ಅಂಚೆ ಕಚೇರಿಯ ಜನಪ್ರಿಯ ಸಣ್ಣ ಉಳಿತಾಯ ಯೋಜನೆಗಳ ನಿಯಮಗಳನ್ನು ಅರಿಯಿರಿ

ಅಂಚೆ ಕಚೇರಿಯ ಉಳಿತಾಯ ಖಾತೆಗಳ ಕಾರ್ಯಾಚರಣೆ ಕುರಿತಂತೆ ಅಂಚೆ ಇಲಾಖೆ 2021 ನವೆಂಬರ್ 5ರಂದು ಸ್ಪಷ್ಟನೆ ನೀಡಿ ಸುತ್ತೋಲೆ ಹೊರಡಿಸಿದೆ. ಹೊಸ ಪಾಸ್ ಬುಕ್ ನೀಡಿಕೆ, ಜಂಟಿ ಖಾತೆ ತೆರೆಯುವುದು, ಅಂಚೆ ಕಚೇರಿ ಉಳಿತಾಯ ಜಂಟಿ ಖಾತೆಗಳಿಗೆ ಚೆಕ್ ನೀಡಿಕೆ, ಉಳಿತಾಯ ಖಾತೆ ತೆರೆಯುವುದು ಇತ್ಯಾದಿ ಕೆಲಸಗಳ ಬಗ್ಗೆ ಸಾರ್ವಜನಿಕರು ಅರಿಯಬೇಕಾದ ನಿಯಮಗಳ ಕುರಿತು ಸ್ಪಷ್ಟನೆ ನೀಡಿದೆ. ಅಂಚೆ ಕಚೇರಿಯ ಉಳಿತಾಯ ಖಾತೆಗಳನ್ನು ಹೇಗೆ ನಿರ್ವಹಿಸಬೇಕು ಎಂಬ ಬಗ್ಗೆ ಕೆಳಗೆ ಸ್ಪಷ್ಟನೆ ನೀಡಲಾಗಿದೆ.

1. ಹಳೆಯ ಪಾಸ್‌ಬುಕ್‌ಗೆ ಬದಲಾಗಿ ಹೊಸ ಪಾಸ್ ಬುಕ್ ಪಡೆಯುವುದು ಹೇಗೆ?

ಹಳೆಯ ಅಥವಾ ಸಂಪೂರ್ಣ ಬಳಸಿದ ಪಾಸ್‌ಬುಕ್‌ಗೆ ಬದಲಾಗಿ ಹೊಸ ಪಾಸ್‌ಬುಕ್ ನೀಡುವ ವಿಧಾನವನ್ನು ಅಂಚೆ ಕಚೇರಿ ಉಳಿತಾಯ ಖಾತೆ ಕೋರ್ ಬ್ಯಾಂಕಿಂಗ್ ಪರಿಹಾರ(POSB CBS) ಕೈಪಿಡಿ (ಮ್ಯಾನುಯಲ್‌) ನಿಯಮ 44ರಲ್ಲಿ ಸೂಚಿಸಲಾಗಿದೆ. ಆದರೆ ಸಿಬಿಎಸ್ ಅಂಚೆ ಕಚೇರಿಗಳಲ್ಲಿರುವ ಖಾತೆಗಳಿಗೆ ನೀಡುವ ಹೊಸ ಪಾಸ್‌ಬುಕ್ ಅನ್ನು ಬೇರೆ ಯಾವುದೇ ಸಿಬಿಎಸ್ ಅಂಚೆ ಕಚೇರಿ ನೀಡಬಹುದೇ ಎಂಬ ಬಗ್ಗೆ ಸ್ಪಷ್ಟತೆ ಇಲ್ಲ. ಆದರೆ POSB CBS ಮ್ಯಾನುಯಲ್‌ನ ನಿಯಮ 44ರ ಪ್ರಕಾರ, ಬಳಸಿದ ಅಥವಾ ಹಳೆಯದಾದ ಪಾಸ್‌ಬುಕ್‌ಗೆ ಬದಲಾಗಿ ಹೊಸ ಪಾಸ್‌ಬುಕ್‌ ನೀಡಲು ಅನುಮತಿಸಲಾಗಿದೆ.

