ಸಾಮಾನ್ಯವಾಗಿ ಒಂದು ವಾರದಲ್ಲಿ ಭಾನುವಾರದ ದಿನ ಮತ್ತು ಎರಡನೇ ಶನಿವಾರ, ನಾಲ್ಕನೇ ಶನಿವಾರ ದೇಶದಾದ್ಯಂತ ಬ್ಯಾಂಕುಗಳು ಬಂದ್ ಆಗಿರುತ್ತದೆ. ಅದನ್ನು ಹೊರತುಪಡಿಸಿ ದೇಶದಲ್ಲಿ ಬೇರೆ ಬೇರೆ ಕಾರಣಗಳಿಗೆ ಬ್ಯಾಂಕ್ ರಜೆ ಇರಲಿದೆ. ಹಬ್ಬ, ಹರಿದಿನಗಳಿಗೆ ಬ್ಯಾಂಕ್ ರಜೆ ಇರಲಿದೆ. ನಾಳೆ ಅಂದರೆ ಮೇ 5, 2023ರಂದು ಬುದ್ಧ ಪೂರ್ಣಿಮ ದಿನ ಬ್ಯಾಂಕುಗಳು ಬಂದ್ ಆಗಿರಲಿದೆ.
ಬುದ್ಧ ಪೂರ್ಣಿಮ ದಿನದಂದು ದೇಶದಾದ್ಯಂತ ಹಲವಾರು ರಾಜ್ಯಗಳಲ್ಲಿ ಬ್ಯಾಂಕ್ ಬಂದ್ ಆಗಿರಲಿದೆ. ಇದು ಬ್ಯಾಂಕ್ ಗ್ರಾಹಕರ ಮೇಲೆ ಪ್ರಭಾವ ಉಂಟು ಮಾಡಲಿದೆ. ನೀವು ಬ್ಯಾಂಕ್‌ಗೆ ಹೋಗಿ ಮಾಡಬೇಕಾದ ಕಾರ್ಯ ಬಾಕಿ ಇದ್ದರೆ, ಅದನ್ನು ಮೇ 5 ರಂದು ಮಾಡಲು ಸಾಧ್ಯವಾಗುವುದಿಲ್ಲ. ಆ ದಿನ ಬುದ್ಧ ಪೂರ್ಣಿಮ ಕಾರಣ ಬ್ಯಾಂಕ್ ಬಂದ್ ಆಗಿರುವ ಕಾರಣ ನೀವು ಒಂದು ದಿನ ಕಾಯಬೇಕಾಗುತ್ತದೆ.

ಚೆಕ್ ಡೆಪಾಸಿಟ್, ಹಣ ವಿತ್‌ಡ್ರಾ ಮೊದಲಾದ ಕಾರ್ಯಗಳನ್ನು ನೀವು ಬ್ಯಾಂಕ್ ಬ್ರ್ಯಾಂಚ್‌ಗೆ ಹೋಗಿ ಮೇ 5ರಂದು ಮಾಡಲು ಸಾಧ್ಯವಾಗದಿದ್ದರೂ ಕೂಡಾ ಆನ್‌ಲೈನ್ ಸೇವೆಗಳು ಎಂದಿನಂತೆ ಇರಲಿದೆ. ಹಾಗೆಯೇ ನೀವು ಎಟಿಎಂ ಸೇವೆಯನ್ನು ಎಂದಿನಂತೆ 24 ಗಂಟೆಗಳ ಪಡೆಯಲು ಸಾಧ್ಯವಾಗುತ್ತದೆ. ಆದರೆ ರಜೆ ಇದ್ದ ಬ್ಯಾಂಕ್‌ಗಳಲ್ಲಿ ಬ್ಯಾಂಕ್ ಬ್ರ್ಯಾಂಚ್‌ಗೆ ತೆರಲಿ ಯಾವುದೇ ವಹಿವಾಟು ನಡೆಸಲು ಸಾಧ್ಯವಾಗದು.
ಜನರಿಗೆ ಯಾವುದೇ ತೊಂದರೆ ಉಂಟಾಗದಿರಲಿ ಎಂಬ ಕಾರಣದಿಂದಾಗಿ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ) ಬ್ಯಾಂಕ್ ರಜಾದಿನಗಳ ಪಟ್ಟಿಯನ್ನು ಮೊದಲೇ ಬಿಡುಗಡೆ ಮಾಡುತ್ತದೆ. ಆರ್‌ಬಿಐ ಪ್ರಕಾರ ಮೇ ತಿಂಗಳಿನಲ್ಲಿ 12 ದಿನಗಳ ಕಾಲ ಬ್ಯಾಂಕ್ ರಜೆ ಇರಲಿದೆ. ಆದರೆ ಅದು ಆಯಾ ರಾಜ್ಯಕ್ಕೆ ಅವಲಂಭಿತವಾಗಿರುತ್ತದೆ. ನಾಳೆ ಅಂದರೆ ಮೇ 5ರಂದು ಬುದ್ಧ ಪೂರ್ಣಿಮ ದಿನದಂದು ದೇಶದಲ್ಲಿ ಬ್ಯಾಂಕ್ ಬಂದ್ ಆಗಿರಲಿದೆ.
