ಆಕ್ಸಿಸ್ ಬ್ಯಾಂಕ್ ಸೋಮವಾರ 2 ಕೋಟಿ ರೂಪಾಯಿಗಿಂತ ಕಡಿಮೆ ಮೌಲ್ಯದ ಫಿಕ್ಸಿಡ್ ಡೆಪಾಸಿಟ್‌ಗಳ (ಎಫ್‌ಡಿ) ಮೇಲಿನ ಬಡ್ಡಿದರಗಳ ಪರಿಷ್ಕರಣೆಯನ್ನು ಪ್ರಕಟಿಸಿದೆ. ಪರಿಷ್ಕರಣೆಯ ನಂತರ, ಬ್ಯಾಂಕ್ ಈಗ ಸಾಮಾನ್ಯ ನಾಗರಿಕರಿಗೆ ಶೇಕಡ 3.50 ರಿಂದ ಶೇಕಡ 7.00 ರವರೆಗೆ, ಹಿರಿಯ ನಾಗರಿಕರಿಗೆ ಶೇಕಡ 6.00 ರಿಂದ ಶೇಕಡ 7.75 ರವರೆಗೆ ಬಡ್ಡಿದರ ಲಭ್ಯವಾಗುತ್ತದೆ.
13 ತಿಂಗಳಿನಿಂದ 30 ತಿಂಗಳುಗಳಲ್ಲಿ ಮೆಚ್ಯೂರಿಟಿ ಹೊಂದುವ ಫಿಕ್ಸಿಡ್ ಡೆಪಾಸಿಟ್‌ಗಳ ಮೇಲೆ ಆಕ್ಸಿಸ್ ಬ್ಯಾಂಕ್ ಈಗ ಸಾಮಾನ್ಯ ಜನರಿಗೆ ಶೇಕಡ 7.10 ರಷ್ಟು ಮತ್ತು ಹಿರಿಯ ನಾಗರಿಕರಿಗೆ ಶೇಕಡ 7.85 ರಷ್ಟು ಬಡ್ಡಿದರವನ್ನು ನೀಡುತ್ತದೆ. ಬ್ಯಾಂಕಿನ ಅಧಿಕೃತ ವೆಬ್‌ಸೈಟ್‌ನ ಪ್ರಕಾರ, ಈ ನೂತನ ಪರಿಷ್ಕೃತ ಫಿಕ್ಸಿಡ್ ಡೆಪಾಸಿಟ್ ಬಡ್ಡಿದರವು 28 ಆಗಸ್ಟ್ 2023 ರಿಂದ ಜಾರಿಗೆ ಬರುತ್ತವೆ.

ಆಕ್ಸಿಸ್ ಬ್ಯಾಂಕ್ ಎಫ್‌ಡಿ ದರಗಳು
7 ದಿನಗಳಿಂದ 45 ದಿನಗಳ ಅವಧಿಯಲ್ಲಿ ಮೆಚ್ಯೂರಿಟಿ ಹೊಂದುವ ಫಿಕ್ಸಿಡ್ ಡೆಪಾಸಿಟ್‌ಗಳ ಮೇಲೆ ಬ್ಯಾಂಕ್ ಪ್ರಸ್ತುತ ಶೇಕಡ 3.50 ರಷ್ಟು ಬಡ್ಡಿದರವನ್ನು ನೀಡುತ್ತದೆ. ಆದರೆ ಆಕ್ಸಿಸ್ ಬ್ಯಾಂಕ್ ಮುಂದಿನ 46 ದಿನಗಳಿಂದ 60 ದಿನಗಳಲ್ಲಿ ಮೆಚ್ಯೂರಿಟಿ ಹೊಂದುವ ಫಿಕ್ಸಿಡ್ ಡೆಪಾಸಿಟ್‌ಗಳ ಮೇಲೆ ಶೇಕಡ 4.00 ರಷ್ಟು ಬಡ್ಡಿದರವನ್ನು ನೀಡಲಾಗುತ್ತದೆ.
ಪ್ರಸ್ತುತ, ಆಕ್ಸಿಸ್ ಬ್ಯಾಂಕ್ 61 ದಿನಗಳಿಂದ ಮೂರು ತಿಂಗಳ ಅವಧಿಯಲ್ಲಿ ಮೆಚ್ಯೂರಿಟಿ ಹೊಂದುವ ಎಫ್‌ಡಿ ಮೇಲೆ ಶೇಕಡ 4.50ರಷ್ಟು, ಮೂರು ತಿಂಗಳಿಂದ ಆರು ತಿಂಗಳ ಅವಧಿಯಲ್ಲಿ ಮೆಚ್ಯೂರಿಟಿ ಹೊಂದುವ ಎಫ್‌ಡಿ ಮೇಲೆ ಶೇಕಡ 4.75ರಷ್ಟು ಬಡ್ಡಿದರವನ್ನು ನೀಡಲಾಗುತ್ತದೆ. 6 ರಿಂದ 9 ತಿಂಗಳುಗಳ ಅವಧಿಯ ಎಫ್‌ಡಿ ಮೇಲೆ ಶೇಕಡ 5.75 ರಷ್ಟು, 9 ರಿಂದ 12 ತಿಂಗಳುಗಳ ಎಫ್‌ಡಿ ಮೇಲೆ ಶೇಕಡ 6 ರಷ್ಟು ಬಡ್ಡಿದರ ನೀಡಲಾಗುತ್ತದೆ.
