ಹಬ್ಬದ ಸೀಸನ್ ಆರಂಭವಾಗಿದೆ. ಬಹು ನಿರೀಕ್ಷಿತ ಅಮೆಜಾನ್ ವಾರ್ಷಿಕ ಮಾರಾಟ ಕೂಡಾ ಆರಂಭವಾಗಿದೆ. ಈ ವರ್ಷ ಸರಕುಗಳ ಮೇಲೆ ನೀವು ನಂಬಲು ಸಾಧ್ಯವಿಲ್ಲದಷ್ಟು ರಿಯಾಯಿತಿಗಳನ್ನು ನೀಡಲಾಗಿದೆ. ಉತ್ತಮ ಡಿಸ್ಕೌಂಟ್‌ಗಳು ಕಣ್ಣಿಗೆ ಕುಕ್ಕುವಂತಿದೆ. ಎಲ್ಲಾ ಉತ್ಪನ್ನಗಳ ಮೇಲೆ ರಿಯಾಯಿತಿಯಿದೆ.
ಅಡಿಗೆ ವಸ್ತುಗಳು, ಮೊಬೈಲ್ ಫೋನ್‌ಗಳು, ಟಿವಿಗಳು, ರೆಫ್ರಿಜರೇಟರ್‌ಗಳು, ಡಿಶ್‌ವಾಶರ್‌ಗಳು ಮತ್ತು ಏರ್ ಕಂಡಿಷನರ್‌ಗಳ ಮಾರಾಟವಿದೆ, ಆಫರ್ ಇದೆ. ಈಗ ನೀವು ಅಮೆಜಾನ್‌ನಲ್ಲಿ ಈ ವಸ್ತುಗಳನ್ನು ಖರೀದಿಸಲು ಬಯಸಿದರೆ, ಇಲ್ಲಿ ನಾವು ಆಫರ್‌ಗಳ ವಿವರವನ್ನು ನೀಡಿದ್ದೇವೆ, ಮುಂದೆ ಓದಿ...

ದೀಪಾವಳಿಗೆ ಶೇಕಡ 63 ರಷ್ಟು ಆಫರ್
ದೀಪಾವಳಿ - ದಸರಾ ಆಫರ್ ಆಗಿ ಅಮೆಜಾನ್‌ನಲ್ಲಿ ಟಿವಿಗಳನ್ನು ಅತೀ ಕಡಿಮೆ ದರಕ್ಕೆ ನೀಡಲಾಗುತ್ತದೆ. ಅದು ಕೂಡಾ ಕೆಲವು ಟಿವಿಗಳಿಗೆ ಬರೋಬ್ಬರಿ ಶೇಕಡ 63 ರಷ್ಟು ರಿಯಾಯಿತಿಯನ್ನು ನೀಡಲಾಗುತ್ತದೆ.
ಸಿಂಗಲ್ ಡೋರ್ ರೆಫ್ರಿಜರೇಟರ್: ಶೇ.33 ರಿಯಾಯಿತಿ, 7790 ರೂ. ಯಿಂದ ಆರಂಭ
ಅದ್ಭುತವಾದ ರಿಯಾಯಿತಿ ದರಗಳಲ್ಲಿ ಹೊಚ್ಚ ಹೊಸ ಸಿಂಗಲ್ ಡೋರ್ ರೆಫ್ರಿಜರೇಟರ್ ಅನ್ನು ನೀವು ಅಮೆಜಾನ್‌ನಲ್ಲಿ ಖರೀದಿ ಮಾಡಬಹುದಾಗಿದೆ. ನೀವು ಕಡಿಮೆ ದರದಲ್ಲಿಯೇ ಖರೀದಿ ಮಾಡಬಹುದಾಗಿದೆ. ಇದೀಗ ಶಾಪಿಂಗ್ ಮಾಡಿ ಮತ್ತು ಉತ್ತಮ ಉಳಿತಾಯವನ್ನು ಮಾಡಿಕೊಳ್ಳಿ.
