ಈದ್ ಉಲ್ ಫಿತರ್ ಅಥವಾ ರಮ್ಜಾನ್ ಈದ್ ಕಾರಣ ಏಪ್ರಿಲ್ 21, 22ರಂದು ಖಾಸಗಿ ಹಾಗೂ ಸಾರ್ವಜನಿಕ ವಲಯದ ಬ್ಯಾಂಕ್‌ಗಳಿಗೆ ರಜೆ ಇರಲಿದೆ. ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ) ಅಧಿಕೃತ ರಜಾದಿನ ಪಟ್ಟಿಯ ಪ್ರಕಾರವಾಗಿ ಈ ದಿನಗಳು ಬ್ಯಾಂಕ್ ಬಂದ್ ಆಗಲಿದೆ. ಇನ್ನು ಈದ್ ಮಾತ್ರವಲ್ಲದೆ ಈ ದಿನ ಗರಿಯಾ ಪೂಜಾ/ ಜುಮತ್ ಉಲ್ ವಿಧ ಕಾರಣದಿಂದಾಗಿಯೂ ಬ್ಯಾಂಕ್‌ಗಳು ಬಂದ್ ಆಗಿರುತ್ತದೆ.
ಈ ವರ್ಷ ಈದ್ ಉಲ್ ಫಿತರ್ ರಜೆಯು ನಾಲ್ಕನೇ ಶನಿವಾರ ಬಂದಿದೆ. ಅಂದರೆ ಸಾಮಾನ್ಯವಾಗಿಯೇ ಒಂದು ತಿಂಗಳಿನ ಎರಡನೇ ಮತ್ತು ನಾಲ್ಕನೇ ಶನಿವಾರ ಬ್ಯಾಂಕ್‌ಗಳು ಬಂದ್ ಆಗಿರುತ್ತದೆ. ಹಾಗೆಯೇ ಈ ಶನಿವಾರವೂ ಕೂಡಾ ಬ್ಯಾಂಕ್ ಬಂದ್ ಇದೆ. ಈ ದಿನದಂದೆ ಹಬ್ಬವೂ ಇದೆ. ಇನ್ನು ಕೆಲವು ನಗರಗಳಲ್ಲಿ ಏಪ್ರಿಲ್ 21ರಂದು ಈದ್ ಇದ್ದರೆ, ಇನ್ನು ಕೆಲವು ನಗರಗಳಲ್ಲಿ ಏಪ್ರಿಲ್ 22ರಂದು ಈದ್ ಆಚರಿಸಲಾಗುತ್ತದೆ.

ಸಾಮಾನ್ಯವಾಗಿ ಖಾಸಗಿ ಹಾಗೂ ಸರ್ಕಾರಿ ಬ್ಯಾಂಕ್ ರಾಷ್ಟ್ರೀಯ ರಜಾದಿನ, ಹಬ್ಬಕ್ಕಾಗಿ ರಜೆ ಇದ್ದಾಗ ಹಾಗೂ ಭಾನುವಾರ ಬಂದ್ ಆಗಿರುತ್ತದೆ. ಹಾಗೆಯೇ ದೇಶದಾದ್ಯಂತ ಪ್ರತಿ ತಿಂಗಳು ಎರಡನೇ ಹಾಗೂ ನಾಲ್ಕನೇ ಶನಿವಾರ ಬ್ಯಾಂಕ್ ರಜೆ ಇರಲಿದೆ. ಇನ್ನು ಈ ರಜಾದಿನಗಳ ಮಾತ್ರವಲ್ಲದೇ ಕೆಲವು ರಾಜ್ಯಗಳ ಕೆಲವು ಪ್ರದೇಶಗಳಲ್ಲಿ ಆಚರಣೆ ಮಾಡುವ ಸ್ಥಳೀಯ ಹಬ್ಬದ ಸಂದರ್ಭದಲ್ಲೂ ಬ್ಯಾಂಕ್‌ಗಳು ಬಂದ್ ಆಗಲಿದೆ. ಈ ಸಂದರ್ಭದಲ್ಲಿ ಬ್ಯಾಂಕ್‌ಗಳ ಸ್ಥಳೀಯ , ಬ್ರಾಂಚ್‌ಗಳು ಮಾತ್ರ ಬಂದ್ ಆಗಿರುತ್ತದೆ.
ಆರ್‌ಬಿಐ ನಿಯಮದ ಪ್ರಕಾರ ರಜಾದಿನಗಳನ್ನು ಮೂರು ವಿಭಾಗವಾಗಿ ವಗೀಕರಿಸಲಾಗಿದೆ. ನೆಗೋಶಬಲ್ ಇನ್ಸ್ಟ್ರುಮೆಂಟ್ಸ್ ಆಕ್ಟ್ ಅಡಿಯಲ್ಲಿ ರಜಾದಿನ, ನೆಗೋಶಿಯೇಬಲ್ ಇನ್ಸ್ಟ್ರುಮೆಂಟ್ಸ್ ಆಕ್ಟ್ ಅಡಿಯಲ್ಲಿ ರಜಾದಿನ ಮತ್ತು ರಿಯಲ್-ಟೈಮ್ ಗ್ರಾಸ್ ಸೆಟಲ್ಮೆಂಟ್ ಹಾಲಿಡೇ, ಬ್ಯಾಂಕ್‌ಗಳು ಖಾತೆಗಳ ಕೊನೆಯ ಹಣಕಾಸು ಲೆಕ್ಕಚಾರ ಅವಧಿ ಮೂರು ರಜಾ ವರ್ಗೀಕರಣವಾಗಿದೆ.
