ಹೂಡಿಕೆ ವಿಚಾರಕ್ಕೆ ಬರುವಾಗ ನಾವು ಎಂದಿಗೂ ಕೂಡಾ ಎಲ್ಲಿ ಹೂಡಿಕೆ ಮಾಡಿದರೆ ಅತೀ ಹೆಚ್ಚು ರಿಟರ್ನ್ ಪಡೆಯಲು ಸಾಧ್ಯ ಎಂದು ನೋಡುತ್ತೇವೆ. ಹಾಗೆಯೇ ಯಾವ ಹೂಡಿಕೆ ಹೆಚ್ಚು ಸುರಕ್ಷಿತ ಎಂದು ನೋಡುತ್ತೇವೆ. ಈ ವೇಳೆ ನಮ್ಮ ಮುಂದೆ ಬರುವ ಆಯ್ಕೆ ಬ್ಯಾಂಕ್‌ನ ಫಿಕ್ಸಿಡ್ ಡೆಪಾಸಿಟ್ (ಎಫ್‌ಡಿ) ಮತ್ತು ಸಣ್ಣ ಉಳಿತಾಯ ಯೋಜನೆಗಳು ಆಗಿದೆ. ವಿಮಾ ಸುರಕ್ಷತೆಯೊಂದಿಗಿನ ಹೂಡಿಕೆ ವಿಚಾರಕ್ಕೆ ಬಂದಾಗ ಎಲ್‌ಐಸಿ ನಮ್ಮ ಉತ್ತಮ ಆಯ್ಕೆ ಎಂದು ನಂಬಲಾಗುತ್ತದೆ. ಈ ನಡುವೆ ಈ ಸುರಕ್ಷತೆ ಹೂಡಿಕೆಯಿಂದ ನಾವು ಉತ್ತಮ ರಿಟರ್ನ್ ಪಡೆಯಲು ಸಾಧ್ಯವೇ ಎಂಬುವುದು ಪ್ರಶ್ನೆಯಾಗಿದೆ.
ಮೇ ತಿಂಗಳಿನಿಂದ ಎಫ್‌ಡಿ ಬಡ್ಡಿದರ ಏರಿಕೆಯಾಗುತ್ತಿದೆ. ಆರ್‌ಬಿಐ ರೆಪೋ ದರವನ್ನು ಒಟ್ಟು ಆರು ಬಾರಿ (250 ಬಿಪಿಎಸ್) ಏರಿಸಿದೆ. ಇದರಿಂದಾಗಿ ಎಫ್‌ಡಿ ದರವನ್ನು ಕೂಡಾ ಹೆಚ್ಚಳ ಮಾಡಲಾಗಿದೆ. ಇದರಿಂದಾಗಿ ಪ್ರಸ್ತುತ ಬ್ಯಾಂಕ್‌ನ ಫಿಕ್ಸಿಡ್ ಡೆಪಾಸಿಟ್‌ಗಳು ಹೆಚ್ಚು ಆಕರ್ಷಕವಾಗಿದೆ. ಈ ನಡುವೆ ಸರ್ಕಾರ ಶುಕ್ರವಾರ ಸಣ್ಣ ಉಳಿತಾಯ ಯೋಜನೆಗಳಾದ ಪಿಪಿಎಫ್, ಎನ್‌ಎಸ್‌ಸಿ, ಎಸ್‌ಎಸ್‌ವೈ, ಅಂಚೆ ಕಚೇರಿ ಹೂಡಿಕೆಯ ದರವನ್ನು ಕೂಡಾ ಏರಿಕೆ ಮಾಡಿದೆ. ಈ ನಡುವೆ ಎಫ್‌ಡಿ ಮತ್ತು ಸಣ್ಣ ಉಳಿತಾಯ ಯೋಜನೆ ಪೈಕಿ ಯಾವುದರದಲ್ಲಿ ಉತ್ತಮ ರಿಟರ್ನ್ ಪಡೆಯಲು ಸಾಧ್ಯವೆಂದು ತಿಳಿಯೋಣ ಮುಂದೆ ಓದಿ...