ಆಕ್ಸಿಸ್ ಬ್ಯಾಂಕ್‌ನಲ್ಲಿ ಎಫ್‌ಡಿ ಖಾತೆಯನ್ನು ತೆರೆಯಲು ಬಯಸುವವರು ಆನ್‌ಲೈನ್ ಅಥವಾ ಮೊಬೈಲ್ ಅಪ್ಲಿಕೇಶನ್ ಬಳಸಿ ಮಾಡಿದರೆ ಕನಿಷ್ಠ ಡೆಪಾಸಿಟ್ 5000 ರೂಪಾಯಿ ಆಗಿದೆ. ಬ್ಯಾಂಕ್ ಶಾಖೆಯಲ್ಲಿ ವೈಯಕ್ತಿಕವಾಗಿ ಹೂಡಿಕೆ ಮಾಡಿದರೆ ಕನಿಷ್ಠ ಡೆಪಾಸಿಟ್ 10,000 ರೂಪಾಯಿ ಆಗಿದೆ. ನಿಮ್ಮ ಹಣಕಾಸಿನ ಅಗತ್ಯಗಳನ್ನು ಅವಲಂಬಿಸಿ, ಮಾಸಿಕ, ತ್ರೈಮಾಸಿಕ ಅಥವಾ ಮೆಚ್ಯೂರಿಟಿ ಸಂದರ್ಭದಲ್ಲಿ ಬಡ್ಡಿದರದ ಆಯ್ಕೆಯನ್ನು ನೀವು ಮಾಡಬಹುದಾಗಿದೆ.
ನೂತನ ಬಡ್ಡಿದರ ಇಲ್ಲಿ ಪರಿಶೀಲಿಸಿ
1. 7-14 ದಿನ: ಸಾಮಾನ್ಯ ನಾಗರಿಕರು ಶೇಕಡ 3.50
2. 15-29 ದಿನ: ಸಾಮಾನ್ಯ ನಾಗರಿಕರು ಶೇಕಡ 3.50
3. 30-45 ದಿನ: ಸಾಮಾನ್ಯ ನಾಗರಿಕರು ಶೇಕಡ 3.50
4. 46-60 ದಿನ: ಸಾಮಾನ್ಯ ನಾಗರಿಕರು ಶೇಕಡ 4.00
5. 61 ದಿನದಿಂದ 3 ತಿಂಗಳಿಗಿಂತ ಕಡಿಮೆ: ಸಾಮಾನ್ಯ ನಾಗರಿಕರು ಶೇಕಡ 4.50
6. 3 ತಿಂಗಳಿನಿಂದ 4 ತಿಂಗಳಿಗಿಂತ ಕಡಿಮೆ ಅವಧಿ: ಸಾಮಾನ್ಯ ನಾಗರಿಕರು ಶೇಕಡ 4.75
7. 4 ತಿಂಗಳಿನಿಂದ 5 ತಿಂಗಳಿಗಿಂತ ಕಡಿಮೆ ಅವಧಿ: ಸಾಮಾನ್ಯ ನಾಗರಿಕರು ಶೇಕಡ 4.75
8. 5 ತಿಂಗಳಿನಿಂದ 6 ತಿಂಗಳಿಗಿಂತ ಕಡಿಮೆ ಅವಧಿ: ಸಾಮಾನ್ಯ ನಾಗರಿಕರು ಶೇಕಡ 4.75
9. 6 ತಿಂಗಳಿನಿಂದ 7 ತಿಂಗಳಿಗಿಂತ ಕಡಿಮೆ ಅವಧಿ: ಸಾಮಾನ್ಯ ನಾಗರಿಕರು ಶೇಕಡ 5.75
10. 7 ತಿಂಗಳಿನಿಂದ 8 ತಿಂಗಳಿಗಿಂತ ಕಡಿಮೆ ಅವಧಿ: ಸಾಮಾನ್ಯ ನಾಗರಿಕರು ಶೇಕಡ 5.75
11. 8 ತಿಂಗಳಿನಿಂದ 9 ತಿಂಗಳಿಗಿಂತ ಕಡಿಮೆ ಅವಧಿ: ಸಾಮಾನ್ಯ ನಾಗರಿಕರು ಶೇಕಡ 5.75
12. 9 ತಿಂಗಳಿನಿಂದ 10 ತಿಂಗಳಿಗಿಂತ ಕಡಿಮೆ ಅವಧಿ: ಸಾಮಾನ್ಯ ನಾಗರಿಕರು ಶೇಕಡ 6.00
13. 10 ತಿಂಗಳಿನಿಂದ 11 ತಿಂಗಳಿಗಿಂತ ಕಡಿಮೆ ಅವಧಿ: ಸಾಮಾನ್ಯ ನಾಗರಿಕರು ಶೇಕಡ 6.00