1. ಇಬ್ಬರು ಅಥವಾ ಅದಕ್ಕಿಂತ ಹೆಚ್ಚಿನ ಅನಕ್ಷರಸ್ಥ ಠೇವಣಿದಾರರು ಜಂಟಿ ಖಾತೆ ತೆರೆಯುವುದು ಹೇಗೆ? ಅಕ್ಷರಸ್ಥ ಮತ್ತು ಅನಕ್ಷರಸ್ಥ ಸೇರಿ ಜಂಟಿ ಖಾತೆ ತೆರೆಯುವುದು ಹೇಗೆ?

2018ರ ಸರ್ಕಾರಿ ಉಳಿತಾಯ ಉತ್ತೇಜನದ ಸಾಮಾನ್ಯ ನಿಯಮ (ಜಿಎಸ್ ಪಿಆರ್)ಗಳ ಪ್ರಕಾರ, ಅಂಧರು ಅಥವಾ ದೃಷ್ಟಿಹೀನರು ಅಥವಾ ಅನಕ್ಷರಸ್ಥ ಠೇವಣಿದಾರರು ಅಕ್ಷರಸ್ಥ ಠೇವಣಿದಾರರೊಂದಿಗೆ ಜಂಟಿ ಖಾತೆ ತೆರೆಯಬಹುದು. ಜಂಟಿ ಖಾತೆ ತೆರೆಯಲು ಎರಡು ಅಥವಾ ಅದಕ್ಕಿಂತ ಹೆಚ್ಚಿನ ಅನಕ್ಷರಸ್ಥ ಠೇವಣಿದಾರರಿಗೆ ಉಳಿತಾಯ ಯೋಜನೆಗಳ ನಿಯಮಾವಳಿಗಳಿಗೆ ಯಾವುದೇ ರೀತಿಯ ನಿರ್ಬಂಧ ಇರುವುದಿಲ್ಲ.

2. ಅಕ್ಷರಸ್ಥ ಮತ್ತು ಅನಕ್ಷರಸ್ಥ ಠೇವಣಿದಾರರು ಜತೆಗೂಡಿ ತೆರೆಯುವ ಜಂಟಿ ಉಳಿತಾಯ ಖಾತೆಗೆ ಅಂಚೆ ಕಚೇರಿ ಉಳಿತಾಯ ಖಾತೆ ಚೆಕ್ ಸಿಗುತ್ತದಾ?

POSB CBS ಮ್ಯಾನುಯಲ್ ಮತ್ತು POSB ಮ್ಯಾನುಯಲ್ 1ರ ಪ್ರಕಾರ, ಚೆಕ್ ಸೌಲಭಯ ಪಡೆಯಬೇಕಾದರೆ, ಖಾತೆದಾರ ಅಕ್ಷರಸ್ಥನಾಗಿರಬೇಕು. ಕೈಯಿಂದ ಸಹಿ ಮಾಡುವಷ್ಟು ಸಮರ್ಥನಾಗಿರಬೇಕು. ಖಾತೆಯಲ್ಲಿ ಸದಾ ಕನಿಷ್ಠ 500 ರೂ. ಬ್ಯಾಲೆನ್ಸ್ ಕಾಪಾಡಬೇಕು. ಅಪ್ರಾಪ್ತರು ತೆರೆಯುವ ಖಾತೆಗಳಿಗೆ ಚೆಕ್ ಸೌಲಭ್ಯ ಸಿಗುವುದಿಲ್ಲ. ಹಣಕಾಸು ಸಚಿವಾಲಯ ಹೊರಡಿಸಿರುವ ಸ್ಪಷ್ಟನೆಯ ಪ್ರಕಾರ, ಅಕ್ಷರಸ್ಥ ಮತ್ತು ಅನಕ್ಷರಸ್ಥ ಜತೆಗೂಡಿ ತೆರೆಯುವ ಜಂಟಿ ಖಾತೆಗಳಲ್ಲಿ ಅಕ್ಷರಸ್ಥನಿಗೆ ಚೆಕ್ ಸೌಲಭ್ಯ ನೀಡಲಾಗುತ್ತದೆ. ಆತ ಅಥವಾ ಆಕೆ ಅದನ್ನು ಬಳಸಬಹುದು. ಆದರೆ ಅನಕ್ಷರಸ್ಥ ಚೆಕ್ ಬಳಸಲು ಅವಕಾಶ ಇರುವುದಿಲ್ಲ.