ಆರ್‌ಬಿಐನ ಬ್ಯಾಂಕ್ ರಜಾ ದಿನ ಪಟ್ಟಿಯ ಪ್ರಕಾರ ಸಾರ್ವಜನಿಕ ಹಾಗೂ ಖಾಸಗಿ ವಲಯದ ಬ್ಯಾಂಕುಗಳು ಏಪ್ರಿಲ್ 21ರಂದು (ಶುಕ್ರವಾರ) ಈದ್ ಉಲ್ ಫಿತರ್ ಅಥವಾ ರಮ್ಜಾನ್ ಈದ್/ ಗರಿಯಾ ಪೂಜಾ/ ಜುಮಾತ್ ಉಲ್ ವಿದ ಕಾರಣ ಬಂದ್ ಆಗಲಿದೆ. ಇನ್ನು ಶನಿವಾರವೂ ಕೂಡಾ ಈದ್ ಉಲ್ ಫಿತರ್ ಕಾರಣ ಬ್ಯಾಂಕ್ ರಜೆ ಇರಲಿದೆ. ಹಾಗೆಯೇ ಇದು ನಾಲ್ಕನೇ ಶನಿವಾರವಾದ ಕಾರಣ ಭಾರತದಾದ್ಯಂತ ಬ್ಯಾಂಕ್ ಬಂದ್ ಇರುತ್ತದೆ.
ಅಗರ್ತಾಲ, ಜಮ್ಮು, ಕೊಚ್ಚಿ, ಶ್ರೀನಗರ, ತಿರುವನಂತಪುರಂ ಸೇರಿದಂತೆ ಕೆಲವು ನಗರಗಳಲ್ಲಿ ಏಪ್ರಿಲ್ 21ರಂದು ಬ್ಯಾಂಕ್ ರಜೆ ಇರಲಿದೆ. ಆದರೆ ಬೆಲಾಪುರ, ಬೋಪಾಲ್, ಚೆನ್ನೈ, ಡೆಹ್ರಾಡೂನ್, ಗುವಾಹಟಿ, ಹೈದಾರಾಬಾದ್, ಇಂಫಾಲ್, ಜೈಪುರ, ಕಾನ್ಪುರ, ಕೋಲ್ಕತ್ತಾ, ಲಕ್ನೋ, ಮುಂಬೈ, ನಾಗ್ಪುರ, ನವದೆಹಲಿ, ಪಣಜಿ, ಪಾಟ್ನಾ, ರಾಯ್ಪುರ, ರಾಂಚಿ, ಶಿಲಾಂಗ್, ಶ್ರೀನಗರದಲ್ಲಿ ಏಪ್ರಿಲ್ 21, 22 ಎರಡೂ ದಿನ ಬ್ಯಾಂಕ್ ಬಂದ್ ಇರುತ್ತದೆ. ಇನ್ನು ಬೆಂಗಳೂರು ಸೇರಿದಂತೆ ಕೆಲವು ನಗರಗಳಲ್ಲಿ ಏಪ್ರಿಲ್ 21, 22ರಂದು ಈದ್ ಆಚರಣೆ ಇರುತ್ತದೆ.
ಏಪ್ರಿಲ್ 21ರಂದು ಬ್ಯಾಂಕ್ ಬಂದ್
ಅಗರ್ತಾಲ
ಜಮ್ಮು
ಕೊಚ್ಚಿ
ಶ್ರೀನಗರ
ತಿರುವನಂತಪುರಂ
ಏಪ್ರಿಲ್ 22ರಂದು ಬ್ಯಾಂಕ್ ಬಂದ್
ಬೆಲಾಪುರ
ಬೋಪಾಲ್
ಚೆನ್ನೈ
ಡೆಹ್ರಾಡೂನ್
ಗುವಾಹಟಿ
ಹೈದಾರಾಬಾದ್
ಆಂಧ್ರಪ್ರದೇಶ
ಹೈದರಾಬಾದ್- ತೆಲಂಗಾಣ
ಇಂಫಾಲ್
ಜಮ್ಮು
ಕಾನ್ಪುರ
ಕೋಲ್ಕತ್ತಾ
ಲಕ್ನೋ
ಮುಂಬೈ
ನಾಗ್ಪುರ
ನವದೆಹಲಿ
ಪಣಜಿ
ಪಾಟ್ನಾ
ರಾಯಪುರ
ರಾಂಚಿ
ಶಿಲ್ಲಾಂಗ್
ಶ್ರೀನಗರ


Click it and Unblock the Notifications