ಪ್ರಸ್ತುತ ಕೇಂದ್ರ ಸರ್ಕಾರವು 'ಬೇಟಿ ಬಚಾವೋ-ಬೇಟಿ ಪಡಾವೋ' ಅಭಿಯಾನವನ್ನು ನಡೆಸುತ್ತಿದೆ. ಈ ಅಭಿಯಾನವನ್ನು ಹಲವಾರು ವರ್ಷಗಳಿಂದ ಚಾಲನೆಯಲ್ಲಿದೆ. ಹೆಣ್ಣು ಮಕ್ಕಳ ಸುರಕ್ಷತೆ ಮತ್ತು ಶಿಕ್ಷಣವನ್ನು ಖಚಿತಪಡಿಸುವುದು ಈ ಯೋಜನೆಯ ಪ್ರಮುಖ ಉದ್ದೇಶವಾಗಿದೆ. ಆದರೆ ಕೇಂದ್ರ ಸರ್ಕಾರದ ಈ ಯೋಜನೆಗೂ ಮುನ್ನವೇ ಇದ್ದ ಹೆಣ್ಣು ಮಕ್ಕಳಿಗೆ ಸಂಬಂಧಿತ ಯೋಜನೆಗಳ ಬಗ್ಗೆ ನಿಮಗೆ ತಿಳಿದಿದೆಯೇ?
ಹೆಣ್ಣುಮಕ್ಕಳಿಗೆ ಹುಟ್ಟಿನಿಂದ ಅವರ ವಿದ್ಯಾಭ್ಯಾಸದವರೆಗೆ ಆರ್ಥಿಕ ನೆರವು ನೀಡುವ ಯೋಜನೆಯೊಂದು ಮೋದಿ ಸರ್ಕಾರ ಬರುವುದಕ್ಕೂ ಮುನ್ನವೇ ದೇಶದಲ್ಲಿ ಜಾರಿಯಲ್ಲಿದೆ. 1997 ರಲ್ಲಿ ಆಡಳಿತ ನಡೆಸುತ್ತಿದ್ದ ಸರ್ಕಾರವು 'ಬಾಲಿಕಾ ಸಮೃದ್ಧಿ ಯೋಜನೆ' (ಹೆಣ್ಣು ಮಕ್ಕಳ ಸಮೃದ್ಧಿ ಯೋಜನೆ) ಪರಿಚಯಿಸಿದೆ. ಈ ಯೋಜನೆಯು ಹೆಣ್ಣುಮಕ್ಕಳಿಗೆ ಹುಟ್ಟಿನಿಂದ ಅವರ ಶಿಕ್ಷಣದವರೆಗೆ ಆರ್ಥಿಕ ಸಹಾಯವನ್ನು ನೀಡುತ್ತದೆ.

ಬಾಲಿಕಾ ಸಮೃದ್ಧಿ ಯೋಜನೆ ಬಗ್ಗೆ ತಿಳಿಯಿರಿ
ಬಾಲಿಕಾ ಸಮೃದ್ಧಿ ಯೋಜನೆ ಅಡಿಯಲ್ಲಿ ಆರಂಭದಲ್ಲಿ, ಹೆಣ್ಣು ಮಗು ಜನಿಸಿದ ನಂತರ, ತಾಯಿಗೆ 500 ರೂಪಾಯಿ ಆರ್ಥಿಕ ನೆರವು ಸಿಗುತ್ತದೆ. ಅದಾದ ಬಳಿಕ 10 ನೇ ತರಗತಿವರೆಗೆ ಬಾಲಕಿಯ ಶಿಕ್ಷಣದ ಪ್ರತಿ ಹಂತದಲ್ಲೂ ಸರ್ಕಾರವು ಆರ್ಥಿಕ ನೆರವು ನೀಡುತ್ತದೆ. ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಬಡತನ ರೇಖೆಗಿಂತ ಕೆಳಕ್ಕೆ ಇರುವ (ಬಿಪಿಎಲ್) ಕುಟುಂಬಗಳಿಗೆ ಅನುಕೂಲವಾಗುವಂತೆ ಈ ಯೋಜನೆಯನ್ನು ಆರಂಭ ಮಾಡಲಾಗಿದೆ.