ಯಾವೆಲ್ಲ ನಗರಗಳಲ್ಲಿ ಮೇ 5ರಂದು ಬ್ಯಾಂಕ್ ಬಂದ್
ಮೇ 5ರಂದು ಬುದ್ಧ ಪೂರ್ಣಿಮ ದಿನದಂದು ಅಗರ್ತಾಲ, ಅಜ್ವಾಲ್, ಬೆಲಾಪುರ, ಬೋಪಲ್, ಲಕ್ನೋ, ಚಂಡೀಗಢ, ಡೆಹ್ರಾಡೂನ್, ಜಮ್ಮು ಕಾಶ್ಮೀರ, ಕೋಲ್ಕತ್ತಾ, ಮುಂಬೈ, ನಾಗ್ಪುರ, ನವದೆಹಲಿ, ರಾಂಚಿ, ಶಿಮ್ಲಾ, ಶ್ರೀನಗರದಲ್ಲಿ ಬ್ಯಾಂಕ್‌ಗಳು ಬಂದ್ ಆಗಿರುತ್ತದೆ. ನೀವು ಈ ನಗರದಲ್ಲಿದ್ದು, ಯಾವುದೇ ಬ್ಯಾಂಕಿಂಗ್ ವಹಿವಾಟು ನಡೆಸಬೇಕಾದರೆ ಆನ್‌ಲೈನ್‌ನಲ್ಲಿ ನಡೆಸಲು ಮಾತ್ರ ಸಾಧ್ಯವಾಗಲಿದೆ.
ಮೇ ತಿಂಗಳ ಬ್ಯಾಂಕ್ ರಜಾ ಪಟ್ಟಿ
ಮೇ 1 (ಸೋಮವಾರ): ಮೇ ದಿನ, ಮಹಾರಾಷ್ಟ್ರ ದಿನ
ಮೇ 5 (ಶುಕ್ರವಾರ): ಬುಧ ಪೂರ್ಣಿಮಾ, ದೆಹಲಿ, ಹರಿಯಾಣ, ಮಹಾರಾಷ್ಟ್ರ, ಪಂಜಾಬ್, ಉತ್ತರ ಪ್ರದೇಶ, ಪಶ್ಚಿಮ ಬಂಗಾಳ, ಉತ್ತಾರಾಖಂಡ, ಅಸ್ಸಾಂ, ಬಿಹಾರ, ಗುಜರಾತ್, ಅರುಣಾಚಲ ಪ್ರದೇಶ, ಛತ್ತೀಸ್‌ಗಢ
ಮೇ 7: ಭಾನುವಾರ, ವಾರದ ರಜೆ, ದೇಶದಾದ್ಯಂತ ಬ್ಯಾಂಕ್ ರಜೆ
ಮೇ 9 (ಮಂಗಳವಾರ): ರವೀಂದ್ರನಾಥ್ ಟಾಗೋರ್ ಜನ್ಮದಿನ
ಮೇ 13: ಎರಡನೇ ಶನಿವಾರ, ದೇಶದಾದ್ಯಂತ ಬ್ಯಾಂಕ್ ರಜೆ
ಮೇ 14: ಭಾನುವಾರ, ವಾರದ ರಜೆ, ದೇಶದಾದ್ಯಂತ ಬ್ಯಾಂಕ್ ಬಂದ್
ಮೇ 16 (ಮಂಗಳವಾರ): ರಾಜ್ಯ ದಿನ - ಸಿಕ್ಕಿಂ
ಮೇ 21: ಭಾನುವಾರ, ವಾರದ ರಜೆ, ದೇಶದಾದ್ಯಂತ ಬ್ಯಾಂಕ್ ಬಂದ್
ಮೇ 22 (ಸೋಮವಾರ): ಮಹಾರಾಣ ಪ್ರತಾಪ್ ಜಯಂತಿ - ಗುಜರಾತ್, ಹರಿಯಾಣ, ಹಿಮಾಚಲ ಪ್ರದೇಶ, ಪಂಜಾಬ್, ರಾಜಸ್ಥಾನ
ಮೇ 24 (ಬುಧವಾರ): ಕಾಜಿ ನಜ್ರುಲ್ ಇಸ್ಲಾಂ ಜಯಂತಿ - ತ್ರಿಪುರಾ
ಮೇ 27: ನಾಲ್ಕನೇ ಶನಿವಾರ, ದೇಶದಾದ್ಯಂತ ಬ್ಯಾಂಕ್ ಬಂದ್
ಮೇ 28: ಭಾನುವಾರ, ವಾರದ ರಜೆ, ದೇಶದಾದ್ಯಂತ ಬ್ಯಾಂಕ್ ಬಂದ್


Click it and Unblock the Notifications