3. ಈಗಾಗಲೇ ಅಂಚೆ ಕಚೇರಿ ಉಳಿತಾಯ ಏಕ ಖಾತೆ ತೆರೆದಿರುವ ವ್ಯಕ್ತಿ ಮೂಲ ಉಳಿತಾಯ ಖಾತೆ ತೆರೆಯಬಹುದೆ?

2021 ಏಪ್ರಿಲ್ 9ರಿಂದ ಅನ್ವಯವಾಗುವಂತೆ, ಅಂಚೆ ಕಚೇರಿ ಮೂಲ ಉಳಿತಾಯ ಖಾತೆಯನ್ನು ಸಾರ್ವಜನಿಕರಿಗೆ ಪರಿಚಯಿಸಲಾಗಿದೆ. 2019ರ ಅಂಚೆ ಕಚೇರಿ ಉಳಿತಾಯ ಖಾತೆಗೆ ತಂದಿರುವ ತಿದ್ದುಪಡಿ ಪ್ರಕಾರ, ಯಾವುದೇ ವ್ಯಕ್ತಿ ಒಂದೇ ಒಂದು ಖಾತೆಯನ್ನು ಮಾತ್ರ ತೆರೆಯಬಹುದು. ಮೂಲ ಉಳಿತಾಯ ಖಾತೆಯು ಪ್ರತ್ಯೇಕ ವಿಧದ ಖಾತೆಯಾಗಿದೆ. ಆದರೆ ಮನಗಾಣಬೇಕಾದ ವಿಷಯವೇನೆಂದರೆ, ಅದನ್ನು 2019ರ ಅಂಚೆ ಕಚೇರಿ ಉಳಿತಾಯ ಖಾತೆಯ 3ನೇ ಉಪಕಲಂಗೆ ಸೇರಿಸಲಾಗಿದೆ. ಹಾಗಾಗಿ, ಒಬ್ಬ ವ್ಯಕ್ತಿಯು ಮೂಲ ಉಳಿತಾಯ ಖಾತೆಯ ಜತೆಗೆ ಹೆಚ್ಚುವರಿಯಾಗಿ ಉಳಿತಾಯ ಏಕ ಖಾತೆ ತೆರೆಯಬಹುದು.

ಅಂಚೆ ಕಚೇರಿ ಜನಪ್ರಿಯ ಸಣ್ಣ ಉಳಿತಾಯ ಯೋಜನೆ ವಿವರ

4. ಹಿಂತೆಗೆಯುವ ನಮೂನೆ (ವಿತ್ ಡ್ರಾವಲ್ ಫಾರಂ)ಎಸ್ ಬಿ-7 ಅಥವಾ ಚೆಕ್ ಮೂಲಕ ಠೇವಣಿ ಮಾಡುವುದಾದರೆ, ಅಂಚೆ ಕಚೇರಿ ಶಾಖೆಗಳಲ್ಲಿ ಠೇವಣಿ ಮಿತಿ ಎಷ್ಟು?
ಅಂಚೆ ಕಚೇರಿ ಶಾಖೆಗಳಲ್ಲಿ ಚೆಕ್ ಮತ್ತು ಹಿಂಪಡೆಯುವ ನಮೂನೆ ಎಸ್ ಬಿ-7 ಮೂಲಕ ಖಾತೆ ತೆರೆಯಲು ಮತ್ತು ತದನಂತರ ಮಾಡುವ ಠೇವಣಿ ಸ್ವೀಕಾರಕ್ಕೆ ಸಂಬಂಧಿಸಿದಂತೆ 2020ರಲ್ಲಿ ಆದೇಶ ಹೊರಡಿಸಲಾಗಿದೆ.