ಯಾವೆಲ್ಲ ದಾಖಲೆಗಳು ಬೇಕಾಗುತ್ತದೆ?
ಪ್ರತಿ ಕುಟುಂಬವು ಗರಿಷ್ಠ ಇಬ್ಬರು ಹೆಣ್ಣು ಮಕ್ಕಳಿಗೆ ಈ ಯೋಜನೆಯನ್ನು ಪಡೆಯಬಹುದು. ಬಾಲಿಕಾ ಸಮೃದ್ಧಿ ಯೋಜನೆಗೆ ಅರ್ಜಿ ಸಲ್ಲಿಸಲು ಅಗತ್ಯವಿರುವ ದಾಖಲೆಗಳಲ್ಲಿ ಹೆಣ್ಣು ಮಗುವಿನ ಜನನ ಪ್ರಮಾಣಪತ್ರ, ಪೋಷಕರ ವಾಸಸ್ಥಳ ಮತ್ತು ಪೋಷಕರು ಅಥವಾ ಸಂಬಂಧಿಕರ ಗುರುತಿನ ಪುರಾವೆಗಳು ಸೇರಿವೆ. ಪಡಿತರ ಕಾರ್ಡ್, ಆಧಾರ್ ಕಾರ್ಡ್ ಅಥವಾ ಬ್ಯಾಂಕ್ ಖಾತೆಯ ಪಾಸ್‌ಬುಕ್ ಅನ್ನು ಗುರುತಿನ ಪುರಾವೆಗಳಾಗಿ ಪಡೆಯಲಾಗುತ್ತದೆ.
ಬಾಲಿಕಾ ಸಮೃದ್ಧಿ ಯೋಜನೆಗೆ ಅರ್ಜಿ ಸಲ್ಲಿಸಲು, ನೀವು ಆನ್‌ಲೈನ್ ಅಥವಾ ಆಫ್‌ಲೈನ್‌ನಲ್ಲಿ ಅರ್ಜಿಯನ್ನು ಸಲ್ಲಿಸಬಹುದು. ಆಫ್‌ಲೈನ್ ಅರ್ಜಿಗಳನ್ನು ಅಂಗನವಾಡಿ ಕಾರ್ಯಕರ್ತೆಯರು ಮತ್ತು ಆರೋಗ್ಯ ಸೇವಾ ಕೇಂದ್ರಗಳಿಂದ ಪಡೆಯಬಹುದು. ಆನ್‌ಲೈನ್ ಅರ್ಜಿ ಸಲ್ಲಿಸಲು ಇಂಟರ್‌ನೆಟ್ ಮೂಲಕ ಆನ್‌ಲೈನ್ ಫಾರ್ಮ್ ಅನ್ನು ಭರ್ತಿ ಮಾಡಿ ಸಲ್ಲಿಸುವ ಅಗತ್ಯವಿದೆ. ಗ್ರಾಮೀಣ ಮತ್ತು ನಗರ ಫಲಾನುಭವಿಗಳಿಗೆ ಪ್ರತ್ಯೇಕ ನಮೂನೆಗಳನ್ನು ಒದಗಿಸಲಾಗಿದೆ. ಅಗತ್ಯವಿರುವ ಎಲ್ಲಾ ಮಾಹಿತಿಯನ್ನು ಒದಗಿಸಬೇಕು ಎಂಬುದನ್ನು ಗಮನಾರ್ಹ ವಿಚಾರವಾಗಿದೆ.
