ಬಜಾಜ್ ಹೌಸಿಂಗ್ ಫೈನಾನ್ಸ್ ಅತೀ ಮಹತ್ತರವಾದ ನಿರ್ಧಾರವನ್ನು ಕೈಗೊಂಡಿದ್ದು, ಗೃಹ ಸಾಲದ ಗರಿಷ್ಠ ಅವಧಿಯನ್ನು ವಿಸ್ತರಣೆ ಮಾಡಿದೆ. ವೇತನ ಪಡೆಯುವ ಉದ್ಯೋಗಿಗಳಿಗೆ ಬಜಾಜ್ ಹೌಸಿಂಗ್ ಫೈನಾನ್ಸ್ ಪ್ರಸ್ತುತ ಗೃಹ ಸಾಲದ ಅವಧಿಯನ್ನು 40 ವರ್ಷಕ್ಕೆ ಏರಿಕೆ ಮಾಡಿದೆ. ಅಂದರೆ ಈ ಹಿಂದಿಗಿಂತ ಅಧಿಕ ಅವಧಿಯು ಸಾಲ ಮರುಪಾವತಿ ಮಾಡಲು ಇದೆ.
ಈ ಹಿಂದೆ ಬಜಾಜ್ ಹೌಸಿಂಗ್ ಫೈನಾನ್ಸ್‌ನಲ್ಲಿ ಗೃಹ ಸಾಲವನ್ನು ಮರುಪಾವತಿ ಮಾಡಲು 30 ವರ್ಷಗಳ ಅವಧಿ ಇತ್ತು. ಆದರೆ ಈಗ ಗೃಹ ಸಾಲ ಮರುಪಾವತಿ ಮಾಡುವ ಅವಧಿಯನ್ನು 40 ವರ್ಷಕ್ಕೆ ಏರಿಕೆ ಮಾಡಿರುವುದರಿಂದ ನೀವು ಹೆಚ್ಚುವರಿಯಾಗಿ 10 ವರ್ಷಗಳ ಅವಧಿಯನ್ನು ಪಡೆಯಬಹುದಾಗಿದೆ. ಈ ಬಗ್ಗೆ ಅಧಿಕ ಮಾಹಿತಿ ಇಲ್ಲಿದೆ ಮುಂದೆ ಓದಿ.....

ಗೃಹ ಸಾಲದ ಅರ್ಜಿಯ ಸಮಯದಲ್ಲಿ ಅರ್ಜಿದಾರರ ವಯಸ್ಸಿನ ಆಧಾರದ ಮೇಲೆ, ಬಜಾಜ್ ಹೌಸಿಂಗ್ ಫೈನಾನ್ಸ್ ಟೆನ್ಯೂರ್ ಅನ್ನು ಬದಲಾವಣೆ ಮಾಡಿದೆ. ಬಜಾಜ್ ಹೌಸಿಂಗ್ ಫೈನಾನ್ಸ್‌ನಲ್ಲಿ ಗೃಹ ಸಾಲ ಪಡೆಯಬಹುದಾದ ಅರ್ಹತೆಯ ವಯಸ್ಸು 23 ರಿಂದ 75 ವರ್ಷಗಳು ಆಗಿದೆ. 75 ವರ್ಷಗಳು ಸಾಲ ಮುಕ್ತಾಯದ ಗರಿಷ್ಠ ವಯಸ್ಸು ಆಗಿದೆ.
ವರದಿಯ ಪ್ರಕಾರ 40-ವರ್ಷಗಳ ಗೃಹ ಸಾಲದ ಅವಧಿಯನ್ನು ಆಧರಿಸಿ ಈಗ ಮಾಸಿಕ ಪಾವತಿ (ಇಎಂಐ) ಪ್ರತಿ ಒಂದು ಲಕ್ಷಕ್ಕೆ 733 ರೂಪಾಯಿ ಆಗಿದೆ. ವಾರ್ಷಿಕ ಬಡ್ಡಿ ದರ ಶೇಕಡ 8.5ರಷ್ಟಿದೆ. ಗೃಹ ಸಾಲವು ವೇತನ ಪಡೆಯುವ ಜನರು ಮತ್ತು ವೃತ್ತಿಪರರಿಗೆ ವಾರ್ಷಿಕವಾಗಿ ಕೇವಲ ಶೇಕಡ 8.5ರಷ್ಟು ಬಡ್ಡಿದರದಲ್ಲಿ ನೀಡಲಾಗುವ ಸಾಲವಾಗಿದೆ. ಇದು ರೆಪೋ ದರ ಆಧಾರಿತ ಬಡ್ಡಿದರದೊಂದಿಗೆ ಲಿಂಕ್ ಮಾಡಿಕೊಳ್ಳುವ ಆಯ್ಕೆಯನ್ನು ಕೂಡಾ ಹೊಂದಿದೆ.
ಇಎಂಐ ಮೇಲೆ ಏನು ಪ್ರಭಾವ ಉಂಟಾಗಲಿದೆ?