ಸಣ್ಣ ಉಳಿತಾಯಯೋಜನೆಗಳಾದ ಮಾಸಿಕ ವರಮಾನ ಯೋಜನೆ, ರಾಷ್ಟ್ರೀಯ ಉಳಿತಾಯ ಪ್ರಮಾಣಪತ್ರ, ಕಿಸಾನ್ ವಿಕಾಸ್ ಪತ್ರ, ಹಿರಿಯ ನಾಗರೀಕರ ಉಳಿತಾಯ ಯೋಜನೆ, ಪಬ್ಲಿಕ್ ಪ್ರಾವಿಡೆಂಟ್ ಫಂಡ್ ಇತ್ಯಾದಿಗಳನ್ನು ಅಂಚೆ ಕಚೇರಿ ಶಾಖೆಗಳಿಗೆ ವಿಸ್ತರಿಸಲಾಗಿದೆ. ಗ್ರಾಹಕರು ಶಾಖೆಗಳಲ್ಲೇ ಈ ಯೋಜನೆಗಳ ಖಾತೆ ತೆರೆಯಬಹುದು ಮತ್ತು ನಿರ್ವಹಿಸಬಹುದು. ಅಂಚೆ ಕಚೇರಿ ಶಾಖೆಗಳಲ್ಲಿ ನಗದು ಸ್ವೀಕಾರ ಮಿತಿಯನ್ನು ದಿನವೊಂದರಲ್ಲಿ 25 ಸಾವಿರ ರೂ.ನಿಂದ 50 ಸಾವಿರ ರೂ.ಗೆ ಏರಿಕೆ ಮಾಡಲಾಗಿದೆ. ಇದು 05.03.2021ರಿಂದ ಜಾರಿಗೆ ಬಂದಿದೆ. ಈ ನಿಟ್ಟಿನಲ್ಲಿ, ಹಿಂತೆಗೆಯುವ ನಮೂನೆ ಮತ್ತು ಚೆಕ್ ಮೂಲಕ ಯಾವುದೇ ರೀತಿಯ ಖಾತೆ ತೆರೆಯಲು ಮಾಡುವ ಠೇವಣಿ ಮತ್ತು ತದನಂತರದ ಠೇವಣಿಗಳಿಗೆ ದಿನವೊಂದಕ್ಕೆ 50 ಸಾವಿರ ರೂ. ಮಿತಿ ಇರುವುದಿಲ್ಲ.

5. ಯಾವುದೇ ಖಾತೆಗಳಲ್ಲಿ ಪಾಲಕ, ಪೋಷಕರ ಹೆಸರು ಬದಲಾವಣೆಗೆ ಅವಕಾಶ ಇದೆಯೇ?

2018ರ ಸರ್ಕಾರಿ ಉಳಿತಾಯ ಉತ್ತೇಜನದ ಸಾಮಾನ್ಯ ನಿಯಮ(ಜಿಎಸ್ ಪಿಆರ್)ಗಳ ಅಧಿನಿಯಮ 10(4)ರ ಪ್ರಕಾರ, ಪೋಷಕ ಅಥವಾ ಪಾಲಕರು ಮರಣ ಹೊಂದಿದರೆ, ಅವರ ನಂತರದ ಪಾಲಕ ಅಥವಾ ಪೋಷಕರು ಅಪ್ರಾಪ್ತ ಅಥವಾ ಅಸ್ವಸ್ಥ ಮನಸ್ಸಿನ ವ್ಯಕ್ತಿಯಾಗಿದ್ದರೆ, ಅವರ ಖಾತೆಯನ್ನು ನಿರ್ವಹಿಸಲು ಅರ್ಹತೆ ಪಡೆಯುತ್ತಾರೆ. ಪಾಲಕ ಮರಣ ಹೊಂದಿದ ಪ್ರಮಾಣಪತ್ರ ಅಥವಾ ನ್ಯಾಯಾಲಯ ಆದೇಶದ ಪ್ರತಿಯನ್ನು ಹೊಸ (ತದನಂತರದ) ಪಾಲಕರು ಕಡ್ಡಾಯವಾಗಿ ಒದಗಿಸಿದರೆ ಮಾತ್ರ ಇದಕ್ಕೆ ಅನುಮತಿ ಇದೆ. ಜತೆಗೆ, ಅವರು ಖಾತೆ ತೆರೆಯಲು ಹೊಸದಾಗಿ ಅರ್ಜಿ ಸಲ್ಲಿಸಬೇಕು, ಸಹಿ ಮಾಡಿದ ಕೆವೈಸಿ ದಾಖಲೆಗಳನ್ನು ಒದಗಿಸಬೇಕು.