ಬ್ಯಾಂಕ್ ಫಿಕ್ಸಿಡ್ ಡೆಪಾಸಿಟ್
ಬ್ಯಾಂಕ್ ಫಿಕ್ಸಿಡ್ ಡೆಪಾಸಿಟ್ ಎಂದರೆ ಡೆಪಾಸಿಟ್‌ದಾರರು ತಮ್ಮ ಹಣವನ್ನು ಸ್ಥಿರ ಠೇವಣಿ ಇಡುವುದು ಆಗಿದೆ. ಇದು ಸುಮಾರು ಆರು ತಿಂಗಳ ಅವಧಿ, ಒಂದು ವರ್ಷದ ಅವಧಿ, ಮೂರು ವರ್ಷ, ಐದು ವರ್ಷ ಹೀಗೆ ಹಲವಾರು ವರ್ಷಗಳ ಅವಧಿಯನ್ನು ಹೊಂದಿರುತ್ತದೆ. ತಿಂಗಳುಗಳ ಅವಧಿಯನ್ನು ಕೂಡಾ ಹೊಂದಿರುತ್ತದೆ. ಬ್ಯಾಂಕ್ ಈ ಫಿಕ್ಸಿಡ್ ಡೆಪಾಸಿಟ್ ಮೇಲೆ ನಿಗಧಿತ ವಾರ್ಷಿಕ ಬಡ್ಡಿದರವನ್ನು ನೀಡುತ್ತದೆ. ಎಫ್‌ಡಿ ಅವಧಿ ಹಾಗೂ ಡೆಪಾಸಿಟ್‌ದಾರರ ವಯಸ್ಸಿಗೆ ಅನುಗುಣವಾಗಿ ಫಿಕ್ಸಿಡ್ ಡೆಪಾಸಿಟ್ ಬಡ್ಡಿದರವು ಬದಲಾವಣೆಯಾಗುತ್ತದೆ.
ಪ್ರಸ್ತುತ ಎಚ್‌ಡಿಎಫ್‌ಸಿ ಬ್ಯಾಂಕ್ ಸಾಮಾನ್ಯ ಜನರಿಗೆ ಫಿಕ್ಸಿಡ್ ಡೆಪಾಸಿಟ್ ಮೇಲೆ ಶೇಕಡ 7.1ರಷ್ಟು ಬಡ್ಡಿದರ ಹಾಗೂ ಹಿರಿಯ ನಾಗರಿಕರಿಗೆ ಶೇಕಡ 7.6ರಷ್ಟು ಬಡ್ಡಿದರವನ್ನು ವಿಧಿಸುತ್ತದೆ. ಇನ್ನು ಪಿಎನ್‌ಬಿ ಸಾಮಾನ್ಯ ನಾಗರಿಕರಿಗೆ ಶೇಕಡ 7.25ರಷ್ಟು ಹಾಗೂ ಹಿರಿಯ ನಾಗರಿಕರಿಗೆ ಶೇಕಡ 7.75ರಷ್ಟು ಬಡ್ಡಿದರವನ್ನು ನೀಡುತ್ತದೆ. ಐಸಿಐಸಿಐ ಬ್ಯಾಂಕ್ ಸಾಮಾನ್ಯ ನಾಗರಿಕರಿಗೆ ಶೇಕಡ 7.1ರಷ್ಟು ಹಾಗೂ ಹಿರಿಯ ನಾಗರಿಕರಿಗೆ ಶೇಕಡ 7.6ರಷ್ಟು ಬಡ್ಡಿದರವನ್ನು ನೀಡುತ್ತದೆ.
ಸಣ್ಣ ಉಳಿತಾಯ ಯೋಜನೆ
ಸಣ್ಣ ಉಳಿತಾಯ ಯೋಜನೆಗಳು ಸರ್ಕಾರವು ಜನರು ಸಣ್ಣ ಪ್ರಮಾಣದಲ್ಲಾದರೂ ಉಳಿತಾಯ ಮಾಡಲು ಸಾಧ್ಯವಾಗುವಂತೆ ರೂಪಿಸಿರುವ ಯೋಜನೆಗಳಾಗಿದೆ. ಸಣ್ಣ ಉಳಿತಾಯ ಯೋಜನೆಗಳಲ್ಲಿ ಮೂರು ವಿಭಾಗಗಳು ಇದೆ. ಉಳಿತಾಯ ಠೇವಣಿ, ಸಾಮಾಜಿಕ ಭದ್ರತಾ ಯೋಜನೆ, ಮಾಸಿಕ ಆದಾಯ ಯೋಜನೆ ಎಂಬುವುದು ಮೂರು ವಿಭಾಗವಾಗಿದೆ.