ಟಾಪ್ ಲೋಡ್ ವಾಷರ್: ಶೇ.47 ರಿಯಾಯಿತಿ, 9,990 ರೂ. ಯಿಂದ ಆರಂಭ
ಕಡಿಮೆ ದರದಲ್ಲಿ ನೀವು ವಾಷಿಂಗ್ ಮೆಷಿನ್ ಅನ್ನು ಖರೀದಿ ಮಾಡಬಹುದಾಗಿದೆ. ಈ ಮೂಲಕ ಹೆಚ್ಚು ಹಣವನ್ನು ಉಳಿತಾಯ ಮಾಡಲು ಕೂಡಾ ಸಾಧ್ಯವಾಗುತ್ತದೆ. ವಾಷಿಂಗ್ ಮೆಷಿನ್‌ಗೆ ಬರೋಬ್ಬರಿ ಶೇಕಡ 47ರಷ್ಟು ರಿಯಾಯಿತಿ ಇದೆ. 9,990 ರೂಪಾಯಿ ಆರಂಭಿಕ ಬೆಲೆಯಾಗಿದೆ. ಇನ್ನು ಫ್ರಂಟ್‌ಲೋಡ್ ವಾಷಿಂಗ್ ಮೆಷಿನ್‌ಗೆ ಶೇಕಡ 43 ರಷ್ಟು ರಿಯಾಯಿತಿ ಇದೆ. ಆರಂಭಿಕ ಬೆಲೆ 16,990 ರೂಪಾಯಿ ಆಗಿದೆ.
ಸೈಟ್ ಬೈ ಸೈಡ್ ರೆಫ್ರಿ: ಶೇ.42 ರಿಯಾಯಿತಿ, 27,000 ರೂಪಾಯಿವರೆಗೆ ಉಳಿತಾಯ
ಕೊಂಚ ದೊಡ್ಡದಾದ ರೆಫ್ರಿಜರೇಟರ್‌ಗಳನ್ನು ಖರೀದಿ ಮಾಡಲು ಬಯಸುವವರಿಗೆ ಉತ್ತಮ ಆಫರ್ ಅಮೆಜಾನ್‌ನಲ್ಲಿದೆ. ಸೈಟ್ ಬೈ ಸೈಡ್ ರೆಫ್ರಿಜರೇಟರ್‌ಗಳಿಗೆ ಸುಮಾರು ಶೇಕಡ 42 ರಷ್ಟು ರಿಯಾಯಿತಿಯನ್ನು ನೀಡಲಾಗುತ್ತದೆ. ಹಾಗೆಯೇ 27,000 ರೂಪಾಯಿವರೆಗೆ ನಾವು ಉಳಿತಾಯ ಮಾಡಬಹುದಾಗಿದೆ.
ಚಿಮಣಿಗಳು: ಶೇ. 67 ರಿಯಾಯಿತಿ, 3990 ರೂ. ಯಿಂದ ಆರಂಭ
ಆಧುನಿಕ ಅಡುಗೆಮನೆಯನ್ನು ಇನ್ನಷ್ಟು ಮಾರ್ಡನ್ ಮಾಡಬೇಕಾದರೆ ನೀವು ಚಿಮಣಿಗಳನ್ನು ಇಡಬಹುದು. ಇದು ಅಡುಗೆ ಕೋಣೆಯಲ್ಲಿ ಹೊಗೆ ನಿಲ್ಲದಂತೆ ನೋಡುತ್ತದೆ. ಇದರಿಂದ ಅಡುಗೆ ಮನೆಯೂ ಸ್ವಚ್ಛವಾಗಿರುತ್ತದೆ.
ಮೈಕ್ರೋವೇವ್: ಶೇ.44 ರಿಯಾಯಿತಿ, 5690 ರೂ. ಯಿಂದ ಆರಂಭ
ಮೈಕ್ರೋವೇವ್ ಇದ್ದರೆ ಆಹಾರ ತಯಾರಿ ಅತೀ ಸುಲಭ ಅಲ್ಲವೇ?. ನೀವು ಮೈಕ್ರೋವೇವ್‌ಗಳನ್ನು ಖರೀದಿ ಮಾಡಲು ಬಯಸಿದರೆ ನಿಮಗೆ ಉತ್ತಮ ಆಫರ್ ಅಮೆಜಾನ್‌ನಲ್ಲಿದೆ. ಶೇಕಡ 44 ರಷ್ಟು ರಿಯಾಯಿತಿ ಲಭ್ಯವಿದೆ. ಹಾಗೆಯೇ 5690 ರೂಪಾಯಿ ಆರಂಭಿಕ ಬೆಲೆಯಾಗಿದೆ. ಇದರಿಂದಾಗಿ ಬಜೆಟ್ ಮೀರದೆ ಖರೀದಿ ಮಾಡಬಹುದಾಗಿದೆ.


Click it and Unblock the Notifications