6. ಖಾತೆ ತೆರೆಯುವಾಗ ಠೇವಣಿದಾರ ಹಾಜರಿರಬೇಕೆ?

2018ರ ಜಿಎಸ್ ಪಿಆರ್ ನಿಯಮ 4ರ ಪ್ರಕಾರ, ಭಾರತದಲ್ಲಿ ನೆಲೆಸಿರುವ ನಾಗರಿಕರು ಮಾತ್ರ ರಾಷ್ಟ್ರೀಯ ಸಣ್ಣ ಉಳಿತಾಯ ಯೋಜನೆಗಳಲ್ಲಿ ಖಾತೆ ತೆರೆಯಲು ಅರ್ಹರಾಗಿರುತ್ತಾರೆ. 2018 ರ ಜಿಎಸ್ ಪಿಆರ್ ನಿಯಮ 5ರ ಪ್ರಕಾರ, ಅಂಚೆ ಕಚೇರಿಗೆ ವೈಯಕ್ತಿಕವಾಗಿ ಅಥವಾ ಅನುಮತಿಸುವ ವಿದ್ಯುನ್ಮಾನ ವಿಧಾನಗಳ ಮೂಲಕ ಠೇವಣಿದಾರರು ಖಾತೆ ತೆರೆಯಬಹುದು. ಅಂತರ್ಜಾಲ ಅಥವಾ ಮೊಬೈಲ್ ಬ್ಯಾಂಕಿಂಗ್ ಅಪ್ಲಿಕೇಷನ್ ಸೇರಿದಂತೆ ಭಾರತೀಯ ರಿಸರ್ವ್ ಬ್ಯಾಂಕ್ ಅನುಮೋದಿಸಿರುವ ವಿದ್ಯುನ್ಮಾನ ವಿಧಾನಗಳನ್ನು ಬಳಸಿ, ಖಾತೆ ತೆರೆಯಬಹುದು. ಅಂಚೆ ಕಚೇರಿಯಲ್ಲೇ ಖಾತೆ ತೆರೆಯುವುದಾದರೆ, ಠೇವಣಿದಾರ ಕಡ್ಡಾಯವಾಗಿ ಖುದ್ದು ಹಾಜರಿರಬೇಕು.

ಒಂದು ವೇಳೆ ಅಪ್ರಾಪ್ತ ಅಥವಾ ಅಸ್ವಸ್ಥ ಮನಸ್ಸಿನ ವ್ಯಕ್ತಿಯ ಪರವಾಗಿ ಪಾಲಕ ಅಥವಾ ಪೋಷಕ ಖಾತೆ ತೆರೆಯಬೇಕಾದರೆ, ಪಾಲಕ ಅಥವಾ ಪೋಷಕ ಕಡ್ಡಾಯವಾಗಿ ಅಂಚೆ ಕಚೇರಿಗೆ ಹಾಜರಾಗಬೇಕು. ಅಧಿಕೃತ ಎಜೆಂಟರ ಮೂಲಕ ತೆರೆಯಲು ಗುರುತಿಸಿರುವ ಉಳಿತಾಯ ಖಾತೆ ಯೋಜನೆಗಳಿಗೆ ಠೇವಣಿದಾರರ ಹಾಜರಿ ಐಚ್ಛಿಕವಾಗಿರುತ್ತದೆ.

