಇನ್ನಷ್ಟೇ ಆಧಾರ್ ಕಾರ್ಡ ಲಭ್ಯವಾಗಬೇಕಾಗಿದ್ದರೆ, ನೀವು ಆಧಾರ್ ಎನ್‌ಲೋಟ್‌ಮೆಂಟ್ ಸಂಖ್ಯೆಯನ್ನು ನೀಡಿ ಖಾತೆ ತೆರೆಯಬಹುದು.
ಕೇಂದ್ರ ಸರ್ಕಾರದ ಹಣಕಾಸು ಸಚಿವಾಲಯವು ಈ ಅಧಿಸೂಚನೆಯನ್ನು ನೀಡುವುದಕ್ಕೂ ಮುನ್ನ ಸರ್ಕಾರ ಬೆಂಬಲಿತ ಸಣ್ಣ ಉಳಿತಾಯ ಯೋಜನೆಗಳಿಗೆ ಆಧಾರ್ ಕಾರ್ಡ್ ಅನ್ನು ಲಿಂಕ್ ಮಾಡುವುದು ಕಡ್ಡಾಯವಾಗಿರಲಿಲ್ಲ. ಆಧಾರ್ ಕಾರ್ಡ್ ಸಲ್ಲಿಸದೆಯೇ ನೀವು ಸಣ್ಣ ಉಳಿತಾಯ ಯೋಜನೆಯಲ್ಲಿ ಹೂಡಿಕೆ ಮಾಡಬಹುದಾಗಿತ್ತು. ಆದರೆ ಈಗ ಅದು ಸಾಧ್ಯವಿಲ್ಲ. ಈಗಾಗಲೇ ಹೂಡಿಕೆ ಮಾಡಿರುವವರು ಆಧಾರ್ ಕಾರ್ಡ್ ಪ್ರತಿಯನ್ನು ಸೆಪ್ಟೆಂಬರ್ ಒಳಗಾಗಿ ಸಲ್ಲಿಸಬೇಕಾಗಿದೆ. ಆಧಾರ್ ಕಾರ್ಡ್ ಇಲ್ಲದಿದ್ದರೂ ಆಧಾರ್ ಎನ್‌ರೋಲ್‌ಮೆಂಟ್ ಸಂಖ್ಯೆಯನ್ನು ನೀಡಬೇಕಾಗುತ್ತದೆ.
ಈ ಬದಲಾವಣೆಯೂ ಕೆವೈಸಿ (know-your-customer) ಭಾಗವಾಗಿದೆ. ಈಗಾಗಲೇ ಸಣ್ಣ ಉಳಿತಾಯ ಖಾತೆಯನ್ನು ತೆರೆಯುವ ಸಂದರ್ಭದಲ್ಲಿ ಪ್ಯಾನ್ ಕಾರ್ಡ್ ಅನ್ನು ಸಲ್ಲಿಸಲಾಗಿರುತ್ತದೆ. ನೀವು ಖಾತೆ ತೆರಯುವಾಗ ಪ್ಯಾನ್ ಕಾರ್ಡ್ ಅನ್ನು ಸಲ್ಲಿಸದಿದ್ದರೆ ಪ್ಯಾನ್ ಕಾರ್ಡ್ ಅನ್ನು ಈ ಕೆಳಗೆ ನೀಡಿರುವ ಅಂಶವು ನಿಮ್ಮ ಖಾತೆಗೆ ಅನ್ವಯವಾದರೆ ಎರಡು ತಿಂಗಳ ಒಳಗಾಗಿ ಸಲ್ಲಿಸಬೇಕು ಎಂದು ಸರ್ಕಾರವು ಅಧಿಸೂಚನೆಯಲ್ಲಿ ಮಾಹಿತಿ ನೀಡಿದೆ. ಪ್ಯಾನ್ ಸಮಯಕ್ಕೆ ಸರಿಯಾಗಿ ಸಲ್ಲಿಸದಿದ್ದರೂ ಕೂಡಾ ಖಾತೆಯನ್ನು ಸೀಸ್ ಮಾಡಲಾಗುತ್ತದೆ. ಈ ಸಣ್ಣ ಉಳಿತಾಯ ಖಾತೆಗಳಿಗೆ ತೆರಿಗೆ ಪ್ರಯೋಜನ ಲಭ್ಯವಿದೆ.
1. ಖಾತೆಯಲ್ಲಿ ಯಾವುದೇ ಸಮಯದಲ್ಲಿ ಬ್ಯಾಲೆನ್ಸ್ ರೂ 50,000 ಮೀರಿದ್ದಲ್ಲಿ 2 ತಿಂಗಳಲ್ಲಿ ಪ್ಯಾನ್ ಕಾರ್ಡ್ ಸಲ್ಲಿಸಿ
2. ಯಾವುದೇ ಹಣಕಾಸು ವರ್ಷದಲ್ಲಿ ಖಾತೆಯಲ್ಲಿನ ಎಲ್ಲಾ ಕ್ರೆಡಿಟ್‌ಗಳ ಒಟ್ಟು ಮೊತ್ತವು ರೂ 1,00,000 ಮೀರಿದ್ದರೆ ಪ್ಯಾನ್ ಕಾರ್ಡ್ ಅನ್ನು ಸಲ್ಲಿಸಿ
3. ಖಾತೆಯಿಂದ ಒಂದು ತಿಂಗಳಲ್ಲಿ ಎಲ್ಲಾ ವಿತ್‌ಡ್ರಾ ಮತ್ತು ವರ್ಗಾವಣೆಗಳ ಒಟ್ಟು ಮೊತ್ತವು 10,000 ರೂಪಾಯಿ ಆಗಿದ್ದರೆ ಪ್ಯಾನ್ ಕಾರ್ಡ್ ಅನ್ನು ಸಲ್ಲಿಸಿ


Click it and Unblock the Notifications