14. 11 ತಿಂಗಳಿನಿಂದ 11 ತಿಂಗಳು 25 ದಿನಕ್ಕಿಂತ ಕಡಿಮೆ ಅವಧಿ: ಸಾಮಾನ್ಯ ನಾಗರಿಕರು ಶೇಕಡ 6.00
15. 11 ತಿಂಗಳು 25 ದಿನದಿಂದ 1 ವರ್ಷಕ್ಕಿಂತ ಕಡಿಮೆ ಅವಧಿ: ಸಾಮಾನ್ಯ ನಾಗರಿಕರು ಶೇಕಡ 6.00
16. 1 ವರ್ಷದಿಂದ 1 ವರ್ಷ 4 ದಿನಗಳಿಗಿಂತ ಕಡಿಮೆ: ಸಾಮಾನ್ಯ ನಾಗರಿಕರು ಶೇಕಡ 6.75
17. 1 ವರ್ಷ 5 ದಿನದಿಂದ 1 ವರ್ಷ 10 ದಿನಕ್ಕಿಂತ ಕಡಿಮೆ: ಸಾಮಾನ್ಯ ನಾಗರಿಕರು ಶೇಕಡ 6.80
18. 1 ವರ್ಷ 11 ದಿನದಿಂದ 1 ವರ್ಷ 24 ದಿನಕ್ಕಿಂತ ಕಡಿಮೆ: ಸಾಮಾನ್ಯ ನಾಗರಿಕರು ಶೇಕಡ 6.80
19. 1 ವರ್ಷ 25 ದಿನದಿಂದ 13 ತಿಂಗಳಿಗಿಂತ ಕಡಿಮೆ ಅವಧಿ: ಸಾಮಾನ್ಯ ನಾಗರಿಕರು ಶೇಕಡ 6.80
20. 13 ತಿಂಗಳಿನಿಂದ 14 ತಿಂಗಳಿಗೂ ಕಡಿಮೆ ಅವಧಿ: ಸಾಮಾನ್ಯ ನಾಗರಿಕರು ಶೇಕಡ 7.10
21. 14 ತಿಂಗಳಿನಿಂದ 15 ತಿಂಗಳಿಗೂ ಕಡಿಮೆ ಅವಧಿ: ಸಾಮಾನ್ಯ ನಾಗರಿಕರು ಶೇಕಡ 7.10
22. 15 ತಿಂಗಳಿನಿಂದ 16 ತಿಂಗಳವರೆಗಿನ ಅವಧಿ: ಸಾಮಾನ್ಯ ನಾಗರಿಕರು ಶೇಕಡ 7.10
23. 16 ತಿಂಗಳಿನಿಂದ 17 ತಿಂಗಳಿಗಿಂತ ಕಡಿಮೆ ಅವಧಿ: ಸಾಮಾನ್ಯ ನಾಗರಿಕರು ಶೇಕಡ 7.10
24. 17 ತಿಂಗಳಿನಿಂದ 18 ತಿಂಗಳಿಗಿಂತ ಕಡಿಮೆ ಅವಧಿ: ಸಾಮಾನ್ಯ ನಾಗರಿಕರು ಶೇಕಡ 7.10
25. 18 ತಿಂಗಳಿನಿಂದ 19 ತಿಂಗಳಿಗಿಂತ ಕಡಿಮೆ ಅವಧಿ: ಸಾಮಾನ್ಯ ನಾಗರಿಕರು ಶೇಕಡ 7.10
26. 2 ವರ್ಷದಿಂದ 30 ತಿಂಗಳಿಗೂ ಕಡಿಮೆ ಅವಧಿ: ಸಾಮಾನ್ಯ ನಾಗರಿಕರು ಶೇಕಡ 7.10
27. 30 ತಿಂಗಳಿನಿಂದ 3 ವರ್ಷಕ್ಕೂ ಕಡಿಮೆ ಅವಧಿ: ಸಾಮಾನ್ಯ ನಾಗರಿಕರು ಶೇಕಡ 7.00
28. 3 ವರ್ಷದಿಂದ 5 ವರ್ಷಕ್ಕೂ ಕಡಿಮೆ ಅವಧಿ: ಸಾಮಾನ್ಯ ನಾಗರಿಕರು ಶೇಕಡ 7.00
29. 5-10 ವರ್ಷ: ಸಾಮಾನ್ಯ ನಾಗರಿಕರು ಶೇಕಡ 7.00


Click it and Unblock the Notifications