ಈ ಯೋಜನೆಯಡಿಯಲ್ಲಿ, ಕೇಂದ್ರ ಸರ್ಕಾರವು ಹೆಣ್ಣು ಮಗುವಿನ ಶಿಕ್ಷಣಕ್ಕಾಗಿ ವಾರ್ಷಿಕ ವಿದ್ಯಾರ್ಥಿವೇತನವನ್ನು ನೀಡುತ್ತದೆ. ಸ್ಕಾಲರ್‌ಶಿಪ್ ಮೊತ್ತವು ತರಗತಿಗೆ ಅನುಗುಣವಾಗಿ ಬದಲಾಗುತ್ತದೆ. ಒಂದರಿಂದ ಮೂರನೇ ತರಗತಿಯವರೆಗೆ 300 ರೂಪಾಯಿವರೆಗೆ ವಿದ್ಯಾರ್ಥಿ ವೇತನ ಅಥವಾ ಸ್ಕಾಲರ್‌ಶಿಪ್ ಅನ್ನು ನೀಡಲಾಗುತ್ತದೆ. ಆದರೆ ಅದಾದ ಬಳಿಕ ಕ್ರಮೇಣ ಏರಿಕೆಯಾಗುತ್ತದೆ. 9 ಮತ್ತು ಹತ್ತನೇ ತರಗತಿಯ ವಿದ್ಯಾರ್ಥಿಗಳಿಗೆ 1000 ರೂಪಾಯಿ ವಿದ್ಯಾರ್ಥಿ ವೇತನ ನೀಡಲಾಗುತ್ತದೆ.
ಬೇಟಿ ಬಚಾವೋ-ಬೇಟಿ ಪಢಾವೋ
ಬೇಟಿ ಬಚಾವೋ, ಬೇಟಿ ಪಢಾವೋ ( transl. ಮಗಳನ್ನು ಉಳಿಸಿ, ಮಗಳಿಗೆ ಶಿಕ್ಷಣ ನೀಡಿ) ಎಂಬುದು ಭಾರತ ಸರ್ಕಾರದಿಂದ ಪ್ರಾರಂಭವಾದ ಅಭಿಯಾನವಾಗಿದೆ. ಭಾರತದಲ್ಲಿ ಮಕ್ಕಳ ಲಿಂಗ ಅನುಪಾತವು ಅಪಾಯಕಾರಿ ದರದಲ್ಲಿ ಇಳಿಯುತ್ತಿದೆ. ಈ ನಿಟ್ಟಿನಲ್ಲಿ ಬೇಟಿ ಬಚಾವೋ, ಬೇಟಿ ಪಢಾವೋ (ಬಿಬಿಬಿಪಿ) ಯೋಜನೆಯನ್ನು 22 ಜನವರಿ 2015 ರಂದು ಕೇಂದ್ರ ಸರ್ಕಾರವು ಪ್ರಾರಂಭಿಸಿದೆ.
ದೇಶಾದ್ಯಂತ ಬೇಟಿ ಬಚಾವೋ ಬೇಟಿ ಪಢಾವೋ (ಬಿಬಿಬಿಪಿ) ಪ್ರಚಾರಕ್ಕಾಗಿ ಭಾರತ ಸರ್ಕಾರವು ರಾಷ್ಟ್ರೀಯ ಕಾರ್ಯಕಾರಿ ಸಮಿತಿಯನ್ನು ರಚಿಸಿದೆ. ಸಮಿತಿಯು ಜನವರಿ 2015 ರಿಂದ "ಹೆಣ್ಣು ಮಗುವನ್ನು ಉಳಿಸಿ" ಮತ್ತು "ಹೆಣ್ಣು ಮಗುವಿಗೆ ಶಿಕ್ಷಣ ನೀಡಲು" ಉತ್ತೇಜಿಸಲು ಹಲವಾರು ಕಾರ್ಯಕ್ರಮಗಳನ್ನು ಆಯೋಜಿಸುತ್ತಿದೆ.


Click it and Unblock the Notifications