ಕರ್ನಾಟಕದಲ್ಲಿ ಮುಖ್ಯಮಂತ್ರಿ ಸಿದ್ಧರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರವು ಅನ್ನ ಭಾಗ್ಯ ಯೋಜನೆಯಡಿ ಈಗಾಗಲೇ ಹಣ ವರ್ಗಾವಣೆಯನ್ನು ಆರಂಭಿಸಿದೆ. ಜುಲೈ 10, 2023 ರಿಂದ 5 ಕೆಜಿ ಅಕ್ಕಿ ಬದಲಾಗಿ ಹಣವನ್ನು ವರ್ಗಾಯಿಸುತ್ತಿದೆ.
ಅನ್ನ ಭಾಗ್ಯ ಯೋಜನೆಯಡಿ, ಕರ್ನಾಟಕ ಸರ್ಕಾರವು ಫಲಾನುಭವಿಗಳಿಗೆ ಪ್ರತಿ ಕೆಜಿಗೆ 34 ರೂಪಾಯಿಗಳ ನಗದು ಪಾವತಿಸಲು ನಿರ್ಧರಿಸಿದೆ. ಉಚಿತ ಅಕ್ಕಿ ಯೋಜನೆಯಡಿ ಹೆಚ್ಚುವರಿ 5 ಕೆಜಿ ಅಕ್ಕಿಗೆ, ಬಿಪಿಎಲ್ ಕುಟುಂಬದ ಪ್ರತಿಯೊಬ್ಬ ಸದಸ್ಯರಿಗೆ, ಅಂತ್ಯೋದಯ ಕುಟುಂಬದ ಸದಸ್ಯರಿಗೆ 34 ರೂಪಾಯಿಯಂತೆ ನೀಡಲಾಗುತ್ತದೆ. ಆದರೆ ಅಕ್ಕಿಯನ್ನು ಕೂಡಾ ಮನೆಗೆ ಕಳುಹಿಸಲಾಗುತ್ತದೆ, ಯಾರು ಅರ್ಹರು?. ಈ ಬಗ್ಗೆ ಇಲ್ಲಿದೆ ವಿವರ ಮುಂದೆ ಓದಿ....

ಏನಿದು ಅನ್ನ ಸುವಿಧ ಯೋಜನೆ, ಯಾರು ಅರ್ಹರು?
90 ವರ್ಷ ಮತ್ತು ಮೇಲ್ಪಟ್ಟ ಫಲಾನುಭವಿಗಳಿಗೆ ಸಹಾಯವನ್ನು ಮಾಡುವ ನಿಟ್ಟಿನಲ್ಲಿ ಸರ್ಕಾರವು ಈ ಯೋಜನೆಯನ್ನು ಆರಂಭ ಮಾಡಿದೆ. 'ಅನ್ನ ಸುವಿಧ' ಯೋಜನೆ ಮೂಲಕ ವಯಸ್ಸಾದವರಿಗೆ ಶೀಘ್ರದಲ್ಲೇ ಅವರ ಮನೆ ಬಾಗಿಲಿಗೆ ಅನ್ನ ಭಾಗ್ಯದ ಅಡಿಯಲ್ಲಿ ಅಕ್ಕಿ ವಿತರಣೆಯನ್ನು ಮಾಡಲಾಗುತ್ತದೆ. ಈ ಬಗ್ಗೆ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಕೆ.ಎಚ್. ಮುನಿಯಪ್ಪ ಮಾಹಿತಿ ನೀಡಿದ್ದಾರೆ.
80,000 ವೃದ್ಧ ಫಲಾನುಭವಿಗಳು
ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಕೆ.ಎಚ್. ಮುನಿಯಪ್ಪ ಪಡಿತರವನ್ನು ಮನೆಗೆ ತಲುಪಿಸಲು ಬಯಸುವವರು ಸೌಲಭ್ಯವನ್ನು ಪಡೆದು ಆನ್‌ಲೈನ್‌ನಲ್ಲಿ ನೋಂದಾಯಿಸಲು ತಿಳಿಸಲಾಗಿದೆ ಎಂದಿದ್ದಾರೆ. ನಮ್ಮ ಡೇಟಾ ಪ್ರಕಾರ ಸುಮಾರು 80,000 ವೃದ್ಧ ಫಲಾನುಭವಿಗಳು ಸೌಲಭ್ಯಕ್ಕೆ ಅರ್ಹರಾಗಿದ್ದಾರೆ ಎಂದು ಸಚಿವರು ತಿಳಿಸಿದರು.
ದೈಹಿಕ ವಿಕಲಚೇತನರಿಗೂ ಯೋಜನೆ ವಿಸ್ತರಣೆ?
"ಈಗ 90 ವರ್ಷ ಮೇಲ್ಪಟ್ಟ ಫಲಾನುಭವಿಗಳು ನ್ಯಾಯಬೆಲೆ ಅಂಗಡಿಗಳಿಗೆ ತಲುಪಲು ಸಾಧ್ಯವಾಗದೆ ಈ ಯೋಜನೆಯ ಅಕ್ಕಿಯಿಂದ ವಂಚಿತರಾಗದಂತೆ ಮನೆ ಬಾಗಿಲಿಗೆ ಅಕ್ಕಿಯನ್ನು ತಲುಪಿಸಲು ನಾವು ಮುಂದಾಗಿದ್ದೇವೆ. ಅಗತ್ಯವಿದ್ದರೆ, ದೈಹಿಕ ವಿಕಲಚೇತನರಂತಹ ಇತರ ಫಲಾನುಭವಿಗಳಿಗೂ ಈ ಯೋಜನೆ ವಿಸ್ತರಿಸಲಾಗುತ್ತದೆ," ಎಂದು ಹೇಳಿದರು.
ಅಂತವರ ಮನೆ ಬಾಗಿಲಿಗೆ ಪಡಿತರ ಪೂರೈಕೆ ಮಾಡಲು ಆಹಾರ ಇಲಾಖೆಯಿಂದ ಹೊಸ ಆಪ್ ಅನ್ನು ಅಭಿವೃದ್ದಿಪಡಿಸುತ್ತಿದೆ. ಈ ಆಪ್ ನ ಮೂಲಕ ನವೆಂಬರ್‌ನಿಂದ 90 ವರ್ಷ ಮೇಲ್ಪಟ್ಟವರು ಮನೆ ಬಾಗಿಲಲ್ಲಿಯೇ ಪಡಿತರನ್ನು ಪಡೆಯಬಹುದಾಗಿದೆ ಎಂದು ಈ ಹಿಂದೆ ವರದಿಯಾಗಿತ್ತು.
ಆದರೆ ಪ್ರತಿ ಮನೆಗೆ 50 ರೂಪಾಯಿ ಡೆಲಿವರಿ ಶುಲ್ಕದ ಬಗ್ಗೆಯೂ ವರದಿಯಾಗಿದೆ. ನ್ಯಾಯಬೆಲೆ ಅಂಗಡಿ ಮಾಲೀಕರಿಗೆ ಕಮಿಷನ್ ನೀಡುವ ಉದ್ದೇಶದಿಂದ ಶುಲ್ಕ ನಿಗದಿ ಮಾಡಲು ಸರ್ಕಾರ ಮುಂದಾಗಿದೆ ಎಂದು ವರದಿ ಉಲ್ಲೇಖಿಸಿದೆ.


Click it and Unblock the Notifications