ಸಣ್ಣ ಠೇವಣಿಯಲ್ಲಿ 1-3 ದಿನ ಟೈಮ್ ಡೆಪಾಸಿಟ್ಸ್ ಮತ್ತು 5 ವರ್ಷದ ಆರ್‌ಡಿ ಇದೆ. ಇದರಲ್ಲಿ ಉಳಿತಾಯ ಪ್ರಮಾಣಪತ್ರ ಯೋಜನೆಗಳಾದ ರಾಷ್ಟ್ರೀಯ ಉಳಿತಾಯ ಪ್ರಮಾಣಪತ್ರ (ಎನ್‌ಎಸ್‌ಸಿ) ಮತ್ತು ಕಿಸಾನ್ ವಿಕಾಸ್ ಪತ್ರ (ಕೆವಿಪಿ) ಸೇರ್ಪಡೆಯಾಗುತ್ತದೆ. ಸಾಮಾಜಿಕ ಭದ್ರತಾ ಯೋಜನೆಯಲ್ಲಿ ಪಬ್ಲಿಕ್ ಪ್ರಾವಿಡೆಂಟ್ ಫಂಡ್ (ಪಿಪಿಎಫ್), ಸುಕನ್ಯಾ ಸಮೃದ್ಧಿ ಖಾತೆ, ಹಿರಿಯ ನಾಗರಿಕರ ಉಳಿತಾಯ ಯೋಜನೆ ಸೇರ್ಪಡೆಯಾಗುತ್ತದೆ. ಮಾಸಿಕ ಆದಾಯ ಯೋಜನೆಯಲ್ಲಿ ಮಾಸಿಕ ಆದಾಯ ಖಾತೆಯು ಸೇರುತ್ತದೆ.
ಸಣ್ಣ ಉಳಿತಾಯ ಯೋಜನೆಯ ನೂತನ ಬಡ್ಡಿದರ
ಉಳಿತಾಯ ಠೇವಣಿ: ಶೇಕಡ 4 ಬಡ್ಡಿದರ
1 ವರ್ಷದ ಅಂಚೆ ಕಚೇರಿ ಟೈಮ್ ಡೆಪಾಸಿಟ್: ಶೇಕಡ 6.8 ಬಡ್ಡಿದರ
2 ವರ್ಷದ ಅಂಚೆ ಕಚೇರಿ ಟೈಮ್ ಡೆಪಾಸಿಟ್: ಶೇಕಡ 6.9 ಬಡ್ಡಿದರ
3 ವರ್ಷದ ಅಂಚೆ ಕಚೇರಿ ಟೈಮ್ ಡೆಪಾಸಿಟ್: ಶೇಕಡ 7 ಬಡ್ಡಿದರ
5ವರ್ಷದ ಅಂಚೆ ಕಚೇರಿ ಟೈಮ್ ಡೆಪಾಸಿಟ್: ಶೇಕಡ 7.5 ಬಡ್ಡಿದರ
ರಾಷ್ಟ್ರೀಯ ಉಳಿತಾಯ ಪ್ರಮಾಣಪತ್ರ (ಎನ್‌ಎಸ್‌ಸಿ): ಶೇಕಡ 7.7 ಬಡ್ಡಿದರ
ಕಿಸಾನ್ ವಿಕಾಸ್ ಪತ್ರ (ಕೆವಿಪಿ): ಶೇಕಡ 7.5 ಬಡ್ಡಿದರ (115 ತಿಂಗಳಿನಲ್ಲಿ ಮೆಚ್ಯೂರ್)
ಪಬ್ಲಿಕ್ ಪ್ರಾವಿಡೆಂಟ್ ಫಂಡ್ (ಪಿಪಿಎಫ್): ಶೇಕಡ 7.1 ಬಡ್ಡಿದರ
ಸುಕನ್ಯಾ ಸಮೃದ್ಧಿ ಖಾತೆ: ಶೇಕಡ 8.0 ಬಡ್ಡಿದರ


Click it and Unblock the Notifications