Akshaya Tritiya: ಅಕ್ಷಯ ತೃತೀಯ ದಿನ ಚಿನ್ನ ಖರೀದಿಗೆ ಉತ್ತಮ ಸಮಯ ತಿಳಿಯಿರಿ

ಇಂದು (ಏಪ್ರಿಲ್ 22) ದೇಶದಾದ್ಯಂತ ಅಕ್ಷಯ ತೃತೀಯ ಹಾಗೂ ಈದ್ ಉಲ್ ಫಿತರ್ ಹಬ್ಬವನ್ನು ಆಚರಣೆ ಮಾಡಲಾಗುತ್ತಿದೆ. ಕಳೆದ ವರ್ಷದಂತೆ ಈ ವರ್ಷವೂ ಕೂಡಾ ಎರಡು ಪವಿತ್ರ ಹಬ್ಬಗಳು ಒಂದೇ ದಿನ ಆಚರಣೆ ಮಾಡಲಾಗುತ್ತಿದೆ. ಭಾರತದಲ್ಲಿ ಈ ಹಬ್ಬದ ದಿನದಂದು ಚಿನ್ನವನ್ನು ಮತ್ತು ಬೆಳ್ಳಿಯನ್ನು ಖರೀದಿ ಮಾಡುವ ಪ್ರತೀತಿಯಿದೆ. ಸಾಮಾನ್ಯವಾಗಿ ಅಕ್ಷಯ ತೃತೀಯ ದಿನ ಚಿನ್ನ ಖರೀದಿಯು ಒಂದು ಸಂಪ್ರದಾಯವೆಂಬಂತಾಗಿದೆ.

ಈ ಪವಿತ್ರವಾದ ದಿನದಂದು ಚಿನ್ನವನ್ನು ಖರೀದಿ ಮಾಡಿದರೆ ಸಂಪತ್ತು ಹೆಚ್ಚಾಗುತ್ತದೆ, ಸಮೃದ್ದಿಯಾಗುತ್ತದೆ, ಅದೃಷ್ಟ ನಮ್ಮದಾಗುತ್ತದೆ ಎಂಬ ನಂಬಿಕೆಯಿದೆ. ಪ್ರಮುಖವಾಗಿ ಈ ದಿನದಂದು ಹಿಂದೂಗಳು ಚಿನ್ನ ಅಥವಾ ಬೆಳ್ಳಿಯನ್ನು ಖರೀದಿ ಮಾಡುತ್ತಾರೆ. ಲಕ್ಷ್ಮೀ ದೇವಿ ಈ ದಿನ ನಮಗೆ ಒಳಿಯುತ್ತಾಳೆ ಎಂಬ ನಂಬಿಕೆಯೇ ಇದಕ್ಕೆ ಕಾರಣವಾಗಿದೆ. ಹಲವಾರು ವರ್ಷಗಳಿಂದ ಹಿಂದೂಗಳು ಈ ಸಂಪ್ರದಾಯವನ್ನು ಪಾಲಿಸುತ್ತಾ ಬಂದಿದ್ದಾರೆ.

ಅಕ್ಷಯ ತೃತೀಯ ದಿನ ಚಿನ್ನ ಖರೀದಿಗೆ ಉತ್ತಮ ಸಮಯ ತಿಳಿಯಿರಿ

ಹಾಗೆಯೇ ಈದ್ ಉಲ್ ಫಿತರ್ ದಿನವೂ ಬಂಗಾರ ಖರೀದಿ ಭರದಿಂದ ಸಾಗುವ ಸಾಧ್ಯತೆಯಿದೆ. ಈ ಎರಡು ಹಬ್ಬಗಳು ಒಂದೇ ದಿನವಾದ ಕಾರಣ ಚಿನ್ನ ಖರೀದಿಯು ಹೆಚ್ಚಾಗಿ ನಡೆಯುವ ಸಾಧ್ಯತೆಯಿದೆ. ವ್ಯಾಪಾರಿಗಳು ಈಗಾಗಲೇ ಈ ವರ್ಷ ಚಿನ್ನ ಖರೀದಿ ಹೆಚ್ಚಾಗಬಹುದು ಎಂಬ ನಿರೀಕ್ಷೆ ವ್ಯಕ್ತಪಡಿಸಿದ್ದಾರೆ. ಆದರೆ ಕಳೆದ ಕೆಲವು ದಿನಗಳಿಂದ ಚಿನ್ನದ ಬೆಲೆ ಏರಿಕೆಯಾಗುತ್ತಿರುವ ಕಾರಣದಿಂದ ಖರೀದಿ ಮೇಲೆ ಪ್ರಭಾವ ಉಂಟಾಗಬಹುದು.

ಅಕ್ಷಯ ತೃತೀಯ ಶುಭ ಮುಹೂರ್ತ

ಅಕ್ಷಯ ತೃತೀಯ ಶುಭ ಮುಹೂರ್ತ ಮುಂಜಾನೆ 7:49ಕ್ಕೆ ಆರಂಭವಾಗಿದ್ದು 12:20 ಗಂಟೆವರೆಗೆ ಇರಲಿದೆ.
ಹೆಚ್ಚುವರಿಯಾಗಿ, ಚೋಗಾಡಿಯಾ ಮುಹೂರ್ತವು 7:49 ಕ್ಕೆ ಪ್ರಾರಂಭವಾಗುತ್ತದೆ ಮತ್ತು ಏಪ್ರಿಲ್ 22 ರಂದು 9:04 ಕ್ಕೆ ಕೊನೆಗೊಳ್ಳುತ್ತದೆ. ಏಪ್ರಿಲ್ 23 ರಂದು, ಚೋಗಾಡಿಯಾ ಮುಹೂರ್ತವು 7:26 ಕ್ಕೆ ಪ್ರಾರಂಭವಾಗುತ್ತದೆ ಮತ್ತು 7:47 ಕ್ಕೆ ಕೊನೆಗೊಳ್ಳುತ್ತದೆ.