ಬಜಾಜ್ ಹೌಸಿಂಗ್ ಫೈನಾನ್ಸ್ ಗೃಹ ಸಾಲದ ಅವಧಿಯನ್ನು ಹೆಚ್ಚಳಗೊಳಿಸಿದ ಬಳಿಕ ಗೃಹ ಸಾಲದ ಇಎಂಐ ಮೇಲೆ ಏನು ಪ್ರಭಾವ ಉಂಟಾಗಲಿದೆ ಎಂಬ ಬಗ್ಗೆ ಬ್ಯಾಂಕ್‌ಬಜಾರ್ ಡಾಟ್ ಕಾಮ್‌ನ ಸಿಇಒ ಆದಿಲ್ ಶೆಟ್ಟಿ ಪ್ರತಿಕ್ರಿಯೆ ನೀಡಿದ್ದಾರೆ. "ಹೆಚ್ಚಿನ ಅವಧಿ ಎಂದರೆ ಸಾಲಗಾರರು ಆದಾಯ ಅನುಪಾತಕ್ಕೆ (ಎಫ್‌ಐಆರ್) ತಮ್ಮ ನಿಶ್ಚಿತ ಬಾಧ್ಯತೆಯ ಮೇಲೆ ಪರಿಣಾಮ ಬೀರದೆ ದೊಡ್ಡ ಮೊತ್ತವನ್ನು ಸಾಲವಾಗಿ ಪಡೆಯಲು ಸಾಧ್ಯವಾಗುತ್ತದೆ," ಎಂದು ತಿಳಿಸಿದ್ದಾರೆ.
ವರದಿಯಲ್ಲಿನ ಲೆಕ್ಕಾಚಾರಗಳ ಪ್ರಕಾರ, ಸಾಲದ ಅವಧಿಯನ್ನು 40 ವರ್ಷಗಳವರೆಗೆ ವಿಸ್ತರಿಸಿದರೆ, ಅದರಿಂದಾಗಿ ಸಾಲ ಮರುಪಾವತಿ ಹೊರೆಯು ಕಡಿಮೆಯಾಗುತ್ತದೆ. ಇಎಂಐ ಅವಧಿ ಅಧಿಕವಾಗುವುದರಿಂದ ಪ್ರತಿ ಇಎಂಐ ಮೊತ್ತವು ಕಡಿಮೆಯಾಗುತ್ತದೆ. ಉದಾಹರಣೆಗೆ, 40 ವರ್ಷಗಳ ಸಾಲಕ್ಕೆ ಪ್ರತಿ ಲಕ್ಷಕ್ಕೆ ಶೇಕಡ 8.5 ರ ಬಡ್ಡಿ ದರವಿದ್ದರೆ, 30 ವರ್ಷಗಳ ಸಾಲಕ್ಕೆ ಪ್ರತಿ ಲಕ್ಷಕ್ಕೆ ಶೇಕಡ 5ರಷ್ಟು ಬಡ್ಡಿದರ ಕಡಿಮೆಯಾಗುತ್ತದೆ.
ಎಫ್‌ಒಐಆರ್ ಎಂದರೇನು, ಇಎಂಐ ಮೇಲೆ ಹೇಗೆ ಪ್ರಭಾವ ಬೀರುತ್ತದೆ?
ಎಫ್‌ಒಐಆರ್ ಎಂದರೆ ಸ್ಥಿರ ಆದಾಯ ಬಾಧ್ಯತೆ ಅನುಪಾತವಾಗಿದೆ. ಇದು ಮಾಸಿಕ ಆದಾಯದಿಂದ ನೀವು ಮಾಸಿಕವಾಗಿ ಮಾಡಲಾಗುವ ನಿಗದಿತ ಹಣವಾಗಿದೆ. ಅರ್ಜಿದಾರರ ನಿಗದಿತ ಮಾಸಿಕ ಅಗತ್ಯವನ್ನು ಪೂರೈಸಿದಾಗ ಸಾಲದಾತರು ಸಾಮಾನ್ಯವಾಗಿ ಇಎಂಐ ಅನ್ನು ಪಾವತಿಸಲು ಪರಿಗಣನೆ ಮಾಡುತ್ತಾರೆ. ನಾವು ಇದನ್ನು ತಿಳಿಯಲು ಉದಾಹರಣೆಯನ್ನು ನೋಡೋಣ:
ನಿಮ್ಮ ಮಾಸಿಕ ವೇತನ 70,000 ರೂಪಾಯಿ ಎಂದುಕೊಳ್ಳಿ. ನೀವು ಮಾಸಿಕವಾಗಿ 20 ಸಾವಿರ ರೂಪಾಯಿ ಇಎಂಐ ಅನ್ನು ಹೊಂದಿರುವ ಗೃಹ ಸಾಲಕ್ಕೆ ಅರ್ಜಿ ಸಲ್ಲಿಸುತ್ತಿದ್ದೀರಿ ಎಂದು ಕೊಳ್ಳಿ. ಉಳಿದಂತೆ ನಿಮ್ಮ ಮಾಸಿಕ ಖರ್ಚಾಗಿ ಉಳಿಯುವ ಮೊತ್ತ 30,000 ರೂಪಾಯಿ ಎಂದುಕೊಳ್ಳಿ ( ಗೃಹ ಸಾಲದ ಇಎಂಐ ಸೇರ್ಪಡೆಯಾಗಿ), ಹಾಗಿದ್ದಾಗ ನಿಮ್ಮ ಎಫ್‌ಒಐಆರ್ 20000/70,000 × 100 = ಶೇಕಡ 42.85 ಆಗಿರುತ್ತದೆ.


Click it and Unblock the Notifications