ಉಳಿತಾಯ ಯೋಜನೆಗಳನ್ನು ಉತ್ತೇಜಿಸಲು ನಡೆಸುವ ಆಂದೋಲನಗಳು, ಮೇಳಗಳು, ಮನೆ ಮನೆಗೆ ಪ್ರಚಾರ ಅಭಿಯಾನ ಇತ್ಯಾದಿ ಸಂದರ್ಭಗಳಲ್ಲಿ ಖಾತೆ ತೆರೆಯುವ ನಮೂನೆಗಳು ಮತ್ತು ಕೆವೈಸಿ ದಾಖಲೆಗಳನ್ನು ಅಂಚೆ ಕಚೇರಿ ಸಿಬ್ಬಂದಿಯೇ ಸಂಗ್ರಹಿಸಿ, ಅಧಿಕೃತ ಅಧಿಕಾರಿಯ ಸಮ್ಮುಖ ಠೇವಣಿದಾರರ ಸಹಿ ಪಡೆದಿದ್ದರೆ, ಅಂತಹ ಸಂದರ್ಭಗಳಲ್ಲಿ, ಖಾತೆ ತೆರೆಯಲು ಠೇವಣಿದಾರರ ಖುದ್ದು ಹಾಜರಿ ಕಡ್ಡಾಯವಿಲ್ಲ.

7. ಜಂಟಿ ಖಾತೆಗಳಲ್ಲಿ ಜಂಟಿ ಠೇವಣಿದಾರರ ಬದಲಾವಣೆಗೆ ಅವಕಾಶ ಇದೆಯೇ?

2018 ಜಿಎಸ್ ಪಿಆರ್ ನಿಯಮ 8ರ ಪ್ರಕಾರ, ಒಂದೇ ಖಾತೆ ತೆರೆದರೆ ತರುವಾಯ ಜಂಟಿ ಖಾತೆಯಾಗಿ ಪರಿವರ್ತಿಸಲು ಸಾಧ್ಯವಿಲ್ಲ. ಜಂಟಿ ಖಾತೆಯನ್ನು ಏಕ ಖಾತೆಯಾಗಿ ಪರಿವರ್ತಿಸಲು ಅವಕಾಶವಿಲ್ಲ. ಜತೆಗೆ, ಜಂಟಿ ಖಾತೆಯಲ್ಲಿ ಠೇವಣಿದಾರರನ್ನು ಬದಲಿಸಲು ಅಥವಾ ಹೊಸ ಠೇವಣಿದಾರರನ್ನು ಸೇರಿಸಲು ಸಹ ಅವಕಾಶವಿಲ್ಲ. ಇದಲ್ಲದೆ, ಖಾತೆಯಲ್ಲಿ ನಮೂದಾಗಿರುವ ಮೊದಲ ಠೇವಣಿದಾರನ ಪ್ಯಾನ್ ಸಂಖ್ಯೆ ಆಧರಿಸಿ ಆದಾಯ ತೆರಿಗೆ ಅಧಿಕಾರಿಗಳಿಗೆ ಆದಾಯ ತೆರಿಗೆ ವಿವರ ಮತ್ತು ಸ್ಟೇಟ್‌ಮೆಂಟ್‌ಗಳನ್ನು ಸಲ್ಲಿಸಲಾಗುತ್ತದೆ. ಈ ಅಂಶವನ್ನು ಗಮನದಲ್ಲಿಟ್ಟುಕೊಂಡು ಖಾತೆಯಲ್ಲಿ ಠೇವಣಿದಾರರ ಮೊದಲ, ಎರಡನೇ ಮತ್ತು ಮೂರನೇ ಅನುಕ್ರಮದಲ್ಲಿರುವ ಹೆಸರುಗಳ ಬದಲಾವಣೆ ಅಥವಾ ಹಿಂದು ಮುಂದು ಮಾಡಲು ಸಹ ಅನುಮತಿ ಇಲ್ಲ ಎಂದು ಜಿಎಸ್ ಪಿಆರ್ ನಿಯಮಗಳಲ್ಲಿ ಸ್ಪಷ್ಟಪಡಿಸಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+