ಚಿನ್ನ ಖರೀದಿ ಮಾಡಲು ಉತ್ತಮ ಸಮಯ ಯಾವುದು?

ಏಪ್ರಿಲ್ 22 ರಂದು ಚಿನ್ನ ಖರೀದಿಗೆ ಶುಭ ಮುಹೂರ್ತವು ಬೆಳಿಗ್ಗೆ 7:49 ಕ್ಕೆ ಪ್ರಾರಂಭವಾಗುತ್ತದೆ ಮತ್ತು ಏಪ್ರಿಲ್ 23 ರಂದು ಬೆಳಿಗ್ಗೆ 5:48 ಕ್ಕೆ ಕೊನೆಗೊಳ್ಳುತ್ತದೆ ಎಂದು ದೃಕ್ ಪಂಚಾಂಗ ಹೇಳುತ್ತದೆ. ಏಪ್ರಿಲ್ 23 ರಂದು ಬೆಳಿಗ್ಗೆ 7:49 ರಿಂದ 5:48 ರವರೆಗೆ ಚಿನ್ನವನ್ನು ಖರೀದಿಸಬಹುದು.

ಇತರೆ ನಗರಗಳಲ್ಲಿ ಅಕ್ಷಯ ತೃತೀಯ ಮುಹೂರ್ತ

07:49ರಿಂದ 12:33ರವರೆಗೆ - ಪುಣೆ
07:49ರಿಂದ 12:20ರವರೆಗೆ - ನವದೆಹಲಿ
07:49ರಿಂದ 12:08ರವರೆಗೆ - ಚೆನ್ನೈ
07:49ರಿಂದ 12:26ರವರೆಗೆ - ಜೈಪುರ
07:49ರಿಂದ 12:15ರವರೆಗೆ - ಹೈದಾರಾಬಾದ್
07:49ರಿಂದ 12:21ರವರೆಗೆ - ಗುರುಗ್ರಾಮ
07:49ರಿಂದ 12:22ರವರೆಗೆ - ಚಂಡೀಗಢ
05:10ರಿಂದ 07:47ರವರೆಗೆ, ಏಪ್ರಿಲ್ 23 - ಕೋಲ್ಕತ್ತಾ
07:49ರಿಂದ 12:37ರವರೆಗೆ - ಮುಂಬೈ
07:49ರಿಂದ 12:18ರವರೆಗೆ - ಬೆಂಗಳೂರು
07:49ರಿಂದ 12:38ರವರೆಗೆ - ಅಹಮದಾಬಾದ್
07:49ರಿಂದ 12:19ರವರೆಗೆ - ನೋಯ್ಡಾ

ಕಳೆದ ವರ್ಷ ದೇಶದಲ್ಲಿ ಅಕ್ಷಯ ತೃತೀಯ ದಿನ 15,000 ಕೋಟಿ ಮೌಲ್ಯದ ಚಿನ್ನದ ವಹಿವಾಟು ನಡೆದಿದೆ ಎಂದು ವ್ಯಾಪಾರಿಗಳ ಒಕ್ಕೂಟದ ಅಖಿಲ ಭಾರತ ವ್ಯಾಪಾರಿಗಳ ಒಕ್ಕೂಟ (ಸಿಎಐಟಿ) ತಿಳಿಸಿದೆ. ಕೊರೊನಾ ವೈರಸ್ ಸಾಂಕ್ರಾಮಿಕದ ನಿರ್ಬಂಧಗಳು ಕಡಿಮೆ ಆದ ನಡುವೆ ದೇಶದಲ್ಲಿ ಚಿನ್ನದ ವ್ಯಾಪಾರ ಕೊಂಚ ಹೆಚ್ಚಳವಾಗಿದೆ. ಕೋವಿಡ್‌ನಿಂದ ಜನರು ಸಂಕಷ್ಟದಲ್ಲಿರುವಾಗ ಚಿನ್ನ ಖರೀದಿ ಕಡಿಮೆಯಾಗಬಹುದು ಎಂಬ ನಿರೀಕ್ಷೆಯಿತ್ತು. ಆದರೆ ಖರೀದಿ ಭರದಿಂದ ಸಾಗಿತ್ತು.

ಕಳೆದ ವರ್ಷ ಅಕ್ಷಯ ತದಿಗೆಗೂ ಮುಂಚಿನ ಹಲವು ದಿನಗಳಿಂದ ಚಿನ್ನದ ಬೆಲೆಯು ಇಳಿಕೆ ಕಂಡಿರುವುದು ವ್ಯಾಪಾರ ಮತ್ತಷ್ಟು ಹೆಚ್ಚಳವಾಗಲು ಕಾರಣವಾಗಿದೆ. ಆದರೆ ಈ ವರ್ಷ ಅಕ್ಷಯ ತೃತೀಯಗೂ ಒಂದು ವಾರಗಳ ಕಾಲದಿಂದ ಚಿನ್ನದ ದರವು ಭಾರೀ ಪ್ರಮಾಣದಲ್ಲಿ ಏರಿಕೆಯಾಗಿದೆ. ಆದರೂ ಹಳದಿ ಲೋಹ ಖರೀದಿ ಹೇಗೆ ನಡೆಯಲಿದೆ ಎಂದು ಕಾದು ನೋಡಬೇಕಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+